ಆಧಾರ್ ಕಾರ್ಡ್ ಅತ್ಯಂತ ಪ್ರಮುಖ ದಾಖಲೆ. ಇದು 12 ಅಂಕೆಗಳ ವಿಶಿಷ್ಟ ಗುರುತಿನ ಚೀಟಿಯಾಗಿದ್ದು, ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (ಯುಐಡಿಎಐ) ವಿತರಿಸುತ್ತದೆ. ಆದರೆ ನೀಲಿ ಆಧಾರ್ ಕಾರ್ಡ್ ಎಂದರೇನು ಅನ್ನೋದು ನಿಮ್ಗೆ ಗೊತ್ತಿದ್ಯಾ?
ಆಧಾರ್ ಕಾರ್ಡ್ ಇಂದು ಪ್ರಮುಖವಾದ ದಾಖಲೆಯಾಗಿದೆ. ಇದು 12 ಅಂಕೆಗಳ ವಿಶಿಷ್ಟ ಗುರುತಿನ ಚೀಟಿಯಾಗಿದ್ದು, ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (ಯುಐಡಿಎಐ) ವಿತರಿಸುತ್ತದೆ. ಆಧಾರ್ ಅನ್ನು ದೇಶದಲ್ಲಿ ಪ್ರಮುಖ ದೃಢೀಕರಣ ದಾಖಲೆಯಾಗಿ ಬಳಸಲಾಗುತ್ತದೆ.
ಆಧಾರ್ ಕಾರ್ಡ್, ಸಂಪೂರ್ಣ ಹೆಸರು, ಶಾಶ್ವತ ವಿಳಾಸ ಮತ್ತು ಜನ್ಮ ದಿನಾಂಕ ಸೇರಿದಂತೆ ನಾಗರಿಕರ ಬಗ್ಗೆ ಪ್ರಮುಖ ಮಾಹಿತಿಯನ್ನು ಒಳಗೊಂಡಿರುತ್ತದೆ. ಬ್ಯಾಂಕ್ ಖಾತೆ ತೆರೆಯಲು, ಪಾಸ್ ಪೋರ್ಟ್ ಅಥವಾ ಡ್ರೈವಿಂಗ್ ಲೈಸೆನ್ಸ್, ಮೊಬೈಲ್ ಸಂಪರ್ಕಕ್ಕೆ, ಸರ್ಕಾರದ ಸಬ್ಸಿಡಿಗಳನ್ನು ಪಡೆಯಲು ಹಾಗೂ ಸಮಾಜ ಕಲ್ಯಾಣ ಯೋಜನೆಗಳ ಫಲಾನುಭವಿಯಾಗಲು ಆಧಾರ್ ಕಾರ್ಡ್ ಅತ್ಯಗತ್ಯ.
ಭಾರತದ ವಿಶಿಷ್ಟ ಗುರುತಿನ ಪ್ರಾಧಿಕಾರವು 2018ರಲ್ಲಿ ನೀಲಿ ಆಧಾರ್ ಕಾರ್ಡ್ (ಬಾಲ್ ಆಧಾರ್) ಪರಿಕಲ್ಪನೆಯನ್ನು ಪರಿಚಯಿಸಿದೆ. ಇದು ನಿರ್ದಿಷ್ಟವಾಗಿ 5 ವರ್ಷದೊಳಗಿನ ಮಕ್ಕಳಿಗಾಗಿ ವಿನ್ಯಾಸಗೊಳಿಸಲಾಗಿದೆ. ಸರ್ಕಾರದ ಕಲ್ಯಾಣ ಕಾರ್ಯಕ್ರಮಗಳಲ್ಲಿ ಚಿಕ್ಕ ಮಕ್ಕಳನ್ನು ಸೇರಿಸುವುದನ್ನು ಸರಳಗೊಳಿಸುವಲ್ಲಿ ನೀಲಿ ಆಧಾರ್ ಕಾರ್ಡ್ ಅಪಾರ ಮಹತ್ವವನ್ನು ಹೊಂದಿದೆ. ಈ ಆಧಾರ್ ಕಾರ್ಡ್‌ನ ಪ್ರಮುಖ ವೈಶಿಷ್ಟ್ಯವೆಂದರೆ 5 ವರ್ಷದೊಳಗಿನ ಮಕ್ಕಳು ಬಯೋಮೆಟ್ರಿಕ್ ಡೇಟಾವನ್ನು ಒದಗಿಸುವ ಅಗತ್ಯವಿಲ್ಲ. ಬದಲಾಗಿ, ಅವರ UID (ವಿಶಿಷ್ಟ ಗುರುತು) ಅನ್ನು ಜನಸಂಖ್ಯಾ ಡೇಟಾ ಮತ್ತು ಅವರ ಪೋಷಕರ UID ಗೆ ಸಂಪರ್ಕಿಸಲಾದ ಮುಖದ ಚಿತ್ರವನ್ನು ಬಳಸಿಕೊಂಡು ಪ್ರಕ್ರಿಯೆಗೊಳಿಸಲಾಗುತ್ತದೆ.
ಆಧಾರ್ ಅಪ್ಡೇಟ್ ಮಾಡಲು ದಾಖಲೆ ಹಂಚಿಕೊಳ್ಳುವಂತೆ ನಿಮ್ಗೆ ಇ-ಮೇಲ್ ಬಂದಿದೆಯಾ? ಹಾಗಿದ್ರೆ ಎಚ್ಚರ!
ನೀಲಿ ಆಧಾರ್ ಕಾರ್ಡ್‌ಗೆ (ಬಾಲ್ ಆಧಾರ್) ಅರ್ಜಿ ಸಲ್ಲಿಸುವುದು ಹೇಗೆ?
undefined
- UIDAI ನ ಅಧಿಕೃತ ವೆಬ್‌ಸೈಟ್‌ಗೆ ಹೋಗಿ uidai.gov.in
- ದಾಖಲಾತಿ ನಮೂನೆಯಲ್ಲಿ ವಿವರಗಳನ್ನು ಭರ್ತಿ ಮಾಡಿ.
- ನೋಂದಣಿಗಾಗಿ ಅಪಾಯಿಂಟ್‌ಮೆಂಟ್ ಆಯ್ಕೆಯನ್ನು ಆಯ್ಕೆಮಾಡಿ.
- ಹತ್ತಿರದ ದಾಖಲಾತಿ ಕೇಂದ್ರವನ್ನು ಹುಡುಕಿ ಮತ್ತು ಅಲ್ಲಿ ಅಪಾಯಿಂಟ್‌ಮೆಂಟ್ ಮಾಡಿ.
- ನಿಮ್ಮ (ಪೋಷಕರ) ಆಧಾರ್, ಮಗುವಿನ ಜನನ ಪ್ರಮಾಣಪತ್ರ, ಉಲ್ಲೇಖ ಸಂಖ್ಯೆ ಇತ್ಯಾದಿಗಳನ್ನು ಆಧಾರ್ ಕೇಂದ್ರಕ್ಕೆ ತನ್ನಿ.
- ಎಲ್ಲಾ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದ ನಂತರ, ಅಪ್‌ಡೇಟ್ ಟ್ರ್ಯಾಕ್ ಮಾಡಲು ಸ್ವೀಕೃತಿ ಸಂಖ್ಯೆಯನ್ನು ಪಡೆಯಿರಿ.
ಆಧಾರ್ ಸೇವೆಗಳಿಗೆ ನಿಮ್ಮ ಮಗುವನ್ನು ನೋಂದಣಿ ಮಾಡುವ ಪ್ರಕ್ರಿಯೆಯನ್ನು ನೀವು ಯಶಸ್ವಿಯಾಗಿ ಪೂರ್ಣಗೊಳಿಸಿದ್ದೀರಿ. ಒಮ್ಮೆಗೆ ಅರ್ಜಿ ಪ್ರಕ್ರಿಯೆ ಮುಂದುವರಿದ ಬಳಿಕ ನೀವು ಯುಐಡಿಎಐ ಅಧಿಕೃತ ವೆಬ್ ಸೈಟ್ ನಿಂದ ನಿಮ್ಮ ಮಗುವಿನ ಆಧಾರ್ ಕಾರ್ಡ್ ಡಿಜಿಟಲ್ ಪ್ರತಿಯನ್ನು ಡೌನ್ ಲೋಡ್ ಮಾಡಬಹುದು.
ನಿಮ್ಮ ಆಧಾರ್ ಕಾರ್ಡ್ ನಲ್ಲಿ ಮೊಬೈಲ್ ಸಂಖ್ಯೆ ಬದಲಾಯಿಸ್ಬೇಕಾ? ಹೀಗೆ ಮಾಡಿ..
ನೀಲಿ ಬಣ್ಣದಲ್ಲಿರುವ ಆಧಾರ್ ಕಾರ್ಡ್
ಐದು ವರ್ಷದೊಳಗಿನ ಮಕ್ಕಳ ಆಧಾರ್ ಕಾರ್ಡ್ ನೀಲಿ ಬಣ್ಣದಲ್ಲಿರುತ್ತದೆ. ಇದಕ್ಕೆ ಬಾಲ್ ಆಧಾರ್ ಎಂದು ಕರೆಯುತ್ತಾರೆ. ಮಗುವಿನ ವಯಸ್ಸು 5 ವರ್ಷಕ್ಕಿಂತ ಹೆಚ್ಚಾದ್ಮೇಲೆ ಈಗ ಮಾಡಿದ ಆಧಾರ್ ಕಾರ್ಡ್ ಅಮಾನ್ಯವಾಗುತ್ತದೆ. ಹೀಗಾಗಿ ಐದು ವರ್ಷದ ಬಳಿಕ ನವೀಕರಿಸೋದು ಅಗತ್ಯ. ಐದು ವರ್ಷ (Five years)ದಾಟಿದ ನಂತರ, ಮಗುವಿನ ಬಯೋಮೆಟ್ರಿಕ್ಸ್ ತೆಗೆದುಕೊಳ್ಳಲಾಗುತ್ತದೆ. ಹೀಗಾಗಿ ಐದು ವರ್ಷದ ನಂತರ ಆಧಾರ್ ನವೀಕರಿಸಬೇಕಾಗುತ್ತದೆ. ಆಗ ಮಕ್ಕಳ ಹೆಬ್ಬೆಟ್ಟಿನ ಗುರುತು ಹಾಗೂ ಕಣ್ರೆಪ್ಪೆ (Eyelash) ಗುರುತನ್ನು ಪಡೆಯಲಾಗುತ್ತದೆ. ಮಕ್ಕಳಿಗೆ 15 ವರ್ಷವಾಗ್ತಿದ್ದಂತೆ ಮತ್ತೆ ಆಧಾರ್ ನವೀಕರಣ ಮಾಡಬೇಕಾಗುತ್ತದೆ.