ನೂಡಲ್ಸ್ ತಿಂದ್ರೆ ಏನಾಗುತ್ತೆ?

By Suvarna Web DeskFirst Published Jan 29, 2018, 6:07 PM IST
Highlights

ನೂಡಲ್ಸ್ ತಿಂದರೆ ಏನಾಗುತ್ತದೆ ನೋಡಿ .. ಎಂಬ ಸಂದೇಶದೊಂದಿಗೆ ವೀಡಿಯೊವೊಂದು ಬಂದು ಬಿತ್ತು ಇನ್ಬಾಕ್ಸಿಗೆ. ಕುತೂಹಲದಿಂದ ವೀಡಿಯೊ ಡೌನ್‌ಲೋಡ್ ಮಾಡಿದೆ, ನೋಡಿದೆ. ಶಸ್ತ್ರಚಿಕಿತ್ಸೆ ಮೂಲಕ ನೂಡಲ್ಸಿನಂತೆ ಕಾಣುವ ವಸ್ತುಗಳ ರಾಶಿಯನ್ನು ಸಣ್ಣಕರುಳಿನಿಂದ ತೆಗೆಯುವ ವಿಡಿಯೊ ಅದು. ಈ ವಿಡಿಯೊ ನೋಡಿದವರು ಅದು ನೂಡಲ್ಸೇ ಹೌದು ಎಂದು ನಂಬುವುದರಲ್ಲಿ ಆಶ್ಚರ್ಯವಿಲ್ಲ. ಆದರೆ ಅದು ನೂಡಲ್ಸ್ ಅಲ್ಲ! ಆಸ್ಕೇರಿಸ್ ಲ್ಯುಂಬ್ರಿಕಾಯ್ಡ್ಸ್‌ಎಂಬ ಹುಳಗಳು!

ಬೆಂಗಳೂರು (ಜ.29): ನೂಡಲ್ಸ್ ತಿಂದರೆ ಏನಾಗುತ್ತದೆ ನೋಡಿ .. ಎಂಬ ಸಂದೇಶದೊಂದಿಗೆ ವೀಡಿಯೊವೊಂದು ಬಂದು ಬಿತ್ತು ಇನ್ಬಾಕ್ಸಿಗೆ. ಕುತೂಹಲದಿಂದ ವೀಡಿಯೊ ಡೌನ್‌ಲೋಡ್ ಮಾಡಿದೆ, ನೋಡಿದೆ. ಶಸ್ತ್ರಚಿಕಿತ್ಸೆ ಮೂಲಕ ನೂಡಲ್ಸಿನಂತೆ ಕಾಣುವ ವಸ್ತುಗಳ ರಾಶಿಯನ್ನು ಸಣ್ಣಕರುಳಿನಿಂದ ತೆಗೆಯುವ ವಿಡಿಯೊ ಅದು. ಈ ವಿಡಿಯೊ ನೋಡಿದವರು ಅದು ನೂಡಲ್ಸೇ ಹೌದು ಎಂದು ನಂಬುವುದರಲ್ಲಿ ಆಶ್ಚರ್ಯವಿಲ್ಲ. ಆದರೆ ಅದು ನೂಡಲ್ಸ್ ಅಲ್ಲ! ಆಸ್ಕೇರಿಸ್ ಲ್ಯುಂಬ್ರಿಕಾಯ್ಡ್ಸ್‌ಎಂಬ ಹುಳಗಳು!

ಆ ವೀಡಿಯೊವನ್ನು ನೋಡಿದ ಯಾರಿಗೋ ಅದು ನೂಡಲ್ಸ್ ಎನಿಸಿರಬೇಕು. ಆತ ನೂಡಲ್ಸ್ ಇಷ್ಟಪಡದವನೂ ಆಗಿರಬೇಕು! ಹೊಟ್ಟೆಯಲ್ಲಿ ಹುಳಗಳಾಗುವುದರ ಬಗ್ಗೆ ನಮಗೆ ತಿಳಿದಿದೆ. ಅಸ್ವಚ್ಛ ಸ್ಥಳ, ಆಹಾರಗಳಿಂದಾಗಿ ಬೇರೆ ಬೇರೆ ಜಾತಿಯ ಹೊಟ್ಟೆಹುಳಗಳು ನಮ್ಮ ಕರುಳನ್ನು ಸೇರುತ್ತವೆ. ಅವುಗಳಿಂದ ಪಾರಾಗಲು ಸ್ವಚ್ಛತೆಯೇ ಮುಖ್ಯ ದಾರಿ. ಹಾಗಾದರೆ ನೂಡಲ್ಸ್‌ನಿಂದ ಹಾನಿಯಿಲ್ಲವೇ?

ಸೂಪ್, ಸಾಸ್, ಬೇಯಿಸಿದ ತರಕಾರಿ, ಮಾಂಸಗಳೊಂದಿಗೆ  ಸೇವಿಸಲ್ಪಡುವ ಈ ನೂಡಲ್ಸ್ ಏಷಿಯಾದ ಹಲವು ದೇಶಗಳ ಜನರ ಸಾಂಪ್ರದಾಯಿಕ ಆಹಾರ. ಸಾಂಪ್ರದಾಯಿಕವಾಗಿ ತಯಾರಿಸಲ್ಪಡುವ ನೂಡಲ್ಸ್ ತಿನ್ನೋದ್ರ ಬಗ್ಗೆ ನಮ್ಮಲ್ಲಿ ಬಹಳ ಗೊಂದಲ ಇದೆ. ನಾಲಿಗೆ ಬಹಳ ರುಚಿಸುವ ಎಳೆಎಳೆಯಾದ ಈ ತಿಂಡಿಯನ್ನು ಯಾಕೆ ತಿನ್ನಬಾರದು? ಒಂದು ವೇಳೆ ತಿನ್ನಬಾರದು ಅಂತಿದ್ರೆ ಯಾವತ್ತೂ ತಿನ್ನಲೇಬಾರದಾ ಅಥವಾ ಕಡಿಮೆ ತಿನ್ನಬೇಕಾ? ಅದೆಲ್ಲದರ ಬಗ್ಗೆ ಇಲ್ಲಿದೆ ಡೀಟೇಲ್ಸ್.

ನೂಡಲ್ಸ್ ಹಾನಿಕರವಲ್ಲ. ಅವುಗಳನ್ನು ಗೋಧಿ, ಅಕ್ಕಿ, ಜೋಳ ಮುಂತಾದ ಏಕದಳ ಧಾನ್ಯಗಳ ಹಿಟ್ಟಿನಿಂದ ಮಾಡಲಾಗುತ್ತದೆ. ಎಣ್ಣೆ, ನೀರು, ಉಪ್ಪನ್ನು ಮಾತ್ರ ಅದರ ತಯಾರಿಯಲ್ಲಿ ಬಳಸಲಾಗುತ್ತದೆ. ಅವುಗಳಿಗೆ ಮೊಟ್ಟೆ ಅಥವಾ ಮಾಂಸವನ್ನು ಬೆರೆಸುವ ಪದ್ಧತಿಯೂ ಇದೆ.

ಮಾರುಕಟ್ಟೆಯಲ್ಲಿ ಸಿಗುವ instant ನೂಡಲ್ಸ್?

* Instant ನೂಡಲ್ಸಿನ ತಯಾರಿಯಲ್ಲಿ ಬಳಸುವ ಸಾಮಗ್ರಿಗಳು ಹೀಗಿವೆ. ಹಿಟ್ಟು, ನೀರು, ಉಪ್ಪು, ಎಣ್ಣೆ, ಸ್ಟಾರ್ಚ್‌ , ಹೈಡ್ರೋಕೊ ಲಾರ್ಯ್ಡ್, ಕ್ಯಾನ್ಸುಯಿ ಎಂಬ ಆಮ್ಲೀಯತೆಯನ್ನು ಕಡಿಮೆಗೊಳಿಸುವ ದ್ರಾವಣ. ಟೇಸ್ಟ್ ಮೇಕರ್ ಅಥವಾ ಅಜಿನೊಮೊಟೊ ಎಂದು ಪ್ರಸಿದ್ಧವಾದ ಮೊನೊಸೊಡಿಯಂ ಗ್ಲುಟಮೇಟ್, Preservative, aditive  ಕೃತಕ ರುಚಿವರ್ಧಕ ಮುಂತಾದವುಗಳೂ ಇದರ  ಜೊತೆಯಲ್ಲಿರುತ್ತವೆ.

*ಈ Instant ನೂಡಲ್ಸ್ ಹೊಟ್ಟೆ ಸೇರಿದ ಮೇಲೆ ಕರಗಲು ದೀರ್ಘ ಸಮಯ ತೆಗೆದುಕೊಳ್ಳುತ್ತದೆ.

--ಡಾ. ಸುವರ್ಣಿನಿ ಕೊಣಲೆ

*ಇದರಲ್ಲಿ ಒಂದಷ್ಟು ಕಾರ್ಬೋಹೈಡ್ರೇಟ್, ಕೊಬ್ಬು ಮತ್ತು ಉಪ್ಪಿನ ಅಂಶಗಳನ್ನು ಬಿಟ್ಟರೆ ನಮಗೆ ಅಗತ್ಯವಾದ ಯಾವುದೇ ಪೌಷ್ಟಿಕಾಂಶಗಳಿಲ್ಲ. ಆದ್ದರಿಂದ ಇದರ ಸೇವನೆಯಿಂದ ಅಪೌಷ್ಟಿಕತೆ  ನಮ್ಮನ್ನು ಕಾಡುವುದು.

* ಅದಲ್ಲದೇ ಇದರಲ್ಲಿರುವ ಉಳಿದ MSG ಮುಂತಾದ ರಾಸಾಯನಿಕಗಳು ನಮ್ಮ ಆರೋಗ್ಯದ ಮೇಲೆ ಕೆಟ್ಟ ಪರಿಣಾಮವನ್ನು ಬೀರುವುದು ಅಧ್ಯಯನಗಳಿಂದ ತಿಳಿದುಬಂದ ಸಂಗತಿ.

* instant ನೂಡಲ್ಸ್ ಮಾತ್ರವಲ್ಲ, ಯಾವುದೇ ಸಂಸ್ಕರಿತ ಆಹಾರವು ನಮ್ಮ ಆರೋಗ್ಯಕ್ಕೆ ಒಳಿತಲ್ಲ. ಅವುಗಳ ನಿರಂತರ ದೀರ್ಘಕಾಲಿಕ ಸೇವನೆ ಹೃದಯಸಂಬಂಧೀ ಸಮಸ್ಯೆ, ಜೀರ್ಣಾಂಗವ್ಯೆಹದ ಸಮಸ್ಯೆ, ಡಯಾಬಿಟೀಸ್, ಬೊಜ್ಜು,  ಅಪೌಷ್ಟಿಕತೆ ಮುಂತಾದ ಆರೋಗ್ಯದ ತೊಂದರೆಗಳನ್ನು ಉಂಟುಮಾಡುತ್ತದೆ. ಅದರಲ್ಲಿಯೂ ಮಕ್ಕಳಲ್ಲಿ ಈ  ಎಲ್ಲ ಸಮಸ್ಯೆಗಳೊಂದಿಗೆ ಅವರ ದೈಹಿಕ ಮತ್ತು ಮಾನಸಿಕ ಬೆಳವಣಿಗೆಯ ಮೇಲೆ ಅತಿಹೆಚ್ಚು ದುಷ್ಪರಿಣಾಮವಾಗುತ್ತವೆ ಇವುಗಳ ಹೆಚ್ಚಿನ ಸೇವನೆಯಿಂದ.

* ನಮ್ಮ ಆಹಾರ ಶುದ್ಧವಾಗಿರಲಿ. ಯಾವುದೇ ರೀತಿಯ ಸಂಸ್ಕರಿತ ಆಹಾರದ ಸೇವನೆ ಕಡಿಮೆಯಾಗಲಿ. ಅಡಿಗೆ ತಯಾರಿಸುವ ಮತ್ತು ಸೇವಿಸುವ ಸ್ಥಳ ಸ್ವಚ್ಛವಾಗಿರಲಿ.

ಬಾಯಿಗೆ ರುಚಿಯೆನಿಸುವ ಆಹಾರಗಳು ದೇಹಕ್ಕೂ ರುಚಿಸುವುದೇ ಎಂದು ಯೋಚಿಸಬೇಡವೇ ನಾವು?

 

click me!