ಶುಭ ಮುಂಜಾನೆ ಓದುಗರೆ : ಇಂದು ನಿಮ್ಮೆಲ್ಲರ ರಾಶಿ ಫಲದಲ್ಲಿ ಏನಿದೆ..?

Published : Jan 29, 2018, 07:03 AM ISTUpdated : Apr 11, 2018, 01:07 PM IST
ಶುಭ ಮುಂಜಾನೆ ಓದುಗರೆ : ಇಂದು ನಿಮ್ಮೆಲ್ಲರ ರಾಶಿ ಫಲದಲ್ಲಿ ಏನಿದೆ..?

ಸಾರಾಂಶ

ಶುಭ ಮುಂಜಾನೆ ಓದುಗರೆ : ಇಂದು ನಿಮ್ಮೆಲ್ಲರ ರಾಶಿ ಫಲದಲ್ಲಿ ಏನಿದೆ..?

ಮೇಷ : ಸಪ್ತಮದ ಗುರುವಿನಿಂದಾಗಿ ದಾಂಪತ್ಯದಲ್ಲಿ ಸಾಮ್ಯತೆ, ಹೊಂದಾಣಿಕೆ ಸಾಧ್ಯತೆ, ಕಳೆದು ಹೋಗಿದ್ದ ನಂಟು ಮತ್ತೆ ಬೆಸೆಯಲಿದೆ, ಐಕ್ಯಮತ್ಯ ಮಂತ್ರಗಳ ಪಾರಾಯಣ ಮಾಡಿಸಿದರೆ ನೆಮ್ಮದಿ

 

ವೃಷಭ : ಕುಜನ ನೇರದೃಷ್ಟಿ ರಾಶಿ ಮೇಲಿರುವುದರಿಂದ ದೇಹ ಬಾಧೆ, ಸಂಸಾರದಲ್ಲಿ ವಿರಸ, ಸಾಮಾನ್ಯದಿನ, ಸುಬ್ರಹ್ಮಣ್ಯ ಜಪ/ಹೋಮಾದಿಗಳನ್ನು ಮಾಡಿಸಿ

 

ಮಿಥುನ  : ರಾಶಿಯ ಅಧಿಪತಿ ಬಾಧೆಯಲ್ಲಿ ಕೂತಿರುವುದರಿಂದ ಕಾರ್ಯ ವಿಘ್ನ, ಆದರೆ ಗುರುವಿನ ಅನುಗ್ರಹವೂ ಇರುವುದರಿಂದ ಹೆಚ್ಚು ಚಿಂತಿಸುವ ಅಗತ್ಯವಿಲ್ಲ, ದಕ್ಷಿಣಾಮೂರ್ತಿ ಸ್ತೋತ್ರ ಪಠಣ ಮಾಡಿ

 

ಕಟಕ  : ರಾಶ್ಯಾಧಿಪತಿ ಲಾಭ ಸ್ಥಾನಗತವಾಗಿರುವುದರಿಂದ ವ್ಯಾಪಾರದಲ್ಲಿ ಲಾಭ, ದ್ರವ ವ್ಯಾಪಾರಿಗಳಿಗೆ ಲಾಭದ ದಿನ, ಕಟೀಲು ದುರ್ಗಾಪರಮೇಶ್ವರಿ ಧ್ಯಾನ / ದರ್ಶನ ಮಾಡಿ

 

ಸಿಂಹ  : ಮಕ್ಕಳ ಪ್ರತಿಭಾ ಪ್ರದರ್ಶನ, ಸಹೋದರರಲ್ಲಿ ಸಾಮರಸ್ಯ, ಲಿಂಗಾಷ್ಟಕವನ್ನು ಹೇಳಿಕೊಳ್ಳಿ

 

ಕನ್ಯಾ  : ಸಪ್ತಮಾಧಿಪತಿ ಧನಸ್ಥಾನಗತನಾಗಿರುವುದರಿಂದ ಹೆಂಡತಿಯಿಂದ ಧನಲಾಭ, ಬಂಧು ಸೌಖ್ಯ, ಮಹಾನಾರಾಯಣೋಪನಿಷತ್ತಿನ ಪಾರಾಯಣ ಮಾಡಿಸಿ

 

ತುಲಾ  : ಧೈರ್ಯದಿಂದ ಕಾರ್ಯ ಮುನ್ನಡೆಸಲಿದ್ದೀರಿ, ತಾಯಿಯಿಂದ ಸಹಕಾರ ದೊರೆಯಲಿದೆ, ಮಹಾಲಕ್ಷ್ಮಿಗೆ ತಾವರೆ ಹೂವನ್ನು ಸಮರ್ಪಿಸಿ

 

ವೃಶ್ಚಿಕ : ಸಹೋದರರಿಂದ ಹೆಚ್ಚಿನ ಸಹಾಯ, ಹೋಟೆಲ್ ವ್ಯಾಪಾರಿಗಳಿಗೆ ಉತ್ತಮ ದಿನ, ಮುಗುವಾ ಸುಬ್ರಹ್ಮಣ್ಯ ಕ್ಷೇತ್ರ ದರ್ಶನ ಮಾಡಿಬನ್ನಿ

 

ಧನಸ್ಸು : ಸ್ವಂತ ವ್ಯಾಪಾರಿಗಳಿಗೆ ಲಾಭದ ದಿನ, ದಾಂಪತ್ಯದಲ್ಲಿ ಮಾತಿನ ಸಮರ, ಅರ್ಧನಾರೀಶ್ವರ ದರ್ಶನ ಮಾಡಿ

 

ಮಕರ  : ಹಣಕಾಸಿನ ತೊಂದರೆ, ಮಾತಿನಿಂದ ಕಾರ್ಯ ವಿಘ್ನ, ಸಾಧಾರಣ ದಿನ, ಕಾಲಭೈರವ ಸ್ತೋತ್ರ ಪಠಿಸಿ

 

ಕುಂಭ : ಗುರು ದೃಷ್ಟಿಯಿಂದಾಗಿ ಆರೋಗ್ಯದಲ್ಲಿ ಚೇತರಿಕೆ, ಕಾಲಹರಣ ಮಾಡದೆ ಕಾರ್ಯ ಸಾಧಿಸಿ, ರುದ್ರಾಭಿಷೇಕ ಮಾಡಿಸಿದವರಿಗೆ ಇಷ್ಟಾರ್ಥ ಸಿದ್ಧಿ

 

ಮೀನ : ಗುರುಬಲವಿಲ್ಲದ ಕಾರಣ ಗುರುಚರಿತ್ರೆ ಪಾರಾಯಣ ಮಾಡಿ, ಹೆಚ್ಚು ವಾದಮಾಡುವುದು ಬೇಡ, ತಾಳ್ಮೆ ಇರಲಿ

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ರೈಲಿನಲ್ಲಿ ರಾತ್ರಿ ಪ್ರಯಾಣಿಸುವಾಗ ಪ್ರಯಾಣಿಕರ ಬಳಿಯಲ್ಲಿರಬೇಕಾದ ಅವಶ್ಯಕ ವಸ್ತುಗಳು
ಚಳಿಗಾಲದಲ್ಲಿ ಪ್ರತಿದಿನ ಎಳ್ಳು ತಿಂದರೆ ಇಷ್ಟೆಲ್ಲಾ ಪ್ರಯೋಜನಗಳಿವೆಯಾ?