Knowledge: ಆನೆ ಲದ್ದಿ, ಮನುಷ್ಯನ ಮೂತ್ರದಿಂದ ಸಿದ್ಧವಾಗಿದೆ ಬಿಯರ್..!

By Suvarna NewsFirst Published Oct 28, 2022, 12:08 PM IST
Highlights

ವಿಶ್ವದಲ್ಲಿ ಪ್ರತಿ ದಿನ ಸಾಕಷ್ಟು ಪ್ರಯೋಗಗಳು ನಡೆಯುತ್ತಿರುತ್ತವೆ. ಬಿಯರ್ ತಯಾರಿಕೆಯಲ್ಲೂ ಅನೇಕ ಪ್ರಯೋಗಗಳು ನಡೆಯುತ್ತಿರುತ್ತವೆ. ಜನರನ್ನು ಆಕರ್ಷಿಸಲು ಹೊಸ ಹೊಸ ಫ್ಲೇವರ್ ಬಿಯರ್ ಮಾರುಕಟ್ಟೆಗೆ ಬರುತ್ತೆ. ಅದ್ರಲ್ಲಿ ಕೆಲ ಬಿಯರ್ ತಯಾರಾದ ಬಗೆ ಅಚ್ಚರಿ ಮೂಡಿಸುತ್ತದೆ.
 

ಬಿಯರ್ ವಿಶ್ವದ ಅತ್ಯಂತ ಹಳೆಯ ಪಾನೀಯಗಳಲ್ಲಿ ಒಂದಾಗಿದೆ. ಬಿಯರ್ ಗೆ ಐದು ಸಾವಿರ ವರ್ಷಗಳ ಇತಿಹಾಸವಿದೆ. ಇಷ್ಟೊಂದು ಹಳೆಯ ಬಿಯರ್ ಮೇಲೆ ಪ್ರಯೋಗಗಳು ನಡೆದೇ ಇರುತ್ವೆ. ಬಿಯರ್ ಪ್ರೇಮಿಗಳನ್ನು ಸೆಳೆಯಲು ಕಂಪನಿಗಳು ಸಾಕಷ್ಟು ಪ್ರಯೋಗಗಳನ್ನು ಮಾಡಿರುತ್ತವೆ. ಕಂಪನಿಗಳು ಅದೆಂಥ ಪ್ರಯೋಗಕ್ಕೆ ಕೈ ಹಾಕಿದ್ದವು ಅಂದ್ರೆ ಸಾಮಾನ್ಯ ಜನರು ಅದ್ರ ಕಲ್ಪನೆ ಕೂಡ ಮಾಡಿಕೊಳ್ಳಲು ಸಾಧ್ಯವಿಲ್ಲ. ನಾವಿಂದು ಜಗತ್ತಿನಲ್ಲಿ ತಯಾರಾದ ಕೆಲವು ವಿಚಿತ್ರ ಬಿಯರ್ ಗಳ ಬಗ್ಗೆ ನಿಮಗೆ ಮಾಹಿತಿ ನೀಡ್ತೇವೆ.

ಜಗತ್ತಿನಲ್ಲಿರುವ ಚಿತ್ರವಿಚಿತ್ರ ಬಿಯರ್ : 

ಅನ್ ಕೊನೊ ಕುರೊ (Un Kono Kuro) : ಅನ್ ಕೊನೊ ಕುರೊ, ಜಪಾನಿನ ಬಿಯರ್ ಆಗಿದೆ. ಇದಕ್ಕೆ ವಿಭಿನ್ನ ಪರಿಮಳವನ್ನು ನೀಡಲು ಕಾಫಿಯನ್ನು ಸೇರಿಸಲಾಗುತ್ತದೆ. ಆದರೆ, ಕುತೂಹಲಕಾರಿ ಸಂಗತಿಯೆಂದರೆ ಇದನ್ನು ತಯಾರಿಸಲು ಬಳಸುವ ಕಾಫಿಯನ್ನು ಮೊದಲು ಆನೆಗಳಿಗೆ ತಿನ್ನಿಸಲಾಗುತ್ತದೆ. ನಂತರ ಆನೆ ಲದ್ದಿಯಿಂದ ಹೊರಬಂದ ಕಾಫಿ ಬೀಜಗಳಿಂದ ಬಿಯರ್ ತಯಾರಿಸಲಾಗುತ್ತದೆ. ಕಾಫಿ ಆನೆಯ ಹೊಟ್ಟೆ ಸೇರಿದ ನಂತರ ಒಳಗಿನ ಶಾಖದಿಂದ ರೋಸ್ಟ್ ಆಗುತ್ತದೆಯಂತೆ. ನಂತ್ರ ಲದ್ದಿಯಿಂದ ಕಾಫಿ ಬೀಜವನ್ನು ಆರಿಸಿ, ಬಿಯರ್ ತಯಾರಿಗೆ ಬಳಸಲಾಗುತ್ತದೆ. ಬಿಯರ್ ಗೆ ಇದ್ರಿಂದ ಕಾಫಿಯ ಪರಿಮಳ ಸೇರುತ್ತದೆ. ಆನೆಗೆ ಹೆಚ್ಚು ಕಾಫಿ ಬೀಜವನ್ನು ನೀಡಬೇಕು. ಆದ್ರೆ ಆನೆ ಲದ್ದಿಯಲ್ಲಿ ಸಿಗುವ ಬೀಜ ಬಹಳ ಕಡಿಮೆ. ಹಾಗಾಗಿ ಈ ಬಿಯರ್ ತುಂಬಾ ದುಬಾರಿ. 

ಸಪ್ಪೊರೊ ಸ್ಪೇಸ್ ಬಾರ್ಲಿ (Sapporo Space Barley): ಅಂತರಾಷ್ಟ್ರೀಯ ಬಾಹ್ಯಾಕಾಶದಲ್ಲಿ ಬೆಳೆದ ಬಾರ್ಲಿಯಿಂದ ತಯಾರಿಸಿದ ಬಿಯರ್ ಆಗಿದೆ. ಇದನ್ನು ಸಪ್ಪೊರೊ ಬ್ರೂವರೀಸ್ ಲಿಮಿಟೆಡ್ ಸಿದ್ಧಪಡಿಸಿದೆ. ಇದು ಲಿಮಿಡೆಟ್ ಅಡಿಷನ್ ಬಿಯರ್ ಆಗಿದೆ. ಇದನ್ನು ಮಾರಾಟ ಮಾಡಿದಾಗ ಬಂದ ಹಣವನ್ನು ಬಾಹ್ಯಾಕಾಶ ಸಂಸ್ಥೆಗೆ ನೀಡಲಾಗಿದೆ. ಯುಎಸ್ ನಗರವಾದ ಡೆಲವೇರ್ ಮೂಲದ ಬ್ರೆವರಿ ಡಾಗ್‌ಫಿಶ್ ಮುಖ್ಯಸ್ಥ, ಚಂದ್ರನ ಉಲ್ಕಾಶಿಲೆ ಧೂಳಿನಿಂದ ಬಿಯರ್ ತಯಾರಿಸಿದ್ದರು. ಅದಕ್ಕೆ ಸೆಲೆಸ್ಟ್ ಜ್ಯುವೆಲ್ ಅಲೆ (Celest Jewel Ale) ಎಂದು ಹೆಸರಿಡಲಾಗಿತ್ತು. 

ದಿ ಎಂಡ್ ಆಫ್ ಹಿಸ್ಟರಿ (The End Of History) : ದಿ ಎಂಡ್ ಆಫ್ ಹಿಸ್ಟರಿ ಹೆಸರಿನ ಬಿಯರನ್ನು ಸ್ಕಾಟ್ಲೆಂಡ್‌ನ ಬ್ರೂಡಾಗ್ ಕಂಪನಿ ಸಿದ್ಧಪಡಿಸಿದೆ. ಇದ್ರಲ್ಲಿ ಶೇಕಡಾ 55ಕ್ಕಿಂತ ಹೆಚ್ಚು ಆಲ್ಕೋಹಾಲ್ ಇರುತ್ತದೆ.  ಇದ್ರ ರುಚಿ ಒಂದೆಡೆಯಾದ್ರೆ ಇದ್ರ ಬಾಟಲಿ ಹೆಚ್ಚು ಆಕರ್ಷಕವಾಗಿದೆ. ಇದನ್ನು ಮುಂಗಸಿಯಂತಹ ಪ್ರಾಣಿ ಹಾಗೂ ಅಳಿಲಿನಂತಹ ಪ್ರಾಣಿಯ ಚರ್ಮದಿಂದ ತಯಾರಿಸಲಾಗಿದೆ. ರಸ್ತೆ ಅಪಘಾತದಲ್ಲಿ ಸಾವನ್ನಪ್ಪುವ ಪ್ರಾಣಿಗಳ ಚರ್ಮವನ್ನು ಬಾಟಲಿ ತಯಾರಿಸಲು ಬಳಸಲಾಗುತ್ತದೆ. ಒಂದು ಬಾಟಲಿಯ ಬೆಲೆ 20 ಸಾವಿರ ಡಾಲರ್. 

ಸ್ನೇಕ್ ವೆನಮ್ (Snake Venom) : ಹೆಸರು ಕೇಳಿ ಬೆಚ್ಚಿ ಬೀಳಬೇಡಿ. ಹಾವಿನ ವಿಷದಿಂದ ಇದನ್ನು ತಯಾರಿಸಿಲ್ಲ. ಆದ್ರೆ ವಿಶ್ವದ ಅತ್ಯಂತ ಸ್ಟ್ರಾಂಗ್ ಬಿಯರ್ ಇದು. ಇದ್ರಲ್ಲಿ ಶೇಕಡಾ 67.5 ರಷ್ಟು ಆಲ್ಕೋಹಾಲ್ ಇರುತ್ತದೆ. ಸ್ಕಾಟ್ಲೆಂಡ್ ನಲ್ಲಿ ಇದನ್ನು ತಯಾರಿಸಲಾಗುತ್ತದೆ. ಆಲ್ಕೋಹಾಲ್ ಜೊತೆಗೆ ಚೆರ್ರಿ ಮತ್ತು ಸೇಬಿನ ಪರಿಮಳ ಇದ್ರಲ್ಲಿದೆ. ಒಂದು ಬಾರಿ 35 ಎಂಎಂ ಮಾತ್ರ. ಅದೂ ನಿಧಾನವಾಗಿ ಸೇವನೆ ಮಾಡುವಂತೆ ಸಲಹೆ ನೀಡಲಾಗುತ್ತದೆ.

Knowledge: ಹೊಟೇಲ್‌ನಿಂದ ಈ ವಸ್ತು ಮನೆಗೆ ತರ್ಬೇಡಿ

ಘೋಸ್ಟ್ ಫೇಸ್ ಕಿಲ್ಲಾ  (Ghost Face Killah) : ಅಮೆರಿಕಾದ ಕೊಲೊರಾಡೊದಲ್ಲಿ ತಯಾರಾಗುವ ಬಿಯರ್ ಇದು. ಇದರಲ್ಲಿ ಶೇಕಡಾ 5.2ರಷ್ಟು ಮಾತ್ರ ಆಲ್ಕೋಹಾಲ್ ಇದೆ. ಆದ್ರೂ ಇದನ್ನು ಸೇವನೆ ಮಾಡೋದು ಕಷ್ಟ. ಯಾಕೆಂದ್ರೆ ಇದಕ್ಕೆ ಅನೇಕ ರೀತಿಯ ಮೆಣಸನ್ನು ಹಾಕಲಾಗಿರುತ್ತದೆ. ಇದ್ರ ಬಗ್ಗೆ ಬಾಟಲಿ ಮೇಲೆಯೇ ಸೂಚನೆ ನೀಡಲಾಗಿರುತ್ತದೆ.

ಸೊಳ್ಳೆ ನಿಮಗೆ ಮಾತ್ರ ಕಚ್ಚುತ್ತಾ? ಪಕ್ಕದಲ್ಲಿ ಕೂತವರ ಹತ್ತಿರವೂ ಸುಳಿಯೋಲ್ವಾ?

ಫುಲ್ ಸರ್ಕಲ್ (Full Circle) : ಅಮೆರಿಕಾದ ಸ್ಟೋನ್ ಬ್ರೂವರಿ ಇದನ್ನು ತಯಾರಿಸಿದ್ದಾನೆ. ಡ್ರೈನ್ ನೀರನ್ನು ಮರುಬಳಕೆ ಮಾಡಿ ಇದನ್ನು ತಯಾರಿಸಲಾಗಿದೆ. ಡ್ರೈನ್ ನೀರು ಮರುಬಳಕೆ ನಂತ್ರ ಬಿಯರ್ ಗೆ ವಿಭಿನ್ನ ಪರಿಮಳ ನೀಡುತ್ತದೆ. ಡೆನ್ಮಾರ್ಕ್ ನಲ್ಲಿ ಕೆಲ ಜನರು ವಿಚಿತ್ರ ಪ್ರಯೋಗ ಮಾಡಿದ್ದಾರೆ. 2015 ರಲ್ಲಿ ರಾಕ್‌ಸ್ಲೈಡ್ ಮ್ಯೂಸಿಕ್ ಫೆಸ್ಟಿವಲ್ ಸಮಯದಲ್ಲಿ 50,000 ಗ್ಯಾಲನ್ ಮನುಷ್ಯರ ಮೂತ್ರವನ್ನು ಸಂಗ್ರಹಿಸಲಾಯಿತು ಮತ್ತು ಅದರಿಂದ ಪಿಸ್ನರ್ ಬಿಯರ್ ತಯಾರಿಸಲಾಗಿತ್ತು.
 

click me!