ಅತಿ ಹೆಚ್ಚು ಟಿವಿ, ಮೊಬೈಲ್ ವೀಕ್ಷಣೆ ಮೊದಲಿಗಿಂದ ಇತ್ತೀಚಿನ ವರ್ಷಗಳಲ್ಲಿ ಗೀಳಾಗಿದೆ. ಇದರ ಜೊತೆ ನಿಯಮಿತ ವ್ಯಾಯಾಮದ ಕೊರತೆ ಹಾಗೂ ಜಂಕ್ ಫುಡ್ ಸೇವನೆ ಅನಾರೋಗ್ಯದ ಜೊತೆ ಸೆಕ್ಸ್ ಜೀವನವನ್ನು ಹಾಳು ಮಾಡುತ್ತದೆ
ಇತ್ತೀಚಿನ ದಿನಗಳಲ್ಲಿ ಆಟವಾಡುವ ಹುಡುಗರಿಂದ ಹಿಡಿದು ವಯಸ್ಸಾದ ಮುದುಕರವರೆಗೂ ಟಿವಿ, ಮೊಬೈಲ್ ವೀಕ್ಷಣೆ ಹೆಚ್ಚು ಗೀಳಾಗಿಬಿಟ್ಟಿದೆ. ಟಿವಿ, ಮೊಬೈಲ್ ಇಲ್ಲದೆ ಜೀವನವೆ ಇಲ್ಲವೆಂಬ ಪರಿಸ್ಥಿತಿಯಲ್ಲಿ ಇಂದಿನ ಯುವ ಸಮುದಾಯವಿದೆ. ಆದರೆ ಅತಿಯಾದ ಟಿವಿ, ಮೊಬೈಲ್ ವೀಕ್ಷಿಸುವವರಿಗೆ ಇಲ್ಲೊಂದು ಶಾಕಿಂಗ್ ಸುದ್ದಿ ಕಾದಿದೆ.
ವೈದ್ಯಕೀಯ ಸಂಶೋಧನೆಯ ಪ್ರಕಾರ 5 ಗಂಟೆಗಿಂತ ಹೆಚ್ಚು ಕಾಲ ಟಿವಿ ಹಾಗೂ ಮೊಬೈಲ್ ವೀಕ್ಷಿಸಿದರೆ ದೇಹದ ವೀರ್ಯಾಣು ಸಂಖ್ಯೆ ಶೇ. 35 ರಷ್ಟು ಕಡಿಮೆಯಾಗುತ್ತದೆ. ಅಲ್ಲದೆ ಲೈಂಗಿಕ ಜೀವನಕ್ಕೂ ತೊಡಕುಂಟಾಗುತ್ತದೆ' ಎಂದು ವರದಿ ತಿಳಿಸಿದೆ.
ಅತಿ ಹೆಚ್ಚು ಟಿವಿ, ಮೊಬೈಲ್ ವೀಕ್ಷಣೆ ಮೊದಲಿಗಿಂದ ಇತ್ತೀಚಿನ ವರ್ಷಗಳಲ್ಲಿ ಗೀಳಾಗಿದೆ. ಇದರ ಜೊತೆ ನಿಯಮಿತ ವ್ಯಾಯಾಮದ ಕೊರತೆ ಹಾಗೂ ಜಂಕ್ ಫುಡ್ ಸೇವನೆ ಅನಾರೋಗ್ಯದ ಜೊತೆ ಸೆಕ್ಸ್ ಜೀವನವನ್ನು ಹಾಳು ಮಾಡುತ್ತದೆ ಇದು ದಾಂಪತ್ಯ ಕಲಹಕ್ಕೂ ದಾರಿ ಮಾಡಿಕೊಡುತ್ತದೆ.
ವೈದ್ಯಕೀಯ ವರದಿಗಳ ಪ್ರಕಾರ, ಬಿಡುವಿಲ್ಲದೆ ಟಿವಿ, ಮೊಬೈಲ್ ವೀಕ್ಷಣೆ ಮಾಡಿದರೆ ಬರಬರುತ್ತಾ ನಿಮ್ಮ ದೇಹದಲ್ಲಿನ ವೀರ್ಯಾಣು ಸಂಖ್ಯೆ ಕಡಿಮೆಯಾಗುತ್ತದೆ. ಅಲ್ಲದೆ ಶ್ವಾಸಕೋಶದಲ್ಲಿ ರಕ್ತ ಹೆಪ್ಪುಗಟ್ಟುವಿಕೆ ಉಂಟಾಗಿ ಸಾವು ಸಂಭವಿಸುವ ಸಾಧ್ಯತೆಯಿರುತ್ತದೆ. ಈ ರೀತಿಯ ತೊಂದರೆಗಳು ಸಾಮಾನ್ಯವಾಗಿ 18ರಿಂದ 25ನೇ ವಯಸ್ಸಿನವರಿಗೆ ಹೆಚ್ಚಾಗಿ ಸಂಭವಿಸುತ್ತವೆ.
ಸಾಧ್ಯವಾದಷ್ಟು ಟಿವಿ ವೀಕ್ಷಣೆ ಕಡಿಮೆ, ನಿಯಮಿತ ವ್ಯಾಯಾಮ, ಜಂಕ್ ಫುಡ್ ಬಳಕೆ ತಡೆ ಈ ರೀತಿಯ ಜೀವನಶೈಲಿಗಳನ್ನು ಅಳವಡಿಸಿಕೊಂಡರೆ ಆರೋಗ್ಯವನ್ನು ಉತ್ತಮವಾಗಿ ಕಾಪಾಡಿಕೊಳ್ಳಬಹುದು.