
ಮಾಜಿ ಹಣಕಾಸು ಸಚಿವ, ಕಾಂಗ್ರೆಸ್‌ನ ಹಿರಿಯ ನಾಯಕ ಪಿ.ಚಿದಂಬರಂ 2013ರಲ್ಲಿ ಗೋವಾದಲ್ಲಿ ತಾಲಿಬಾನ್ ಮುಖಂಡನ್ನು ಭೇಟಿ ಮಾಡಿದ್ದರಾ? ಎಂಬ ಪ್ರಶ್ನೆ ಸಾಮಾಜಿಕ ಮಾಧ್ಯಮಗಳಲ್ಲಿ ಚರ್ಚೆಯಾಗುತ್ತಿದೆ. ಕಾರಣ ತಾಲಿಬಾನ್ ಮುಖಂಡ ಮುಲ್ಲಾ ಅಬ್ದುಲ್ ಜೀಫ್ ಅವರೊಂದಿನ ಛಾಯಾಚಿತ್ರವು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಕೆಲ ಸುದ್ದಿವಾಹಿ ನಿಗಳೂಕೂಡ ಕಾಂಗ್ರೆಸ್ 2013ರಲ್ಲಿ ತಾಲಿಬಾನ್ ಮುಖಂಡರೊಂದಿಗೆ ಸಭೆ ನಡೆಸಿದೆ ಎಂದು ಸುದ್ದಿ ಮಾಡಿದ್ದವು. ಆದರೆ ಇದರಸತ್ಯಾಸತ್ಯತೆ ಏನು ಎಂದು ಪರಿಶೀಲಿಸಿದಾಗ ಬಯಲಾದ ಸತ್ಯವೇ ಬೇರೆ. ಕಾಂಗ್ರೆಸ್ 2013ರಲ್ಲಿ ತಾಲಿಬಾನ್ ಮುಖಂಡ ಮುಲ್ಲಾ ಅಬ್ದುಲ್ ಜೀಫ್‌ನೊಂದಿಗೆ ಸಭೆ ನಡೆಸಿದ ಫೋಟೋ ಇದಲ್ಲ. ಬದಲಿಗೆ ತೆಹೆಲ್ಕಾ ಮ್ಯಾಗಜಿನ್ 2013ರಲ್ಲಿ ‘ಥಿಂಕ್ 2013’ಎಂಬ ಕಾರ್ಯಕ್ರಮವನ್ನು ಆಯೋಜಿಸಿತ್ತು.
ಆ ಸಂದರ್ಭ'ದಲ್ಲಿ ತಾಲಿಬಾನ್ ಮುಖಂಡ ಮುಲ್ಲಾ ಅಬ್ದುಲ್ ಜೀಫ್‌ನನ್ನೂ ಕೂಡಾ ಆಹ್ವಾನಿಸಲಾಗಿತ್ತು. ಆ ಸಂದರ್ಭದಲ್ಲಿ ತೆಗೆದ ಫೋಟೋ ಇದಾಗಿದೆ. ಆ ಕಾರ್ಯಕ್ರಮದಲ್ಲಿ 80 ಜನ ಚಿಂತಕರ ವಿಚಾರಸಂಕೀರ್ಣವನ್ನು ಹಮ್ಮಿಕೊಳ್ಳಲಾಗಿತ್ತು. ಆ 80 ಜನ ಆಹ್ವಾನಿತರಲ್ಲಿ ತಾಲಿಬಾನ್ ಮುಖಂಡ ಮುಲ್ಲಾ ಅಬ್ದುಲ್ ಜೀಫ್ ಕೂಡಾ ಒಬ್ಬನಾಗಿದ್ದನು.ತೆಹೆಲ್ಕಾ ನಿಯತಕಾಲಿಕೆಯ ವ್ಯವಸ್ಥಾಪಕ ನಿರ್ದೇಶಕರೇ ‘ಥಿಂಕ್ 2013’ ಕಾರ್ಯಕ್ರಮಕ್ಕೆ ತಾಲೀಬಾನ್ ಮುಖಂಡನಿಗೆ ಆಹ್ವಾನ ನೀಡಿದ್ದಾಗಿ ಸ್ಪಷ್ಟಪಡಿಸಿದ್ದಾರೆ. ಅಲ್ಲದೆ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡಲಾದ ಚಿತ್ರದಲ್ಲಿ ಚಿದಂಬರಂ ಅವರು ತಾಲಿಬಾನ್ ಮುಖಂಡನ ಎದುರು ಕುಳಿತಿಲ್ಲ. ಬದಲಾಗಿ ಮುಂದೆ ನೋಡುತ್ತಿರುವಂತೆ ಕಾಣಿಸುತ್ತಿದೆ. ಹೀಗಾಗಿ ಪಿ.ಚಿದಂಬರಂ ತಾಲಿಬಾನ್ ಮುಖಂಡರೊಂದಿಗೆ ಸಭೆ ನಡೆಸಿದ್ದಾರೆ ಎನ್ನಲಾದ ಸುದ್ದಿ ಸುಳ್ಳು ಎಂಬಂತಾಯಿತು.
(ಕನ್ನಡಪ್ರಭ ವೈರಲ್ ಚೆಕ್ ಕಾಲಂ)
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.