ಮನೆಯಲ್ಲಿ ಗದ್ದೆ, ಸೌದೆ ಸೀಳೋ ಕೆಲಸ ಮಾಡಿ ರ‍್ಯಾಂಪ್‌ನಲ್ಲಿ ಟ್ರೆಂಡ್ ಸೃಷ್ಟಿಸಿದ ಭಾರತೀಯ ಮಾಡೆಲ್ಸ್

Published : Oct 30, 2026, 11:19 AM IST
rolling chapatis to lakme fashion

ಸಾರಾಂಶ

ಸ್ವಗ್ರಾಂ ವರ್ಸಸ್ ರ‍್ಯಾಂಪ್‌ ಇದೀಗ ಹೊಸ ಟ್ರೆಂಡ್ ಸೃಷ್ಟಿಸಿದೆ. ಮನೆಯಲ್ಲಿರುವಾಗ ಗದ್ದೆ ಕೆಲಸ, ಸೌದೆ ಸೀಳೋದು, ಚಪಾಟಿ ಲಟ್ಟಿಸೋದು ಸೇರಿದಂತೆ ಸಾಮಾನ್ಯರಂತೆ ಎಲ್ಲಾ ಕೆಲಸ ಮಾಡುವ ಈ ಐಕಾನ್ಸ್ ರ‍್ಯಾಂಪ್‌ ಮೇಲೆ ಬರುತ್ತಿದ್ದಂತೆ ಎಲ್ಲವು ಬದಲಾಗುತ್ತೆ, ಮಾಡೆಲ್‌ಗಳಾದ ಹೊಸ ಇತಿಹಾಸ ರಚಿಸಿದ್ದಾರೆ.

ನವದೆಹಲಿ (ಅ.30) ಫ್ಯಾಶನ್ ಜಗತ್ತಿನಲ್ಲಿ ಹಲವು ಮಾಡೆಲ್ಸ್ ಮಿಂಚಿದ್ದಾರೆ. ಸುಷ್ಮಿತಾ ಸೇನ್, ಐಶ್ವರ್ಯ ರೈನಿಂದ ಇತ್ತೀಚಿನ ಸಾಧ್ವಿ ಸತೀಶ್ ಸೈಲ್ ವರೆಗೆ ಮಾಡೆಲ್ ಮಿಂಚಿದ್ದಾರೆ. ಮಾಡೆಲ್ಸ್ 10 ರಿಂದ 15 ನಿಮಿಷದ ನಡಿಗೆಗೆ ಇಡೀ ವರ್ಷ ತಯಾರಿ ಮಾಡುತ್ತಾರೆ. ಕಠಿಣ ಡಯೆಟ್ ಪಾಲಿಸುತ್ತಾರೆ. ಕಠಿಣ ತಯಾರಿ ಮೂಲಕ ಸೌಂದರ್ಯ ಸ್ಪರ್ಧೆಯಲ್ಲಿ ಕಿರೀಟ ಮುಡಿಗೇರಿಸಿಕೊಳ್ಳುತ್ತಾರೆ. ಇದರ ನಡುವೆ ಇದೀಗ ಹೋಮ್‌ಟೌನ್ ವರ್ಸಸ್ ರ‍್ಯಾಂಪ್‌ ಭಾರಿ ಟ್ರೆಂಡ್ ಆಗಿದೆ. ಕೆಲ ಮಾಡೆಲ್ಸ್ ಮನೆಯಲ್ಲಿ ಗದ್ದೆ ಕೆಲಸ ಸೇರಿದಂತೆ ಸಾಮಾನ್ಯರಂತೆ ಎಲ್ಲಾ ಕೆಲಸ ಮಾಡಿ ಸೌಂದರ್ಯ ಸ್ಪರ್ಧೆ ಬರುವಾಗ ಮಾಡೆಲ್ ಆಗಿ ಮಿಂಚುತ್ತಿದ್ದಾರೆ. ಮನೆಗೂ ರ‍್ಯಾಂಪ್‌ಗೂ ಗುರುತೇ ಸಿಗದಷ್ಟು ಬದಲಾಗುತ್ತಾರೆ. ಹೀಗೆ ಹೊಸ ಟ್ರೆಂಡ್ ಸೃಷ್ಟಿಸಿರುವ ಮಾಡೆಲ್ಸ್ ಇಲ್ಲಿದ್ದಾರೆ.

ಗ್ರಾಮರ್ ಪ್ರಪಚಂದ ಹಿಂದಿನ ಜಗತ್ತು

ಗ್ಲಾಮರ್ ಪ್ರಪಂಚದ ಮಿಂಚಿನ ಬೆಳಕಿನ ಹಿಂದೆ ಇರುವ ತಮ್ಮ ನೈಜ ಹಾಗೂ ಸರಳ ಜೀವನದ ದಿನಗಳನ್ನು ಭಾರತೀಯ ಮಾಡೆಲ್ಸ್ ಈ ಟ್ರೆಂಡ್ ಮೂಲಕ ಜಗತ್ತಿಗೆ ಪರಿಚಯಿಸುತ್ತಿದ್ದಾರೆ. ಉತ್ತರಾಖಂಡದ ಜಾನಪದ ಹಾಡಾದ ಸ್ವಾಮಿ ಪರದೇಶ್ ಎಂಬ ಗಾರ್ವಾಲಿ (Garhwali) ರಿದಮಿಕ್ ಹಾಡಿನ ಹಿನ್ನೆಲೆ ಸಂಗೀತದೊಂದಿಗೆ ಈ ವಿಡಿಯೋಗಳನ್ನು ರೆಕಾರ್ಡ್ ಮಾಡಲಾಗುತ್ತಿದೆ ವಿಡಿಯೋದ ಮೊದಲ ಭಾಗದಲ್ಲಿ ನನ್ನ ಸ್ವಗ್ರಾಮದಲ್ಲಿ ನಾನು ( ಮಿ ಇನ್ ಹೋಮ್‌ಟೌನ್) ಎಂದು ಪೋಸ್ಟ್ ಮಾಡುತ್ತಿದ್ದಾರೆ. ಈ ವಿಡಿಯೋದ ಆರಂಭದಲ್ಲಿ ಮನೆಯಲ್ಲಿ ಮಾಡೆಲ್ ಎಲ್ಲರಂತೆ ಕೆಲಸ ಮಾಡುತ್ತಿರುವ ಚಿತ್ರಣವಿದೆ. ಬಳಿಕ ರ‍್ಯಾಂಪ್‌ ಮೇಲೆ ಗ್ಲಾಮರಸ್ ಆಗಿ ಹೆಜ್ಜೆ ಹಾಕುತ್ತಾ ಎಂಟ್ರಿಕೊಡುತ್ತಿರುವ ದೃಶ್ಯಗಳಿವೆ.

ಹಳ್ಳಿ ಜೀವನದಲ್ಲಿ ಮಾಡೆಲ್ಸ್

ವಿಡಿಯೋ ಆರಂಭದಲ್ಲಿ ಮಾಡೆಲ್‌ಗಳು ಯಾವುದೇ ಮೇಕಪ್ ಇಲ್ಲದೆ, ತೀರಾ ಸಾಮಾನ್ಯ ಉಡುಪಿನಲ್ಲಿ ತಮ್ಮ ಹಳ್ಳಿಯ ಮನೆಯ ದಿನನಿತ್ಯದ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದಾರೆ.. ಕೆಲವರು ನೆಲದ ಮೇಲೆ ಕುಳಿತು ಚಪಾತಿ ಲಟ್ಟಿಸುತ್ತಿದ್ದರೆ, ಮತ್ತೆ ಕೆಲವರು ಸೌದೆ ಸೀಳುವುದು, ಎಳನೀರು ಕತ್ತರಿಸುವುದು ಹಾಗೂ ಜಮೀನಿನಲ್ಲಿ ಕೃಷಿ ಕೆಲಸ ಮಾಡುವುದನ್ನು ಕಾಣಬಹುದು. ಸಣ್ಣ ಪುಟ್ಟ ಗ್ರಾಮಗಳಿಂದ ಬಂದ ಈ ಮಾಡೆಲ್‌ಗಳ ಸರಳತೆ ವೀಕ್ಷಕರ ಗಮನ ಸೆಳೆಯುತ್ತಿದೆ.

ಆದರೆ ಹಾಡಿನ ಬಿಟ್ ಬದಲಾಗುತ್ತಿದ್ದಂತೆ, ವಿಡಿಯೋದಲ್ಲಿನ ದೃಶ್ಯ ಸಂಪೂರ್ಣವಾಗಿ ಬದಲಾಗುತ್ತದೆ. ಹಳ್ಳಿಯ ಸಾಮಾನ್ಯ ಉಡುಪಿನಿಂದ ಒಮ್ಮೆಲೇ ಟಾಪ್ ಡಿಸೈನರ್ಸ್‌ಗಳ ಕೌಚರ್ ಹಾಗೂ ದುಬಾರಿ ಫ್ಯಾಷನ್ ಉಡುಪುಗಳಿಗೆ ಬದಲಾಗುವ ಮಾಡೆಲ್‌ಗಳು, ಲ್ಯಾಕ್ಮೆ ಫ್ಯಾಷನ್ ವೀಕ್ ಸೇರಿದಂತೆ ದೇಶ-ವಿದೇಶಗಳ ಪ್ರಮುಖ ಫ್ಯಾಷನ್ ಶೋಗಳ ರ‍್ಯಾಂಪ್ ಮೇಲೆ ರಾಜಗಾಂಭೀರ್ಯದಿಂದ ಹೆಜ್ಜೆ ಹಾಕುತ್ತಾರೆ.

ಲ್ಯಾಕ್ಮೆ ಫ್ಯಾಶನ್ ವೀಕ್‌ನಲ್ಲಿ ಹಳ್ಳಿ ಮಾಡೆಲ್ಸ್

ಈ ವೈರಲ್ ಟ್ರೆಂಡ್‌ನಲ್ಲಿ ಭಾಗವಹಿಸಿರುವ ಪ್ರಮುಖ ಮಾಡೆಲ್‌ಗಳಲ್ಲಿ ಒಬ್ಬರಾದ ದೀಕ್ಷಾ, ಹಳ್ಳಿಯಲ್ಲಿ ಕುಳಿತು ಚಪಾತಿ ಲಾಟಿಸುವ ದೃಶ್ಯದ ನಂತರ ಲ್ಯಾಕ್ಮೆ ಫ್ಯಾಷನ್ ವೀಕ್ ರ‍್ಯಾಂಪ್ ಮೇಲಿನ ಗ್ಲಾಮರಸ್ ಲುಕ್ ಶೇರ್ ಮಾಡಿದ್ದಾರೆ. ಮತ್ತೋರ್ವ ಮಾಡೆಲ್ ಕರಣ್ ನೀರು ಹೊರುವ ವೀಡಿಯೋ ಶೇರ್ ಮಾಡಿದ್ದರೆ, ಮಹಾರಾಷ್ಟ್ರ ಮೂಲದ ಸಾಕ್ಷಿ ಕುಂಬಾರ್ ಜಮೀನಿನಲ್ಲಿ ಬೆಳೆ ಕೊಯ್ಲು ಮಾಡುವ ಹಳ್ಳಿಯ ಉಡುಪಿನಿಂದ ದಿಢೀರನೆ ಹೈ-ಫ್ಯಾಷನ್ ಕಪ್ಪು ಉಡುಪಿಗೆ ಬದಲಾಗಿ ರ‍್ಯಾಂಪ್ ಮೇಲೆ ಸಾಗುವ ದೃಶ್ಯ ಭಾರಿ ಮೆಚ್ಚುಗೆಗೆ ಪಾತ್ರವಾಗಿದೆ.

ಪ್ರಸಿದ್ಧ ಅಂತಾರಾಷ್ಟ್ರೀಯ ಬ್ರ್ಯಾಂಡ್ 'ವರ್ಸೇಸ್' (Versace) ಶೋನಲ್ಲಿ ಹೆಜ್ಜೆ ಹಾಕಿದ ನಕುಲ್ ಭಾರದ್ವಾಜ್, ತಾವು ಅಡುಗೆ ಮನೆಯ ಕೆಲಸ ಮಾಡುತ್ತಿದ್ದ ಹಳೆಯ ದಿನಗಳನ್ನು ನೆನಪಿಸಿಕೊಂಡಿದ್ದಾರೆ. ಬೆಂಗಳೂರು ಮೂಲದ ಮಾಡೆಲ್ ಸಂಗೀತ ರಮೇಶ್ ಕೂಡ ತಾವು ಚಪಾತಿ ಲಾಟಿಸುವ ಸರಳ ಜೀವನದಿಂದ ಬೆಳ್ಳಿ ಬಣ್ಣದ ಹೊಳೆಯುವ ಉಡುಪಿನಲ್ಲಿ ರ‍್ಯಾಂಪ್ ಮೇಲೆ ಮಿಂಚಿದ ಜರ್ನಿಯನ್ನು ಶೇರ್ ಮಾಡಿದ್ದಾರೆ. ಕಷ್ಟಪಟ್ಟು ಹಳ್ಳಿಯಿಂದ ಬಂದ ಮಾಡೆಲ್‌ಗಳು ಇಂದು ಗ್ಲಾಮರ್ ಜಗತ್ತಿನಲ್ಲಿ ಸಾಧನೆ ಮಾಡಿರುವುದನ್ನು ಕಂಡು ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ದೊಡ್ಡವರಾದ ಮೇಲೆ ಅಣ್ಣ-ತಂಗಿ ನಡುವೆ ಮೊದಲಿನ ಆತ್ಮೀಯತೆ ಏಕಿರಲ್ಲ? ಸಂಬಂಧ ದೂರವಾಗಲು ಇವೇ ಕಾರಣ
ಡಾ. ವಿಷ್ಣುವರ್ಧನ್‌, ಬಿ. ಸರೋಜಾದೇವಿಗೆ ʻಕರ್ನಾಟಕ ರತ್ನʼ ಪ್ರಶಸ್ತಿ ಪ್ರಧಾನ; ರಜನಿಕಾಂತ್‌ ಮುಖ್ಯ ಅತಿಥಿ? ನಟಿಯರಲ್ಲಿ ಯಾರು?