ದೀಪಾವಳಿಗೆ ಸ್ವೀಟ್ ಖರೀದಿ ಬೇಡ, ಈ ನಾಲ್ಕು ಪದಾರ್ಥಗಳಿಂದ ಮನೆಯಲ್ಲೇ ಮಾಡಿ ಬಾಯಲ್ಲಿ ನೀರೂರಿಸುವ ಹಲ್ವಾ!

Published : Oct 30, 2026, 10:39 AM IST
Moong Dal Halwa Recipe

ಸಾರಾಂಶ

Moong Dal Halwa Recipe ಮದುವೆ ಹಾಗೂ ಹಬ್ಬಗಳ ಸಂದರ್ಭದಲ್ಲಿ ಇಷ್ಟವಾಗುವ ಹೆಸರುಬೇಳೆ ಹಲ್ವಾವನ್ನು ಮನೆಯಲ್ಲೇ ಸುಲಭವಾಗಿ ತಯಾರಿಸಬಹುದು. ಹೆಸರುಬೇಳೆ, ತುಪ್ಪ, ಹಾಲು ಮತ್ತು ಖೋವಾ ಬಳಸಿ ಮಾಡುವ ಈ ಹಲ್ವಾ ಚಳಿಗಾಲಕ್ಕೆ ಅತ್ಯುತ್ತಮವಾದ ಸಿಹಿ ತಿಂಡಿಯಾಗಿದೆ. ಸಂಪೂರ್ಣ ವಿಧಾನ ಇಲ್ಲಿದೆ.

Moong Dal Halwa Recipe: ಚಳಿಗಾಲ, ದೀಪಾವಳಿ ಹಬ್ಬದ ಸಮಯದಲ್ಲಿ ಹೆಸರುಬೇಳೆ ಹಲ್ವಾ ತಿನ್ನುವುದು ನಾಲಗೆಗೆ ಮನಸಿಗೆ ಎರಡಕ್ಕೂ ಸುಖ ಸಿಗುತ್ತದೆ. ಅದರಲ್ಲೂ ಮದುವೆ, ಹಬ್ಬಗಳಂತಹ ವಿಶೇಷ ದಿನಗಳಲ್ಲಿ ಈ ಸಿಹಿ ತಿಂಡಿ ತುಂಬಾ ಇಷ್ಟವಾಗುತ್ತದೆ.

ತುಪ್ಪ, ಸಕ್ಕರೆ, ಹೆಸರುಬೇಳೆ ಮತ್ತು ಇತರೆ ಪದಾರ್ಥಗಳಿಂದ ತಯಾರಿಸಿದ ಈ ಹಲ್ವಾ ಅದೆಷ್ಟು ರುಚಿಕರ ಎಂದರೆ ಒಮ್ಮೆ ತಿಂದರೆ ಮತ್ತೆ ಮತ್ತೆ ತಿನ್ನಬೇಕೆನಿಸುತ್ತದೆ. ಅಷ್ಟಕ್ಕೂ ಇದು ಹೊರಗಡೆ ಸಿಹಿತಿಂಡಿ ಅಂಗಡಿಗಳಲ್ಲಿ ತರುವುದು ಅಗತ್ಯವಿಲ್ಲ. ಇದು ಮನೆಯಲ್ಲೇ ಮಾಡೋದು ತುಂಬಾ ಸುಲಭ! ಈಗ ಪ್ರತಿಯೊಬ್ಬರ ಅಡುಗೆ ಮನೆಯಲ್ಲಿ ಹೆಸರುಬೇಳೆ ಸ್ಟಾಕ್ ಇದ್ದೇ ಇರುತ್ತೆ ಅಲ್ವಾ? ಈ ಬಾರಿ ಹಲ್ವಾ ಹೊರಗಡೆ ಖರೀದಿಸುವುದು ಬೇಡ. ಅದನ್ನು ಈ ಸಲ ಮನೆಯಲ್ಲೇ ತಯಾರಿಸಿ. ತಯಾರಿಸುವುದು ಹೇಗೆ, ಯಾವ್ಯಾವ ಪದಾರ್ಥಗಳು ಬೇಕು ಎಲ್ಲವನ್ನೂ ಇಲ್ಲಿ ಹಂತ ಹಂತವಾಗಿ ತಿಳಿಸಿಕೊಡಲಾಗುತ್ತೆ.

ಹೆಸರುಬೇಳೆ ಹಲ್ವಾ ಮಾಡೋದು ಹೇಗೆ?

ಈ ಹಲ್ವಾ ಮಾಡಲು ಹೆಸರುಕಾಳು, ತುಪ್ಪ, ಸಕ್ಕರೆ, ಹಾಲು ಬೇಕಾಗುತ್ತದೆ. ರುಚಿ, ಅದರ ವಿನ್ಯಾಸ ಹೆಚ್ಚಿಸಲು ಖೋಯಾ ಅಥಾವಾ ಮಾವಾ (ಹಾಲಿನ ಗಟ್ಟಿಯಾದ ಭಾಗ ಕೆನೆ)ಸಹ ಸೇರಿಸಲಾಗುತ್ತದೆ. ಇದರ ಜೊತೆಗೆ ಕಡಲೆ ಹಿಟ್ಟು ಮತ್ತು ರವೆ ಸಹ ಬಳಸಬಹುದು. ಹಲ್ವಾ ಘಮ್ಮೆನ್ನುವಂತಹ ಸುವಾಸನೆ ಬರಲು ಕೇಸರಿ ಮತ್ತು ಏಲಕ್ಕಿ ಪುಡಿಯನ್ನು ಸೇರಿಸಲಾಗುತ್ತದೆ. ಬಾದಾಮಿ, ಪಿಸ್ತಾ ಮತ್ತು ಗೋಡಂಬಿ ಸೇರಿಸುವುದರಿಂದ ಇನ್ನಷ್ಟು ರುಚಿ ಹೆಚ್ಚುತ್ತದೆ.

ಮೊದಲಿಗೆ ಬೆಳಗೆ ನೆನೆಸಿಡಿ

ಹೆಸರು ಕಾಳನ್ನು ಚೆನ್ನಾಗಿ ತೊಳೆಯಿರಿ, ನಂತರ ಕನಿಷ್ಠ 4 ರಿಂದ 5 ಗಂಟೆಗಳ ಕಾಲ ನೀರಿನಲ್ಲಿ ನೆನೆಸಿಡಿ. ರಾತ್ರಿಯಿಡೀ ನೆನೆಸಬಹುದು. ಬೆಳಗ್ಗೆ ನೀರು ಬಸಿಯಿರಿ ಈಗ ಮಿಶ್ರಣಕ್ಕೆ ಬಹಳ ಕಡಿಮೆ ನೀರು ಸೇರಿಸಿ, ಮಿಕ್ಸರ್‌ನಲ್ಲಿ ರುಬ್ಬಿಕೊಳ್ಳಿ. ಅದು ಪೇಸ್ಟ್ ತುಂಬಾ ತೆಳುವಾಗದಂತೆ ಎಚ್ಚರವಹಿಸಿ. ಪೇಸ್ಟ್‌ನಲ್ಲಿ ಹೆಚ್ಚು ನೀರು ಇದ್ದಷ್ಟೂ ಅದು ಬೇಯಲು ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ.

ಬಾಣಲೆಗೆ ತುಪ್ಪ ಹಾಕಿ ಹೆಸರುಬೇಳೆ ಹುರಿಯಿರಿ

ಈಗ ಅಗಲವಾದ ದಪ್ಪ ತಳದ ಪ್ಯಾನ್ ತೆಗೆದುಕೊಳ್ಳಿ. ಅದರಲ್ಲಿ ಅರ್ಧದಷ್ಟು ತುಪ್ಪವನ್ನು ಬಿಸಿ ಮಾಡಿ. ಮೊದಲು ರವೆ ಮತ್ತು ಕಡಲೆ ಹಿಟ್ಟು ಸೇರಿಸಿ ಹುರಿಯಿರಿ. ನಂತರ ತಯಾರಾದ ಹೆಸರು ಬೇಳೆ ಪೇಸ್ಟ್ ಸೇರಿಸಿ, ಕಡಿಮೆ ಅಥವಾ ಮಧ್ಯಮ ಉರಿಯಲ್ಲಿ ಚೆನ್ನಾಗಿ ಹುರಿಯಲು ಬಿಡಿ.

ಬೇಳೆ ಚೆನ್ನಾಗಿ ಹುರಿಯಲು ಸಮಯ ತೆಗೆದುಕೊಳ್ಳುತ್ತೆ. ಇದು ಹಲ್ವಾ ತಯಾರಿಸಲು ಮುಖ್ಯವಾದ ಭಾಗ. ಪ್ಯಾನ್‌ಗೆ ಅಂಟಿಕೊಳ್ಳದಂತೆ ತಡೆಯಲು ನಿರಂತರವಾಗಿ ತಿರುವುತ್ತಾ ಇರಿ. ಇದೇ ರೀತಿ ಕನಿಷ್ಠ 15 ರಿಂದ 20 ನಿಮಿಷಗಳ ಕಾಲ ಕಡಿಮೆ ಉರಿಯಲ್ಲಿ ಹುರಿಯಿರಿ. ಚೆನ್ನಾಗಿ ಹುರಿದ ನಂತರ ತಿಳಿ ಕಂದು ಬಣ್ಣಕ್ಕೆ ತಿರುಗಲು ಪ್ರಾರಂಭವಾಗುತ್ತದೆ. ಆಗ ಒಂದು ಪರಿಮಳದ ವಾಸನೆ ಬರಲಾರಂಭಿಸುತ್ತದೆ.

ಈಗ ಹಾಲು ಮತ್ತು ಉಳಿದ ತುಪ್ಪ ಸೇರಿಸಿ.

ಬೇಳೆ ಚೆನ್ನಾಗಿ ಹುರಿದ ನಂತರ ಹಾಲು ಸೇರಿಸಿ ನಿರಂತರವಾಗಿ ತಿರುವುತ್ತಾ ಬೇಯಿಸಿ. ಹಾಲು ಸಂಪೂರ್ಣವಾಗಿ ಆವಿಯಾಗುವವರೆಗೆ ಬೇಯಿಸುವುದನ್ನು ಮುಂದುವರಿಸಿ. ಅನಂತರ ಉಳಿದ ತುಪ್ಪವನ್ನು ಸೇರಿಸಿ ಮತ್ತು ಸುಮಾರು 5 ನಿಮಿಷ ಬೇಯಿಸಿ. ಹಲ್ವಾ ತಳಕ್ಕೆ ಅಂಟಿಕೊಳ್ಳದಂತೆ ತಡೆಯಲು ಈ ಸಮಯದಲ್ಲಿ ನಿರಂತರವಾಗಿ ತಿರುವುತ್ತಿರುವುದು ಮರೆಯಬೇಡಿ.

ಖೋವಾ ಸೇರಿಸುವುದರಿಂದ ವಿಶೇಷ ರುಚಿ

ಈಗ ಮಾವಾ ಅಥವಾ ಖೋವಾ(ಹಾಲಿನ ಕೆನೆ) ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಈಗ ನೀವು ಬಾದಾಮಿ, ಗೋಡಂಬಿ ಇನ್ನಿತರ ಬೀಜಗಳು ಸೇರಿಸಬಹುದು. ಇದರಿಂದ ಹಲ್ವಾದ ರುಚಿ ಹೆಚ್ಚುತ್ತದೆ.

ಸಕ್ಕರೆ ಪಾಕ ತಯಾರಿಸುವ ವಿಧಾನ

ಹಲ್ವಾ ಮಾಡಲು ಒಂದು ಪ್ಯಾನ್‌ನಲ್ಲಿ ಸಕ್ಕರೆ ಮತ್ತು ನೀರನ್ನು ಬಿಸಿ ಮಾಡಿ. ಸಕ್ಕರೆ ಸಂಪೂರ್ಣವಾಗಿ ಕರಗುವವರೆಗೆ ಬೇಯಿಸಿ. ಸಕ್ಕರೆ ಕರುಗುತ್ತಿದ್ದಂತೆ ಟಾನಿಕ್ ರೀತಿ ಆಗುತ್ತದೆ. ಸಕ್ಕರೆ ಸಂಪೂರ್ಣವಾಗಿ ಕರಗಿದ ನಂತರ ಅದನ್ನು ಪಕ್ಕಕ್ಕೆ ಇರಿಸಿ.ತುಂಬಾ ಬೇಗನೆ ಸಕ್ಕರೆ ಸೇರಿಸುವುದರಿಂದ ಬೇಳೆ ಸರಿಯಾಗಿ ಬೇಯಲು ಕಾರಣವಾಗಬಹುದು.

ಕೊನೆಗೆ ಸಕ್ಕರೆ ಪಾಕ, ಕೇಸರಿ ಮತ್ತು ಏಲಕ್ಕಿ ಸೇರಿಸಿ.

ಈಗ ತಯಾರಾದ ಸಕ್ಕರೆ ಪಾಕವನ್ನು ಹುರಿದ ಬೇಳೆ ಮಿಶ್ರಣಕ್ಕೆ ಖೋಯಾ ಮಿಶ್ರಣಕ್ಕೆ ಸುರಿಯಿರಿ. ಚೆನ್ನಾಗಿ ಮಿಶ್ರಣ ಮಾಡಿ ಬೇಯಿಸಿ. ಪ್ಯಾನ್‌ನ ಬದಿಗಳಿಂದ ತುಪ್ಪ ಬೇರ್ಪಡಲು ಪ್ರಾರಂಭವಾಗುವವರೆಗೆ ಹಲ್ವಾ ಬೇಯಿಸುವುದನ್ನು ಮುಂದುವರಿಸಿ. ನಂತರ ಕೇಸರಿ ಹಾಲು ಮತ್ತು ಏಲಕ್ಕಿ ಪುಡಿಯನ್ನು ಸೇರಿಸಿ. ಚೆನ್ನಾಗಿ ಮಿಶ್ರಣ ಮಾಡಿದ ನಂತರ ಕತ್ತರಿಸಿದ ಬಾದಾಮಿ, ಪಿಸ್ತಾ ಮತ್ತು ಗೋಡಂಬಿಯನ್ನು ಮೇಲೆ ಹಾಕಿ. ಇದು ರುಚಿಯನ್ನು ಹೆಚ್ಚಿಸುತ್ತದೆ.

ಹೆಸರು ಬೇಳೆ ಹಲ್ವಾ ಬಿಸಿಯಾಗಿದ್ದಾಗಲೇ ತಿನ್ನಿ

ಎಲ್ಲವೂ ಚೆನ್ನಾಗಿ ಬೆಂದ ನಂತರ ಒಲೆಯನ್ನು ಆಫ್ ಮಾಡಿ. ಹೆಸರುಬೇಳೆ ಹಲ್ವಾ ಸಿದ್ಧವಾಗಿದೆ. ಬಿಸಿಯಾಗಿ ಬಡಿಸಿ ಮತ್ತು ನಿಮ್ಮ ನೆಚ್ಚಿನ ಬೀಜಗಳೊಂದಿಗೆ ಸಿಂಪಡಿಸಿ. ಈ ಹಲ್ವಾವನ್ನು ಹಬ್ಬಗಳು, ಮದುವೆಗಳು, ಪಾರ್ಟಿಗಳು ಅಥವಾ ಯಾವುದೇ ವಿಶೇಷ ದಿನಗಳಂದು ಮನೆಯಲ್ಲೇ ಮಾಡಬಹುದು. ಅದರಲ್ಲೂ ಚಳಿಗಾಲದಲ್ಲಿ ಬಿಸಿ ಹಲ್ವಾ ಇನ್ನೂ ರುಚಿಯಾಗಿರುತ್ತದೆ.

ಹೇಗೆ ತಯಾರಿಸಬೇಕು ಎಂದು ಕೆಳಗಿನ ವಿಡಿಯೋ ನೋಡಿನೂ ಪ್ರಯತ್ನಿಸಬಹುದು.

https://youtube.com/shorts/Q2igNzj-Or0?si=4D_P7rZrgpHg5KPj

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಬೆಳ್ಳುಳ್ಳಿ ಒಣಗಿ ಜೊಳ್ಳಾಗುತ್ತಿದೆಯೇ? 2-3 ವರ್ಷವಾದ್ರೂ ಹಾಳಾಗಲ್ಲ, ಫ್ಲೇವರ್ ಹೋಗಲ್ಲ.. ಇಲ್ಲಿದೆ ಸ್ಟೋರ್ ಮಾಡುವ ಟಿಪ್ಸ್
ಈ ಮೂರು ಪದಾರ್ಥ ಇದ್ರೆ ಸಾಕು, ಕೆಮಿಕಲ್​ ಹೇರ್​ಡೈಗೆ ಹೇಳಿ ಗುಡ್​ಬೈ : ಖ್ಯಾತ ವೈದ್ಯರು ಕೊಟ್ಟ ಟಿಪ್ಸ್​ ನೋಡಿ