ಮನೆಯಲ್ಲಿ ಮಾಡಿಕೊಳ್ಳಿ ಹೇರ್ ಸ್ಪಾ..

By Web DeskFirst Published Oct 2, 2018, 4:29 PM IST
Highlights

ಮುಖದ ಸೌಂದರ್ಯ ಹೆಚ್ಚಿಸುವಲ್ಲಿ ಕೂದಲು ಮುಖ್ಯ ಪಾತ್ರ ವಹಿಸುತ್ತೆ. ಕೂದಲ ಶೈನಿಂಗ್ ಹೆಚ್ಚಿಸಿದಷ್ಟೂ, ಮುಖವೂ ಫಳ ಫಳ ಹೊಳೆಯುತ್ತೆ. ಹಾಗಾದ್ರೆ ಕೇಶ ಸೌಂದರ್ಯ ಹೆಚ್ಚಲೇನು ಮಾಡಬೇಕು?

ಗಂಟೆ ಗಟ್ಟಲೆ ಪಾರ್ಲರ್‌ನಲ್ಲಿ ಸಮಯ ಕಳೆದು, ಕೂದಲು ಆರೈಕೆ ಮಾಡಿಸಿ ಕೊಳ್ಳಲು ಯಾರಿಗೂ ಟೈಂ ಇರೋಲ್ಲ. ಸದಾ ಕಂಪ್ಯೂಟರ್ಸ್ ಮುಂದೆ ಕೂರೋ  ಮಂದಿಗೆ ಒತ್ತಡವೂ ಹೆಚ್ಚು. ಎಸಿ, ಮಾಲಿನ್ಯದಿಂದ ಕೂದಲನ್ನು ಪೋಷಿಸಿಕೊಳ್ಳುವುದೂ ಸುಲಭವಲ್ಲ. ಆಗಾಗ ಸ್ಪಾ ಮಾಡಿಸಿಕೊಳ್ಳುವುದರಿಂದ ಕೂದಲ ಆರೋಗ್ಯ ಹೆಚ್ಚುವುದಲ್ಲದೇ, ದೇಹಕ್ಕೂ ಹಿತವೆನಿಸುತ್ತದೆ.

ಟೈಂ ಇದೆ ಎನ್ನೋವಾಗ ಯಾವುದೋ ಎರಡು ಹನಿ ಎಣ್ಣೆ ಹಾಕ್ಕೊಂಡು, ಭರ್ತಿ ಶ್ಯಾಂಪೂ ಹಾಕಿ ಕೊಂಡರಾಗೋಲ್ಲ. ಕೆಲವು ನಿಯಮಗಳನ್ನು ತಪ್ಪದೇ ಪಾಲಿಸಬೇಕು. ಆಗ ಮಾತ್ರ ಕೂದಲ ಆರೋಗ್ಯ ಹಾಗೂ ದೃಢತೆಯನ್ನು ಕಾಪಾಡಿ ಕೊಳ್ಳಬಹುದು. 

ಹಾಗಾದ್ರೇನು ಮಾಡಬೇಕು?

  • ಎಣ್ಣೆಯನ್ನು ಉಗುರು ಬೆಚ್ಚಗೆ ಬಿಸಿ ಮಾಡಿ, ಕೂದಲ ಬುಡಕ್ಕೆ ಹಚ್ಚಬೇಕು. ಬುಡಕ್ಕೆ ಜಾಸ್ತಿ ಹಾಗೂ ತುದಿಗೆ ಕಡಿಮೆ ಎಣ್ಣೆ ಬಳಸಬೇಕು. 
  • ಬೆಚ್ಚಗಿನ ನೀರಿನಲ್ಲಿ ಟವಲ್ ನೆನಸಿ ನೀರು  ಹೊರ ಬರುವಂತೆ ಹಿಂಡಬೇಕು, ನಂತರ 10-15 ನಿಮಿಷಗಳ ಕಾಲ ತಲೆಗೆ ಟವಲ್ ಸುತ್ತಬೇಕು. ಆಗ ಕೂದಲ ಬುಡ ಎಣ್ಣೆಯನ್ನು ಹೀರಿಕೊಳ್ಳುತ್ತದೆ. ಕೂದಲಿಗೆ ಹೆಚ್ಚಿನ ಪೋಷಕಾಂಶ ಸಿಕ್ಕಂತಾಗುತ್ತದೆ.
  • ಕೂದಲನ್ನು ತೊಳೆದುಕೊಳ್ಳುವಾಗ ಕೈಗೆ ಶ್ಯಾಂಪೂ ಹಾಕ್ಕೊಂಡು, ತುಸು ಡೈಲೂಟ್ ಮಾಡಿಕೊಂಡು ತಲೆಗೆ ಹಾಕಿ ಕೊಳ್ಳಬೇಕು. 
  • ಕೂದಲಿನಲ್ಲಿ ತೇವಾಂಶ ಉಳಿಯಲು ಕಂಡೀಷನರ್ ಬಳಸುತ್ತಾರೆ. ಶ್ಯಾಂಪು ಹಾಕಿ ತಲೆ ತೊಳೆದುಕೊಂಡ, ಕೆಲ ಕಾಲ ಕಂಡೀಷನರ್ ಹಚ್ಚಿ ಬಿಟ್ಟು ಕೊಳ್ಳಬೇಕು. ಆಗ, ಕೂದಲ ಕಾಂತಿ ಹೆಚ್ಚುತ್ತದೆ.
click me!