ದೀಪಾವಳಿ ಮುಗಿಯುತ್ತಿದ್ದಂತೆಯೇ 'ಇವರನ್ನೆಲ್ಲಾ' ಜೈಲಿಗೆ ಹಾಕಿ ಎಂದ ಉರ್ಫಿ ಜಾವೇದ್‌..!

Published : Nov 11, 2026, 09:36 AM IST
Urfi Javed

ಸಾರಾಂಶ

ದೀಪಾವಳಿ ಹಬ್ಬದ ಬಳಿಕ ದೆಹಲಿಯಲ್ಲಿ ವಾಯುಮಾಲಿನ್ಯ ತೀವ್ರವಾಗಿ ಹೆಚ್ಚಾಗಿದೆ. ಇದರ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ ಉರ್ಫಿ ಜಾವೇದ್ ಪಟಾಕಿ ಸಿಡಿಸಿದವರನ್ನು ಜೈಲಿಗೆ ಹಾಕಬೇಕು ಎಂದು ಆಗ್ರಹಿಸಿದ್ದಾರೆ.

ದೀಪಾವಳಿ ಹಬ್ಬದ ಬಳಿಕ ದೇಶದ ಹಲವು ನಗರಗಳಲ್ಲಿ ವಾಯುಮಾಲಿನ್ಯ ಹೆಚ್ಚಾಗಿದ್ದು, ದೆಹಲಿಯ ವಾಯು ಗುಣಮಟ್ಟ ಕಳಪೆ ಹಾಗೂ ತೀವ್ರ ಕಳಪೆ ಮಟ್ಟಕ್ಕೆ ಕುಸಿದಿದೆ. ಈ ಬೆಳವಣಿಗೆಯಿಂದ ಆಕ್ರೋಶಗೊಂಡಿರುವ ನಟಿ, ರಿಯಾಲಿಟಿ ಶೋ ತಾರೆ ಹಾಗೂ ಕಂಟೆಂಟ್‌ ಕ್ರಿಯೇಟರ್‌ ಉರ್ಫಿ ಜಾವೇದ್‌, ಪಟಾಕಿ ಸಿಡಿಸಿದವರನ್ನು ಜೈಲಿಗೆ ಹಾಕಬೇಕು ಎಂದು ಆಗ್ರಹಿಸಿದ್ದಾರೆ. ಪಟಾಕಿ ಸಿಡಿಸುವುದರಿಂದ ವಾಯುಮಾಲಿನ್ಯದ ಮೇಲೆ ಉಂಟಾಗುವ ಪರಿಣಾಮದ ಬಗ್ಗೆ ಗೊತ್ತಿದ್ದರೂ ಜನರು ಹೀಗೆ ಮಾಡುತ್ತಿರುವುದೇಕೆ ಎಂದು ಅವರು ಪ್ರಶ್ನಿಸಿದ್ದಾರೆ.

ದೀಪಾವಳಿ ಬಳಿಕ ಹಲವು ನಗರಗಳಲ್ಲಿ ಮಾಲಿನ್ಯದ ಪ್ರಮಾಣ ಏರಿಕೆಯಾಗಿರುವ ಹಿನ್ನೆಲೆಯಲ್ಲಿ ಪಟಾಕಿ ಸಿಡಿಸಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಉರ್ಫಿ ಜಾವೇದ್‌ ಒತ್ತಾಯಿಸಿದ್ದಾರೆ. ನವೆಂಬರ್‌ 9ರ ಸೋಮವಾರ ಅವರು ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ. ವಿಶೇಷವಾಗಿ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಹಬ್ಬದ ಆಚರಣೆಯ ಬಳಿಕ ವಾಯು ಗುಣಮಟ್ಟ ತೀವ್ರವಾಗಿ ಕುಸಿದಿರುವುದಕ್ಕೆ ಅವರು ಕಿಡಿಕಾರಿದ್ದಾರೆ.

ಪಟಾಕಿ ಸಿಡಿಸೋರನ್ನ ಜೈಲಿಗೆ ಹಾಕಿ

ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಂಡಿರುವ ಉರ್ಫಿ, "ಪಟಾಕಿ ಸಿಡಿಸುವ ಪ್ರತಿಯೊಬ್ಬರನ್ನೂ ಜೈಲಿಗೆ ಹಾಕಬೇಕು! ಅಷ್ಟೇ! ಗವಾರ್‌ ಜನರು ಪರಿಸ್ಥಿತಿಯನ್ನು ಏನು ಮಾಡಿದ್ದಾರೆ ನೋಡಿ?" ಎಂದು ಬರೆದುಕೊಂಡಿದ್ದಾರೆ. ಪಟಾಕಿ ಸಿಡಿಸುವುದರ ಮೇಲೆ ನಿರ್ಬಂಧಗಳಿದ್ದರೂ ಜನರು ಅವುಗಳನ್ನು ಮುಂದುವರಿಸಿರುವುದನ್ನು ಹಾಗೂ ಇದರಿಂದ ರಾಷ್ಟ್ರ ರಾಜಧಾನಿಯ ವಾಯು ಗುಣಮಟ್ಟ ಹದಗೆಟ್ಟಿರುವುದನ್ನು ಅವರು ಟೀಕಿಸಿದ್ದಾರೆ.

ದೆಹಲಿಯಲ್ಲಿ 400ರ ಗಡಿ ದಾಟಿದ ಹಲವು ಪ್ರದೇಶಗಳ AQI

ಸೋಮವಾರ ಬೆಳಗ್ಗೆ ದೆಹಲಿಯ ಒಟ್ಟಾರೆ ವಾಯು ಗುಣಮಟ್ಟ ಸೂಚ್ಯಂಕ (AQI) 'ಅತ್ಯಂತ ಕಳಪೆ' (Very Poor) ವಿಭಾಗದಲ್ಲಿತ್ತು. ನಗರದ ಹಲವು ವಾಯು ಗುಣಮಟ್ಟ ಮಾಪನ ಕೇಂದ್ರಗಳಲ್ಲಿ ಎಕ್ಯೂಐ ಪ್ರಮಾಣ 400ರ ಗಡಿಯನ್ನು ದಾಟಿದ್ದು, ಅವು 'ತೀವ್ರ ಕಳಪೆ' (Severe) ವಿಭಾಗಕ್ಕೆ ಸೇರಿದ್ದವು. ಇನ್ನೊಂದೆಡೆ, ಮುಂಬೈ ನಗರದ ಒಟ್ಟಾರೆ ಎಕ್ಯೂಐ 171 ದಾಖಲಾಗಿತ್ತು. ಇದು 'ಮಧ್ಯಮ' (Moderate) ವಿಭಾಗಕ್ಕೆ ಸೇರುತ್ತದೆ.

ದೆಹಲಿಯಲ್ಲಿ ಮತ್ತೊಮ್ಮೆ ಹೆಚ್ಚಾದ ಮಾಲಿನ್ಯವು ದೀಪಾವಳಿ ಸಂದರ್ಭದಲ್ಲಿ ಪಟಾಕಿ ಸಿಡಿಸುವ ವಿಚಾರವನ್ನು ಚರ್ಚೆಯ ಮುನ್ನೆಲೆಗೆ ತಂದಿದೆ. ಪಟಾಕಿ ಸಿಡಿಸುವುದಕ್ಕೆ ನಿರ್ಬಂಧಗಳಿದ್ದರೂ, ಭಾನುವಾರ ರಾತ್ರಿ ಅನುಮತಿಸಲಾದ ಸಮಯ ಮುಗಿದ ಬಳಿಕವೂ ಮಧ್ಯರಾತ್ರಿಯವರೆಗೆ ಹಲವೆಡೆ ಪಟಾಕಿ ಸಿಡಿಸುವುದು ಮುಂದುವರಿದಿತ್ತು.

ಕೆಲಸದ ವಿಚಾರದಲ್ಲಿ ಉರ್ಫಿ ಬ್ಯುಸಿ

ವೃತ್ತಿಜೀವನದ ವಿಚಾರಕ್ಕೆ ಬಂದರೆ, ಉರ್ಫಿ ಇತ್ತೀಚೆಗೆ 'ಲಾಕ್‌ ಅಪ್‌' ಕಾರ್ಯಕ್ರಮದ ಪ್ರೀಮಿಯರ್‌ ಸಂಚಿಕೆಯಲ್ಲಿ ಕಾಣಿಸಿಕೊಂಡಿದ್ದರು. ಈ ವೇಳೆ 'ಸ್ಪ್ಲಿಟ್ಸ್‌ವಿಲ್ಲಾ' ಸ್ಪರ್ಧಿಗಳಾದ ಯೋಗೇಶ್‌ ರಾವತ್‌ ಮತ್ತು ಆಕಾಂಕ್ಷಾ ಚೌಧರಿ ನಡುವಿನ ಸಂಬಂಧದ ಬಗ್ಗೆ ಮಾತನಾಡಿದ್ದರು. ಇದಕ್ಕೂ ಮೊದಲು ಅವರು ಸನ್ನಿ ಲಿಯೋನ್‌, ಕರಣ್‌ ಕುಂದ್ರಾ ಮತ್ತು ನಿಯಾ ಶರ್ಮಾ ಅವರೊಂದಿಗೆ 'ಸ್ಪ್ಲಿಟ್ಸ್‌ವಿಲ್ಲಾ X6' ಕಾರ್ಯಕ್ರಮವನ್ನು ನಿರೂಪಿಸಿದ್ದರು. ಈ ಕಾರ್ಯಕ್ರಮದಲ್ಲಿ ಅವರು 'ಮಿಸ್ಚೀಫ್‌ ಮೇಕರ್‌' ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ವೀಕೆಂಡ್ ಪಾರ್ಟಿ ಬೇಡವೇ ಬೇಡ! ಅನಾಥ ಮಕ್ಕಳ, ವೃದ್ಧಾಶ್ರಮದ ಹಿರಿಯರ ಹಸಿವು ನೀಗಿಸುತ್ತಿರುವ ಐವರು ಟೆಕ್ಕಿಗಳು
ನಾಗರ ಹಾವುಗಳನ್ನೇ ಬೇಟೆಯಾಡಿ ತಿನ್ನುವ ನವಿಲಿಗೆ ವಿಷ ತಾಗಲ್ವಾ? ಹಾವು ತಿಂದರೂ ಸಾಯುವುದಿಲ್ಲವೇಕೆ ಗೊತ್ತಾ?