ಈ ಸಾಧು ಸಂತರ ಬದುಕು ಅಗೋರ....

By Web Desk  |  First Published Feb 3, 2019, 2:56 PM IST

 ಸಾಮಾನ್ಯವಾಗಿ ಎಲ್ಲರಿಗೂ ಇರುವ ಒಂದೆ ಪ್ರಶ್ನೆ ಅಗೋರಿ ಹಾಗೂ ನಾಗ ಸಾಧುಗಳು ಒಂದೇನಾ? ಇದಕ್ಕೆ ಉತ್ತರ ಇಲ್ಲಿದೆ ನೋಡಿ....


ನಾಗ ಸಾಧುಗಳನ್ನು ಶ್ರೇಷ್ಠರಲ್ಲಿ ಶ್ರೇಷ್ಠ ಸಾಧುಗಳೆಂದು ನಂಬಲಾಗುತ್ತದೆ. ಕುಂಭ ಮೇಳ ಸಂದರ್ಭದಲ್ಲಿ ನಾಗ ಸಾಧುಗಳು ಮೊದಲು ಸ್ನಾನ ಮಾಡುತ್ತಾರೆ. ಅವರನ್ನು ಶುದ್ಧರೆಂದು ಪರಿಗಣಿಸಲಾಗುತ್ತದೆ. ಆ ನಂತರ ಭಕ್ತರು ಕುಂಭ ಸ್ನಾನ ಮಾಡುತ್ತಾರೆ. ಇನ್ನೂ ಅಗೋರಿಗಳು ತಮ್ಮ ಜೀವನವನ್ನೇ ಶಿವನ ಸ್ವರೂಪಿಯಾದ ಭೈರವನಿಗೆ ಮುಡುಪಾಗಿಟ್ಟು, ಸದಾ ಕೈಯಲ್ಲೊಂದು ಬುರುಡೆ ಹಿಡಿದು ಕೊಂಡಿರುತ್ತಾರೆ.

ಅಗೋರಿ ಸಾಧುಗಳು ಏನು? ಎತ್ತ? 

  • ಅಗೋರಿಗಳಿಗೆ ಮಾಟ-ಮಂತ್ರ ಮಾಡುವ ಶಕ್ತಿ ಇರುತ್ತದೆ.
  • ಇವರು ಶಾಂತಿ ಪ್ರಿಯರು.  ಅವರಿಗೆ ಯಾವ ಸಂಬಂಧಿಗಳೂ ಇರುವುದಿಲ್ಲ. ಆಕಾಶವೇ ತಂದೆ, ಭೂಮಿಯೇ ತಾಯಿ.
  • ಅಗೋರಿಗಳ ಆಹಾರ ಪದ್ಧತಿಯೂ ವಿಭಿನ್ನ. ಸಸ್ಯಾಹಾರ ಹಾಗೂ ಮಾಂಸಾಹಾರ ಎರಡನ್ನೂ ಸೇವಿಸುತ್ತಾರೆ. ಆದರೆ ಇವರು ಮನುಷ್ಯರ ಮಾಂಸ ಹಾಗೂ ಕೋಳಿ ರಕ್ತವನ್ನೂ ಕುಡಿಯುತ್ತಾರೆ. 
  • ಬುರುಡೆ/ ಮೆದುಳು ತಿಂದರೆ ಶಿವನಿಗೆ ಹತ್ತಿರವಾಗುತ್ತಾರೆಂಬ ನಂಬಿಕೆ ಅಗೋರಿ ಸಾಧುಗಳಿದೆ.
  • ಮುಖ್ಯ ವಿಚಾರವೆಂದರೆ ಅಗೋರಿಗಳು ಸ್ನಾನವೇ ಮಾಡುವುದಿಲ್ಲ. ಸ್ನಾನ ಮಾಡಿದರೆ ಅವರಲ್ಲಿರುವ ಮಾಂತ್ರಿಕ ಶಕ್ತಿ ಕಡಿಮೆ ಆಗುತ್ತದೆಂದು ಕೊಳ್ಳುತ್ತಾರೆ. ಕುಂಭ ಮೇಳದಲ್ಲಿಯೂ ಅವರು ಭಾಗಿ ಆಗುವುದಿಲ್ಲ. 
  • ಸಾಧುಗಳೆಂದ ಮೇಲೆ  ಲೈಂಗಿಕ ಚಟುವಟಿಕೆಯಿಂದ ದೂರವಿರಬೇಕು. ಆದರೆ ದೇವರಿಗೆ ಹತ್ತಿರವಾಗಲು ಇದೊಂದು ಮಾರ್ಗವೆಂದು ಎಂದು ಪರಿಗಣಿಸಲಾಗುತ್ತದೆ. ಅಗೋರಿಗಳು ಶಿವನ ಭಕ್ತರು. ಸ್ಮಶಾನ, ಮೃತ ದೇಹಗಳೊಂದಿಗೆ ಶಿವನಿಗೆ ಅವಿನಾಭಾವ ಸಂಬಂಧ. ಆದ್ದರಿಂದ ಸತ್ತ ದೇಹದೊಂದಿಗೂ ಇವರು ಲೈಂಗಿಕ ಕ್ರಿಯೆಯಲ್ಲಿ ಭಾಗಿಯಾಗುತ್ತಾರೆಂದು ಹೇಳಲಾಗುತ್ತದೆ. ಆದರೆ, ಇಂಥ ಸಂಪ್ರದಾಯದಲ್ಲಿ ಭಾಗಿಯಾಗೋ ಮುನ್ನ ಮೃತ ದೇಹದೊಂದಿಗೆ ಇವರು ಮದುವೆಯಾಗುತ್ತಾರೆ.
  • ಸಾಮಾನ್ಯವಾಗಿ ಎಲ್ಲರೂ ರಾತ್ರಿ ಹೊತ್ತು ಸ್ಮಶಾನಕ್ಕೆ ತೆರಳಲು ಹೆದರಿದಿರೆ, ಅಗೋರಿಗಳು ರಾತ್ರಿ ಹೊತ್ತು ಸ್ಮಶಾನದಲ್ಲಿ ಕುಳತು ಧ್ಯೇನಿಸುತ್ತಾರೆ.
  • ಸಾಮಾನ್ಯವಾಗಿ ಬಟ್ಟೆಯನ್ನೇ ಧರಿಸುವುದಿಲ್ಲ ಅಗೋರಿಗಳು. ಅಲ್ಲದೇ ಮೈ ತುಂಬ ವಿಭೂತಿ ಬಳಿದುಕೊಂಡಿರುತ್ತಾರೆ. ಕ್ರಿಮ ಕೀಟಗಳಿಂದ ದೇಹವನ್ನು ರಕ್ಷಿಸಿಕೊಳ್ಳಲು ಹಾಗೆ ಮಾಡುತ್ತಾರಂತೆ. ಅದೂ ಮೃತ ದೇಹಗಳ ಬೂದಿಯನ್ನೇ ಬಳಿದುಕೊಳ್ಳುತ್ತಾರೆ. ಮೃತರ ಸಂಬಂಧಿಕರು ಬಿಟ್ಟ ಬಟ್ಟೆಯನ್ನು ತೊಡುವುದಿದೆ.

Latest Videos

undefined

ನಿರ್ವಾಣಕ್ಕೆ ಅಗೋರಿಗಳು ಮಾಡುವುದೇನು?

  1. ಮಧ್ಯ( ಆಲ್ಕೋಹಾಲ್) ಸೇವನೆ. 
  2. ಮಾಂಸ ಭಕ್ಷಣೆ
  3. ಮಥ್ಸ್ಯಾ-  ಎರಡು ಮೀನುಗಳ ಮೂಲೆಯನ್ನು 8 ಆಕಾರಕ್ಕೆ ಮಾಡುವುದು.
  4. ಮುದ್ರಾ-  ದವಸ-ಧಾನ್ಯಗಳನ್ನು ಬಳಸಿ ಕುಂಡಲಿ ಮಾಡಿ ಪೂಜೆ ಮಾಡುವುದು.
  5. ಮೈಥುನ- ಲೈಂಗಿಕ ಕ್ರಿಯೆಯಲ್ಲಿ ಅಗೋರಿಗಳಿಗೆ ನಂಬಿಕೆ ಹೆಚ್ಚು.
click me!