ಕ್ಯಾನ್ಸರ್ ಈ ಒಂದು ರೋಗ ಬಹುತೇಕ ಎಲ್ಲರನ್ನೂ ಬೆಚ್ಚಿ ಬೀಳಿಸುವಂತೆ ಮಾಡುತ್ತದೆ. ಇದನ್ನು ಶಮನಗೊಳಿಸುವ ಔಷಧಿ ಕಂಡು ಹಿಡಿಯಲು ವಿಜ್ಞಾನಿಗಳೂ ಹಲವಾರು ವರ್ಷಗಳಿಂದ ಪ್ರಯತ್ನಿಸುತ್ತಿದ್ದಾರೆ. ಹೀಗಿದ್ದರೂ ಈ ಮಾರಕ ಕಾಯಿಲೆಗೀಡಾಗುವವರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ. ಆದರೀಗ ಕ್ಯಾನ್ಸರ್ ಪತ್ತೆ ಹಚ್ಚುವ ಪುಟ್ಟ ಮಾತ್ರೆಯನ್ನು ಸಂಶೋಧಿಸಲಾಗಿದೆ? ಇದು ಹೇಗೆ ಕಾರ್ಯ ನಿರ್ವಹಿಸುತ್ತೆ? ಇಲ್ಲಿದೆ ವಿವರ
MIT ಇಂಜಿನಿಯರ್ಸ್ ಮಾತ್ರೆಯೊಂದನ್ನು ಸಿದ್ಧಪಡಿಸಿದ್ದು, ಇದನ್ನು ಸೇವಿಸಿದರೆ ಹೊಟ್ಟೆಯಲ್ಲಿ ಅಲ್ಸರ್ ಅಥವಾ ಕ್ಯಾನ್ಸರ್ ಆಗಿದೆಯೇ ಎಂಬುವುದು ತಿಳಿಯುತ್ತದೆ. ನುಂಗುವಾಗ ಚಿಕ್ಕ ಗಾತ್ರದಲ್ಲಿರುವ ಈ ಮಾತ್ರೆ ಹೊಟ್ಟೆ ಸೇರುತ್ತಿದ್ದಂತೆಯೇ ಮೃದುವಾದ ಬಲೂನ್ ಆಕಾರ ಪಡೆದುಕೊಳ್ಳುತ್ತದೆ. ಗಾಲಿಯ ಈ ಬಲೂನ್ ನಲ್ಲಿ ಸೆನ್ಸಾರ್ ಒಂದನ್ನು ಅಳವಡಿಸಲಾಗಿದ್ದು, 30 ದಿನಗಳವರೆಗೆ ಇದು ಹೊಟ್ಟೆಯ ತಾಪಮಾನವನ್ನು ಪರಿಶೀಲಿಸುತ್ತದೆ. ಹಾಗೂ ಇದು ಸುಲಭವಾಗಿ ಮಾನಿಟರ್ ಗೆ ಹೊಟ್ಟೆಯಲ್ಲಿರುವ ಜೀವಾಣು ಹಾಗೂ ವಿಷಾಣುಗಳ ಮಾಹಿತಿ ರವಾನಿಸುತ್ತಿರುತ್ತದೆ.
ಕೊನೆಗೂ ಕ್ಯಾನ್ಸರ್ ಔಷಧಿ ಕಂಡು ಹಿಡಿದ ವಿಜ್ಞಾನಿಗಳು: ಯಾವಾಗಿಂದ ಲಭ್ಯ? ಇಲ್ಲಿದೆ ವಿವರ
MITಯ ಸಹಾಯಕ ಪ್ರಾಧ್ಯಾಪಕ ಜುವಾನ್ಹೆ ಈ ಕುರಿತಾಗಿ ಮಾಹಿತಿ ನೀಡುತ್ತಾ 'ಜೆಲ್ಲಿಯಂತಹ ಸ್ಮಾರ್ಟ್ ಟ್ಯಾಬ್ಲೆಟ್ ಹೊಟ್ಟೆ ಸೇರುತ್ತಿದ್ದಂತೆಯೇ ಹಿಗ್ಗಿ ಮೃದುವಾದ ಬಲೂನ್ ನಂತಾಗುತ್ತದೆ. ಹೊಟ್ಟೆಯಲ್ಲಿಯೇ ಇದ್ದು, ಇದು ರೋಗಾಣುಗಳ ಮೆಲೆ ನಿಗಾವಿಡುತ್ತದೆ. ಇತರ ಬಲೂನ್ ಗಳಂತೆ ಇದು ಹೊಟ್ಟೆ ಸೇರುವಾಗ ನೋವನ್ನು ಅನುಭವಿಸಬೇಕಾದ ಅನಿವಾರ್ಯತೆಯೂ ಇಲ್ಲ' ಎಂದಿದ್ದಾರೆ.
ಕ್ಯಾನ್ಸರ್‌ನ 11 ಲಕ್ಷಣಗಳು: ನಿರ್ಲಕ್ಷಿಸಿದರೆ ಬಲು ಡೇಂಜರ್!
ಒಂದು ವೇಳೆ ಹೊಟ್ಟೆಯೊಳಗಿರುವ ಮಾತ್ರೆಯನ್ನು ಹೊರ ತೆಗೆಯಬೇಕಾದರೆ ರೋಗಿಗಳು ಕ್ಯಾಲ್ಸಿಯಂ ಮಾತ್ರೆ ತೆಗೆದುಕೊಳ್ಳಬಹುದು. ಇದರಿಂದ ಬಲೂನ್ ಆಕಾರ ಪಡೆದ ಮಾತ್ರೆ ಮತ್ತೆ ತನ್ನ ಮೂಲ ರೂಪ ಪಡೆದುಕೊಳ್ಳುತ್ತದೆ ಹಾಗೂ ಹೊಟ್ಟೆಯಿಮದ ಸುಲಭವಾಗಿ ಹೊರ ಬರುತ್ತದೆ.