
ನವದೆಹಲಿ(ಜೂ.17): ಮಹಿಳೆಯೊಬ್ಬಳ ಜೀವನದಲ್ಲಿ ತಾಯಿಯಾಗುವ ಕ್ಷಣ ಅಮೂಲ್ಯವಾಗಿರುತ್ತದೆ ಎಂಬ ಮಾತಿದೆ. ಹಾಗಾದ್ರೆ 12 ವರ್ಷದ ಮಗಳೊಬ್ಬಳು ತನ್ನ ತಾಯಿಯ ಹೆರಿಗೆ ತಾನೇ ಮಾಡಿಸಿದರೆ ಆ ಕ್ಷಣ ಆ ತಾಯಿಗೆ ಅದೆಷ್ಟು ಅಮೂಲ್ಯವಾಗಿರಬಹುದು? ಅಮೆರಿಕಾದ ದಕ್ಷಿಣ ರಾಜ್ಯವಾಗಿರಿವ ಮಿಸಿಸಿಪಿಯಲ್ಲಿ ಓರ್ವ ತಾಯಿ ಹಾಗೂ ಮಗಳಿಗೆ ಈ ಕ್ಷಣವನ್ನು ಆನಂದಿಸುವ ಅವಕಾಶ ದೊರಕಿದೆ. ಇದಕ್ಕೂ ವಿಶೇಷವೆಂದರೆ ಈ ಇಡೀ ಘಟನೆಯನ್ನು ಕ್ಯಾಮರಾದಲ್ಲಿ ಸೆರೆ ಚಹಿಡಿದಿದ್ದು, ಸದ್ಯ ಸಾಮಾಝಿಕ ಜಾಲಾತಾಣಗದಲ್ಲಿ ಬಹಳಷ್ಟು ವೈರಲ್ ಆಗುತ್ತಿದೆ. ನೋಡುಗರ ಮನಗೆಲ್ಲುವಲ್ಲಿ ಇದು ಯಶಸ್ವಿಯಾಗಿದೆ. ಮಹಿಳೆಯೊಬ್ಬಳನ್ನು ಭಾವುಕಳಾಗಿಸುವ ಈ ಫೋಟೋಗಳನ್ನು ಜೂನ್ 8 ರಂದು ಫೇಸ್'ಬುಕ್'ನಲ್ಲಿ ಶೇರ್ ಮಾಡಲಾಗಿದೆ.
ಫೇಸ್'ಬುಕ್'ನಲ್ಲಿ ಶೇರ್ ಮಾಡಿರುವ ಮಾಹಿತಿ ಅನ್ವಯ ಆಸ್ಪತ್ರೆಯ ವೈದ್ಯರು ಹೆರಿಗೆ 12 ವರ್ಷದ ಬಾಲಕಿ ಜೆಸಿ ಡೆಲಾಪೆನಾ ಬಳಿ 'ನಿನ್ನ ತಾಯಿಗೆ ಹೆರಿಗೆ ಮಾಡ ಬಯಸುತ್ತೀಯಾ?' ಎಂದು ಕೇಳಿದ್ದಾರೆ. ವೈದ್ಯರ ಮಾತುಗಳಿಗೆ ಬಾಲಕಿ ಒಪ್ಪಿಗೆ ಸೂಚಿಸಿದ್ದಾಳೆ. ಹೀಗಾಗಿ ವೈದ್ಯರು ಆಕೆಯನ್ನು ಆಸ್ಪತ್ರೆಯ ಆಪರೇಷನ್ ಥಿಯೇಟರ್'ಗೆ ಕರೆದೊಯ್ದಿದ್ದಾರೆ.
ಇನ್ನು ಈ ಕುರಿತಾಗಿ ಮಾತನಾಡಿರುವ ಬಾಲಕಿಯ ತಾಯಿ 'ಕೆಲ ವರ್ಷಗಳ ಹಿಂದೆ ನಾನು ಗಂಡು ಮಗುವೊಂದಕ್ಕೆ ಜನ್ಮ ನೀಡಿದ್ದೆ. ಈ ಸಮಯದಲ್ಲೇ ಜೆಸಿ ನಾನಿದ್ದ ಆಪರೇಷನ್ ಥಿಯೇಟರ್'ನೊಳಗೆ ಇರುತ್ತೇನೆಂಬ ಇಚ್ಛೆ ವ್ಯಕ್ತಪಡಿಸಿದ್ದಳು. ಆದರೆ ಆ ಸಮಯದಲ್ಲಿ ಆಕೆ ತುಂಬಾ ಚಿಕ್ಕವಳು ಹೀಗಾಗಿ ಆಕೆಯನ್ನು ಒಳಗೆ ಬರಲು ಬಿಡಲಿಲ್ಲ. ಆದರೆ ಈ ಬಾರಿ ಮನೆಯವರೆಲ್ಲರೂ ಆಕೆಯನ್ನು ಆಪರೇಷನ್ ಥಿಯೇಟರ್'ನೊಳಗೆ ಕರೆದೊಯ್ಯಲು ಸಮ್ಮತಿ ಸೂಚಿಸಿದ್ದರು. ಹೀಗಾಗಿ ಹೆರಿಗೆ ಸಂದರ್ಭದಲ್ಲಿ ಆಕೆ ಅಲ್ಲಿದ್ದಳು ಹಾಗೂ ವೈದ್ಯರು ಆಕೆಯಿಂದಲೇ ಹೆರಿಗೆ ಮಾಡಿಸಿದ್ದಾರೆ' ಎಂದು ತಿಳಿಸಿದರು.
ಮುಂದೆ ಮಾತನಾಡಿದ ತಾಯಿ 'ತನ್ನ ನವಜಾತ ತಮ್ಮನನ್ನು ಹಿಡಿದುಕೊಂಡು ಆಕೆ ಭಾವುಕಳಾಗಿದ್ದಳು. ತುಂಬಾ ಭಯದಿಂದಲೇ ಆಕೆ ಶಿಶುವನ್ನು ಮಟ್ಟಲಾರಂಭಿಸಿದಳು. ಇದೇ ಸಂದರ್ಭದಲ್ಲಿ ಆಕೆಯ ತಂದೆ ಈ ಕ್ಷಣಗಳನ್ನು ಕ್ಯಾಮರಾದಲ್ಲಿ ಸೆರೆ ಹಿಡಿದರು' ಎಂದಿದ್ದಾರೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.