5.46 ಕೋಟಿಗೆ ಮಾರಾಟವಾಯ್ತು 200 ರೂಪಾಯಿಯ ಉಂಗುರ: ಕಾರಣ ಕೇಳಿದ್ರೆ ದಿಗಿಲಾಗುತ್ತದೆ!

By Suvarna Web DeskFirst Published Jun 9, 2017, 11:32 AM IST
Highlights

ಮಹಿಳೆಯೊಬ್ಬಳು ಕೇವಲ 200 ರೂಪಾಯಿಗೆ ಉಂಗುರವೊಂದನ್ನು ಖರೀದಿಸಿ ಬರೋಬ್ಬರಿ 37 ವರ್ಷ ಧರಿಸಿದ ಬಳಿಕ ಆ ಉಂಗುರದ ಬೆಲೆ ಕೋಟ್ಯಾನುಗಟ್ಟಲೆ ಬೆಲೆ ಬಾಳುತ್ತದೆ ಎಂಬ  ವಿಚಾರ ಆಕೆಗೆ ತಿಳಿದಿದೆ. ಹೌದು ಇಂತಹುದ್ದೊಂದು ಪ್ರಕರಣ ಲಂಡನ್'ನಲ್ಲಿ ಬೆಳಕಿಗೆ ಬಂದಿದೆ. ಲಭ್ಯವಾದ ಮಾಹಿತಿ ಅನ್ವಯ ಆಸ್ಪತ್ರೆಯೊಂದರಲ್ಲಿ ನಡೆದ ಕಾರ್ ಬೂಟ್ ಸೇಲ್'ಗೆ ತೆರಳಿದ್ದ ಆ ಮಹಿಳೆ ಉಂಗುರ ನೋಡಲು ತುಂಬಾ ಚೆನ್ನಾಗಿದೆ ಎಂದು ಕೇವಲ 200 ರೂಪಾಯಿಗೆ ಖರೀದಿಸಿದ್ದಳು ಎಂಬ ವಿಚಾರ ತಿಳಿದು ಬಂದಿದೆ. ಹಾಗಾದ್ರೆ 200 ರೂಪಾಯಿಯ ಆ ಉಂಗುರವನ್ನು 5 ಕೋಟಿ ನೀಡಿ ಏಕೆ ಖರೀದಿಸಿದರು? ಎಂಬ ಪ್ರಶ್ನೆ ಕಾಡುವುದು ಸಹಜ. ನಿಮ್ಮ ಈ ಗೊಂದಲಕ್ಕೆ ಇಲ್ಲಿದೆ ಉತ್ತರ

ವಾಸ್ತವವಾಗಿ 37 ವರ್ಷದ ಹಿಂದೆ ಆ ಮಹಿಳೆ ಸೇಲ್'ನಲ್ಲಿ ಕೇವಲ 200 ರೂಪಾಯಿ ನೀಡಿ ಖರೀದಿಸಿದ್ದ ಆ ಉಂಗುರ ಸಾಮಾನ್ಯ ಉಂಗುರವಾಗಿರಲಿಲ್ಲ. ಬದಲಾಗಿ ಅದೊಂದು ವಜ್ರದುಂಗುರವಾಗಿತ್ತು. ಆದರೆ ಈ ವಿಚಾರ ಆಕೆಗೆ ತಿಳಿದಾಗ ಆಕೆಗೆ ನಂಬಲು ಸಾಧ್ಯವಾಗಲಿಲ್ಲ. ಹೀಗಾಗಿ ಆಕೆ ನೇರವಾಗಿ ವಜ್ರದ ವ್ಯಾಪಾರಿ ಬಳಿ ತೆರಳಿದ್ದಾಳೆ. ಉಂಗುರವನ್ನು ಪರಿಶೀಲಿಸಿದ ವ್ಯಾಪಾರಿ ಅದು 26 ಕ್ಯಾರೆಟ್ ವಜ್ರದುಂಗುರ ಎಂದು ತಿಳಿಸಿದ್ದಾನೆ. ಅಲ್ಲಿಂದ ತೆರಳಿದ ಮಹಿಳೆ ಆಭರಣಗಳನ್ನು ಹರಾಜು ಮಾಡುವ ಸಂಸ್ಥೆಯೊಂದನ್ನು ಸಂಪರ್ಕಿಸಿದ್ದಾಳೆ. ಬಳಿಕ ನಡೆದ ಹರಾಜು ಪ್ರಕ್ರಿಯೆಯಲ್ಲಿ ಈ ಉಂಗುರದ ಬೆಲೆ ಬರೋಬ್ಬರಿ 5.46 ಕೋಟಿ ತಲುಪಿದೆ.

ಹಳೇ ಶೈಲಿಯಲ್ಲಿತ್ತು ವಜ್ರದುಂಗುರ

ಇನ್ನು ಈ ಉಂಗುರ ಬಹಳ ಹಳೆಯ ಶೈಲಿಯಲ್ಲಿದ್ದುದ್ದರಿಂದ ಇದು ವಜ್ರದ್ದು ಎಂದು ಯಾರಿಂದಲೂ ಗುರುತಿಸಲಾಗಿರಲಿಲ್ಲ. ಅಲ್ಲದೇ ೀ ಉಂಗುರವೂ ಹೊಳೆಯುತ್ತಿರಲಿಲ್ಲ ಹೀಗಾಗಿ ಎಲ್ಲರೂ ಇದನ್ನು ಗುರುತಿಸುವಲ್ಲಿ ವಿಫಲರಾಗಿದ್ದರು.

click me!