ಸಿಹಿ ಬೇಕೆಂದು ಬೇಕಾಬಿಟ್ಟಿ ಸಕ್ರೆ ತಿಂದ್ರೆ ಇರುವೆಯಂತೆ ಮುತ್ತುತ್ತೆ ರೋಗ!

By Web DeskFirst Published Jun 24, 2019, 4:07 PM IST
Highlights

ಆರೋಗ್ಯಕ್ಕೆ ಕೆಡುಕಿಲ್ಲವೆಂದು ತಿನ್ನೋ ಹಲವು ಆಹಾರಗಳು ಕೆಡುಕಾಗಿ ಪರಿಣಮಿಸೋ ಸಾಧ್ಯತೆ ಇದೆ. ಆದುದರಿಂದ ತಿನ್ನುವ ಆಹಾರದ ಮೇಲೆ ಒಂದಿಷ್ಟು ಗಮನ ಹರಿಸಿದರೆ ಅರೋಗ್ಯ ಚೆನ್ನಾಗಿರುತ್ತದೆ. .

ಮೊಳಕೆ ಬಂದ ಆಲೂಗಡ್ಡೆ

ಆಲೂಗಡ್ಡೆಯಲ್ಲಿ ಸಣ್ಣ ಮೊಳಕೆ ಬಂದರೆ ಮೊಳಕೆ ತೆಗೆದು ಅಡುಗೆಗೆ ಬಳಸುತ್ತಾರೆ. ಇದರಲ್ಲಿರುವ ಗ್ಲೈಕೋಆಕ್ಲೆಲಾಯಿಡ್ಸ್‌ ಅಂಶ ಡೈರಿಯಾ, ಅಲ್ಲದೇ ತಲೆನೋವು ಮೊದಲಾದ ಸಮಸ್ಯೆಯನ್ನುಂಟು ಮಾಡುತ್ತದೆ.  

ಒಣ ತ್ವಚೆಯ ಒದ್ದೋಡಿಸೋಕೆ ಇವನ್ನು ತಪ್ಪದೇ ತಿನ್ನಿ!

ಅಣಬೆ

ಇದರಲ್ಲಿರುವ ಕಾರ್ಸಿನೋಜೆನಿಕ್‌ ಕಾಂಪೌಂಡ್ಸ್   ಕ್ಯಾನ್ಸರ್‌‌ಗೆ ಕಾರಣ. ಆದುದರಿಂದ ಇದನ್ನು ಹಸಿಯಾಗಿ ಸೇವಿಸದೇ ಚೆನ್ನಾಗಿ ಬೇಯಿಸಿದ ನಂತರ ಸೇವಿಸಿ. 

ಸಕ್ಕರೆ 

ಚಹಾ, ಕಾಫಿ, ಜ್ಯೂಸ್ ಹೀಗೆ ಎಲ್ಲದರಲ್ಲಿಯೂ ಹೆಚ್ಚು ಹೆಚ್ಚು ಸಕ್ಕರೆ ಬೆರೆಸಿ ಸೇವಿಸುವವರು ಗಮನಿಸಿ. ಇದನ್ನು ಸೇವಿಸಿದರೆ ಗ್ಲೈಕೋಜನ್‌ ಪ್ರಮಾಣ ಕಡಿಮೆಯಾಗುತ್ತದೆ. ಇದರಿಂದ ಬೊಜ್ಜು, ಆಯಾಸ, ಮೈಗ್ರೇನ್‌, ಅಸ್ತಮಾ ಮತ್ತು ಡಯಾಬಿಟೀಸ್‌ ಮೊದಲಾದ ಸಮಸ್ಯೆಗಳಿಗೂ ಎಡೆ ಮಾಡಿಕೊಡುತ್ತದೆ.

ತಂಪು ಪಾನೀಯ 

ಇದರಲ್ಲಿ ಸಕ್ಕರೆ ಮತ್ತು ಫಾಸ್ಪೋರಸ್‌ ಆಸಿಡ್‌ ಹೆಚ್ಚಿರುತ್ತದೆ. ಇದರಿಂದ ಹೃದಯ ಸಂಬಂಧಿ ಸಮಸ್ಯೆಗಳೂ ಹೆಚ್ಚು. ಜತೆಗೆ ಜ್ಞಾಪಕ ಶಕ್ತಿ ಮೇಲೂ ಬೀಳುತ್ತೆ ದುಷ್ಪರಿಣಾಮ. 

ಉಪ್ಪು 

ಸೋಡಿಯಂ ಅಂಶ ಹೆಚ್ಚಿರುವ ಉಪ್ಪನ್ನು ಸೇವಿಸಿದರೆ ಹೈ ಬಿಪಿ, ಹಾರ್ಟ್‌ ಅಟ್ಯಾಕ್‌ ಮೊದಲಾದ ಸಮಸ್ಯೆಗಳೂ ಮೂಲವಿದೆ. ಇದರಿಂದ ಕ್ಯಾನ್ಸರ್‌ ಮತ್ತು ಆಸ್ಟಿಯೋಪೊರೋಸಿಸ್‌ ಸಮಸ್ಯೆಯೂ ಕಾಣಿಸಿಕೊಳ್ಳಬಹುದು. 

ಹೃದಯದ ಆರೋಗ್ಯಕ್ಕೆ ಪೂರಕ ಆಸನಗಳಿವು

ಮೈದಾ

ಮೈದಾ ದೇಹಕ್ಕೆ ಅತಿ ಮಾರಕ. ಮೈದಾದಿಂದ ಮಾಡಿದ ಆಹಾರಗಳಾದ ಬ್ರೆಡ್, ಪರೋಟಾ, ಬಿಸ್ಕೆಟ್ ಹೆಚ್ಚಾಗಿ ಸೇವಿಸಿದರೆ ಜೀರ್ಣ ಕ್ರಿಯೆ ಸಮಸ್ಯೆ ಕಾಡುತ್ತದೆ. ಹೊಟ್ಟೆ ಹಾಳಾಗುತ್ತದೆ. ಇದರಲ್ಲಿರುವ ಬ್ಲೀಚಿಂಗ್‌ ಏಜೆಂಟ್ಸ್‌  ರಕ್ತವನ್ನು ತೆಳ್ಳಗೆ ಮಾಡುತ್ತದೆ. ಅಲ್ಲದೆ ಹಾರ್ಟ್‌ ಅಟ್ಯಾಕ್‌ ಆಗಬಹುದು. 
 

click me!