
ಇದು ಸ್ಪರ್ಧಾತ್ಮಕ ಯುಗ. ಇಲ್ಲಿ ಅನೇಕ ಕಠಿಣ ಸವಾಲುಗಳನ್ನು ಎದುರಿಸಬೇಕಾಗುತ್ತದೆ. ಓಡ್ತಿರುವ ಜೀವನದ ಜೊತೆ ನಾವು ಓಡುವುದು ಅನಿವಾರ್ಯ. ನಮ್ಮ ಹೆಜ್ಜೆ ಹಿಂದೆ ಬಿದ್ರೆ ನಾವು ಜೀವನದಲ್ಲಿ ಮುಂದೆ ಹೋಗೋದು ಕಷ್ಟವಾಗುತ್ತದೆ. ಎಲ್ಲ ಸಮಸ್ಯೆಗಳನ್ನು ಗೆದ್ದು ಬರಬೇಕು ಅಂದ್ರೆ ಏಕಾಗ್ರತೆ ಬಹಳ ಮುಖ್ಯ. ಒಂದೇ ಬಾರಿ ನಾಲ್ಕೈದು ಕೆಲಸಗಳನ್ನು ಮಾಡುವ ಅನಿವಾರ್ಯತೆ ಈಗಿದೆ. ಒಂದು ಕೆಲಸಕ್ಕೆ ಏಕಾಗ್ರತೆ ನೀಡಲು ಆಗ್ತಿಲ್ಲ ಎಂದಾದ್ರೆ ಒಟ್ಟಿಗೆ ನಾಲ್ಕೈದು ಕೆಲಸ ಮಾಡುವುದು ಅಸಾಧ್ಯ.
ಏಕಾಗ್ರತೆ (Concentration) ಹೇಳಿದಷ್ಟು ಸುಲಭವಾಗಿ ಸಿಗುವಂತಹದ್ದಲ್ಲ. ಅದಕ್ಕೂ ಕೆಲವೊಂದು ಕ್ರಮಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ಏಕಾಗ್ರತೆಯಿದ್ರೆ ಸಫಲತೆ ಸಾಧ್ಯ. ಒಂದು ಕೆಲಸ ಮಾಡುವಾಗ ಸಂಪೂರ್ಣ ಗಮನ ಅದ್ರ ಮೇಲಿರಬೇಕಾಗುತ್ತದೆ. ನಾವು ಮಾಡುವ ಕೆಲಸದ ಮೇಲೆ ಸಂಪೂರ್ಣ ಗಮನವಿದ್ರೆ ಮಾತ್ರ ಆ ಕೆಲಸ ಯಶಸ್ವಿಯಾಗಲು ಸಾಧ್ಯ. ಉತ್ತಮ ಫಲಿತಾಂಶ ಸಿಗಲು ಸಾಧ್ಯ. ಮಾಡುವ ಕೆಲಸದಲ್ಲಿ ಏಕಾಗ್ರತೆ ಇರಬೇಕೆಂದ್ರೆ ಕೆಲವೊಂದು ಉಪಾಯಗಳನ್ನು ಪಾಲನೆ ಮಾಡ್ಬೇಕಾಗುತ್ತದೆ. ಇಂದು ನಾವು ಏಕಾಗ್ರತೆ ಪಡೆಯೋದು ಹೇಗೆ ಎಂಬುದನ್ನು ಹೇಳ್ತೇವೆ.
ನೀನು ಮಾಡಬಲ್ಲೆ : ಯಾವುದೇ ಕೆಲಸ (Work) ವಿರಲಿ ಆರಂಭದಲ್ಲಿ ಅನುಮಾನ ಬರುವುದು ಸಹಜ. ಇದು ನನ್ನಿಂದ ಸಾಧ್ಯವಿಲ್ಲವೆಂದೇ ಅನೇಕರು ಕೆಲಸ ಶುರು ಮಾಡ್ತಾರೆ. ಹಾಗಾದಾಗ ಕೆಲಸದ ಮೇಲೆ ಗಮನ ನೀಡಲು ಸಾಧ್ಯವಾಗುವುದಿಲ್ಲ. ಮೊದಲೇ ಸೋಲುಪ್ಪಿಕೊಳ್ಳಬಾರದು. ಇದು ನನ್ನಿಂದ ಸಾಧ್ಯ. ನಾನು ಮಾಡಬಲ್ಲೆ ಎಂಬ ನಿಶ್ಚಲ ಮನಸ್ಸಿನೊಂದಿಗೆ ನೀವು ಕೆಲಸ ಶುರು ಮಾಡ್ಬೇಕು. ಆಗ ನಿಮ್ಮ ಸಂಪೂರ್ಣ ಗಮನ ಕೆಲಸದ ಮೇಲಿರುತ್ತದೆ.
ಬೊಜ್ಜು ಹೆಚ್ಚಾದ್ರೆ ಗೂನು ಬೆನ್ನಿನ ಸಮಸ್ಯೆ ಕಾಡುತ್ತೆ..ಹುಷಾರ್ !
ನಿಧಾನವೇ ಪ್ರಧಾನ (Be Slow) : ಯಾವುದೇ ಕೆಲಸವನ್ನಾದ್ರೂ ನಿಧಾನವಾಗಿ ಕಲಿಯಬೇಕು. ಸ್ಕೂಟರ್ (Scooter) ಕಲಿಯುತ್ತಿದ್ದೀರಿ ಎಂದಿಟ್ಟುಕೊಳ್ಳೋಣ, ಮೊದಲ ದಿನವೇ ನೀವು ಸ್ಕೂಟಿ ಚಲಾಯಿಸಲು ಹೋದ್ರೆ ಬೀಳೋದು ನಿಶ್ಚಿತ. ಆರಂಭದಲ್ಲಿ ಸ್ಟ್ಯಾಂಡ್ ಹಾಕೋದ್ರಿಂದ ಕಲಿಯಬೇಕಾಗುತ್ತದೆ. ಹಾಗೆಯೇ ಏಕಾಗ್ರತೆ ಕೂಡ. ಆರಂಭದಲ್ಲಿ ನೀವು ಕಚೇರಿ ಕೆಲಸ ಅಥವಾ ಓದಿನಲ್ಲಿ ಏಕಾಗ್ರತೆ ಕಂಡುಕೊಳ್ಳಲು ಸಾಧ್ಯವಿಲ್ಲ. ಮೊದಲು ದಿನನಿತ್ಯದ ಕೆಲಸದಲ್ಲಿ ಏಕಾಗ್ರತೆ ತರಲು ಪ್ರಯತ್ನಿಸಿ. ಅಡುಗೆ ಮಾಡ್ತಿದ್ದರೆ ನಿಮ್ಮ ಸಂಪೂರ್ಣ ಗಮನ ಅಡುಗೆ ಮೇಲಿಡಲು ಪ್ರಯತ್ನಿಸಿ.
ಏಕಾಗ್ರತೆ ಹಾಳುವ ಮಾಡುವ ಕೆಲಸವನ್ನು ಪಟ್ಟಿ ಮಾಡಿ : ಕೆಲವೊಂದು ಕೆಲಸದಲ್ಲಿ ಎಷ್ಟು ಪ್ರಯತ್ನಿಸಿದ್ರೂ ಏಕಾಗ್ರತೆ ಕಷ್ಟವಾಗುತ್ತದೆ. ಅದಕ್ಕೆ ಮೊಬೈಲ್, ಸಾಮಾಜಿಕ ಜಾಲತಾಣದ ನೋಟಿಫಿಕೇಷನ್ ಅಥವಾ ಟಿವಿ ಕಾರ್ಯಕ್ರಮವಿರಬಹುದು. ನಿಮ್ಮ ಏಕಾಗ್ರತೆ ಹಾಳು ಮಾಡುವ ಅಂಶಗಳನ್ನು ಪಟ್ಟಿ ಮಾಡಿ ಮತ್ತು ಅದ್ರಿಂದ ದೂರವಿರಲು ಪ್ರಯತ್ನಿಸಿ.
ಧ್ಯಾನದಿಂದ (Medidation) ಏಕಾಗ್ರತೆ ಸಾಧ್ಯ : ಧ್ಯಾನ ಏಕಾಗ್ರತೆಯನ್ನು ಹೆಚ್ಚಿಸುತ್ತದೆ. ಪ್ರತಿ ದಿನ ಧ್ಯಾನ ಮಾಡುವುದು ಮುಖ್ಯ. ದಿನದಲ್ಲಿ 10 – 20 ನಿಮಿಷ ಧ್ಯಾನ ಮಾಡಿದ್ರೆ ಸಾಕಾಗುತ್ತದೆ. ಇದಕ್ಕೆ ಸಮಯ ನಿಗದಿಯಾಗಿಲ್ಲ. ನಿಮಗೆ ಬಿಡುವಾದಾಗ ನೀವು ಮಾಡ್ಬಹುದು. ರಾತ್ರಿ ಮಲಗುವ ಮೊದಲು ದೇವರ ನಾಮ ಹೇಳ್ತಾ ನೀವು ಧ್ಯಾನ ಮಾಡ್ಬಹುದು. ದೇವರ ನಾಮ ಹೇಳುವಾಗ ಸಂಪೂರ್ಣ ಗಮನ ದೇವರ ನಾಮದ ಮೇಲಿರಬೇಕು. ಇಲ್ಲವೆ ಯಾವುದೋ ಒಂದೇ ವಿಷ್ಯದ ಬಗ್ಗೆ ಮನಸ್ಸನ್ನು ಕೇಂದ್ರೀಕರಿಸಲು ಧ್ಯಾನದಲ್ಲಿ ಪ್ರಯತ್ನಿಸಬೇಕು. ನೀವು ಒಂದು ವಿಷ್ಯದ ಬಗ್ಗೆ ಮನಸ್ಸು ಕೇಂದ್ರೀಕರಿಸಲು ಕಲಿತಲ್ಲಿ ಏಕಾಗ್ರತೆ ಸುಲಭ.
ಮಶ್ರೂಮ್ ಸೇವನೆಯಿಂದ ಅಲ್ಕೋಹಾಲ್ ಅಡಿಕ್ಷನ್ ನಿಲ್ಲಿಸಬಹುದಾ ?
ಹೊಸ ಕೆಲಸಕ್ಕೆ ಆದ್ಯತೆ : ಪ್ರತಿ ದಿನ ನಿಮ್ಮ ಕೆಲಸದ ಜೊತೆ ಹೊಸದನ್ನು ಮಾಡಲು ಪ್ರಯತ್ನಿಸಿ, ಹೊಸ ಪ್ರಯತ್ನ ನಿಮ್ಮ ಆಸಕ್ತಿ ಹೆಚ್ಚಿಸುತ್ತದೆ. ಆಸಕ್ತಿ ಹೆಚ್ಚಾದಂತೆ ಏಕಾಗ್ರತೆ ಹೆಚ್ಚುತ್ತದೆ.
ವ್ಯಾಯಾಮ (Exercise) : ವ್ಯಾಯಾಮ ಕೂಡ ಏಕಾಗ್ರತೆ ಸುಧಾರಿಸುತ್ತದೆ. ವ್ಯಾಯಾಮ ದೇಹವನ್ನು ಆರೋಗ್ಯವಾಗಿಡುವ ಜೊತೆಗೆ ಮನಸ್ಸಿಗೆ ಉಲ್ಲಾಸ ನೀಡುತ್ತದೆ. ಮನಸ್ಸಿನ ದ್ವೇಗ ಕಡಿಮೆಯಾಗುತ್ತದೆ. ಇದ್ರಿಂದ ಏಕಾಗ್ರತೆ ತಾನಾಗಿಯೇ ನಿರ್ಮಾಣವಾಗುತ್ತದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.