
ಚಿಪ್ಪಿನೊಳಗೆ ಧೂಳಿನಂಥ ಕಣಗಳು ಒಳ ಹೊಕ್ಕಿರುತ್ತದೆ. ಚಿಪ್ಪಿನೊಳಗಿನಲ್ಲಿಯೇ ನಡೆಯುವ ವಿವಿಧ ಕ್ರಿಯೆಗಳು ಈ ಧೂಳಿನ ಕಣಗಳನ್ನೇ ಮುತ್ತನ್ನಾಗಿ ಪರಿವರ್ತಿಸುತ್ತದೆ. ಅದಕ್ಕೆ ಅಗತ್ಯವಿರುವ ಪ್ರೋಟಿನ್ ಮತ್ತು ಕ್ಯಾಲ್ಸಿಯಂ ಅನ್ನು ಉತ್ಪತ್ತಿ ಮಾಡಿ, ಮುತ್ತಿಗೆ ಎಲ್ಲಿಲ್ಲದ ಸೌಂದರ್ಯವನ್ನು ತಂದು ಕೊಡುತ್ತದೆ. ಆದರೆ, ಅವುಗಳ ಗುಣಮಟ್ಟವನ್ನು ಆರಿಸುವುದು ಹೇಗೆ?
* ದೊಡ್ಡ ಗಾತ್ರವಿದ್ದರೆ ಬೆಲೆ ಹೆಚ್ಚು. ಆದರೆ, ಮುತ್ತಿನ ಮೇಲೆ ಯಾವುದೇ ಕಲೆ ಇರಬಾರದು. ಹೊಳಪಿದ್ದರೆ ಒಳ್ಳೆ ಮುತ್ತು ಎಂದರ್ಥ.
* ಶುದ್ಧ ನೀರಿನಲ್ಲಿ ಮುತ್ತುಗಳು ನೇರಳೆ ಬಣ್ಣದಲ್ಲಿರುತ್ತವೆ. ಸುಮಾರು 100 ಮುತ್ತುಗಳಲ್ಲಿ ಕೇವಲ 10 ಮಾತ್ರ ಬಳಕೆಗೆ ಬರುತ್ತವೆ. ಇದರ ಮೌಲ್ಯ ಹೆಚ್ಚು.
* ಬೇರೆ ಬೇರೆ ಬಣ್ಣಗಳ ಮುತ್ತುಗಳಿಗೆ ತನ್ನದೇ ಆದ ವೈಶಿಷ್ಟ್ಯಗಳಿರುತ್ತವೆ. ಕೆನೆ ಬಣ್ಣ, ಪಿಂಕ್, ತುಸು ನೀಲಿ...ಹೀಗಿ ವಿಧವಿಧವಾಗಿ ಸಿಗೋ ಮುತ್ತಿನ ಬೆಲೆ ಒಂದೊಂದಾಗಿರುತ್ತದೆ.
* ದಕ್ಷಿಣ ಭಾಗದ ಸಮುದ್ರಗಳಲ್ಲಿ ಸಿಗೋ ಮುತ್ತಿನ ಅಳತೆ ಸಾಮಾನ್ಯವಾಗಿ ಸುಮಾರು 12 ಎಂಎಂ ಇರುತ್ತದೆ. ಶುದ್ಧ ನೀರಿನೊಳಗೆ ಸಿಗೋ ಒಂದು ಚಿಪ್ಪಿನೊಳಗೆ ಸುಮಾರು 20 ಮುತ್ತುಗಳಿದ್ದು, ಇದರ ಅಳತೆ 7 ಮಿಮೀ ಇರುತ್ತದೆ.
* ಎರಡು ಮುತ್ತುಗಳನ್ನು ಪರಸ್ಪರ ಉಜ್ಜಿದರೆ, ಮಣ್ಣಿನ ರೀತಿ ಭಾಸವಾದರೆ, ಅದು ಪ್ಯೂರ್ ಮುತ್ತು.
* ಮುತ್ತು ಹಗುರವಾಗಿರಬೇಕು. ಅಕಸ್ಮಾತ್ ಭಾರವಿದ್ದರೆ ಅದು ಮನುಷ್ಯ ಸೃಷ್ಟಿ. ನೈಜ ಮುತ್ತು ಹೊಳಪಿನಿಂದ ಕೂಡಿದ್ದು, ಫಳ ಫಳ ಎಂದು ನೈಸರ್ಗಿಕವಾಗಿ ಹೊಳೆಯುತ್ತದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.