ಶುರುವಾಗಿದೆ ಹೊಸ ಫಿಟ್’ನೆಸ್ ಟ್ರೆಂಡ್; ಇದು ಜಾಗಿಂಗ್ ಗಿಂತಲೂ ಹೆಚ್ಚು ಪರಿಣಾಮಕಾರಿ

By Suvarna NewsFirst Published Jun 18, 2018, 4:12 PM IST
Highlights

ಪ್ಲೋಗಿಂಗ್ ಅಂದರೆ  ಜಾಗಿಂಗ್ ಮಾಡುತ್ತ ಕಸ ಹೆಕ್ಕುವ ಹೊಸ ಫಿಟ್‌ನೆಸ್ ಟ್ರೆಂಡ್. ಇದು ಜಾಗಿಂಗ್ಗಿಂತಲೂ ಹೆಚ್ಚು ಪರಿಣಾಮಕಾರಿ ಅಂತ ಸಾಬೀತಾಗಿದೆ. ಎರಿಕ್ ಎಂಬ ರನ್ನರ್'ಗೆ ಈ ಐಡಿಯಾ ಮೊದಲು ಹೊಳೆದದ್ದು. ಪರಿಸರದ ಬಗ್ಗೆ ಕಾಳಜಿ ಹೊಂದಿರುವ  ಫಿಟ್‌ನೆಸ್ ಪ್ರಿಯರಿಗೆ ಪ್ಲೋಗಿಂಗ್ ಬಹಳ ಆಕರ್ಷಕವಾಗಿ ಕಂಡಿತು. ಅವರು  ಪ್ಲೋಗಿಂಗ್ ಫಿಟ್‌ನೆಸ್‌ಅನ್ನು ಇನ್‌ಸ್ಟಾಗ್ರಾಮ್‌ನಲ್ಲೆಲ್ಲ ಫೋಟೋಸ್ ಅಪ್‌ಲೋಡ್ ಮಾಡತೊಡಗಿದರು. ಇದು ಜಗತ್ತಿನ ಫಿಟ್‌ನೆಸ್ ಪ್ರಿಯರನ್ನು  ಹೆಚ್ಚೆಚ್ಚು ಸೆಳೆಯತೊಡಗಿತು. 

ಜಾಗಿಂಗ್ ಡ್ರೆಸ್‌ನಲ್ಲಿದ್ದ ಆಧುನಿಕ ತರುಣಿಯೊಬ್ಬಳು ಕೈಯಲ್ಲಿ ಕವರ್ ಹಿಡಿದು ಓಡೋಡುತ್ತ ರಸ್ತೆ ಮೇಲೆ, ಪಕ್ಕದ ಪಾರ್ಕ್‌ನಲ್ಲಿ ಬಿದ್ದ ಕಸ ಎತ್ತುತ್ತಿದ್ದಳು. ಯಾವ್ದೋ ಎನ್‌ಜಿಓ ಕಡೆಯಿಂದ ಸ್ವಚ್ಛತೆಯ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾಳಾ? ಅನ್ನುವ ಡೌಟ್'ನಲ್ಲಿ ಮಹಿಳೆಯೊಬ್ಬರು ವಿಚಾರಿಸಿದಾಗ, ಆಕೆ ಇದು ‘ಪ್ಲೋಗಿಂಗ್’ ಅಂದಳು. ತಲೆಬುಡ ಅರ್ಥವಾಗದೇ ಆ ಮಹಿಳೆ ಕಣ್‌ಕಣ್ ಬಿಡುತ್ತಿರುವಾಗ ಆಕೆ ಇದೊಂದು ಹೊಸ ಫಿಟ್‌ನೆಸ್ ಟ್ರೆಂಡ್ ಅಂತ ನಸುನಕ್ಕಳು.

ಪ್ಲೋಗಿಂಗ್ ಅಂದ್ರೇನು? 
ಜಾಗಿಂಗ್ ಮಾಡುತ್ತ ಕಸ ಹೆಕ್ಕುವ ಹೊಸ ಫಿಟ್‌ನೆಸ್ ಟ್ರೆಂಡ್. ಇದು ಜಾಗಿಂಗ್ಗಿಂತಲೂ ಹೆಚ್ಚು ಪರಿಣಾಮಕಾರಿ ಅಂತ ಸಾಬೀತಾಗಿದೆ. ಎರಿಕ್ ಎಂಬ ರನ್ನರ್ಗೆ ಈ ಐಡಿಯಾ ಮೊದಲು ಹೊಳೆದದ್ದು. ಪರಿಸರದ ಬಗ್ಗೆ ಕಾಳಜಿ ಹೊಂದಿರುವ  ಫಿಟ್‌ನೆಸ್ ಪ್ರಿಯರಿಗೆ ಪ್ಲೋಗಿಂಗ್ ಬಹಳ ಆಕರ್ಷಕವಾಗಿ ಕಂಡಿತು. ಅವರು ಪ್ಲೋಗಿಂಗ್ ಫಿಟ್‌ನೆಸ್‌ಅನ್ನು ಇನ್‌ಸ್ಟಾಗ್ರಾಮ್‌ನಲ್ಲೆಲ್ಲ ಫೋಟೋಸ್ ಅಪ್‌ಲೋಡ್ ಮಾಡತೊಡಗಿದರು. ಇದು ಜಗತ್ತಿನ ಫಿಟ್‌ನೆಸ್ ಪ್ರಿಯರನ್ನು ಹೆಚ್ಚೆಚ್ಚು ಸೆಳೆಯತೊಡಗಿತು. ನಮ್ಮ ದೇಶದಲ್ಲಿ ದೆಹಲಿ, ಬೆಂಗಳೂರಿನಲ್ಲೆಲ್ಲ ಪ್ಲೋಗಿಂಗ್ ಫಿಟ್‌ನೆಸ್ ಟ್ರೆಂಡ್ ಶುರುವಾಗುತ್ತಿದೆ.

ಅರ್ಧಗಂಟೆ ಪ್ಲೋಗಿಂಗ್ ಮಾಡಿ 

ರನ್ನಿಂಗ್, ಜಾಗಿಂಗ್, ವಾಕಿಂಗ್‌ಗಳಿಗಿಂತ ಹೆಚ್ಚು ಪರಿಣಾಮಕಾರಿ ಪ್ಲೋಗಿಂಗ್. ಅರ್ಧಗಂಟೆ ಜಾಗಿಂಗ್ ಅಥವಾ ರನ್ನಿಂಗ್ ಮಾಡಿದರೆ ೨೩೩ ಕ್ಯಾಲೊರಿ ಬರ್ನ್ ಆಗುತ್ತೆ. ಅದೇ ಪ್ಲೋಗಿಂಗ್ ಮಾಡಿದರೆ 288 ಕ್ಯಾಲೊರಿ ಇಳಿಸಬಹುದು. ಓಡೋದು, ಬಗ್ಗುವುದು, ಏಳೋದನ್ನು ಸಹಜವಾಗಿ ಮಾಡೋದ್ರಿಂದ ಬೇಗ ಫಿಟ್ ಆಗ್ತೀವಿ, ಮೂಳೆ, ಸ್ನಾಯುಗಳಿಗೂ ಶಕ್ತಿ ಬರುತ್ತೆ. ಜೀರ್ಣಕ್ರಿಯೆ ಸರಾಗವಾಗುತ್ತೆ. ಎಲ್ಲದಕ್ಕಿಂತ ಹೆಚ್ಚಾಗಿ ಇದರಲ್ಲಿ  ದೇಹ ಆರೋಗ್ಯಪೂರ್ಣವಾಗಿರುವುದರ ಜೊತೆಗೆ ಪರಿಸರದ ಆರೋಗ್ಯವೂ ಸುಧಾರಿಸುತ್ತದೆ.

ಪ್ಲಾಸ್ಟಿಕ್, ರಬ್ಬರ್‌ನಂಥ ತ್ಯಾಜ್ಯಗಳಿಂದ ಮುಕ್ತವಾದ ಪ್ರಕೃತಿ ಮುಂದಿನ ಪೀಳಿಗೆಗೆ ಸಿಗುತ್ತೆ. ಸಾಮಾನ್ಯ ಪ್ಲೋಗಿಂಗ್ ಮಾಡುವವರು ಪಾರ್ಕ್, ಕಾಡುಗಳನ್ನು ಆಯ್ಕೆ ಮಾಡುತ್ತಾರೆ. ಕೈಯಲ್ಲಿ ಒಂದು ಕಸದ ಚೀಲ ಹಿಡಿದು ಓಡೋಡುತ್ತ ಅಲ್ಲಿ ಇಲ್ಲಿ ಬಿದ್ದಿರುವ ಪ್ಲಾಸ್ಟಿಕ್, ಬಾಟಲ್ ಮತ್ತಿತರ ತ್ಯಾಜ್ಯಗಳನ್ನು ಹೆಕ್ಕಿ ಬ್ಯಾಗ್ ಗೆ ತುಂಬುತ್ತಾರೆ. ಗಿಡಗಳ ಮರೆಯಲ್ಲಿ, ಹಳ್ಳದೊಳಗೆ ಬಿದ್ದ ಕಸವನ್ನೂ ಹುಡುಕಿ ಹುಡುಕಿ ಹೆಕ್ಕಿ ಬ್ಯಾಗ್‌ಗೆ ತುಂಬುತ್ತಾರೆ. ಕಸದ ಬ್ಯಾಗ್‌ಅನ್ನು ದೊಡ್ಡ ಗಾರ್ಬೇಜ್ ಬಾಕ್ಸ್ ಒಳಗೆ ಹಾಕಿ ಮುಂದೆ ಹೋಗುತ್ತಾರೆ. ಹೀಗೆ ಪ್ಲೋಗಿಂಗ್ ಮಾಡಿದ ಪರಿಸರವಷ್ಟೂ ಪ್ಲಾಸ್ಟಿಕ್ ಮುಕ್ತವಾಗಿ ಶುಭ್ರವಾಗುತ್ತದೆ.

ಚಾರಣಿಗರೂ ಪ್ಲಿಕ್ಕಿಂಗ್ ಮಾಡುತ್ತಾರೆ!
ಟ್ರೆಕ್ಕಿಂಗ್ ಟ್ರೆಂಡ್ ಹೆಚ್ಚಾಗುತ್ತಿದೆ. ಇದರಿಂದ ಫಿಟ್‌ನೆಸ್ ಬೆಳೆದರೂ ಕಾಡು  ಪ್ಲಾಸ್ಟಿಕ್, ಗಾಜಿನ ಬಾಟಲಿಗಳಿಂದ ತುಂಬಿಹೋಗುತ್ತಿದೆ. ಈಗೀಗ ಟ್ರೆಕ್ಕಿಂಗ್ ಆಯೋಜಿಸುವ ಕೆಲವು ಸಂಸ್ಥೆಗಳು ಚಾರಣಿಗರಿಗೆ ಒಂದು ಬ್ಯಾಗ್‌ಅನ್ನೂ  ನೀಡುತ್ತಾರೆ. ಊಟ, ತಿಂಡಿ ಕಟ್ಟಿಸಿಕೊಂಡು ಬಂದ ಪ್ಲಾಸ್ಟಿಕ್ ಇನ್ನಿತರ  ತ್ಯಾಜ್ಯಗಳನ್ನು ಆ ಬ್ಯಾಗ್‌ನಲ್ಲೇ ಹಾಕಬೇಕು. ಅಷ್ಟೇ ಅಲ್ಲ, ತಾವು ನಡೆಯುವ ದಾರಿಯಲ್ಲಿ ಸಿಗುವ ಕಸವನ್ನು ಹೆಕ್ಕಿ ಅದರಲ್ಲಿ ಹಾಕಬೇಕು. ಹೀಗೆ ಕೆಜಿಗಟ್ಟಲೆ  ಸಂಗ್ರಹವಾಗುವ ಕಸವನ್ನು ಮುಂದೆಲ್ಲಾದರೂ ಕಸದ ಡಬ್ಬ ಸಿಕ್ಕರೆ ಅದರಲ್ಲಿ ಹಾಕಿ ಹೋಗುತ್ತಾರೆ. ಮಾಮೂಲಿ ಟ್ರೆಕ್ಕಿಂಗ್ ಮಾಡೋದಕ್ಕಿಂತ ಇದು ಎಲ್ಲ ರೀತಿಯಿಂದಲೂ ಹೆಚ್ಚು ಪರಿಣಾಮಕಾರಿ. ಈ ಬಗೆಯ ಟ್ರೆಕ್ಕಿಂಗ್‌ಗೆ ಪ್ಲಿಕ್ಕಿಂಗ್ ಅಂತಾರೆ. 

 

click me!