ಹೊಟ್ಟೆಯ ಬೊಜ್ಜು ಕರಗುತ್ತಿಲ್ಲವೇ? ಹಾಗಾದರೆ ಈ ಟಿಪ್ಸ್ ಅನುಸರಿಸಿ

Published : Oct 10, 2016, 07:25 AM ISTUpdated : Apr 11, 2018, 12:46 PM IST
ಹೊಟ್ಟೆಯ ಬೊಜ್ಜು ಕರಗುತ್ತಿಲ್ಲವೇ? ಹಾಗಾದರೆ ಈ ಟಿಪ್ಸ್ ಅನುಸರಿಸಿ

ಸಾರಾಂಶ

ಬದಲಾಗುತ್ತಿರುವ ಇತ್ತೀಚೆಗಿನ ಜೀವನ ಶೈಲಿಯಿಂದಾಗಿ ಹಲವಾರು ಗಂಟೆಗಳ ಕಾಲ ಕಂಪ್ಯೂಟರ್ ಎದುರು ಕೆಲಸ ಮಾಡುವುದು ಅನಿವಾರ್ಯ. ಕುಳಿತಲ್ಲೇ ತಿಂಡಿ ತಿನ್ನುತ್ತೇವೆ. ಇನ್ನುಳಿದ ಸಮಯವನ್ನು ಟಿವಿ ಎದುರು ಕುಳಿತು ಇಲ್ಲವೇ ಮೊಬೈಲ್'ನಲ್ಲಿ ವ್ಯಯಿಸುತ್ತೇವೆ. ಇವೆಲ್ಲದರ ಪ್ರಭಾವ ನಮ್ಮ ಹೊಟ್ಟೆಯ ಮೇಲೆ ಬೀಳುತ್ತದೆ. ಮದುವೆಯಾಗಿದ್ದರೂ, ಆಗಿರದಿದ್ದರೂ ಯಾರೂ ಹೊಟ್ಟೆಯ ಸುತ್ತಲು ಬೊಜ್ಜು ಇರುವುದು ಇಷ್ಟಪಡುವುದಿಲ್ಲ. ಆದರೆ ನಿಮ್ಮ ಜೀವನ ಶೈಲಿಯಲ್ಲಿ ತುಸು ಬದಲಾವಣೆ ತಂದು ಪರ್ಫೆಕ್ಟ್ ದೇಹದ ಮಾಲಿಕರಾಗಬಹುದು.

ದಿನದಲ್ಲಿ 30 ರಿಂದ 60 ನಿಮಿಷ ವ್ಯಾಯಾಮ ಮಾಡಿ ನೀವು ಬೊಜ್ಜನ್ನು ಕರಗಿಸಬಹುದು. ಇದರಿಂದ ಕೇವಲ ಬೊಜ್ಜು ಕರಗುವುದಷ್ಟೇ ಅಲ್ಲದೆ, ನಿರುಪಯುಕ್ತ ಕ್ಯಾಲೊರಿಗಳನ್ನೂ ಕಡಿಮೆ ಮಾಡಿಕೊಳ್ಳಬಹುದು.

ಪ್ಯಾಕೆಟ್'ನಲ್ಲಿ ಬರುವ ಜ್ಯೂಸ್ ಹಾಗೂ ಸೋಡಾದೊಂದಿಗೆ, ಚಹಾ ಹಾಗೂ ಕಾಫಿಯಲ್ಲಿ ಬಳಸುವ ಸಕ್ಕರೆಯನ್ನು ಕಡಿಮೆ ಮಾಡಿ. ದಿನವೊಂದರಲ್ಲಿ ಕನಿಷ್ಟವೆಂದರೂ 8 ರಿಂದ 10 ಗ್ಲಾಸ್ ನೀರು ಸೇವಿಸಿ ಇದು ನಿಮ್ಮನ್ನು ಹೈಡ್ರೇಟೆಡ್ ಆಗಿ ಇರಿಸಿಉವುದರೊಂದಿಗೆ, ನಿಮ್ಮ ಹಸಿವನ್ನೂ ಕಡಿಮೆಗೊಳಿಸುತ್ತದೆ.

ಡಯೆಟ್ ಮಾಡುವಾಗ ಒಂದೇ ಬಾರಿ ನಿಮಗಿಷ್ಟವಾದ ಆಹಾರ ಸೇವಿಸುವುದನ್ನು ನಿಲ್ಲಿಸಬೇಡಿ. ವಾರಕ್ಕೊಂದು ಬಾರಿ ಕೇಕ್, ಚಾಕಲೇಟ್ ಸೇವಿಸುವುದರಿಂದ ನಿಮ್ಮ ಡಯೆಟ್ ಪ್ಲಾನ್ ಕೆಡುವುದಿಲ್ಲ.

ಗೆಳೆಯರೊಂದಿಗೆ ಎಣ್ಣೆಯಲ್ಲಿ ಕರಿದ ತಿಂಡಿ ಇಲ್ಲವೇ ಜಂಕ್ ಫುಡ್ ಸೇವಿಸುವುದು ನಿಮಗಿಷ್ಟವಾಗಬಹುದು, ಆದರೆ ಇದು ಸೌಂದರ್ಯಯುತ ದೇಹದ ಶತ್ರುಗಳು ಎಂಬುವುದು ನೆನಪಿರಲಿ.

ಹಣಣು, ಸೊಪ್ಪು- ತರಕಾರಿಗಳಲ್ಲಿ ಉಪಯುಕ್ತ ಹಾಗೂ ಆರೋಗ್ಯಕರ ಫೈಬರ್, ವಿಟಮಿನ್'ಗಳಿರುತ್ತವೆ. ಇದರಿಂದ ಹೊಟ್ಟೆ ಬೇಗ ತುಂಬುತ್ತದೆ, ಮತ್ತು ಪದೇ ಪದೇ ಆಹಾರ ಸೇವಿಸುವ ಅವಶ್ಯಕತೆ ಇರುವುದಿಲ್ಲ. ಕ್ಯಾಲೊರಿಗಳೂ ಇವುಗಳಲ್ಲಿ ಕಡಿಮೆ ಇರುತ್ತದೆ.

ದಿನದಲ್ಲಿ 2 ಗಂಟೆಯ ಅಂತರದಲ್ಲಿ ಏನಾದರೂ ಸೇವಿಸುತ್ತಿರಿ. ಇದರಿಂದ ಒಂದೇ ಬಾರಿ ಅಧಿಕ ಪ್ರಮಾಣದ ಆಹಾರ ಸೇವಿಸುವುದು ತಪ್ಪುತ್ತದೆಯಲ್ಲದೆ, ನಿಮ್ಮ ರಕ್ತದೊತ್ತಡವೂ ಸಮತೋಲನದಲ್ಲಿರುತ್ತದೆ.

ಇನ್ನು ಕ್ಯಾಲೊರಿ ಬರ್ನ್ ಮಾಡಬೇಕೆಂದಾದರೆ ದಿನದಲ್ಲಿ 10-20 ನಿಮಿಷ ತಪ್ಪದೇ ವಾಕಿಂಗ್ ಮಾಡಿ.

ಈ ಮೇಲಿನ ಟಿಪ್ಸ್'ಗಳನ್ನು ಅನುಸರಿಸುವುದರಿಂದ ಹಾಗೂ ನೀವು ನಿತ್ಯವೂ ಅನುಸರಿಸುವ ಜೀವನ ಶೈಲಿಯಲ್ಲಿ ಕೊಂಚ ಬದಲಾವಣೆ ತರುವುದರಿಂದ ಸೌಂದರ್ಯಯುತ ದೇಹ ನಿಮ್ಮದಾಗುವುದಲ್ಲದೇ ಹೊಟ್ಟೆಯ ಬೊಜ್ಜನ್ನೂ ಕರಗಿಸಿಕೊಳ್ಳಬಹುದು.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

40 ದಿನಗಳಲ್ಲಿ 150 ಮದುವೆ ಕ್ಯಾನ್ಸಲ್, ಸೋಶಿಯಲ್ ಮೀಡಿಯಾ ವಿಲನ್
ನೀವು ಸಾಯುವ ಮೊದಲು ಈ 4 ವಸ್ತುಗಳನ್ನು ಹೊಂದಿದ್ದರೆ, ನೇರವಾಗಿ ಸ್ವರ್ಗಕ್ಕೆ ಹೋಗುತ್ತಾರಂತೆ