
ದೇಶ, ಕಾಲ ಮೀರಿದ ಅಮ್ಮಂದಿರ ಸಮಸ್ಯೆ. ನಮ್ಮ ದೇಶದಲ್ಲಿ ಮಾತ್ರವಲ್ಲ, ವಿದೇಶದಲ್ಲೂ ಮಕ್ಕಳು ಒಂದು ಸೀಸನ್‌ನಲ್ಲಿ ತಲೆ ತುಂಬಾ ಹೇನು ತುಂಬಿಕೊಂಡು ಒದ್ದಾಡುತ್ತಾರೆ. ಅದಕ್ಕೆ ಪರಿಹಾರಗಳು
ಸಾಕಷ್ಟಿವೆ. ಏನವು?
- ಇದಕ್ಕೆಂದೇ ಇರುವ ಬಾಚಣಿಕೆಯಲ್ಲಿ ಮಗುವಿನ ಕೂದಲು ಬಾಚೋದು.
- ಬಾಚಣಿಕೆ ಅಲುಗಿಗೆ ಸಿಗದ ತರಲೆ ಹೇನುಗಳನ್ನು ಸಂಹರಿಸಲು ಇನ್ನೊಂದು ಉಪಾಯ ಇದೆ. ಅದು ಕೂದಲಿಗೆ ಪೆಟ್ರೋಲಿಯಂ ಜೆಲ್ಲಿ ಹಚ್ಚೋದು. ವ್ಯಾಸಲಿನ್ ಹಚ್ಚಿದರೂ ಹೇನು ಬರಲ್ವಂತೆ.
- ಅದೇ ರೀತಿ ಆಲಿವ್ ಆಯಿಲ್ ಹಚ್ಕೊಂಡ್ರೆ ಹೇನಿನ ಸಮಸ್ಯೆಯಿಂದ ಮುಕ್ತಿ ಪಡೆಯಬಹುದಂತೆ.
- ಇದೆಲ್ಲಕ್ಕಿಂತಲೂ ಹೆಚ್ಚಿನ ಪಾರಂಪರಿಕ ಪರಿಹಾರ ಒಂದಿದೆ. ತೆಂಗಿನ ಎಣ್ಣೆಗೆ ಸ್ವಲ್ಪ ಕರ್ಪೂರದ ಪುಡಿ ಹಾಕಿ ತಲೆ ಬುರುಡೆಗೆ ಹಚ್ಚಬೇಕು. ರಾತ್ರಿಯಿಡೀ ಹಾಗೇ ಬಿಟ್ಟುಬೆಳಗ್ಗೆ ತಲೆಸ್ನಾನ ಮಾಡಬೇಕು.
ತಲೆ ಕ್ಲೀನ್ ಆಗಿಲ್ಲ ಎನಿಸಿದರೆ ಬೇಕಿಂಗ್ ಸೋಡಾ ಬಳಸಿ,
ನಿತ್ಯ ತಲೆಸ್ನಾನ ಮಾಡಿದ್ರೂ ಯಾಕೋ ಕ್ಲೀನೇ ಆಗಿಲ್ಲ ಅನ್ನುವ ಫೀಲ್ ಕೆಲವರಿಗೆ ಇರುತ್ತೆ. ಇಂಥವರು ಬೇಕಿಂಗ್ ಸೋಡ ಬಳಸಿ ತಲೆಸ್ನಾನ ಮಾಡಿ. ತಲೆಬುರುಡೆಯಲ್ಲಿನ ಡೆಡ್‌ಸ್ಕಿನ್‌ಗಳು ನಿವಾರಣೆಯಾಗುತ್ತೆ, ತಲೆ ಹೊಟ್ಟಿನಂಥ, ಸಮಸ್ಯೆ ಬರಲ್ಲ.
ಶ್ಯಾಂಪೂಗಳಂತೆ ಇದು ಕೂದಲನ್ನು, ತಲೆ ಬುರುಡೆಯನ್ನು ಡ್ರೈ ಮಾಡಲ್ಲ. ತಲೆಯ ಸಹಜ ತೇವಾಂಶವನ್ನು ಉಳಿಸುತ್ತೆ. ಕೂದಲು ಸಿಕ್ಕುಗಟ್ಟುವುದು, ಉದುರುವುದು ಮೊದಲಾದ ಸಮಸ್ಯೆಗಳು ಕಡಿಮೆಯಾಗುತ್ತವೆ. ಕಂಡೀಷನರ್ ಜೊತೆಗೆ ಬೇಕಿಂಗ್ ಸೋಡ ಬಳಸಿದರೆ ಕೂದಲು ಹೆಚ್ಚು ಮೃದುವಾಗುತ್ತೆ.
ರೋಸ್‌ವಾಟರ್ ಮತ್ತು ಬೇಕಿಂಗ್ ಸೋಡಾ ಮಿಕ್ಸ್ ಮಾಡಿ ಒದ್ದೆಕೂದಲಿಗೆ ಹಚ್ಚಿ. ಸ್ವಲ್ಪ ಹೊತ್ತು ಬಿಟ್ಟು ತೊಳೆಯಿರಿ. ಇದನ್ನು ಕಂಡೀಶನರ್, ವಿನೆಗರ್, ನಿಂಬೆರಸದ ಜೊತೆಗೂ ಒದ್ದೆ ತಲೆಗೆ ಹಚ್ಚಬಹುದು.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.