ಇದು ಟ್ಯೂಬ್‌ ಡ್ರೆಸ್‌ ಜಮಾನ;ನಾಚೋ ಹುಡುಗೀರಿಗಲ್ಲ ಈ ಫ್ಯಾಷನ್!

By Web DeskFirst Published Aug 29, 2019, 12:32 PM IST
Highlights

ಸಣ್ಣ ಮೈ, ಪುಟ್ಟನಡು, ಬಳುಕುವ ಮೈಯ ಮಾರ್ಡನ್‌ ಹುಡುಗಿಗೆ ಹೇಳಿ ಮಾಡಿಸಿದ ದಿರಿಸು ಈ ಟ್ಯೂಬ್‌ ಡ್ರೆಸ್‌. ಮಾಡೆಲ್‌ಗಳಲ್ಲಿ, ನಟಿಯರಲ್ಲಿ ಬ್ಯೂಟಿ ಬೋನ್‌ ತೋರಿಸೋ ಕ್ರೇಜ್‌ ಹಿಂದಿನಿಂದಲೂ ಇದೆ. ಕಾಲೇಜ್‌ ಹುಡುಗೀರೂ ಇಂಥ ತಿಕ್ಕಲುಗಳಲ್ಲಿ ಹಿಂದೆ ಬಿದ್ದೋರಲ್ಲ. ಸೋ, ನೀವೂ ಈ ಕೆಟಗರಿಗೆ ಸೇರಿದವರಾಗಿದ್ರೆ ಟ್ಯೂಬ್‌ ಡ್ರೆಸ್‌ ನಿಮ್ಮ ಆಸೆಯನ್ನು ಪೂರೈಸುತ್ತೆ. ಏಕೆಂದರೆ ಇದು ಆಫ್‌ ಶೋಲ್ಡರ್‌ ಡ್ರೆಸ್‌. ನಗ್ನ ಭುಜಗಳ ದರ್ಶನ ಮಾಡಿಸೋ ಈ ಉಡುಗೆಯಲ್ಲಿ ನಿಮ್ಮ ಬ್ಯೂಟಿ ಬೋನ್‌ ಸಖತ್‌ ಮಾದಕವಾಗಿ ಕಾಣುತ್ತೆ.

ಅಂತಾರಾಷ್ಟ್ರೀಯ ನೇಮ್‌ ಮತ್ತು ಫೇಮ್‌

ಈ ಉಡುಗೆ ಇಂಗ್ಲೆಂಡ್‌ನಲ್ಲಿ ‘ಬೂಬ್‌ ಟಾಪ್‌’ ಅಂತ ಫೇಮಸ್ಸು. 1971ರಲ್ಲಿ ನ್ಯೂಯಾರ್ಕ್ನಲ್ಲಿ ಈ ಟ್ಯೂಬ್‌ ಟಾಪ್‌ ಮತ್ತು ಡ್ರೆಸ್‌ ಸಖತ್‌ ಟ್ರೆಂಡ್‌ ಕ್ರಿಯೇಟ್‌ ಮಾಡಿತು. ಇದಕ್ಕೆ ಕಾರಣ ಇರಾನಿ-ಇಸ್ರೇಲಿಯನ್‌ ಡಿಸೈನರ್‌ ಎಲ್ಲಿ ತಹಾರಿ. ಆತ ನ್ಯೂಯಾರ್ಕ್ಗೆ ಬಂದು ಈ ಸ್ಟೈಲ್‌ನಲ್ಲಿ ನಮೂನೆ ನಮೂನೆಯ ಡ್ರೆಸ್‌ಗಳನ್ನು ವಿನ್ಯಾಸ ಮಾಡಿದ್ದೇ ಅಲ್ಲಿನ ಜನತೆ ಈ ಉಡುಗೆಗೆ ಫಿದಾ ಆದ್ರು. ಇದಕ್ಕೂ ಹಿಂದೆ 50ರ ದಶಕದಲ್ಲಿ ಟ್ಯೂಬ್‌ ಡ್ರೆಸ್‌ನ ಸಹೋದರಿ ಟ್ರೂಬ್‌ ಟಾಪ್‌ ಪಾಶ್ಚಿಮಾತ್ಯ ದೇಶಗಳ ಕಿಶೋರಿಯರ ಮನೆಯುಡುಗೆಯಾಗಿ ಬಳಕೆಯಾಗ್ತಿತ್ತು.

ಗರ್ಲ್ಸ್!!! ಈ ಐದನ್ನು ನಿಮ್ಮ ವಾರ್ಡ್‌ರೋಬ್‌ನಿಂದ ಕೂಡಲೇ ಹೊರ ಹಾಕಿ

ಅಷ್ಟಕ್ಕೂ ಟ್ಯೂಬ್‌ ಟಾಪ್‌ ಅಂದರೆ?

ನಳಿಕೆಯ ವಿನ್ಯಾಸದಲ್ಲಿ ದೇಹವನ್ನು ಬಿಗಿಯಾಗಿ ಹಿಡಿದಿಟ್ಟಿರುವ ಉಡುಗೆ. ಎದೆಯ ಭಾಗದಲ್ಲಿ ಬಿಗಿಯಾಗಿ ನಿಲ್ಲುವ ಕಾರಣವೇ ಇದಕ್ಕೆ ಬೂಬ್‌ ಟಾಪ್‌ ಅನ್ನೋ ಹೆಸರು ಬಂದಿದ್ದು. ಇದಕ್ಕೆ ಸ್ಲೀವ್‌್ಸ ಇಲ್ಲ. ಭುಜಗಳೂ ಇಲ್ಲ. ನಗ್ನ ಭುಜಗಳ ಚೆಲುವು ಎದ್ದುಕಾಣುವಂತೆ ಮಾಡುವುದು ಇದರ ಹೆಚ್ಚುಗಾರಿಕೆ. ಸೊಂಟದವರೆಗೆ ಬಿಗಿಯಾಗಿ ಮೈಯನ್ನಪ್ಪಿ ಹಿಡಿದು ಬಳಿಕ ಫ್ರಿಲ್‌ ಮೂಲಕ ಅಲೆ ಅಲೆಯಾಗಿ ಹಬ್ಬುತ್ತದೆ. ಚೆಲುವೆಯ ದೇಹದ ಬಾಗು ಬಳುಕುಗಳನ್ನು ಅಚ್ಚುಕಟ್ಟಾಗಿ ಹಿಡಿದಿಡೋದು ಇದರ ಸ್ಪೆಷಾಲಿಟಿ.

ಬಾಲಿವುಡ್‌ನಲ್ಲಿ ಸಖತ್‌ ಟ್ರೆಂಡಿ

ಹೆಚ್ಚು ಆಕರ್ಷಕವಾಗಿ ಕಾಣಲು ವೈಜ್ಞಾನಿಕವಾಗಿ ಸಾಬೀತಾದ ವಿಧಾನಗಳಿವು!

ಈ ಟ್ಯೂಬ್‌ ಟಾಪ್‌ನ ಮೂಲಕ ಗಮನಸೆಳೆದ ಚೆಲುವೆ ಶ್ರದ್ಧಾ ಕಪೂರ್‌. ಹೊಳೆಯುವ ಎಮರಾಲ್ಡ್‌ ಗ್ರೀನ್‌ ಬಣ್ಣದ ಟ್ಯೂಬ್‌ ಸ್ಟೈಲ್‌ ಡ್ರೆಸ್‌ ಶ್ರದ್ಧಾ ಚೆಲುವನ್ನು ಶ್ರದ್ಧೆಯಿಂದ ಬಿಂಬಿಸಿದ ಹಾಗಿತ್ತು. ಚಿಚ್‌ಹೋರ್‌ ಸಿನಿಮಾದ ಪ್ರೊಮೋಶನ್‌ನಲ್ಲೆಲ್ಲ ಶ್ರದ್ಧಾ ಕಪೂರ್‌ ಧರಿಸಿದ ಈ ಉಡುಗೆಯದೇ ಚರ್ಚೆ. ಸ್ಮೋಕಿ ಮೇಕಪ್‌, ಸಾಫ್ಟ್‌ಕಲ್‌ರ್‍ ಹೇರ್‌ಸ್ಟೈಲ್‌ ಆ ಚೆಲುವಿಗೆ ಪುಟವಿಟ್ಟಹಾಗಿತ್ತು. ಕರೀನಾ ಕಪೂರ್‌ ಧರಿಸಿದ ಕಡುಗಪ್ಪು ಬಣ್ಣದ ಟ್ಯೂಬ್‌ ಮ್ಯಾಕ್ಸಿ ಡ್ರೆಸ್‌ ಫ್ಯಾಶನ್‌ ಜಗತ್ತಿನಲ್ಲಿ ಸದ್ದುಮಾಡಿದ್ದು ಅಷ್ಟಿಷ್ಟಲ್ಲ. ಕಡುಗಪ್ಪು ಬಣ್ಣದಲ್ಲಿ ಮೈ ಬಿಗಿದು ನಿಂತ ಈ ಉಡುಗೆ ಲಾಂಗ್‌ ಲೆನ್ತ್. ನಮ್ಮೂರ ಭಾಷೆಯಲ್ಲಿ ಹೇಳೋದಾದ್ರೆ ನೆಲ ಗುಡಿಸೋ ಹಾಗೆ. ಹೈ ಲೆವೆಲ್‌ ಪಾರ್ಟಿಗೆ ಹೇಳಿಮಾಡಿಸಿದಂಥಾ ಡಿಸೈನ್‌. ಒಂದು ಭಾಗದಲ್ಲಿ ಮಾತ್ರ ಪಾರದರ್ಶಕ ಬಟ್ಟೆಭುಜ ಸೋಕುವಂತಿದೆ. ಅಲಿಯಾ ಭಟ್‌ ಸ್ಟೈಲ್‌ ಡಿಫರೆಂಟ್‌. ಅವರು ಧರಿಸಿದ ಟ್ಯೂಬ್‌ ಡ್ರೆಸ್‌ನ ತುಂಬ ನಕ್ಷತ್ರಗಳ ಚಿತ್ತಾರ. ಈ ಉಡುಗೆಯ ಮೇಲ್ಭಾಗ ತುಸು ಪಾರದರ್ಶಕವಾಗಿದ್ದು ಮಾದಕ ಲುಕ್‌ ದಯಪಾಲಿಸಿದೆ. ಜಾನ್ವಿ ಕಪೂರ್‌ ಎಂಬ ಸುಂದರಾಂಗಿ ಏನು ತೊಟ್ಟರೂ ಚೆಂದವೇ. ಆಕೆ ಧರಿಸಿದ ಟ್ಯೂಬ್‌ ಡ್ರೆಸ್‌ ಕಡುಗೆಂಪು ಬಣ್ಣದ್ದು, ಟ್ಯೂಬ್‌ ಡಿಸೈಸ್‌ ಇರುವ ಮುಂಭಾಗದಲ್ಲೆಲ್ಲ ಹೊಳೆಯುವ ಮೇಲ್ಮೈ. ಕೆಳಭಾಗದಲ್ಲೂ ಮಿರರ್‌ ವರ್ಕ್ ಬಂದು ಕಡುಗೆಂಪಿನಲ್ಲಿ ಮಿರುಗುವ ಚೆಲುವು.

ಸಖತ್‌ ಟ್ರೆಂಡಿಯಾಗಿರೋ ಈ ಸ್ಟೈಲ್‌ಅನ್ನು ಬಾಲಿವುಡ್‌ನ ಹಲವು ಸುಂದರಿಯರು ಸ್ಟೈಲ್‌ ಸ್ಟೇಟ್‌ಮೆಂಟ್‌ ಮಾಡ್ಕೊಂಡಿದ್ದಾರೆ.

ಹಬ್ಬಕ್ಕೆ ಹೊಸ ಸೀರೆ ಬಂತು, ಬ್ಲೌಸ್‌ ಕಥೆ ಏನು?

ಪಕ್ಕಾ ಮಾರ್ಡನ್‌ ಸ್ಟೈಲ್‌

‘ಜೋಕೆ, ನಾನು ಬಳ್ಳಿಯ ಮಿಂಚು..’ 1970ರಲ್ಲಿ ಬಂದ ‘ಪರೋಪಕಾರಿ’ ಸಿನಿಮಾದ ಹಾಡು. ಈ ಡ್ರೆಸ್‌ ಹಾಕ್ಕೊಂಡಿರೋ ಹುಡುಗೀರನ್ನ ನೋಡಿದಾಗಲೂ ಥಟ್ಟನೆ ನೆನಪಾಗೋದು ಇದೇ ಸಾಲು. ಸಾಮಾನ್ಯ ಹುಡುಗೀನ ಬಳುಕೋ ಮಿಂಚಿನ ಬಳ್ಳಿಯಂತೆ ಕಾಣೋ ಹಾಗೆ ಮಾಡೋ ಗುಣ ಟ್ಯೂಬ್‌ ಡ್ರೆಸ್‌ಗಿದೆ. ಸಖತ್‌ ಚಮಕ್‌ ಇರೋ ಈ ಡ್ರೆಸ್‌ಅನ್ನು ತುಸು ಡೀಸೆಂಟಾಗಿರೋ ಹುಡುಗಿಯರು ತೊಡೋದು ಕಷ್ಟಆಗಬಹುದು. ಆದರೆ ನಾಚಿಕೆಯನ್ನೆಲ್ಲ ಸೈಡಿಗಿಟ್ಟು ಬೋಲ್ಡ್‌ ಲುಕ್‌ನಲ್ಲಿ ಮಿಂಚಬೇಕು ಅಂತಿರೋರು ಖಂಡಿತಾ ಟ್ರೈ ಮಾಡಬಹುದು. ಈವ್ನಿಂಗ್‌ ಪಾರ್ಟಿಗೆ ಚೆನ್ನಾಗಿರುತ್ತೆ. ಬೆತ್ತಲೆ ಭುಜಗಳು ಇರಿಸು ಮುರಿಸು ಹುಟ್ಟಿಸಿದ್ರೆ ಪಾರದರ್ಶಕ ಬಟ್ಟೆಯಿಂದ ಕವರ್‌ ಮಾಡಬಹುದು. ಸ್ಟೈಲ್‌ಗೇನೂ ಕಮ್ಮಿಯಾಗಲ್ಲ.

ಮತ್ತೆ ಬಂದಿದೆ ಟೀ ಲೆನ್ತ್ ಟ್ರೆಂಡ್; ಮುಜುಗರಕ್ಕೆ ಹೇಳಿ ಬೈ!

ಯಾವ ಬಣ್ಣ, ಡಿಸೈನ್‌ ಚೆಂದ?

ಹೊಳೆಯುವ ಕಡು ಬಣ್ಣಗಳಲ್ಲಿ ಟ್ಯೂಬ್‌ ಡ್ರೆಸ್‌ ಡಿಸೈನ್‌ ಮಾಡಿದ್ರೆ ಚೆಂದ. ಈ ಡ್ರೆಸ್‌ಗೆ ರಿಚ್‌ನೆಸ್‌ ಬರೋದೇ ಬಣ್ಣಗಳಿಂದ. ಕಡುಗಪ್ಪು, ಎಮರಾಲ್ಡ್‌ ಗ್ರೀನ್‌, ಕಡುಗೆಂಪು ಬಣ್ಣಗಳ ಟ್ಯೂಬ್‌ ಡ್ರೆಸ್‌ ಸಖತ್ತಾಗಿರುತ್ತೆ. ಇನ್ನೂ ಬೋಲ್ಡ್‌ ಲುಕ್‌ ಬೇಕಿದ್ರೆ ಗೋಲ್ಡನ್‌ ಕಲರ್‌ ಹಾಗೂ ಕಪ್ಪು ಕಾಂಬಿನೇಶನ್‌ ಡ್ರೆಸ್‌ಗಳನ್ನು ಟ್ರೈ ಮಾಡಬಹುದು. ಇದರಲ್ಲಿ ಟ್ಯೂಬ್‌ ಡ್ರೆಸ್‌ಗಿಂತ ಟ್ಯೂಬ್‌ ಟಾಪ್‌ ಮತ್ತು ಮಿನಿ ವಿನ್ಯಾಸ ಚೆನ್ನಾಗಿರುತ್ತೆ. ಕಂಗನಾ ರಾನಾವತ್‌ ಈ ಡಿಸೈನ್‌ ಡ್ರೆಸ್‌ನಲ್ಲಿ ಬೋಲ್ಡ್‌ ಆಗಿ ಕಾಣಿಸಿಕೊಂಡಿದ್ದಾರೆ. ಸ್ಮೋಕಿ ಮೇಕಪ್‌ ಬೆಸ್ಟ್‌. ಸಿಂಪಲ್‌ ಆ್ಯಕ್ಸೆಸರೀಸ್‌ ಚೆಂದ. ಆದ್ರೆ ಅಪ್ಪಿತಪ್ಪಿಯೂ ಕತ್ತಿಗೇನೂ ಹಾಕಬೇಡಿ.

click me!