
ಮಗುವಾಗಲ್ಲ ಅಂತ ಸಂಕಟಪಡೋ ಹೆಣ್ಮಕ್ಕಳಿಗೆ ಸಿಹಿಸುದ್ದಿ.
ಇನ್ನೊಂದು ಸ್ವಲ್ಪ ವರ್ಷದಲ್ಲೇ ತ್ರೀಡಿ ಪ್ರಿಂಟೆಡ್ ಅಂಡಾಶಯ ಬರಲಿದೆ. ಇದು ಅಂಡಾಕಾರದಲ್ಲಿದ್ದು, ಯಥಾವತ್ ಹೆಣ್ಣಿನ ಅಂಡಾಶಯವನ್ನೇ ಹೋಲುತ್ತದೆ. ಫಲವತ್ತತೆ ಕಳೆದುಕೊಂಡ ಅಂಡಾಶಯದ ಜಾಗಕ್ಕೆ ಶಸ್ತ್ರಚಿಕಿತ್ಸೆಯ ಮೂಲಕ ಈ ತ್ರೀಡಿ ಪ್ರಿಂಟೆಡ್ ಅಂಡಾಶಯ ಸೇರಿಸಿ ಮಗು ಪಡೆಯುವ ಲೇಟೆಸ್ಟ್ ತಂತ್ರಜ್ಞಾನ ಇದು.
ಇತ್ತೀಚೆಗೆ ಫಿನ್‌ಬರ್ಗ್ ಯುನಿವರ್ಸಿಟಿ ಇಂಟೆರೆಸ್ಟಿಂಗ್ ಪ್ರಯೋಗವೊಂದನ್ನು ಮಾಡಿತ್ತು. ಈ ಪ್ರಯೋಗ ನಡೆದದ್ದು ಇಲಿಯ ಮೇಲೆ. ಹೆಣ್ಣಿನಲ್ಲಿನ ಅಂಡಾಶಯವನ್ನು ತೆಗೆದು ಆ ಜಾಗಕ್ಕೆ ತ್ರೀಡಿ ಪ್ರಿಂಟೆಡ್ ಅಂಡಾಶಯ ಸೇರಿಸಿದರು. ಅದನ್ನು ಗಂಡಿಲಿಯೊಂದಿಗೆ ಬೆರೆಯಲು ಬಿಟ್ಟರು. ಹೆಣ್ಣಿಲಿ ಮೊದಲಿನಂತೇ ಸಂತಾನೋತ್ಪತ್ತಿ ಕ್ರಿಯೆಯಲ್ಲಿ ತೊಡಗಿದ್ದಲ್ಲದೇ ಆರೋಗ್ಯವಂತ ಮರಿಗಳಿಗೂ ಜನ್ಮನೀಡಿತು.
ಆ ಹಿನ್ನೆಲೆಯಲ್ಲಿ ತ್ರೀಡಿ ಪ್ರಿಂಟೆಡ್ ಅಂಡಾಶಯದ ಪ್ರಯೋಗದ ಮೊದಲ ಪರೀಕ್ಷಾ ಹಂತ ಯಶಸ್ವಿಯಾಗಿದೆ. ಆಧುನಿಕ ದಿನಗಳಲ್ಲಿ ಫಲಿತಗೊಳ್ಳದ ಅಂಡಾಶಯದ ತೊಂದರೆಯಿಂದ ಸಂತಾನಹೀನತೆ ಹೆಚ್ಚುತ್ತಿದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.