ಏನಾಯ್ತೋ ಅದನ್ನು ಫ್ರಿಡ್ಜ್‌ನಲ್ಲಿ ತುಂಬಬೇಡಿ...

First Published Jul 3, 2018, 4:32 PM IST
Highlights

ಫ್ರಿಡ್ಜ್ ಆಧುನಿಕ ಜೀವನ ಶೈಲಿಯ ಅಗತ್ಯಗಳಲ್ಲೊಂದು. ಬೇಕು ನಿಜ. ಆದರೆ, ಸಿಕ್ಕಿದ್ದನ್ನೆಲ್ಲ ಅದರಲ್ಲಿ ತುಂಬಿಡುವುದು ತಪ್ಪು. ಅದನ್ನು ಬೇಕಾಬಿಟ್ಟಿ ಬಳಸಿದರೆ ಬ್ಯಾಕ್ಟಿರೀಯಾ, ಶೀಲೀಂಧ್ರಗಳು ತುಂಬಿ ಕೊಂಡು ನಮ್ಮ ಅನಾರೋಗ್ಯಕ್ಕೂ ಕಾರಣವಾಗಬಲ್ಲದು. ಇಡಿ ಅಡುಗೆ ಮನೆಯನ್ನೇ ಕೊಳಕಾಗಿಸಬಹುದು.

ಅಷ್ಟಕ್ಕೂ ಈ ಫ್ರಿಡ್ಜ್‌ ಅನ್ನು ಸ್ವಚ್ಛವಾಗಿಡುವುದು ಹೇಗೆ? ಇಲ್ಲಿವೆ ಸಿಂಪಲ್ ಟಿಪ್ಸ್...

  • ಜಂಕ್ ಫುಡ್‌ ಹಾಗೂ ಪ್ಯಾಕ್ಡ್ ಫುಡ್ ಅನ್ನು ಫ್ರಿಡ್ಜ್‌ನಲ್ಲಿಡುವಾಗ ಸೂಚನೆಗಳನ್ನು ನೋಡಿಕೊಳ್ಳಿ. ಕಂಡಿದ್ದೆನ್ನೆಲ್ಲ ಕೋಲ್ಡ್ ಸ್ಟೋರೇಜ್ ಮಾಡ್ಲಿಕ್ಕೆ ಆಗೋಲ್ಲ. 
  • ತಾಪಮಾನ ಕನಿಷ್ಠ ಮಟ್ಟ -5 ಡಿಗ್ರಿಯಲ್ಲಿರಲಿ. 
  • ಫ್ರೀಜರ್ ತಾಪಮಾನ - 18 ಡಿಗ್ರಿ ಇರುವಂತೆ ನೋಡಿಕೊಳ್ಳಿ.
  • ಸ್ವಲ್ಪ ಸ್ವಲ್ಪ ಪ್ರಮಾಣದ ಆಹಾರವನ್ನು ಸಮಾನವಾಗಿರುವಂತೆ ಎಲ್ಲೆಡೆ ಇಟ್ಟರೆ, ಸಮಾನವಾಗಿ ತಂಪಾಗಿರುತ್ತದೆ.
  • ಕತ್ತರಿಸಿದ ಹಣ್ಣು ಮತ್ತು ಜ್ಯೂಸ್‌ಗಳನ್ನು ತಕ್ಷಣವೇ ಸೇವಿಸಬೇಕು. ಇಲ್ಲವೇ, ಸ್ವಲ್ಪ ಹೊತ್ತು ಮಾತ್ರ ಫ್ರಿಡ್ಜ್‌ನಲ್ಲಿಡಬೇಕು. 
  • ಎಕ್ಸ್‌ಪೈರಿ ಡೇಟ್ ನೆನಪಿಟ್ಟುಕೊಳ್ಳಲು, ದೊಡ್ಡದಾಗಿ ಡಬ್ಬಿ ಮೇಲೆ ಡೇಟ್ ಬರೆದಿಟ್ಟುಕೊಳ್ಳಿ. ಇಲ್ಲದಿದ್ದರೆ ಆ ವಸ್ತು ಹಾಳಾಗಿ ಬಿಡುತ್ತದೆ.
  • ಅಡುಗೆ ಪದಾರ್ಥವನ್ನು ಕಣ್ಣಿಗೆ ಕಾಣುವಂತೆ ಇಟ್ಟುಕೊಳ್ಳಿ. ಇತರೆ ಕಚ್ಚಾ ಪದಾರ್ಥಗಳನ್ನು ಹಿಂದೆ ಇಡಿ. ಇಲ್ಲದಿದ್ದರೆ ನಾವೇನು ಇಟ್ಟಿದ್ದೇವೆ ಎನ್ನುವುದೇ ಮರೆತು ಹೋಗುತ್ತದೆ.
  • ಮಾಂಸ , ಮೀನು ಮತ್ತಿತರ ಆಹಾರವನ್ನು - 18 ಡಿಗ್ರಿ ತಾಪಮಾನದಲ್ಲಿ ಶೇಖರಿಸಿಡಬೇಕು.
  • ಅಡುಗೆಗೆ ಬಳಸುವ ಕೆಲವು ಸಾಮಾನುಗಳನ್ನು ಫ್ರೋಜನ್ ಬಾಕ್ಸ್‌ನಲ್ಲಿಡಬೇಕು. 
  • ಟಿನ್ ಆಹಾರವನ್ನು ಡಬ್ಬದಿಂದ ತೆಗೆದಿಡಬೇಕು.
click me!