(ವಿಡಿಯೋ)'ಅಮ್ಮಂದಿರ ದಿನ'ದಂದು ಸೊಸೆ ಕೊಟ್ಟ ಗಿಫ್ಟ್ ಕಂಡು ಭಾವುಕರಾದ ಅತ್ತೆ!: ಆಕೆ ಕೊಟ್ಟದ್ದೇನು?

By Suvarna Web DeskFirst Published May 13, 2017, 7:57 AM IST
Highlights

'ಅಮ್ಮಂದಿರ ದಿನದಂದು ಸಾಮಾನ್ಯವಾಗಿ ಪ್ರತಿಯೊಬ್ಬರು ಅಮ್ಮನನ್ನು ನೆನಪಿಸಿಕೊಳ್ಳುತ್ತಾರೆ. ತಮ್ಮ ಬಿಡುವಿಲ್ಲದ ಕೆಲಸದಿಂದ ಕೊಂಚ ಬಿಡುವು ಮಾಡಿಕೊಂಡು ಅಮ್ಮನೊಂದಿಗೆ ಕೆಲ ಸಮಯ ಕಳೆಯುತ್ತಾರೆ ಹಾಗೂ ಗಿಫ್ಟ್ ನೀಡುತ್ತಾರೆ. ಆದರೆ ಸೊಸೆಯೊಬ್ಬಳು ನೀಡಿದ ಗಿಫ್ಟ್ ನೋಡಿ ಖುದ್ದು ಅತ್ತೆಯೇ ಭಾವುಕರಾಗಿ ಆನಂದಬಾಷ್ಪ ಸುರಿಸಿದ ವಿಡಿಯೋ ಒಂದು ಸಾಮಾಜಿಕ ಜಾಲಾತಾಣಗಳಲ್ಲಿ ವೈರಲ್ ಆಗುತ್ತಿದೆ. ಅಮ್ಮಂದಿರ ದಿನ' ದಂದು ಗೋದ್ರೆಜ್ ಎಕ್ಸ್'ಪರ್ಟ್'ನವರು ಪ್ರೇಕ್ಷಕರ ಮನಮಿಡಿಯುವ ಜಾಹೀರಾತನ್ನು ಬಿಡುಗಡೆ ಮಾಡಿದ್ದಾರೆ.

ಈ ವಿಡಿಯೋನಲ್ಲಿ ಮನೆಯಲ್ಲಿ ಒಂಟಿಯಾಗಿರುವ ತಾಯಿ ಮನೆಗೆ ಬಂದ ತನ್ನ ಸೊಸೆಯ ಬಳಿ ವಿದೇಶದಲ್ಲಿರುವ ತನ್ನ ಮಗನ ಬಗ್ಗೆ ಪದೇ ಪದೇ ಆತ ಯಾವಾಗ ಬರುತ್ತಾನೆ? ಅವನ ಫೋನ್ ಬಂತಾ? ಆತ ನನ್ನನ್ನು ಕೇಳಿದನಾ? ಎಂದು ಕೇಳುತ್ತಿರುತ್ತಾರೆ. ಆದರೆ ಸೊಸೆ ಮಾತ್ರ ಸರಿಯಾಗಿ ಉತ್ತರಿಸುವುದಿಲ್ಲ. ಅಲ್ಲದೇ ಅಲ್ಲಿಂದ ತನ್ನ ಕೋಣೆಗೆ ತೆರಳುತ್ತಾಳೆ.

ತಾಯಿಗೆ ಮಾತ್ರ ಅಂದು 'ಅಮ್ಮಂದಿರ ದಿನ' ಎಂದು ನೆನಪಿರುತ್ತದೆ. ಆದರೂ ತನ್ನ ಮಗ ಯಾಕೆ ಕರೆ ಮಾಡಿಲ್ಲ ಎಂಬ ಚಿಂತೆ ಆಕೆಯನ್ನು ಕಾಡುತ್ತಿರುತ್ತದೆ. ಆಕೆ ಪದೇ ಪದೇ ಮಗನ ಕರೆ ಬಂದಿದೆಯೇ ಎಂದು ಮೊಬೈಲ್ ನೋಡುತ್ತಿರುತ್ತಾಳೆ. ಈ ಮಧ್ಯೆ ಸೊಸೆ ಒಂದು ಗಿಫ್ಟ್ ಪ್ಯಾಕ್ ಮಾಡುತ್ತಿರುವುದನ್ನು ನೋಡುತ್ತಾಳೆ. ಅಲ್ಲದೇ ಗಿಫ್ಟ್ ಯಾರಿಗೆ ನಿನ್ನ ಅಮ್ಮನಿಗೆಯೇ? ಎಂದು ಕೇಳುತ್ತಾಳೆ. ಇದಕ್ಕೆ ಸೊಸೆ ಹೌದೆನ್ನುತ್ತಾಳೆ. ಸೊಸೆ ತನ್ನ ತಾಯಿಗಾಗಿ ತಯಾರಿಸುತ್ತಿರುವ ಗಿಫ್ಟ್ ಕಂಡ ಅತ್ತೆ ನಿನ್ನ ತಾಯಿಗೆ ತುಂಬಾ ಖುಷಿಯಾಗಬಹುದು ಎಂದು ಹೇಳಿ ಅಲ್ಲಿಂದ ತೆರಳುತ್ತಾಳೆ. ಆದರೆ ಇದಾದ ಬಳಿಕ ನಡೆದ ದೃಶ್ಯ ಮಾತ್ರ ಪ್ರತಿಯೊಬ್ಬ ನೋಡುಗನನ್ನೂ ಭಾವುಕರನ್ನಾಗಿಸುತ್ತದೆ.

ವಾಸ್ತವವಾಗಿ ಆಕೆಯ ಮಗ ಹಾಗೂ ಸೊಸೆ ಆಕೆಯನ್ನು ತುಂಬಾ ಪ್ರೀತಿಸುತ್ತಿದ್ದು, ಆಕೆಗೆ ಸರ್ಪ್ರೈಜ್ ಗಿಫ್ಟ್ ನೀಡಲು ಹೀಗೆ ನಡೆದುಕೊಂಡಿರುತ್ತಾರೆ. ಸೊಸೆಯೊಂದಿಗೆ ಮಾತನಾಡಿ ಕೆಲ ಸಮಯದ ಬಳಿಕ ತನ್ನ ಕೋಣೆಗೆ ತೆರಳಿದ ಅತ್ತೆಗೆ ಅಲ್ಲಿನ ದೃಶ್ಯ ಕಂಡು ಶಾಕ್ ಆಗುತ್ತದೆ. ಯಾಕೆಂದರೆ ಸೊಸೆ ತನ್ನ ಅಮ್ಮನಿಗೆ ಎಂದು ತಯಾರಿಸಿದ್ದ ಗಿಫ್ಟ್ ಆಕೆಯ ಕೋಣೆಯಲ್ಲಿರುತ್ತದೆ. ಅಲ್ಲದೇ ಅದರೊಂದಿಗೆ 'ಅಮ್ಮಂದಿರ ದಿನ'ದ ಶುಭಾಷಯ ಕೋರಿದ್ದ ಸೊಸೆ ಹಾಗೂ ಮಗ ಬರೆದ ಪತ್ರ ನೋಡಿ ಆಕೆಯ ಸಂತೋಷ ಆನಂದಭಾಷ್ಪವಾಗಿ ಹೊರ ಬರುತ್ತದೆ. ಅಷ್ಟರಲ್ಲೇ ಆಕೆಗೆ ಮಗನಿಂದ ಕರೆ ಬರುತ್ತದೆ. ಅತ್ತ ಕಡೆಯಿಂದ 'ಅಮ್ಮ ಸೊಸೆಯ ಗಿಫ್ಟ್ ನಿಮಗೆ ಇಷ್ಟವಾಯಿತಲ್ವಾ? ಎಂದು ಕೇಳುತ್ತಾನೆ. ಇದನ್ನು ಕೇಳುತ್ತಿದ್ದಂತೆಯೇ ಮಗಳಂತೆ ತನ್ನನ್ನು ಪ್ರೀತಿಸುವ ತನ್ನ ಸೊಸೆಯನ್ನು ಆಲಂಗಿಸುವ ಅ(ತ್ತೆ)ಮ್ಮನನ್ನು ನೋಡಿದರೆ ಇಂತಹ ಅದ್ಭುತ ಸಂದೇಶವುಳ್ಳ ಜಾಹಿರಾತನ್ನು ಮತ್ತೆ ಮತ್ತೆ ನೋಡಬೇಕೆನಿಸುತ್ತದ.

click me!