
ಸ್ಕೂಲು ಕಾಲೇಜು ದಿನಗಳಲ್ಲಿ ಯುವಕ/ ಯುವತಿಯರ ನಡುವೆ ಜಗಳಗಳಾಗುವುದು ಸಾಮಾನ್ಯ. ಆದರೆ ಈ ದಿನಗಳಲ್ಲಿ ಸಡಾಮಾಜಿಕ ಜಾಲಾತಾಣಗಳಲ್ಲಿ ವೈರಲ್ ಆಗುತ್ತಿರುವ ವಿಡಿಯೋವೊಂದರಲ್ಲಿ ಯುವತಿಯರು ಟಾಯ್ಲೆಟ್'ನಲ್ಲಿ ಬಡಿದಾಡಿಕೊಂಡ ದೃಶ್ಯಗಳು ಕಂಡು ಬಂದಿವೆ. ದೃಶ್ಯಗಳಲ್ಲಿ ಕಂಡು ಬಂದ ಪ್ರತಿಯೊಬ್ಬ ಯುವತಿಯರು ಒಬ್ಬರಬನ್ನೊಬ್ಬರು ಹೊಡೆದಿದ್ದರೆ, ಮತ್ತೆ ಕೆಲವರು ಜುಟ್ಟು ಹಿಡಿದು ಬಡಿದಾಡಿಕೊಂಡಿದ್ದಾರೆ.
ಪ್ರಾರಂಭದಲ್ಲಿ ಕೇವಲ ಇಬ್ಬರು ಜಗಳವಾಡಿಕೊಂಡಿದ್ದು, ಓಬ್ಬಾಕೆ ಇದನ್ನು ಮೊಬೈಲ್'ನಲ್ಲಿ ಈ ದೃಶ್ಯಗಳನ್ನು ಸೆರೆ ಹಿಡಿಯುತ್ತಿರುವುದು ಕಂಡು ಬಂದಿದೆ. ಈ ಮಧ್ಯೆ ಹೊರಗಿನಿಂದ ಬಂದ ಕೆಲ ಯುವತಿಯರು ಪತಿಸ್ಥಿತಿಯನ್ನು ತಿಳಿಗೊಳಿಸುವ ಯತ್ನ ನಡೆಸುತ್ತಾರೆ. ಹೀಗಿರುವಾಗ ಜಗಳವಾಡಿಕೊಂಡಿದ್ದ ಯುವತಿಯರಲ್ಲಿ ಒಬ್ಬಾಕೆ, ಶಾಂತಗೊಳಿಸಲು ಬಂದವರ ಮೇಲೆಯೇ ಕೈ ಎತ್ತುತ್ತಾಳೆ. ಇಷ್ಟಾಗಿದ್ದೇ ತಡ ಎಲ್ಲಾ ಯುವತಿಯರು ಮುಖ- ಮೂತಿ ನೋಡದೆ ಒಬ್ಬರ ಮೇಲೊಬ್ಬರು ದಾಳಿ ನಡೆಸುತ್ತಾರೆ.
ಸದ್ಯ ಈ ವಿಡಿಯೋ ಸಾಮಾಜಿಕ ಜಾಲಾತಾಣಗಳಲ್ಲಿ ವೈರಲ್ ಆಗುತ್ತಿದ್ದು, ಘಟನೆಯ ಕುರಿತಾಗಿ ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.