ನಿಮ್ಮ ಮದುವೆ ನಿಮ್ಮ ಬಾಯ್'ಫ್ರೆಂಡ್ ಜೊತೆ ಆಗುತ್ತಿಲ್ಲವೇ? ಹಾಗಾದರೆ ಈ ವಿಷಯಗಳ ಕುರಿತು ಹುಷಾರಾಗಿರಿ

Published : Oct 10, 2016, 09:22 AM ISTUpdated : Apr 11, 2018, 12:42 PM IST
ನಿಮ್ಮ ಮದುವೆ ನಿಮ್ಮ ಬಾಯ್'ಫ್ರೆಂಡ್ ಜೊತೆ ಆಗುತ್ತಿಲ್ಲವೇ? ಹಾಗಾದರೆ ಈ ವಿಷಯಗಳ ಕುರಿತು ಹುಷಾರಾಗಿರಿ

ಸಾರಾಂಶ

ಲವ್ ಮ್ಯಾರೇಜ್'ನಲ್ಲಿ ಹುಡುಗಿಯರು ತಮ್ಮ ಬಾಯ್ ಫ್ರೆಂಡ್'ನ್ನು ಮದುವೆಯಾಗುತ್ತಾರೆ. ಆದರೆ ಅರೇಂಜ್ಡ್ ಮ್ಯಾರೇಜ್'ನಲ್ಲಿ ಬೇರೆ ಹುಡುಗಿಯ ಬಾಯ್ ಫ್ರೆಂಡ್ ಜೊತೆಗೆ ಮದುವೆಯಾಗುತ್ತಾರೆ.' ಈ ಮಾತು ಹಾಸ್ಯವಾಗಿ ಬಹು ಪ್ರಸಿದ್ಧವಾಗಿದೆಯಾದರೂ ಇದು ಸತ್ಯದಿಂದ ದೂರವಿಲ್ಲ. ತಾನು ಇಚ್ಛಿಸಿದವರನ್ನು ಮದುವೆಯಾಗದ ಬಹಳಷ್ಟು ಜೋಡಿಗಳು ಇದ್ದಾರೆ. ಮದುವೆಯಾಗುವುದಿಲ್ಲ ಎಂದು ಕಹಿ ಅನುಭವದೊಂದಿಗೇ ಸಂಬಂಧವನ್ನು ಅಂತ್ಯಗೊಳಿಸಬೇಕೆಂದೇನಿಲ್ಲ. ಆದರೆ ನೀವು ಪ್ರೀತಿಸುವ ಹುಡುಗನೊಂದಿಗೆ ನಿಮ್ಮ ಮದುವೆಯಾಗುತ್ತಿಲ್ಲವೆಂದಾದರೆ ಈ ಕೆಳಗೆ ನೀಡಿರುವ 5 ವಿಷಯಗಳ ಕುರಿತು ಜಾಗೃತೆವಹಿಸಿ.

ಲವ್ ಮ್ಯಾರೇಜ್'ನಲ್ಲಿ ಹುಡುಗಿಯರು ತಮ್ಮ ಬಾಯ್ ಫ್ರೆಂಡ್'ನ್ನು ಮದುವೆಯಾಗುತ್ತಾರೆ. ಆದರೆ ಅರೇಂಜ್ಡ್ ಮ್ಯಾರೇಜ್'ನಲ್ಲಿ ಬೇರೆ ಹುಡುಗಿಯ ಬಾಯ್ ಫ್ರೆಂಡ್ ಜೊತೆಗೆ ಮದುವೆಯಾಗುತ್ತಾರೆ.' ಈ ಮಾತು ಹಾಸ್ಯವಾಗಿ ಬಹು ಪ್ರಸಿದ್ಧವಾಗಿದೆಯಾದರೂ ಇದು ಸತ್ಯದಿಂದ ದೂರವಿಲ್ಲ. ತಾನು ಇಚ್ಛಿಸಿದವರನ್ನು ಮದುವೆಯಾಗದ ಬಹಳಷ್ಟು ಜೋಡಿಗಳು ಇದ್ದಾರೆ. ಮದುವೆಯಾಗುವುದಿಲ್ಲ ಎಂದು ಕಹಿ ಅನುಭವದೊಂದಿಗೇ ಸಂಬಂಧವನ್ನು ಅಂತ್ಯಗೊಳಿಸಬೇಕೆಂದೇನಿಲ್ಲ. ಆದರೆ ನೀವು ಪ್ರೀತಿಸುವ ಹುಡುಗನೊಂದಿಗೆ ನಿಮ್ಮ ಮದುವೆಯಾಗುತ್ತಿಲ್ಲವೆಂದಾದರೆ ಈ ಕೆಳಗೆ ನೀಡಿರುವ 5 ವಿಷಯಗಳ ಕುರಿತು ಜಾಗೃತೆವಹಿಸಿ.

ಮ್ಯೂಚುವಲ್ ಸಪರೇಶನ್(ಪರಸ್ಪರ ಇಚ್ಛೆಯಿಂದ ದೂರವಾಗಿ):

ಸಂಬಂಧ ಗುರಿ ತಲುಪುವ ಸಾಧ್ಯತೆ ಇಲ್ಲವೆಂದಾದರೆ, ಅಂತಹ ಸಂಬಂಧವನ್ನು ಸುಂದರವಾಗಿ ಅಂತ್ಯಗೊಳಿಸುವುದೇ ಉತ್ತಮ. ಮದುವೆಯಾದ ಬಳಿಕವೂ, ನೀವು ಲವರ್'ನೊಂದಿಗೆ ಸಂಬಂಧ ಮುಂದುವರೆಸುವ ಇಚ್ಛೆ ನಿಮಗಿರಬಹುದು ಆದರೆ ಇದು ಅಸಾಧ್ಯದ ಮಾತು. ಯಾಕೆಂದರೆ ನಿಮ್ಮ ಈ ಇಚ್ಛೆಯಿಂದ ಒಂದೆಡೆ ನೀವು ಮದುವೆಯಾದ ಹುಡುಗನೊಂದಿಗೆ ಪ್ರಾಮಾಣಿಕವಾಗಿ ಇರಲು ಸಾಧ್ಯವಾಗುವುದಿಲ್ಲ. ಮತ್ತೊಂದೆಡೆ ನೀವು ಪರೀತಿಸುತ್ತಿದ್ದ ಹುಡುಗನಿಗೆ ನಿಮ್ಮನ್ನು ನೀವು ಸಮಮರ್ಪಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಹೀಗಾಗಿ ಪರಸ್ಪರ ಮಾತನಾಡಿಕೊಂಡು ನಿಮ್ಮ ಲವರ್'ನೊಂದಿಗಿನ ಸಂಬಂಧವನ್ನು ಅಂತ್ಯಗೊಳಿಸುವುದೇ ಲೇಸು.

ನಿಶ್ಚಿತಾರ್ಥ/ ಮದುವೆಯಾದ ಹುಡುಗನೊಂದಿಗೆ ಎಲ್ಲವನ್ನೂ ಹೇಳಬೇಡಿ:

ನೀವು ಮದುವೆಯಾದ ಇಲ್ಲವೇ ನಿಮ್ಮ ನಿಶ್ಚಿತಾರ್ಥವಾದ ಹುಡುಗನಿಂದ ನಿಮ್ಮ ಹಳೆಯ ಸಂಬಂಧದ ಕುರಿತಾಗಿ ಹೇಳದಿದ್ದರೆ ತಪ್ಪಾಗುತ್ತದೆ. ಹಾಗಂತ ನಿಮ್ಮ ಕಳೆದು ಹೋದ ದಿನಗಳ ಕುರಿತಾಗಿ ಎಲ್ಲವನ್ನೂ ಹಂಚಿಕೊಳ್ಳಬೇಕೆಂದಿಲ್ಲ. ಒಂದು ವೇಳೆ ನಿಮ್ಮ ಪ್ರೇಮಿಯೊಂದಿಗೆ ನೀವು ಕ್ಲೋಸ್ ಆಗಿದ್ದಿರಿ ಎಂದಾದರೆ ಎಲ್ಲಾ ವಿಚಾರವನ್ನು ನಿಮ್ಮ ಪತಿಯೊಡನೆ ಹಂಚಿಕೊಳ್ಳದಿರುವುದೇ ಉತ್ತಮ. ಯಾಕೆಂದರೆ ಎಲ್ಲಾ ವಿಚಾರಗಳನ್ನು ಹಂಚಿಕೊಳ್ಳುವುದರಿಂದ ನಿಮ್ಮ ವೈವಾಹಿಕ ಜೀವನದ ಮೊದಲ ಹಂತದಲ್ಲೇ ನಿಮ್ಮಿಬ್ಬರ ನಡುವೆ ಬಿರುಕು ಮೂಡಬಹುದು.

ಮದುವೆಗೆ ನಿಮ್ಮ ಬಾಯ್'ಫ್ರೆಂಡ್'ನ್ನು ತಪ್ಪಿಯೂ ಕರೆಯಬೇಡಿ:

ಮದುವೆಯ ಬಳಿಕವೂ ನೀವು ನಿಮ್ಮ ಲವರ್'ನ್ನು ಒಬ್ಬ ಸ್ನೇಹಿತನಾಗಿ ನಿಮ್ಮ ಹತ್ತಿರದಲ್ಲಿಟ್ಟುಕೊಳ್ಳಲು ಬಯಸಬಹುದು. ಇದರಿಂದ ಯಾವುದೇ ಆಪತ್ತಿಲ್ಲವಾದರೂ ಮದುವೆಗೆ ಲವರ್'ನ್ನು ಕರೆಯದಿರಲು ಪ್ರಯತ್ನಿಸಿ. ಯಾಕೆಂದರೆ ಮದುವೆಯ ಸಂದರ್ಭದಲ್ಲಿ ಒಬ್ಬರನ್ನೊಬ್ಬರು ಎದುರಿಸುವುದು ತುಂಬಾ ಕಷ್ಟವಾಗುತ್ತದೆ. ಲವರ್ ಎದುರು ಮತ್ತೊಬ್ಬನನ್ನು ವರಿಸುವುದು ನಿಮಗೂ ಕಷ್ಟವಾಗಬಹುದು.

ಬಾಯ್'ಫ್ರೆಂಡ್'ನಿಂದ ನಿಧಾನವಾಗಿ ದೂರವಾಗಿ:

ಒಂದು ವೇಳೆ ನಿಮ್ಮ ಮದುವೆ ನಿಶ್ಚಯವಾಗಿದ್ದರೆ, ನಿಮ್ಮ ಪ್ರೇಮಿಯೊಂದಿಗಿನ ಸಂಬಂಧವನ್ನು ಒಂದೇ ಮಾತಿನಲ್ಲಿ ಮುಗಿಸಬೇಕೆಂದೇನಿಲ್ಲ. ಯಾಕೆಂದರೆ ಸಂಬಂಧ ಬೆಳೆಸಲು ಹೇಗೆ ಸಮಯ ತಗುಲುತ್ತದೋ ಹಾಗೆಯೇ ಸಂಬಂಧ ಮುರಿಯಲೂ ಸಮಯ ಬೇಕಾಗುತ್ತದೆ. ಹೀಗಾಗಿ ನಿಧಾನಗತಿಯಲ್ಲಿ ದೂರವಾಗಿ, ಒಂದೇ ಮಾತಿನಲ್ಲಿ ಸಂಭಂಧ ಮುರಿಉಕೊಳ್ಳುವುದರಿಂದ ಎದುರಿಗಿರುವ ವ್ಯಕ್ತಿಗೆ ಅದನ್ನು ಅರಗಿಸಿಕೊಳ್ಳಲೂ ಸಾಧ್ಯವಾಗದಿರಬಹುದು, ಖಿನ್ನತೆಯೂ ಆವರಿಸಿಕೊಳ್ಳುವ ಸಾಧ್ಯತೆಗಳಿವೆ.

 ಹಣದ ಲೆಕ್ಕಾಚಾರವನ್ನು ಮುಗಿಸಿಕೊಳ್ಳಿ:

ಜಾಯಿಂಟ್ ಅಕೌಂಟ್, ಇನ್ಶೂರೆನ್ಸ್ ಪಾಲಿಸಿ ಮೊದಲಾದವನ್ನು ಒಂದಾಗಿ ಮಾಡುವ ಹಲವಾರು ಜೋಡಿಗಳಿವೆ. ಮುಂದೆ ಮದುವೆಯಾಗಿ ಬಾಳು ಸಾಗಿಸುತ್ತೇವೆ ಎಂಬ ಯೋಚನೆಯಿಂದ ಅವರು ಹೀಗೆ ಮಾಡುವ ಸಾದ್ಯತೆಗಳಿಸುತ್ತವೆ. ಆದರೆ ನಿಮ್ಮ ಬ್ರೇಕ್'ಅಪ್ ಆಗುತ್ತಿದೆ ಎಂದಾದರೆ ಹಣದ ಲೆಕ್ಕಾಚಾರವನ್ನು ಮೊದಲೇ ಮುಗಿಸಿ. ಇದರಿಂದ ನಿಮ್ಮ ದಾಂಪತ್ಯ ಜೀವನವೂ ಸುಖಮಯವಾಗುವುದು.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

40 ದಿನಗಳಲ್ಲಿ 150 ಮದುವೆ ಕ್ಯಾನ್ಸಲ್, ಸೋಶಿಯಲ್ ಮೀಡಿಯಾ ವಿಲನ್
ನೀವು ಸಾಯುವ ಮೊದಲು ಈ 4 ವಸ್ತುಗಳನ್ನು ಹೊಂದಿದ್ದರೆ, ನೇರವಾಗಿ ಸ್ವರ್ಗಕ್ಕೆ ಹೋಗುತ್ತಾರಂತೆ