Bhagavad Gita ಹೇಳುವುದ ಕೇಳಿ, ಕೆಟ್ಟ ಅಭ್ಯಾಸ ಬಿಟ್ಟು ಯಶಸ್ಸು ನಿಮ್ಮದಾಗಿಸಿಕೊಳ್ಳಿ!

By Suvarna NewsFirst Published Nov 18, 2022, 2:10 PM IST
Highlights

ಗುರಿಯಿದ್ದರೆ ಸಾಲದು, ಗುರಿ ತಲುಪುವ ದಾರಿ ಗೊತ್ತಿರಬೇಕು. ಮಧ್ಯದಲ್ಲಿ ಎಡವಿದ್ರೆ ಮತ್ತೆ ಬುಡಕ್ಕೆ ಬಂದು ನಿಲ್ತೆವೆ. ಹಾಗಾಗಿ ಭಗವದ್ಗೀತೆಯಲ್ಲಿ ಹೇಳಿರುವ ನಿಯಮ ಪಾಲನೆ ಮಾಡಿ. ಯಶಸ್ಸು ನಿಮ್ಮನ್ನು ಹುಡುಕಿಕೊಂಡು ಬರುತ್ತೆ.
 

ನಮ್ಮ ಯಶಸ್ಸು ನಮ್ಮ ಕೈನಲ್ಲಿದೆ. ಬಹುತೇಕ ಬಾರಿ ನಮಗೆ ನಾವೇ ಶತ್ರುಗಳಾಗ್ತೇವೆ. ನಮ್ಮ ಕೆಲ ಸ್ವಭಾವ, ನಮ್ಮನ್ನು ಯಶಸ್ಸಿನ ದಾರಿಯಿಂದ ದೂರ ನಿಲ್ಲುವಂತೆ ಮಾಡುತ್ತದೆ. ಜೀವನಕ್ಕೆ ಸಂಬಂಧಿಸಿದ ಎಲ್ಲ ಸಮಸ್ಯೆಗೆ ಭಗವದ್ಗೀತೆಯಲ್ಲಿ ಪರಿಹಾರವಿದೆ. ಇದನ್ನು ಅಧ್ಯಯನ ಮಾಡಿದ್ರೆ ದೈನಂದಿನ ಜೀವನದ ಎಲ್ಲಾ ಸಣ್ಣ ಮತ್ತು ದೊಡ್ಡ ಸಮಸ್ಯೆಗಳನ್ನು ಸರಳವಾಗಿ ನಾವು ನಿಭಾಯಿಸಬಹುದು. ಯಶಸ್ಸನ್ನು ಸಾಧಿಸುವ ಮಾರ್ಗವನ್ನು ಭಗವದ್ಗೀತೆಯಲ್ಲಿ ಉಲ್ಲೇಖಿಸಲಾಗಿದೆ.  

ಈಗಿನ ದಿನದಲ್ಲಿ ಪ್ರತಿಯೊಬ್ಬ ವ್ಯಕ್ತಿ ಯಶಸ್ಸಿ (Success) ನ ಹಿಂದೆ ಓಡುವ ಪ್ರಯತ್ನ ನಡೆಸುತ್ತಾನೆ. ಇದಕ್ಕಾಗಿ ಕಠಿಣ ಪರಿಶ್ರಮಪಡುತ್ತಾನೆ. ಹಗಲಿರುವಳು ಪ್ರಯತ್ನಿಸಿದ್ರೂ ಫಲಿತಾಂಶ (Result) ಸಿಗುವುದಿಲ್ಲ. ಈ ನೋವು ಆತನನ್ನು ಕತ್ತಲೆಗೆ ನೂಕುತ್ತದೆ. ಹತಾಶನಾಗ್ತಾನೆ. ಆ ಸಂದರ್ಭದಲ್ಲಿ ಭಗವದ್ಗೀತೆ (Bhagavad Gita) ಯಲ್ಲಿ ಹೇಳಿದ ನಿಯಮಗಳನ್ನು ಪಾಲನೆ ಮಾಡ್ಬೇಕು. ಅನೇಕ ಬಾರಿ ನಮ್ಮ ಅಭ್ಯಾಸ (Practice) ಗಳೇ ನಮಗೆ ಶತ್ರುವಾಗಿರುತ್ತದೆ ಎನ್ನುತ್ತದೆ ಭಗವದ್ಗೀತೆ. ಅಭ್ಯಾಸವೆಂದ್ರೆ ಮದ್ಯಪಾನ, ಧೂಮಪಾನ ಮಾತ್ರವಲ್ಲ, ನಮ್ಮೊಳಗಿರುವ ಮನಸ್ಸಿನ ಅಭ್ಯಾಸ, ಜೀವನದಲ್ಲಿ ಯಾವುದೇ ರೀತಿಯ ಯಶಸ್ಸು ಸಾಧಿಸಲು ಬಿಡುವುದಿಲ್ಲ. ನಾವಿಂದು ಆ ಕೆಟ್ಟ ಅಭ್ಯಾಸಗಳು ಯಾವುವು ಎಂಬುದನ್ನು ಹೇಳ್ತೇವೆ. 

ತುಳಸಿ ನೀರು ಬಳಸಿ, ಆರೋಗ್ಯ ಸುಧಾರಿಸೋದು ಮಾತ್ರವಲ್ಲ, ಲಕ್ಕನ್ನೇ ಬದಲಿಸುತ್ತೆ!

ಇತರರ ಜೊತೆ ನಿಮ್ಮ ಹೋಲಿಕೆ (Comparison) : ಪ್ರತಿಯೊಬ್ಬ ಪಾಲಕರಿಗೂ ಈ ಕಿವಿ ಮಾತನ್ನು ಹೇಳಲಾಗುತ್ತದೆ. ಬೇರೆ ಮಕ್ಕಳ ಜೊತೆ ನಿಮ್ಮ ಮಕ್ಕಳನ್ನು ಹೋಲಿಕೆ ಮಾಡಬೇಡಿ ಎನ್ನಲಾಗುತ್ತದೆ. ಇದು ಮಕ್ಕಳಿಗೆ ಮಾತ್ರ ಅನ್ವಯವಾಗುವುದಿಲ್ಲ. ನಮಗೂ ಅನ್ವಯವಾಗುತ್ತದೆ. ನಾವು ಕೂಡ ಬೇರೆಯವರ ಜೊತೆ ಎಂದೂ ಹೋಲಿಕೆ ಮಾಡಬಾರದು. ಅದ್ರಲ್ಲೂ ಕೆಲಸದ ಬಗ್ಗೆ ಅಪ್ಪಿತಪ್ಪಿಯೂ ಹೋಲಿಕೆ ಸಲ್ಲದು. ನಮ್ಮ ಶ್ರಮವನ್ನು ಬೇರೆಯವರೊಂದಿಗೆ ಹೋಲಿಸಿದ್ರೆ  ನಮ್ಮ ಗಮನ ತಪ್ಪುತ್ತದೆ. ಕಠಿಣ ಪರಿಶ್ರಮ ಮತ್ತು ಗುರಿ ಬೇರೆಡೆಗೆ ತಿರುಗುತ್ತದೆ. ಇದ್ರಿಂದ ಯಶಸ್ಸು ದೂರ ಹೋಗುತ್ತದೆ.  

ಇತರರ ಸಹಾಯ (Helping Nature) : ನಾವು ಇತರರಿಂದ ಸಹಾಯ ಪಡೆಯಲು ಹಿಂಜರಿಯುತ್ತೇವೆ. ನಾವು ಸ್ವಾವಲಂಬಿ, ನಮಗೆ ಯಾರ ಸಹಾಯವೂ ಅಗತ್ಯವಿಲ್ಲ ಎಂದು ಭಾವಿಸುತ್ತೇವೆ. ಆದ್ರೆ ಎಲ್ಲವನ್ನೂ ಏಕಾಂಗಿಯಾಗಿ ನಿಭಾಯಿಸುವುದು ಸುಲಭವಲ್ಲ. ಮತ್ತೊಂದು ವಿಷ್ಯವೆಂದ್ರೆ ನೀವು ಬೇರೆಯವರ ಸಹಾಯ ಪಡೆದಾಗ, ಅವರ ದೃಷ್ಟಿಕೋನದ ಅರಿವು ನಿಮಗಾಗುತ್ತದೆ. ನೀವು ಹಾಗೂ ಅವರು ಕೆಲಸ ಮಾಡುವ ವಿಧಾನದಲ್ಲಿ ಯಾವ ವ್ಯತ್ಯಾಸವಿದೆ, ನಿಮ್ಮಿಂದ ಏನು ತಪ್ಪಾಗ್ತಿದೆ ಎಂಬುದನ್ನು ನೀವು ಸುಲಭವಾಗು ತಿಳಿಯಬಹುದು. ಆ ನಂತ್ರ ನಿಮ್ಮಲ್ಲಿರುವ ಕೊರತೆಯನ್ನು ನೀಗಿಸುವ ಪ್ರಯತ್ನ ನಡೆಸಬಹುದು.  

ಜ್ಞಾನ ಹಂಚುವುದು (Sharing Knowledge) ಬಹಳ ಮುಖ್ಯ : ಹಿಂದೂ ಧರ್ಮದ ಎಲ್ಲಾ ಪುಸ್ತಕಗಳು, ಧರ್ಮಗ್ರಂಥಗಳು ಮತ್ತು ಎಲ್ಲಾ ನೀತಿಗಳನ್ನು ಓದಿದ್ರೆ ನಿಮಗೆ ಸಂತೋಷ ಮತ್ತು ಜ್ಞಾನದ ಬಗ್ಗೆ ಮಾಹಿತಿ ಸಿಗುತ್ತದೆ. ಆದ್ರೆ ನೀವು ಓದಿ ಆ ಜ್ಞಾನವನ್ನು ಬಚ್ಚಿಟ್ಟರೆ ಪ್ರಯೋಜನವಿಲ್ಲ. ಅದನ್ನು ಹಂಚುವುದು ಬಹಳ ಮುಖ್ಯ. ಕೆಲವರು ತಮ್ಮಲ್ಲಿರುವ ವಿಶೇಷತೆಯನ್ನು ಬೇರೆಯವರಿಗೆ ಹೇಳುವುದಿಲ್ಲ. ಇತರರಿಂದ ಮರೆಮಾಡುತ್ತಾರೆ. ಹಾಗೆ ಮಾಡಿದ್ರೆ  ಅದು ಸ್ವಂತ ಪ್ರಗತಿಗೆ ಅಡ್ಡಿಯಾಗುತ್ತದೆ ಎಂಬುದು ಅವರಿಗೆ ತಿಳಿದಿರೋದಿಲ್ಲ. 

ಅಪ್ಪಿ ತಪ್ಪಿಯೂ ಈ ರಾಶಿಯವರು ಸಾಲ ಕೊಟ್ಟು ಕೋಡಂಗಿ ಆಗ್ಬೇಡಿ

ದೊಡ್ಡ ಹೆಜ್ಜೆಗೆ ಕಾರಣವಾಗುತ್ತೆ ಸಣ್ಣ ಗುರಿ : ಬಹುತೇಕರ ಗುರಿ ಆರಂಭದಲ್ಲಿಯೇ ದೊಡ್ಡದಿರುತ್ತದೆ. ಈ ಗುರಿ ತಲುಪಲು ತುಂಬಾ ಸಮಯ ಬೇಕು. ಹಾಗೆಯೇ ಯಶಸ್ಸು ಸಿಗುವುದು ಸುಲಭವಲ್ಲ. ಹಾಗಾಗಿ ಆರಂಭದಲ್ಲಿ ಸಣ್ಣ ಗುರಿ ಹೊಂದಿರಬೇಕು. ಅದಕ್ಕೆ ಹೆಚ್ಚಿನ ಸಮಯದ ಅಗತ್ಯವಿರುವುದಿಲ್ಲ. ಹಾಗೆಯೇ ಸಣ್ಣ ಗುರಿ ತಲುಪಿದ ನಂತ್ರ ನಿಮ್ಮ ಆತ್ಮವಿಶ್ವಾಸ ಹೆಚ್ಚಾಗುತ್ತದೆ. ದೊಡ್ಡ ಗುರಿಗೆ ಉತ್ಸಾಹ ಹೆಚ್ಚುವ ಜೊತೆಗೆ ಯಾವ ತಪ್ಪು ಮಾಡಬಾರದು ಎಂಬುದು ನಿಮ್ಮ ಅನುಭವಕ್ಕೆ ಬಂದಿರುತ್ತದೆ. 
 

click me!