ದೇವಸ್ಥಾನದಲ್ಲಿ ಸಿಗರೇಟ್ ಸೇದುವ ಪೂಜಾರಿ, ಕೈಮುಗಿಯೋ ಭಕ್ತಿರಿಗೆಲ್ಲ ಕೈಗೆ ಸಿಕ್ಕಷ್ಟು ಹಣ ಕೊಡ್ತಾನೆ; Video Viral

Published : May 12, 2026, 05:13 PM IST
tamil nadu temple distribute coins to devotee

ಸಾರಾಂಶ

Tamil Nadu Temple Distribute Coins To Devotee: ದೇವಸ್ಥಾನದಲ್ಲಿ ಪ್ರಸಾದ ಎಂದು ಕಾಯಿನ್‌ಗಳನ್ನು ನೀಡಲಾಗುತ್ತಿದೆ. ವ್ಯಕ್ತಿಯೋರ್ವ ಸಿಗರೇಟ್‌ ಸೇದುತ್ತಲೇ ಭಕ್ತಾದಿಗಳಿಗೆ ಕಾಯಿನ್ಸ್‌ ನೀಡುತ್ತಿರುವ ವಿಡಿಯೋವೊಂದು ಸೋಶಿಯಲ್‌ ಮೀಡಿಯಾದಲ್ಲಿ ವೈರಲಾಗ್ತಿದೆ. 

ತಮಿಳುನಾಡಿನ ಶ್ರೀ ವರಂ ತರುಮ್ ಮಾಳಿಗೈಪಾರೈ ಕರುಪ್ಪಸಾಮಿ ದೇವಸ್ಥಾನದ ವಿಡಿಯೋವೊಂದು ಭಾರಿ ವೈರಲ್ ಆಗುತ್ತಿದೆ. ಇಲ್ಲಿ ಭಕ್ತರಿಂದ ದೇಣಿಗೆ ಪಡೆಯುವ ಬದಲು, ಅವರಿಗೆ "ಪಿಡಿ ಕಾಸು" ಎಂಬ ಪವಿತ್ರ ನಾಣ್ಯಗಳನ್ನು ಪ್ರಸಾದವಾಗಿ ನೀಡುತ್ತಿರುವುದು ವಿಶೇಷವಾಗಿದೆ.

ನಾಣ್ಯಗಳನ್ನು ಕೊಟ್ಟರು!

ಸೇತಿಯಾತ್ತೋಪು ಸಮೀಪದ ವಿನಾಯಕಪುರಂನಲ್ಲಿರುವ ಈ ದೇವಸ್ಥಾನದಲ್ಲಿ ಲಾರ್ಡ್ ಕರುಪ್ಪಸಾಮಿಗೆ ಸಮರ್ಪಿತವಾದ ರಾತ್ರಿಯ ಆಚರಣೆಯ ಸಮಯದಲ್ಲಿ ಸಾವಿರಾರು ಭಕ್ತರು ಬಂದಿದ್ದರು. ಈ ಆಚರಣೆಯ ವೇಳೆ, ಆಶೀರ್ವಾದ, ಸಮೃದ್ಧಿ ಮತ್ತು ದುಷ್ಟಶಕ್ತಿಗಳಿಂದ ರಕ್ಷಣೆ ಪಡೆಯಲು ಬಂದಿದ್ದ ಭಕ್ತರಿಗೆ ತಮ್ಮ ಕೈಯಾರೆ ನಾಣ್ಯಗಳನ್ನು ವಿತರಿಸಿದರು ಎಂದು ವರದಿಯಾಗಿದೆ.

ಇದು ಹೃದಯಸ್ಪರ್ಶಿ ಸಂಪ್ರದಾಯ!

ಸಾಮಾನ್ಯವಾಗಿ ದೇಣಿಗೆ ಕೇಳುವ ಸಂಪ್ರದಾಯದ ನಡುವೆ, ಈ ಅಸಾಮಾನ್ಯ ಮತ್ತು ಹೃದಯಸ್ಪರ್ಶಿ ಸಂಪ್ರದಾಯವು ಸಾಮಾಜಿಕ ಜಾಲತಾಣಗಳಲ್ಲಿ ಜನರ ಮೆಚ್ಚುಗೆಗೆ ಪಾತ್ರವಾಗಿದ್ದು, ಅನೇಕರು ಭಾವುಕರಾಗಿದ್ದಾರೆ. 

ದೇವರ ವೇಷ ಧರಿಸಿದ್ದ ಭಕ್ತರೊಬ್ಬರು ಹರಿತವಾದ ಕತ್ತಿಯ ಮೇಲೆ ನಡೆಯುತ್ತಾ, ಆಶೀರ್ವಾದ, ಸಮೃದ್ಧಿ ಮತ್ತು ದುಷ್ಟಶಕ್ತಿಗಳಿಂದ ರಕ್ಷಣೆ ಪಡೆಯಲು ಬಂದಿದ್ದ ಭಕ್ತರಿಗೆ ತಮ್ಮ ಕೈಯಾರೆ ನಾಣ್ಯಗಳನ್ನು ವಿತರಿಸಿದರು ಎಂದು ವರದಿಯಾಗಿದೆ.

 

 

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಪ್ರೆಶರ್ ಕುಕ್ಕರ್ ಸೀಟಿ ಬ್ಲಾಕ್ ಆಗಿದೆಯೇ? ತಿಂಗ್ಳಲ್ಲಿ ಎರಡು ಬಾರಿ ಹೀಗೆ ಸ್ವಚ್ಛಗೊಳಿಸಿ
ವಿಜಯ್ ಗೆಳತಿ ತ್ರಿಷಾರನ್ನು ಐಶ್ವರ್ಯಾ ರೈಗೆ ಹೋಲಿಸಿ ನೆಟ್ಟಿಗರು ಹೇಳ್ತಿರೋದೇನು? 20 ವರ್ಷದ ಹಿಂದೆ ಹೀಗ್ ಆಗಿತ್ತಾ?