ಫ್ಯಾನ್‌ನಿಂದ ಬಿಸಿ ಗಾಳಿ ಬರುತ್ತಿದೆಯೇ? ಸ್ವತಃ ಕಂಪನಿಗಳೇ ಒಪ್ಪಿಕೊಂಡ ಈ 'ಐಸ್ ಬೌಲ್ ಹ್ಯಾಕ್' ಟ್ರೈ ಮಾಡಿ

Published : Apr 16, 2026, 12:23 PM IST
Fan

ಸಾರಾಂಶ

Table fan cooling hack: ಬೇಸಿಗೆಯ ಸುಡುವ ಬಿಸಿಲಿಗೆ ಫ್ಯಾನ್ ಹಾಕಿದರೂ ಬಿಸಿ ಗಾಳಿಯೇ ಬರುತ್ತಿದೆಯೇ? ಎಸಿ ಕೊಳ್ಳುವ ಶಕ್ತಿ ಇಲ್ಲ ಅಂತ ಚಿಂತೆಯಾ?, ಡೋಂಟ್ ವರಿ, ನಿಮ್ಮ ಮನೆಯ ಟೇಬಲ್ ಫ್ಯಾನ್ ಅನ್ನೇ 'ಮಿನಿ ಕೂಲರ್' ಆಗಿ ಬದಲಾಯಿಸಬಹುದು. ಅದ್ಹೇಗೆ? ಈ ಅದ್ಭುತ ಹ್ಯಾಕ್ ಬಗ್ಗೆ ಇಲ್ಲಿದೆ ಸಂಪೂರ್ಣ ಮಾಹಿತಿ.

Fan Air Ice Cooling Hack: "ಫ್ಯಾನ್ ಮುಂದೆ ಐಸ್ ತುಂಬಿದ ಬೌಲ್ ಅಥವಾ ಪಾತ್ರೆಯನ್ನು ಇಡುವುದರಿಂದ ತಣ್ಣನೆಯ ಗಾಳಿ ಸಿಗುತ್ತದೆ ಮತ್ತು ಕೋಣೆಯ ಉಷ್ಣಾಂಶವೂ ಕಡಿಮೆಯಾಗುತ್ತದೆ".. ಹೀಗೆ ಹೇಳಿದಾಗ ಇದು ಸುಳ್ಳು ಅಥವಾ ಕೇವಲ ಗಾಳಿ ಮಾತು ಎಂದು ನೀವು ಭಾವಿಸಿದ್ದರೆ ಅದು ತಪ್ಪು. ಈ 'ಹ್ಯಾಕ್' ಅತ್ಯಂತ ಪರಿಣಾಮಕಾರಿಯಾಗಿದೆ. ಸ್ವತಃ ಫ್ಯಾನ್ ತಯಾರಿಸುವ ಕಂಪನಿಗಳೂ ಸಹ ಇದನ್ನು ದೃಢಪಡಿಸಿವೆ. ಟೇಬಲ್ ಫ್ಯಾನ್ ಎದುರು ಐಸ್ ತುಂಬಿದ ಬೌಲ್ ಇಡುವುದರಿಂದ ನಿಮಗೆ ಉತ್ತಮ ಕೂಲಿಂಗ್ ಸಿಗಲಿದೆ.

ಇತ್ತೀಚಿನ ದಿನಗಳಲ್ಲಿ ಭಾರತದ ಅನೇಕ ಮನೆಗಳು, ಅಂಗಡಿಗಳು ಮತ್ತು ಕಚೇರಿಗಳಲ್ಲಿ ಟೇಬಲ್ ಫ್ಯಾನ್‌ಗಳನ್ನು ಬಳಸಲಾಗುತ್ತದೆ. ನಿಮಗೆಲ್ಲರಿಗೂ ಅನುಭವಕ್ಕೆ ಬಂದಿರುವ ಹಾಗೆ ಭೀಕರ ಬಿಸಿಲು ಮತ್ತು ಸುಡುವ ಬೇಸಿಗೆಯಲ್ಲಿ, ಫ್ಯಾನ್ ತಣ್ಣನೆಯ ಗಾಳಿ ಬದಲು ಬಿಸಿ ಗಾಳಿಯನ್ನು ಹೊರಹಾಕಲು ಪ್ರಾರಂಭಿಸುತ್ತದೆ. ಫ್ಯಾನ್ ಬಿಸಿ ಗಾಳಿಯನ್ನು ನೀಡಿದಾಗ ಕೋಣೆಯ ಉಷ್ಣಾಂಶವೂ ಹೆಚ್ಚಾಗುತ್ತದೆ. ಇದರಿಂದ ಸೆಕೆ ಇನ್ನು ಜಾಸ್ತಿಯಾಗುತ್ತದೆ. ಇಂತಹ ಸಮಯದಲ್ಲಿ ಈ 'ಐಸ್ ಬೌಲ್ ಹ್ಯಾಕ್' (Ice Bowl Hack) ನಿಮಗೆ ತುಂಬಾ ಸಹಾಯ ಮಾಡುತ್ತದೆ. ಫ್ಯಾನ್ ಮುಂದೆ ಒಂದು ಪಾತ್ರೆಯಲ್ಲಿ ಐಸ್ ಇಡುವುದರಿಂದ ಗಾಳಿ ತಣ್ಣಗಾಗುತ್ತದೆ. ಇದು ಕೇವಲ ಮಿಥ್ಯೆಯಲ್ಲ, ಬದಲಿಗೆ ಅನೇಕ ಫ್ಯಾನ್ ತಯಾರಿಕಾ ಕಂಪನಿಗಳೇ ಸೂಚಿಸಿರುವ ಪದ್ಧತಿಯಾಗಿದೆ. ಈ ವಿಧಾನವು ಅಗ್ಗದ ದರದ್ದಾಗಿದ್ದು, ಅಳವಡಿಸಲು ಕೂಡ ಸುಲಭವಾಗಿದೆ. ಹಾಗಾದರೆ ಐಸ್‌ ತುಂಬಿದ ಒಂದು ಸಣ್ಣ ಬೌಲ್ ಹೇಗೆ ನಿಮ್ಮ ಕೋಣೆಯ ತಾಪಮಾನವನ್ನು ಹೇಗೆ ಕಡಿಮೆ ಮಾಡುತ್ತದೆ ಎಂದು ತಿಳಿಯೋಣ.

ಒಣ ಹವಾಮಾನದಲ್ಲಿ ಇದು ಹೆಚ್ಚು ಪರಿಣಾಮಕಾರಿ
ಈ ವಿಧಾನವು ವಿಶೇಷವಾಗಿ ಒಣ ಹವಾಮಾನದಲ್ಲಿ (Dry weather) ತುಂಬಾ ಚೆನ್ನಾಗಿ ಕೆಲಸ ಮಾಡುತ್ತದೆ ಮತ್ತು ಶಾಖದಿಂದ ತಕ್ಷಣದ ಸಮಾಧಾನ ನೀಡುತ್ತದೆ. ಇನ್ನು ಉತ್ತಮ ಕೂಲಿಂಗ್ ಬೇಕೆಂದರೆ ಪ್ರೀಮಿಯಂ ರೇಂಜ್‌ನ ಟೇಬಲ್ ಫ್ಯಾನ್‌ಗಳನ್ನು ಬಳಸಬಹುದು.

ಐಸ್ ಬೌಲ್ ಹ್ಯಾಕ್ ಸುಳ್ಳಲ್ಲ

ತೀವ್ರವಾದ ಬೇಸಿಗೆಯಲ್ಲಿ ಸೀಲಿಂಗ್ ಫ್ಯಾನ್ ಆಗಿರಲಿ ಅಥವಾ ಟೇಬಲ್ ಫ್ಯಾನ್ ಆಗಿರಲಿ, ಎಲ್ಲವೂ ಬಿಸಿ ಗಾಳಿಯನ್ನೇ ಹೊರಹಾಕುತ್ತವೆ. ಇದನ್ನು ತಪ್ಪಿಸಲು ನೀವು ಟೇಬಲ್ ಫ್ಯಾನ್ ಮುಂದೆ ಐಸ್ ತುಂಬಿದ ಬೌಲ್ ಇಡಬಹುದು. ಇದರಿಂದ ಕೋಣೆಯಲ್ಲಿ ತಂಪಾದ ಗಾಳಿಯ ಸಂಚಾರ ಉಂಟಾಗುತ್ತದೆ ಮತ್ತು ಉಷ್ಣತೆ ಕಡಿಮೆಯಾಗುತ್ತದೆ. ಇದು ವದಂತಿಯಲ್ಲ ಎಂಬುದು ಸತ್ಯ. 'bestheating' ಮತ್ತು ಫ್ಯಾನ್ ತಯಾರಿಸುವ 'alfafans' ನಂತಹ ಕಂಪನಿಗಳು ಕೂಡ ತಮ್ಮ ಲೇಖನಗಳಲ್ಲಿ ಈ ಉಪಾಯವನ್ನು ಸರಿ ಎಂದು ಹೇಳಿವೆ.

ಟೇಬಲ್ ಫ್ಯಾನ್ ತಂತ್ರಜ್ಞಾನ ಹೇಗೆ ಕೆಲಸ ಮಾಡುತ್ತದೆ?
ಫ್ಯಾನ್ ಮುಂದೆ ಐಸ್ ಇಟ್ಟರೆ ಗಾಳಿ ಹೇಗೆ ತಣ್ಣಗಾಗುತ್ತದೆ ಎಂದು ತಿಳಿಯುವ ಮೊದಲು, ಫ್ಯಾನ್ ಹೇಗೆ ಕೆಲಸ ಮಾಡುತ್ತದೆ ಎಂದು ತಿಳಿಯಬೇಕು. ಏಕೆಂದರೆ ಟೇಬಲ್ ಫ್ಯಾನ್‌ನಲ್ಲಿ ತಿರುಗುವ ಬ್ಲೇಡ್‌ಗಳಿರುತ್ತವೆ. ಇವು ಕೋಣೆಯ ಗಾಳಿಯನ್ನು ಚಲಿಸುವಂತೆ ಮಾಡುತ್ತವೆಯೇ ಹೊರತು, ಗಾಳಿಯನ್ನು ತಂಪು ಮಾಡುವುದಿಲ್ಲ. ಬದಲಿಗೆ, ಈ ಗಾಳಿಯು ನಮ್ಮ ದೇಹದ ಬೆವರನ್ನು ಆರಿಸುವ ಮೂಲಕ ನಮಗೆ ತಂಪಿನ ಅನುಭವ ನೀಡುತ್ತದೆ.

ಐಸ್ ಬೌಲ್ ಹೇಗೆ ತಣ್ಣನೆಯ ಗಾಳಿ ನೀಡುತ್ತದೆ?

ಫ್ಯಾನ್ ಗಾಳಿಯನ್ನು ತಂಪು ಮಾಡಲು ಐಸ್ ಬಳಸುವುದು ಸುಲಭದ ಹಾದಿ. ಗಾಳಿಯು ಐಸ್ ಮೇಲಿಂದ ಹಾದು ಹೋದಾಗ, ಅದು ತುಂಬಾ ತಣ್ಣಗಾಗುತ್ತದೆ. ನಂತರ ಅದೇ ತಂಪಾದ ಗಾಳಿಯನ್ನು ಫ್ಯಾನ್ ಕೋಣೆಯಾದ್ಯಂತ ಹರಡುತ್ತದೆ. ಈ ಕಾರಣದಿಂದ ಫ್ಯಾನ್ ಎದುರು ಐಸ್ ಇಟ್ಟರೆ ತಂಪು ಹೆಚ್ಚಾಗುತ್ತದೆ.

ಐಸ್ ಬೌಲ್ ಅನ್ನು ಎಲ್ಲಿ ಇಡಬೇಕು?
ಐಸ್ ತುಂಬಿದ ಬೌಲ್ ಅನ್ನು ನೇರವಾಗಿ ಫ್ಯಾನ್‌ನ ಎದುರು ಇರಿಸಿ. ಫ್ಯಾನ್‌ನಿಂದ ಬರುವ ಗಾಳಿಯ ಹರಿವು ಐಸ್ ಮೇಲಿಂದಲೇ ಹಾದುಹೋಗುವಂತೆ ನೋಡಿಕೊಳ್ಳಿ. ಗಾಳಿಯು ಐಸ್‌ನ ಸಂಪರ್ಕಕ್ಕೆ ಬಂದ ತಕ್ಷಣ ಅದು ತಂಪಾಗುತ್ತದೆ ಮತ್ತು ನಿಮಗೆ ತಂಪನೆಯ ಗಾಳಿಯ ಅನುಭವ ನೀಡುತ್ತದೆ. ಬೌಲ್‌ನಲ್ಲಿ ಸಾಕಷ್ಟು ಐಸ್ ಇರಲಿ, ಅದು ದೀರ್ಘಕಾಲ ಕರಗದೆ ಬರುವಂತಿರಲಿ. 

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

Silver Bracelet: 20+ ವಯಸ್ಸಿನ ಯುವತಿಯರಿಗಾಗಿ ಫ್ಯಾನ್ಸಿ ಸಿಲ್ವರ್ ಬ್ರೇಸ್ಲೆಟ್ ಡಿಸೈನ್ಸ್!
Bangle Designs: ಕೆಂಪು-ಮೆರೂನ್ ಬಳೆಗಳ 5 ಡಿಸೈನ್‌ಗಳು: ಪೂಜೆಗೆ ಮಸ್ತ್ ಆಗಿ ಕಾಣಿಸುತ್ತೆ!