'ಆಂಟಿ' ಎಂದು ಕರೆವ ಮುನ್ನ ಎಚ್ಚರ! 2 ಲಕ್ಷ ರೂ. ಪರಿಹಾರಕ್ಕೆ ಕೋರ್ಟ್​ ಆದೇಶ- ಏನಿದು ಕೇಸ್​?

Published : Apr 15, 2026, 08:18 PM IST
Court

ಸಾರಾಂಶ

 ಭಾರತೀಯ ಮೂಲದ ಮಹಿಳೆಯೊಬ್ಬರು, ಸಹೋದ್ಯೋಗಿ 'ಆಂಟಿ' ಎಂದು ಕರೆದಿದ್ದಕ್ಕೆ ಕಿರುಕುಳದ ಕೇಸ್ ದಾಖಲಿಸಿದ್ದರು. ನ್ಯಾಯಾಲಯವು ಇದನ್ನು ವಯಸ್ಸು ಮತ್ತು ಲಿಂಗದ ಆಧಾರದ ಕಿರುಕುಳವೆಂದು ಪರಿಗಣಿಸಿ, ಮಹಿಳೆಗೆ ಸುಮಾರು ಎರಡು ಲಕ್ಷ ರೂಪಾಯಿ ಪರಿಹಾರ ನೀಡುವಂತೆ ತೀರ್ಪು ನೀಡಿದೆ.

ಕೆಲವರಿಗೆ ಒಂದು ಚಾಳಿ ಇರುತ್ತದೆ. ಅದರಲ್ಲಿಯೂ ಬೆಂಗಳೂರಿನಂಥ ನಗರಗಳಲ್ಲಿ ಇದು ಮಾಮೂಲು. ತಮಗಿಂತ ವಯಸ್ಸಿನಲ್ಲಿ ಹಿರಿಯರಾಗಿರಲಿ, ಕಿರಿಯರಾಗಿರಲಿ, ಹೆಂಗಸರನ್ನು ಕಂಡ ತಕ್ಷಣ ಆಂಟಿ ಎಂದು ಕರೆಯುವುದು. ಇದು ಗೌರವಸೂಚಕ ಎಂದುಕೊಂಡು ಕರೆಯುವವರೂ ಕೆಲವರಿದ್ದರೆ, ತಮ್ಮ ವಯಸ್ಸು ಚಿಕ್ಕದು ಎಂದು ತೋರಿಸುವುದಕ್ಕಾಗಿ ಕರೆಯುವವರು ಇನ್ನು ಕೆಲವರು. ಗಂಡಸರನ್ನು ಅಂಕಲ್​ ಎನ್ನದಿದ್ದರೂ ಹೆಂಗಸರನ್ನು ಕಂಡಾಕ್ಷಣ ಆಂಟಿ ಎನ್ನುವುದಕ್ಕೆ ಇದಾಗಲೇ ಹಲವಾರು ಮಂದಿ ಕೆಂಗಣ್ಣು ಬೀರುವುದು ಇದು. ಸೋಷಿಯಲ್​ ಮೀಡಿಯಾಗಳಲ್ಲಿ ಈ ಬಗ್ಗೆ ಆಗಾಗ್ಗೆ ಸಾಕಷ್ಟು ಚರ್ಚೆಯೂ ಆಗಿರುತ್ತದೆ. ಚಿಕ್ಕವರು ಆಂಟಿ ಎಂದರೇನೇ ಸಹಿಸದವರೂ ಇದ್ದಾರೆ, ಅದರಲ್ಲಿ ಅಪ್ಪ, ಅಜ್ಜನ ವಯಸ್ಸಿನವರೂ ಆಂಟಿ ಎಂದಾಗ ಹಲವರಿಗೆ ನಖಶಿಖಾಂತ ಉರಿ ಹತ್ತುವುದು ಇದೆ.

ಎರಡು ಲಕ್ಷ ರೂ. ಪರಿಹಾರ

ಇದೀಗ ಹೀಗೆಯೇ ಆಂಟಿ ಎಂದು ಕರೆದುದಕ್ಕಾಗಿ ಆಸಾಮಿಯೊಬ್ಬ ಮಹಿಳೆಗೆ ಸುಮಾರು ಎರಡು ಲಕ್ಷ ರೂಪಾಯಿಗಳ ಪರಿಹಾರ ನೀಡಬೇಕಾಗಿ ಬಂದಿದೆ. ಹೀಗೆ ಕಂಡಕಂಡವರನ್ನು ಆಂಟಿ ಎಂದು ಕರೆಯುವುದು ಕಿರುಕುಳಕ್ಕೆ ಸಮಾನ ಎಂದಿದೆ ಕೋರ್ಟ್​. ಆದ್ದರಿಂದ ಆಂಟಿ ಎಂದು ಕಂಡಕಂಡವರನ್ನು ಕರೆಯುವ ಮುನ್ನ ಸ್ವಲ್ಪ ಎಚ್ಚರಿಕೆಯಿಂದ ಇರುವುದು ಒಳಿತು. ಹಾಗೆಂದು ಈ ಕೇಸ್​ ನಡೆದಿರುವುದು ಭಾರತದಲ್ಲಿ ಅಲ್ಲ ಬಿಡಿ, ಅಷ್ಟರಮಟ್ಟಿಗೆ 'ಆಂಟಿ' ಪ್ರಿಯರು ಸಮಾಧಾನ ಮಾಡಿಕೊಳ್ಳಬಹುದು. ಆದರೆ ಹಾಗೆಂದು ಖುಷಿಪಡಬೇಡಿ. ಏಕೆಂದರೆ ಈ ಕೇಸ್​ನಲ್ಲಿ ಪರಿಹಾರ ಪಡೆದುಕೊಂಡಿರುವವಳು ಭಾರತದವಳು! ತನ್ನನ್ನು ಆಂಟಿ ಎಂದು ಕರೆಯಬೇಡ ಎಂದು ಈ ಹಿಂದೆ ಹೇಳಿದ್ದರೂ ಆತ ಅದೇ ಶಬ್ದ ಹೇಳುತ್ತಿದ್ದುದರಿಂದ ಕೇಸ್​ ದಾಖಲಿಸಿದ್ದಳು 61ರ ಹರೆಯದ ಮಹಿಳೆ.

ನಡೆದದ್ದೆಲ್ಲಿ?

ಇದು ನಡೆದಿರುವುದು ಲಂಡನ್​ನಲ್ಲಿ. ರಾಷ್ಟ್ರೀಯ ಆರೋಗ್ಯ ಸೇವೆಯಲ್ಲಿ (NHS) ಕೆಲಸ ಮಾಡುತ್ತಿರುವ ಭಾರತೀಯ ಮೂಲದ ಆರೋಗ್ಯ ಸಹಾಯಕಿಯೊಬ್ಬಳು, ನರ್ಸ್​ ಒಬ್ಬ ತನ್ನನ್ನು ಆಂಟಿ ಎಂದು ಕರೆದುದ್ದಕ್ಕೆ ಅಲ್ಲಿಯ ಕೋರ್ಟ್​ನಲ್ಲಿ ಕಿರುಕುಳದ ಕೇಸ್​ ದಾಖಲಿಸಿ ಗೆದ್ದಿದ್ದಾಳೆ. ವ್ಯಾಟ್‌ಫೋರ್ಡ್ ಉದ್ಯೋಗ ನ್ಯಾಯಮಂಡಳಿ ನ್ಯಾಯಾಧೀಶ ಜಾರ್ಜ್ ಅಲಿಯಟ್ ಅವರು, ವಯಸ್ಸು ಮತ್ತು ಲಿಂಗದ ಆಧಾರದ ಮೇಲೆ ಕಿರುಕುಳಕ್ಕೊಳಗಾಗಿದ್ದಾರೆ ಎಂದು ತೀರ್ಪು ನೀಡಿದ್ದಾರೆ. "ಭಾವನೆಗಳಿಗೆ ಘಾಸಿ" ಮಾಡಿದ್ದಕ್ಕಾಗಿ ಒಟ್ಟು 1,425.15 ಪೌಂಡ್‌ಗಳ ಪರಿಹಾರವನ್ನು ಪಾವತಿಸಲು ವೆಸ್ಟ್ ಲಂಡನ್ NHS ಟ್ರಸ್ಟ್‌ಗೆ ನಿರ್ದೇಶಿಸಿದ್ದಾರೆ. ಈ ಪರಿಹಾರವನ್ನು ಆಂಟಿ ಎಂದು ಕರೆದ ನರ್ಸ್​ ಮೂಲಕ ವಸೂಲಿ ಮಾಡುವುದು ಸದ್ಯ ಟ್ರಸ್ಟ್​ಗೆ ಇರುವ ಕೆಲಸ.

ಕಿರುಕುಳಕ್ಕೆ ಸಮ

ಕಳೆದ ವರ್ಷ ಈ ಕೇಸ್​ ದಾಖಲಾಗಿತ್ತು. ಅಷ್ಟಕ್ಕೂ ಕೇಸ್​ ದಾಖಲು ಮಾಡಿರುವುದು 61 ವರ್ಷದ ಮಹಿಳೆ ಎಸ್ಟೀವ್ಸ್. ಇದರ ಸತ್ಯಾಸತ್ಯತೆ ಪರಿಶೀಲಿಸಲು ಮೂವರು ನ್ಯಾಯಾಧೀಶರ ಸಮಿತಿ ನೇಮಕ ಮಾಡಲಾಗಿತ್ತು. "ಆಂಟಿ" ಎಂಬುದು ಘಾನಾದ ಸಂಸ್ಕೃತಿಯಲ್ಲಿ ವಯಸ್ಸಾದವರಿಗೆ ಗೌರವದ ಪದವಾಗಿದೆ ಎಂದು ಸಮಿತಿ ಒಪ್ಪಿಕೊಂಡಿದೆ. ಆದಾಗ್ಯೂ, ಸ್ಟಾಫ್ ನರ್ಸ್ ವಾರ್ಡ್‌ನಲ್ಲಿ ತಂಡಗಳನ್ನು ಮುನ್ನಡೆಸುವ ಜವಾಬ್ದಾರರಾಗಿದ್ದಾರೆ. ಆದ್ದರಿಂದ ಅವರು ಇಂಥ ಹೇಳಿಕೆಗಳನ್ನು ನೀಡಿರುವುದು ತಪ್ಪು ಎನ್ನುವುದಾಗಿ ತೀರ್ಪು ನೀಡಲಾಗಿದೆ. "ಚಾರ್ಲ್ಸ್ ಒಪ್ಪೋಂಗ್ ಅವರ ಉದ್ದೇಶವು ಬಹುಶಃ ಹಾಸ್ಯದ ಆಕ್ರಮಣಕಾರಿ ಪ್ರಯತ್ನವಾಗಿದೆ ಎಂದು ನಾವು ಕಂಡುಕೊಂಡಿದ್ದೇವೆ" ಎಂದು ತೀರ್ಪಿನಲ್ಲಿ ಉಲ್ಲೇಖಿಸಲಾಗಿದೆ.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಪ್ರೀತಿಗಾಗಿ ಪ್ರಾಣ ಬಿಟ್ಟ ಸತ್ಯವ್ವ: 12ನೇ ವಯಸ್ಸಿನಲ್ಲೇ ಮದುವೆ ಫಿಕ್ಸ್ ಮಾಡಿ ಮಗಳ ಬದುಕನ್ನೇ ಕಸಿದುಕೊಂಡ ಪೋಷಕರು
25ರ ಹರೆಯದ ಹುಡುಗನ ಪದೇ ಪದೇ ಕರಿತಿದ್ದ ಆಂಟಿ: ಮರಕ್ಕೆ ಕಟ್ಟಿ ಹೊಡೆದು ಸಾಯಿಸಿದ ಆಂಟಿ ಕಡೆಯವರು