ವೆಜ್ ಎನಿಸುವ ಈ ಆಹಾರ ಸಸ್ಯಾಹಾರವಲ್ಲ...!

By Web DeskFirst Published Apr 4, 2019, 4:42 PM IST
Highlights

ಶುದ್ಧ ಸಸ್ಯಾಹಾರ ಎಂದುಕೊಂಡು ತಿನ್ನುವ ಆಹಾರವೂ ಕೆಲವು ಸಸ್ಯಾಹಾರವಾಗಿರುವುದಿಲ್ಲ. ಅಂಥ ಆಹಾರಗಳು ಯಾವವು? ಕೆಲವು ತೈಲ, ಆಹಾರಗಳು ಸಸ್ಯಾಹಾರವಲ್ಲ ಏಕೆ?

ಸಸ್ಯಾಹಾರವೆಂದು ಸೇವಿಸುವ ಕೆಲವು ಆಹಾರಗಳು ಮಾಂಸಾಹಾರವಾಗಿರುತ್ತದೆ. ಯಾವ ಆಹಾರಗಳಲ್ಲಿ ಮಾಂಸಾಹಾರದ ಅಂಶಗಳಿವೆ?

ಸ್ಲಿಮ್ ಆಗೋದಾದರೆ ಈರುಳ್ಳಿಯಲ್ಲಿದೆ ಮದ್ದು?

ಅಡುಗೆ ಎಣ್ಣೆ: ಯಾವ ಎಣ್ಣೆಯಲ್ಲಿ ಒಮೇಗಾ 3 ಫ್ಯಾಟಿ ಆ್ಯಸಿಡ್ ಇವೆ ಅಥವಾ ವಿಟಮಿನ್ ಡಿ ಇದೆ ಎಂದು ಕಂಪನಿಗಳು ಹೇಳುತ್ತವೆ. ಆದರೆ ಆ ಎಣ್ಣೆ ಪೂರ್ತಿಯಾಗಿ ಸಸ್ಯಾಹಾರವಾಗಿಲ್ಲ. ಈ ಎಣ್ಣೆಯಲ್ಲಿ ಕುರಿಯಲ್ಲಿ ಸಿಗುವ ಲೆನೊಲಿನ್ ಎಂಬ ಅಂಶವಿರುತ್ತದೆ.

ರಿಫೈನ್ಡ್ ಸಕ್ಕರೆ: ನೀವು ರಿಫೈನ್ಡ್ ಸಕ್ಕರೆ ಶುಚಿ ಮಾಡಲು ನ್ಯಾಚುರಲ್ ಕಾರ್ಬನ್ ಬಳಸುತ್ತಾರೆ. ಇದನ್ನು ಜಾನುವಾರಿನ ಮೂಳೆಯಿಂದ ತಯಾರಿಸಲಾಗುತ್ತದೆ.

ಜಾಮ್ ಮತ್ತು ಜೆಲ್ಲಿ: ಜಾಮ್ ಮತ್ತು ಜೆಲ್ಲಿ ತಯಾರಿಸಲು ಮಾಂಸಾಹಾರವಾದ ಜಿಲೆಟಿನ್ ಬಳಸಲಾಗುತ್ತದೆ.

 

ಸೂಪ್: ರೆಸ್ಟೋರೆಂಟ್‌ನಲ್ಲಿ ಸೇವಿಸುವ ವೆಜ್ ಸೂಪಿನಲ್ಲಿ ಮಾಂಸಾಹಾರವಿರುತ್ತದೆ. ಪೂರ್ತಿಯಾಗಿ ಅಲ್ಲದೇ ಹೋದರೂ, ಅದರ ಕೆಲವು ಉತ್ಪನ್ನಗಳನ್ನು ಬಳಸುತ್ತಾರೆ.

 

ಬಿಯರ್, ವೈನ್: ಈ ಶರಾಬು ಶುದ್ಧೀಕರಿಸಲು ಇಂಜಿನ್ಗ್ಲಾಸ್ ಬಳಸುತ್ತಾರೆ. ಇದನ್ನು ಮೀನಿನ ಬ್ಲೆಡರ್‌ನಿಂದ ತಯಾರಿಸುತ್ತಾರೆ.

click me!