ಮಾರ್ಗ ಮಧ್ಯೆ ಪೆಟ್ರೋಲ್, ಡೀಸೆಲ್​​ ಖಾಲಿಯಾಯ್ತಾ? ತೊಂದರೆಗೆ ಸಿಲುಕಿದ್ದೀರಾ? ಚಿಂತೆ ಬಿಡಿ- ಹೀಗೆ ಮಾಡಿ

Published : Aug 30, 2026, 04:35 PM IST
Toll Free Number

ಸಾರಾಂಶ

ರಾಷ್ಟ್ರೀಯ ಹೆದ್ದಾರಿಗಳಲ್ಲಿ ಪ್ರಯಾಣಿಸುವಾಗ ಪೆಟ್ರೋಲ್ ಖಾಲಿಯಾಗುವುದು, ವಾಹನ ಕೆಟ್ಟು ನಿಲ್ಲುವುದು ಅಥವಾ ವೈದ್ಯಕೀಯ ತುರ್ತುಸ್ಥಿತಿಗಳಂತಹ ಸಮಸ್ಯೆಗಳು ಎದುರಾಗಬಹುದು. ಇಂತಹ ಸಂದರ್ಭಗಳಲ್ಲಿ, ಭಾರತೀಯ ಹೆದ್ದಾರಿ ಪ್ರಾಧಿಕಾರದ (NHAI) 24/7 ಟೋಲ್-ಫ್ರೀ ಸಹಾಯವಾಣಿ 1033 ಕ್ಕೆ ಕರೆ ಮಾಡಿ ತಕ್ಷಣದ ಸಹಾಯವನ್ನು ಪಡೆಯಬಹುದು.

ಎಷ್ಟೋ ಸಂದರ್ಭಗಳಲ್ಲಿ ಮಾರ್ಗ ಮಧ್ಯೆಯೇ ಪೆಟ್ರೋಲ್​, ಡೀಸೆಲ್​ ಖರ್ಚಾಗುವುದು ಇದೆ. ಅದರಲ್ಲಿಯೂ ಬೇರೆ ಊರುಗಳಿಗೆ ಹೋಗುವ ಸಂದರ್ಭಗಳಲ್ಲಿ ಅದರ ಅಂತರಕ್ಕೆ ತಕ್ಕಂತೆ, ಪೆಟ್ರೋಲ್​, ಡೀಸೆಲ್​ಗಳನ್ನು ಗಾಡಿಗಳಿಗೆ ತುಂಬಿಸಿಕೊಳ್ಳಬೇಕು ಎನ್ನೋದು ನಿಜವಾದರೂ, ಕೆಲವು ಸಂದರ್ಭಗಳಲ್ಲಿ, ಈಗ ಇರುವಷ್ಟು ಪೆಟ್ರೋಲ್​, ಡೀಸೆಲ್​ ಸಾಕು ಎಂದುಕೊಂಡೋ, ಅಥವಾ ದಾರಿ ಮಧ್ಯೆ ಹಾಕಿಸಿದರಾಯಿತು ಬಿಡು ಎಂದು ಹೋಗಿ ಎಲ್ಲಿಯೂ ಬಂಕ್​ಗಳು ಸಿಗದಾಗಲೋ ಮಾರ್ಗ ಮಧ್ಯೆಯೇ ಖರ್ಚಾಗುವುದು ಇದೆ. ಅಂಥ ಸಂದರ್ಭಗಳಲ್ಲಿ ಎಲ್ಲೋ ದೂರದ ಊರುಗಳ ಮಧ್ಯೆ ಪರದಾಡುವ ಸ್ಥಿತಿ ಬಂದುಬಿಡುತ್ತದೆ.

ಗೂಗಲ್​ ಮ್ಯಾಪ್​ ಮೂಲಕ ಪೆಟ್ರೋಲ್​ ಬಂಕ್​ ಎಲ್ಲಿದೆ ಎಂದು ನೋಡಿದಾಗ, ಅದು ಎಷ್ಟೋ ಕಿಲೋ ಮೀಟರ್​ ದೂರ ಇದೆ ಎಂದು ತಿಳಿದರೆ ಏನು ಮಾಡುತ್ತೀರಾ? ಮಾರ್ಗ ಮಧ್ಯೆ ಯಾರೂ ಸಹಾಯಕ್ಕೆ ಬರುವುದಿಲ್ಲ ಎನ್ನುವುದು ದಿಟವಾದರೂ, ನಿಮಗಾಗಿ ಸಹಾಯ ಮಾಡುವವರು ಇಲ್ಲಿದ್ದಾರೆ. ಅದೇ ರಾಷ್ಟ್ರೀಯ ಹೆದ್ದಾರಿ ಸಹಾಯವಾಣಿ. ಇದು ಪೆಟ್ರೋಲ್​, ಡೀಸೆಲ್​ ಸಮಸ್ಯೆಗೆ ಮಾತ್ರವಲ್ಲದೇ, ದಾರಿ ಮಧ್ಯೆ ಏನೇ ಸಮಸ್ಯೆಯಾದರೂ ಈ ಸಹಾಯವಾಣಿಗೆ ನೀವು ಕರೆ ಮಾಡಬಹುದಾಗಿದೆ.

ಏನಿದು ಸಹಾಯವಾಣಿ?

ಭಾರತೀಯ ಹೆದ್ದಾರಿ ಪ್ರಾಧಿಕಾರ (NHAI) ವಿಶೇಷ ಸಹಾಯವಾಣಿಯನ್ನು ಹೊಂದಿದೆ. ಅದು 1033. ಹೆದ್ದಾರಿಗಳಲ್ಲಿ ಯಾವುದೇ ತುರ್ತು ಸಂದರ್ಭದಲ್ಲಿ ನೀವು ಈ ಸಂಖ್ಯೆಗೆ ಕರೆ ಮಾಡಿ ಸಹಾಯ ಮಾಡಬಹುದು. ಇದು 24/7 ಟೋಲ್-ಫ್ರೀ ಸಂಖ್ಯೆಯಾಗಿದ್ದು, ರಸ್ತೆ ಸುರಕ್ಷತೆ ಮತ್ತು ಸಾರ್ವಜನಿಕ ಯೋಗಕ್ಷೇಮಕ್ಕೆ ಆದ್ಯತೆ ನೀಡಲು ವಿನ್ಯಾಸಗೊಳಿಸಲಾಗಿದೆ. ಕಳಪೆ ರಸ್ತೆ ಪರಿಸ್ಥಿತಿಗಳು, ಕೆಟ್ಟ ಹವಾಮಾನ ಮತ್ತು ಇತರ ಸಮಸ್ಯೆಗಳಿಂದಾಗಿ ಹೆಚ್ಚುತ್ತಿರುವ ರಸ್ತೆ ಅಪಘಾತಗಳು ಮತ್ತು ಸಾವುನೋವುಗಳನ್ನು ಗಮನದಲ್ಲಿಟ್ಟುಕೊಂಡು ಸಹಾಯವಾಣಿಯನ್ನು ಪ್ರಾರಂಭಿಸಲಾಗಿದೆ. 1033 ಹೆದ್ದಾರಿ ಸಹಾಯವಾಣಿ ತ್ವರಿತ ಪ್ರತಿಕ್ರಿಯೆ, ಜೀವ ಉಳಿಸುವ ಸ್ಥಿರೀಕರಣ ಮತ್ತು ತ್ವರಿತ ಆಸ್ಪತ್ರೆ ಸಾರಿಗೆಯನ್ನು ಖಚಿತಪಡಿಸುತ್ತದೆ, ಇದು ಹೆಚ್ಚಿನ ಪ್ರಮಾಣದಲ್ಲಿ ಬದುಕುಳಿಯುವಿಕೆಯ ಪ್ರಮಾಣವನ್ನು ಹೆಚ್ಚಿಸುತ್ತದೆ.

ಯಾವ ಸಮಸ್ಯೆಗಳಿಗೆ ಸಹಕಾರಿ?

ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸಿಲುಕಿಕೊಂಡಿರುವ ವಾಹನಗಳಿಗೆ ಇಂಧನವನ್ನು ಒದಗಿಸಲು, ಸ್ಥಗಿತ ಸಹಾಯ ಮತ್ತು 24×7 ಹೆದ್ದಾರಿ ತುರ್ತು ಸಹಾಯವನ್ನು ಒದಗಿಸಲು ಸಹಾಯವಾಣಿ ಉಪಯುಕ್ತವಾಗಿದೆ. ಇದಕ್ಕೆ ಹೆಚ್ಚುವರಿಯಾಗಿ, ಇದು ವೈದ್ಯಕೀಯ ತುರ್ತು ಸಂದರ್ಭದಲ್ಲಿ ಆಂಬ್ಯುಲೆನ್ಸ್ ಸೇವೆಗಳನ್ನು ಸಹ ಒದಗಿಸುತ್ತದೆ. ಪ್ರಮುಖ ಖಾಸಗಿ ತುರ್ತು ವೈದ್ಯಕೀಯ ಸೇವೆ (EMS) ಆಗಿರುವ Zenplus, ಆಧುನಿಕ ತಂತ್ರಜ್ಞಾನದೊಂದಿಗೆ ಸುಸಜ್ಜಿತವಾದ ಆಂಬ್ಯುಲೆನ್ಸ್‌ಗಳ ವಿಶಾಲ ಸಮೂಹದೊಂದಿಗೆ ಈ ಸೇವೆಯನ್ನು ನಿರ್ವಹಿಸುತ್ತದೆ, ಇದು ಅತ್ಯಂತ ಅಗತ್ಯವಿದ್ದಾಗ ಉತ್ತಮ ಗುಣಮಟ್ಟದ ವೈದ್ಯಕೀಯ ಆರೈಕೆಯನ್ನು ನೀಡುತ್ತದೆ.

ಹೆದ್ದಾರಿ ಸಹಾಯವಾಣಿ ಸೇವೆಯನ್ನು ಪಡೆಯಲು ಕ್ರಮಗಳು

ನೀವು ಸಹಾಯವನ್ನು ಪಡೆಯಬಹುದಾದ ಕೆಲವು ಸರಳ ಹಂತಗಳು ಇಲ್ಲಿವೆ.

ಹೆದ್ದಾರಿಗಳಲ್ಲಿ ತಕ್ಷಣದ ಸಹಾಯಕ್ಕಾಗಿ 1033 ರಾಷ್ಟ್ರೀಯ ಹೆದ್ದಾರಿ ಟೋಲ್-ಫ್ರೀ ಸಂಖ್ಯೆಗೆ ಕರೆ ಮಾಡಿ.

ಅಪಘಾತ, ವಾಹನ ಸ್ಥಗಿತ ಅಥವಾ ಇನ್ನಾವುದೇ ತುರ್ತು ಹೆದ್ದಾರಿ ಸಮಸ್ಯೆಯಾಗಿದ್ದರೂ, ಆಪರೇಟರ್‌ನೊಂದಿಗೆ ಮಾತನಾಡಿ ಮತ್ತು ತುರ್ತು ಪರಿಸ್ಥಿತಿಯನ್ನು ಸ್ಪಷ್ಟ ಪದಗಳಲ್ಲಿ ವಿವರಿಸಿ.

ನಿಮ್ಮ ತುರ್ತು ಪರಿಸ್ಥಿತಿಯ ಆಧಾರದ ಮೇಲೆ, ನಿಮಗೆ ಅಗತ್ಯವಿರುವ ಸಹಾಯಕ್ಕೆ ನೀವು ಸಂಪರ್ಕ ಹೊಂದುತ್ತೀರಿ - ಆಂಬ್ಯುಲೆನ್ಸ್, ಅಗ್ನಿಶಾಮಕ ಇಲಾಖೆ ಅಥವಾ ಪೊಲೀಸ್.

ತಂಡವು ನಿಮ್ಮ ಸ್ಥಳಕ್ಕೆ ತಕ್ಷಣ ಸಹಾಯವನ್ನು ನಿಯೋಜಿಸುತ್ತದೆ.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಎವರೆಸ್ಟ್​, LG ಇಂಗಿನ ಪೌಡರ್​ ಭಾರಿ ಡೇಂಜರ್​: ಎರಡೂ ಕಂಪೆನಿಯನ್ನು ಬ್ಯಾನ್​ ಮಾಡಿದ FSSAI
ಹೆಚ್ಚು ಕೆಲಸವಿಲ್ಲ, ಮಸಾಲೆಗಳು ಬೇಕಿಲ್ಲ, 10 ನಿಮಿಷದಲ್ಲಿ ರೆಡಿ ಮಾಡಿ ರುಚಿ ರುಚಿಯಾದ ತವಾ ಫಿಶ್ ಫ್ರೈ