ಟ್ರೆಂಡ್ ಹುಚ್ಚು…ಸ್ಟ್ರಾಬೆರಿ ಬಾಯಿಗೆ ತುಂಬಿ ನುಂಗ್ತಿದ್ದಾರೆ ಮಹಿಳೆಯರು!

By Suvarna NewsFirst Published Feb 8, 2024, 12:14 PM IST
Highlights

ಸಾಮಾಜಿಕ ಜಾಲತಾಣದಲ್ಲಿ ಹೆಸರು ಮಾಡ್ಬೇಕು ಎನ್ನುವ ಕಾರಣಕ್ಕೆ ಹೊಸ ಹೊಸ ಪ್ರಯತ್ನ ನಡೆಯುತ್ತದೆ. ಕೆಲವೊಂದು ವಿಚಿತ್ರವಾಗಿದ್ರೂ ವೈರಲ್ ಆಗುತ್ವೆ. ಈಗ ಮಹಿಳೆಯರಿಗಾಗಿ ಹೊಸ ಚಾಲೆಂಜ್ ಸುದ್ದಿ ಮಾಡ್ತಿದೆ. 

ಸಾಮಾಜಿಕ ಜಾಲತಾಣದಲ್ಲಿ ದಿನಕ್ಕೊಂದು ಟ್ರೆಂಡ್ ವೈರಲ್ ಆಗ್ತಿರುತ್ತದೆ. ಈಗ ಟ್ರೆಂಡ್ ಆಗ್ತಿರುವ ವಿಡಿಯೋ ಅಚ್ಚರಿ ಹುಟ್ಟಿಸುವಂತಿದೆ. ಮಹಿಳೆಯರಿಗಾಗಿ ಈ ಚಾಲೆಂಜ್ ಶುರುವಾಗಿದೆ. ಮಹಿಳೆಯರು ಚಾಲೆಂಜ್ ಸ್ವೀಕರಿಸಿ ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ತಿದ್ದಾರೆ. ಇದು ಸ್ಟ್ರಾಬೆರಿ ಚಾಲೆಂಜ್. ಮಹಿಳೆಯರು ಮೊದಲು ಸ್ಟ್ರಾಬೆರಿಯನ್ನು ಬಾಯಲ್ಲಿ ತುಂಬಿಕೊಳ್ತಾರೆ. ನಂತ್ರ ಅದನ್ನು ಜಗಿಯದೆ ನಂಗುತ್ತಾರೆ. ಚೀನಾದಲ್ಲಿ ಈ ಟ್ರೆಂಡ್ ವೈರಲ್ ಆಗಿದೆ. ಜನವರಿ 11 ರಿಂದ ಈ ಚಾಲೆಂಜ್ ಪ್ರಾರಂಭವಾಗಿದೆ.

ಚೀನಾದ ಇನ್ಸ್ಟಾಗ್ರಾಮ್ (Instagram) ತರಹದ ವೇದಿಕೆ Xiaohongshu ನಲ್ಲಿ ಪೋಸ್ಟ್ ಮಾಡಲಾಗಿದೆ. ಇದ್ರಲ್ಲಿ ಹೇಗೆ ಸ್ಟ್ರಾಬೆರಿಯನ್ನು ನುಂಗಬೇಕು ಎನ್ನುವ ಬಗ್ಗೆ ಹೇಳಲಾಗಿದೆ. @Aqing ಹೆಸರಿನ ಬಳಕೆದಾರರು ವಿಡಿಯೋ ಪೋಸ್ಟ್ ಮಾಡಿದ್ದಾರೆ. ಮಹಿಳೆಯರು ಸ್ಟ್ರಾಬೆರಿಯ ಕೆಂಪು ತಿರುಳನ್ನು ಸೇವನೆ ಮಾಡಬೇಕು. ಸಿಪ್ಪೆ ಹಾಗೂ ಬಿಜ ಹಾಗೆ ಇರಬೇಕು. ಸ್ಟ್ರಾಬೆರಿ ಅಸ್ತಿಪಂಜರದಂತಿರಬೇಕು ಎಂದು ಚಾಲೆಂಜ್ ನೀಡಿದ್ದಾರೆ. ಈ ಪೋಸ್ಟ್ ಹಂಚಿಕೊಂಡ ಕೆಲವೇ ಕ್ಷಣಗಳಲ್ಲಿ ವೈರಲ್ ಆಗಿದ್ದು, ಅನೇಕ ಮಹಿಳೆಯರು ಚಾಲೆಂಜ್ ಸ್ವೀಕರಿಸಿ ಸ್ಟ್ರಾಬೆರಿ ನುಂಗುತ್ತಿರುವ ಪೋಸ್ಟ್ ಹಂಚಿಕೊಂಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಲ್ತಿರುವ ಪೋಸ್ಟ್ ಗೆ ಲೀಚ್ ಗಾಡ್ಸ್ ಎಂದು ಶೀರ್ಷಿಕೆ ಹಾಕ್ತಿದ್ದಾರೆ. 
ಸ್ಟ್ರಾಬೆರಿಯನ್ನು ಬಾಯಿ ಒಳಗೆ ತುಂಬುತ್ತಿದ್ದಂತೆ ಗಾಳಿ ಆಡೋದು ಬಂದ್ ಆದಂತ ಅನುಭವವಾಯ್ತು ಎಂದು ಮಹಿಳೆಯೊಬ್ಬಳು ತನ್ನ ಅನುಭವವನ್ನು ಬರೆದುಕೊಂಡಿದ್ದಾಳೆ. ಕೆಲವರು ಈ ಚಾಲೆಂಜ್ ಸ್ವೀಕರಿಸಿ ಅಚ್ಚರಿಯ ಅನುಭವ ಪಡೆದಿದ್ದಾರೆ. ಹಣ್ಣನ ಒಳ ರಚನೆ ಅರಿಯಲು ಸಾಧ್ಯವಾಯಿತು. ಹಣ್ಣಿನ ರುಚಿಯನ್ನು ಸಂಪೂರ್ಣವಾಗಿ ಹೀರಲು ಇದು ನೆರವಾಯಿತು ಎಂದು ತಮ್ಮ ಅನುಭವ ಹೇಳಿದ್ದಾರೆ. 

Latest Videos

240 ಕೋಟಿಯ ಏರ್‌ಬಸ್‌, 451 ಕೋಟಿಯ ನೆಕ್ಲೇಸ್‌; ಅಂಬಾನಿ ಫ್ಯಾಮಿಲಿ ಕೊಡೋ ಗಿಫ್ಟ್ಸ್ ಸಿಕ್ಕಾಪಟ್ಟೆ ಕಾಸ್ಟ್ಲೀ!

ಈ ಚಾಲೆಂಜ್ ಪೂರ್ಣಗೊಳಿಸಬೇಕು ಅಂದ್ರೆ ಕೆಂಪು ಬಣ್ಣದ ಸ್ಟ್ರಾಬೆರಿಯನ್ನು ನೀವು ಆಯ್ಕೆ ಮಾಡಿಕೊಳ್ಳಬೇಕು. ಇದು ಸಂಪೂರ್ಣ ಹಣ್ಣಾಗಿರಬಾರದು. ಅರ್ಧ ಹಣ್ಣಾಗಿರುವ ಹಾಗೂ ಸರಿಯಾದ ಆಕಾರದಲ್ಲಿರುವ ಸ್ಟ್ರಾಬೆರಿಯನ್ನು ನೀವು ಆಯ್ದುಕೊಳ್ಳಬೇಕು.  @Wuxidixi ಹೆಸರಿನ ಬಳಕೆದಾರರೊಬ್ಬರು ಸ್ವಲ್ಪ ಮುಂದೆ ಆಲೋಚನೆ ಮಾಡಿದ್ದಾರೆ. ಸ್ಟ್ರಾಬೆರಿ ಜೊತೆ ಬಾಳೆಹಣ್ಣು, ಕಿವಿ ಹಣ್ಣು ಮತ್ತು ಪೇರಳೆ ಹಣ್ಣನ್ನು ಸಕ್ ಮಾಡುವ ಪೋಸ್ಟ್ ಹಂಚಿಕೊಂಡಿದ್ದು, ಈಶಾನ್ಯ ಚೀನಾದ ಚಳಿಗಾಲದ ವಿಶೇಷತೆ ಎಂದು ಶೀರ್ಷಿಕೆ ಹಾಕಿದ್ದಾರೆ. ಆಕೆಯ ವಿಡಿಯೋ ಅನೇಕ ಜನರನ್ನು ಆಕರ್ಷಿಸಿದೆ. ಬಳಕೆದಾರರು ಚಿತ್ರವಿಚಿತ್ರ ಪ್ರಶ್ನೆಗಳನ್ನು ಆಕೆಯ ಮುಂದಿಟ್ಟಿದ್ದಾರೆ. ಈ ಸ್ಟ್ರಾಬೆರಿ ಚಾಲೆಂಜ್ ಗೆ ಅನೇಕರು ಕಮೆಂಟ್ ಮಾಡಿದ್ದಾರೆ. ಒಬ್ಬ ವ್ಯಕ್ತಿ ಇದು ಹೊಸ ಚೈನೀಸ್ ಕುಂಗ್ ಫೂ ಎಂದು  ನಾನು ಭಾವಿಸಿದ್ದೆ ಎಂದಿದ್ದಾನೆ. ಇದು ಚುಂಬನದ ವ್ಯಾಯಾಮದಂತಿದೆ ಎಂದು ಮತ್ತೊಬ್ಬರು ಕಮೆಂಟ್ ಮಾಡಿದ್ದಾರೆ. 

ಬರೋಬ್ಬರಿ 7000 ಕೋಟಿ ಮೌಲ್ಯದ ಸಂಸ್ಥೆ ಸ್ಥಾಪಿಸಿ, ತನ್ನದೇ ಕಂಪನಿಯಿಂದ ವಜಾಗೊಂಡ ಮಹಿಳೆ!

ಸ್ಟ್ರಾಬೆರಿಗೆ ಸಂಬಂಧಿಸಿದ ಚಾಲೆಂಜ್ ಗಳು ಆಗಾಗ ವೈರಲ್ ಆಗ್ತಿರುತ್ತವೆ. ಈಗ ಇದೊಂದು ಹೊಸ ಸೇರ್ಪಡೆ. ಚೀನಾವು ವಿಶ್ವದ ಸ್ಟ್ರಾಬೆರಿಗಳ ಅತಿದೊಡ್ಡ ಉತ್ಪಾದನಾ ದೇಶವಾಗಿದೆ. ಪ್ರಪಂಚದ ಒಟ್ಟು ಹಣ್ಣಿನ ಉತ್ಪಾದನೆಯಲ್ಲಿ ಶೇಕಡಾ 37 ರಷ್ಟು ಪಾಲನ್ನು ಚೀನಾ ಹೊಂದಿದೆ. 

2022 ರಲ್ಲಿ, ವಿಂಟರ್ ಒಲಿಂಪಿಕ್ಸ್ ಚಾಂಪಿಯನ್ ಐಲೀನ್ ಗು ತಮ್ಮ ಬಾಯಿಯಲ್ಲಿ ಸ್ಟ್ರಾಬೆರಿ ಇಟ್ಟುಕೊಂಡು ಸೆಲ್ಫಿ ಪೋಸ್ಟ್ ಮಾಡಿದ್ದರು. ಇದು  ಅಭಿಮಾನಿಗಳಿಗೆ ಇಷ್ಟವಾಗಿತ್ತು. ಐಲೀನ್ ಗು ಸ್ಟೈಲನ್ನು ಅಭಿಮಾನಿಗಳು ನಕಲು ಮಾಡಿದ್ದರು. ಸ್ಟ್ರಾಬೆರಿಯಲ್ಲಿ ವಿಟಮಿನ್ ಸಿ ಮತ್ತು ಫೈಬರ್ ಹೆಚ್ಚಿನ ಪ್ರಮಾಣದಲ್ಲಿರುವ ಕಾರಣ, ಅದರ ಸೇವನೆಯನ್ನು ಜನರು ಇಷ್ಟಪಡ್ತಾರೆ. ಕೆಲವರನ್ನು ಅದರ ಪರಿಮಳ ಸೆಳೆಯುತ್ತದೆ. ರೂಮಿನ ಪರಿಮಳವನ್ನು ಸ್ಟ್ರಾಬೆರಿಗೆ ಬದಲಿಸಲು, ಸ್ಟ್ರಾಬೆರಿ ಕಟ್ ಮಾಡಿ, ರೂಮ್ ಹೀಟರ್ ಗೆ ಹಾಕಿದ ವಿಡಿಯೋ ಕೂಡ ಕೆಲ ದಿನಗಳ ಹಿಂದ  ವೈರಲ್ ಆಗಿತ್ತು.  

click me!