ನನ್ನ ಮಗನಿಗೆ ಹೇಗೆ ಬುದ್ಧಿ ಹೇಳಲಿ?

Published : Sep 26, 2018, 05:29 PM IST
ನನ್ನ ಮಗನಿಗೆ ಹೇಗೆ ಬುದ್ಧಿ ಹೇಳಲಿ?

ಸಾರಾಂಶ

ಮಕ್ಕಳು ಓದುವುದಿಲ್ಲ ಎನ್ನುವುದು ಸಾಮಾನ್ಯವಾಗಿ ಪೋಷಕರು ಹೇಳುತ್ತಲೇ ಇರುತ್ತಾರೆ. ಮಕ್ಕಳು ಓದುವುದಿಲ್ಲ, ಬರೆಯುವುದಿಲ್ಲ, ಹೇಳಿದ ಮಾತು ಕೇಳುವುದಿಲ್ಲ ಎನ್ನುವ ಮಾತನ್ನು ಕೇಳುತ್ತಲೇ ಇರುತ್ತೇವೆ. ಇಲ್ಲೊಬ್ಬರು ಅದೇ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. 

ನನ್ನ ಮಗ ಓದಿನಲ್ಲಿ ಹಿಂದಿದ್ದಾನೆ. ಅವನು ಚೆನ್ನಾಗಿ ಓದುತ್ತಿಲ್ಲ ಎಂದು ಅವರ ತಂದೆ ಬೈಯುತ್ತಾರೆ, ಹೊಡೆಯುತ್ತಾರೆ. ಇದೇ ಕಾರಣಕ್ಕೆ ನನಗೂ ಅವರಿಗೂ ನಿತ್ಯವೂ ಜಗಳ. ಮಗ ಚೆನ್ನಾಗಿ ಓದಲಿ ಎಂದು ಅವರು ಹಾಗೆ ವರ್ತಿಸುತ್ತಾರೆ. ಆದರೆ ನನಗೆ ನನ್ನ ಮಗನ ಸಾಮರ್ಥ್ಯ ಗೊತ್ತು. ಅಲ್ಲದೇ ಮಗನಿಗೂ ಕುಳಿತು ಓದು ಎಂದು ಎಷ್ಟೇ ಹೇಳಿದರೂ ಕೇಳುತ್ತಿಲ್ಲ.

ಇವರಿಬ್ಬರ ಮಧ್ಯೆ ನಾನು ಸಿಕ್ಕು ನರಳುವಂತಾಗಿದೆ. ಅತ್ತ ಅವರಿಗೂ ಹೇಳಲಾರೆ, ಇತ್ತ ಮಗನಿಗೂ ಏನು ಹೇಳಿದರೂ ಕೇಳುತ್ತಿಲ್ಲ. ಏನು ಮಾಡಲಿ, ಏನಾದರೂ ಸಲಹೆ ಇದ್ದರೆ ಕೊಡಿ.

-ಅನಾಮಿಕ 

ನಿಮ್ಮ ಉತ್ತರಗಳನ್ನು suvarnanews@gmail.com ಗೆ ಕಳುಹಿಸಿ 

-ಸಾಂದರ್ಭಿಕ ಚಿತ್ರ 

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ರಾತ್ರಿ ಚೆನ್ನಾಗಿ ನಿದ್ರೆ ಬರಲು ಇಲ್ಲಿವೆ 6 ಸೂಪರ್ ಫುಡ್ಸ್!
ರೈಲ್ವೆ ಪ್ರಯಾಣ, ಟಿಕೆಟ್​ ಬುಕಿಂಗ್​ ಎಲ್ಲವೂ ಬಲು ಸುಲಭ : ಸಂಪೂರ್ಣ ಮಾಹಿತಿ ಈ ಒಂದೇ ಒಂದು ಆ್ಯಪ್​ನಲ್ಲಿ!