ಸೋಡಿಯಂ ಬೊರೇಟ್ ನಲ್ಲಿ ಏನಿದೆ ಔಷಧೀಯ ಗುಣ?

By Web DeskFirst Published Sep 25, 2018, 2:46 PM IST
Highlights

ಉತ್ತಮ ಕ್ಷಾರೀಯ ದ್ರವ್ಯವಾಗಿರುವ ಸೋಡಿಯಂ ಬೊರೇಟ್ ಎಂಬ ಬಿಳಿ ತಿಳಿ ರಾಸಾಯನಿಕ ಹಲವು ಪಿಎಚ್ ಸಮತೋಲನದಲ್ಲಿ ಬಫರ್ ರೀತಿಯಲ್ಲಿ ಕಾರ್ಯ ನಿರ್ವ ಹಿಸುತ್ತದೆ. ಇದರ ಕಾರ್ಯದಕ್ಷತೆಗೆ ಇದನ್ನು ಕ್ಷಾರ ರಾಜನೆಂದೇ ಕರೆಯುತ್ತಾರೆ. 7ನೇ ಶತಮಾನದಿಂದಲೂ ಭಾರತದಲ್ಲಿ ಔಷಧಿಯವಾಗಿ ಬಳಸುತ್ತಿರುವ ಇದನ್ನು ಲೋಹದ ಧಾತುಗಳು ಕರಗಲು ಬಳಸುತ್ತಿದ್ದರು. ಯಾವುದಕ್ಕಿದು ಔಷಧಿ?

 ಸೋಡಿಯಂ ಬೊರೇಟ್ ಮನೆಯಲ್ಲಿ ಬಳಸುವ ಅತ್ಯುನ್ನತ ಕ್ಷಾರೀಯ ರಾಸಾಯನಿಕ ದ್ರವ್ಯ. ಕಡಿಮೆ ಬೆಲೆಯಲ್ಲಿ ಎಲ್ಲೆಡೆ ದೊರೆಯುವ ಈ ರಾಸಾಯನಿಕ ಔಷಧಿಯಾಗಿಯೂ ಪರಿಣಾಮಕಾರಿ. ಬಿಳಿ ಬಣ್ಣದ ತಿಳಿ ವಸ್ತುವಿದು. ಉತ್ತಮ ಕ್ಷಾರೀಯ ದ್ರವ್ಯವಾಗಿರುವ ಇದು ಹಲವು ಪಿಎಚ್ ಸಮತೋಲನದಲ್ಲಿ ಬಫರ್ ರೀತಿಯಲ್ಲಿ ಕಾರ್ಯನಿರ್ವಹಿಸುತ್ತದೆ. ಇದರ ಕಾರ್ಯದಕ್ಷತೆಗೆ ಇದನ್ನು ಕ್ಷಾರ ರಾಜನೆಂದೇ ಕರೆಯುತ್ತಾರೆ.

  • ವಾತ, ಕಫ ದೊಷಗಳನ್ನು ಹೋಗಿಸುವುದರಿಂದ ಕೆಮ್ಮು, ದಮ್ಮು, ಹೃದಯ ರೋಗಗಳಲ್ಲಿ ಬಳಸುತ್ತಾರೆ.
  • ಅತಿಸಾರ, ಮೂತ್ರಕಲ್ಲು, ಸಮಸ್ಯೆಗಳಿಗೆ. ಪ್ರಸವದ ವೇಳೆ ಆಗುವ ಮೂಡಗರ್ಭಕ್ಕೂ ಬಳಸುವುದುಂಟು.
  • ಮುಟ್ಟು ಸರಿಯಾಗಿ ಆಗಲು ಸಹಕಾರಿ.
  • ಹಳೇ ಗಾಯಕ್ಕೆ ಲೇಪವಾಗಿ ಬಳಸಬಹುದು.
  • ಫಂಗಲ್ ಸೋಂಕಿನಲ್ಲಿ ಪುಡಿಯಾಗಿ ಲೇಪಿಸುತ್ತಾರೆ.
  • ತಲೆ ಹೊಟ್ಟಿಗೆ ಮೊಸರಿನೊಂದಿಗೆ ಬೆರೆಸಿ, ಹಚ್ಚಿದರೆ ಉತ್ತಮ ಫಲ ನೀಡುತ್ತದೆ.
  • ಉಗುರುಸುತ್ತಿಗೆ ಜೇನಿನೊಂದಿಗೆ ಹಚ್ಚಬೇಕು.
  • ಗಂಟಲುಬಾವಿನಲ್ಲಿ ಅರಿಶಿನದೊಂದಿಗೆ ಬಾಯಿ ಮುಕ್ಕಳಿಸಿದರೆ ಪರಿಣಾಮಕಾರಿ.
  • ಬಾಯಿ ವಾಸನೆಗೆ ಎಲಕ್ಕಿ ಲವಂಗದೊಂದಿಗೆ ಮೆಲ್ಲಲು ಕೊಡುತ್ತಾರೆ.
  • ಹಲ್ಲುಹೊಳಪಿಗಾಗಿಯೂ ಬಳಸಬಹುದು.
  • ಸ್ವಚ್ಛ  ಗೊಳಿಸಲು ರಾಸಾಯನಿಕವಾಗಿ ಬಳಸಬಹುದು. ವಿಷಚಿಕಿತ್ಸೆಯಲ್ಲಿ ಬಳಕೆಗೆ ಬರುತ್ತದೆ.
  • ಕಾಲೊಡೆತಕ್ಕೆ ಇದರಿಂದ ತಯಾರಿಸಿದ ಮುಲಾಮು ಸೂಕ್ತ.
  • ಕಫ, ಜ್ವರಕ್ಕೆ ಔಷಧಿಯಾಗಿ ಬಳಸಬಹುದು ಟಾಂಸಿಲ್‌ಗೂ ಸಹಕಾರಿ.
  • ಕಫವನ್ನು ಹೊರಹಾಕಿ ಮ್ಯುಕೊಲೈಟಿಕ್ ಗುಣವನ್ನು ಹೊಂದಿದೆ ಎಂದು ಸಂಶೋಧನೆಯಿಂದ ತಿಳಿದುಬಂದಿದೆ.
  • ತೈಲೊಕ್ಯ ಚಿಂತಾಮಣಿ ರಸ, ಸರ್ವಾಂಗ ಸುಂದರ ರಸ, ಮೃತ್ಯುಂಜಯರಸ, ಕನಕ ಸುಂದರ ರಸ, ಆನಂದ ಭೈರವ ರಸ ಇನ್ನೂ ಹಲವಾರು ಆಯುರ್ವೇದೀಯ ರಸೌಷಧಿಗಳಿಗೆ ಇದನ್ನು ಬಳಸುತ್ತಾರೆ.
click me!