ಮಲಗುವಾಗ ಮೊಬೈಲ್‌ ತಲೆದಿಂಬಿನ ಕೆಳಗೆ, ಜೇಬಲ್ಲಿ ಇಟ್ಕೊಂಡು ಮಲಗ್ತೀರಾ? ಹಾಗಾದ್ರೆ ಇದನ್ನ ಓದಿ!

Published : Nov 29, 2026, 02:34 PM IST
sleeping with mobile phone

ಸಾರಾಂಶ

ರಾತ್ರಿ ಮಲಗುವಾಗ ಮೊಬೈಲನ್ನು ದಿಂಬಿನಡಿ ಅಥವಾ ಪಕ್ಕದಲ್ಲಿಡುವುದು ನಿದ್ರಾಹೀನತೆ ಹಾಗೂ ಕಣ್ಣಿನ ಸಮಸ್ಯೆಗೆ ಕಾರಣವಾಗುತ್ತದೆ. ಚಾರ್ಜ್‌ನಲ್ಲಿಟ್ಟಾಗ ಫೋನ್ ಬಿಸಿಯಾಗಿ ಸ್ಫೋಟಗೊಳ್ಳುವ ಅಪಾಯವಿರುತ್ತದೆ. ಆದ್ದರಿಂದ ಮಲಗುವ ಮುನ್ನ ಮೊಬೈಲ್ ಬಳಸದೆ, ಹಾಸಿಗೆಯಿಂದ ದೂರವಿಡುವುದು ಆರೋಗ್ಯ, ಸುರಕ್ಷತೆಗೆ ಉತ್ತಮ.

ಇಂದು ಮೊಬೈಲ್ ಫೋನ್ ಮನುಷ್ಯರನ್ನ ಯಾವ ಮಟ್ಟಿಗೆ ಆವರಿಸಿಕೊಂಡುಬಿಟ್ಟಿದೆ ಎಂದರೆ ಹೆಂಡತಿ ಮಕ್ಕಳನ್ನು ಬಿಟ್ಟು ತುಸು ದೂರದಲ್ಲಿ ಮಲಗುತ್ತಾರಾದರೂ ಮೊಬೈಲ್ ಫೋನ್‌ ದೂರ ಇಟ್ಟು ಮಲಗಲಾರರು. ಹಾಗೊಂದು ವೇಳೆ ಮಲಗಿದರೂ ಏನೋ ಕಳೆದುಕೊಂಡ ಚಡಪಡಿಕೆ. ಇದು ಒಬ್ಬಿಬ್ಬರ ಸಮಸ್ಯೆ ಅಲ್ಲ, ಅನೇಕರು ಮಲಗುವಾಗ ತಲೆದಿಂಬಿನ ಕೆಳಗೋ, ಹಿಂದೆಯೋ, ಜೇಬಿನಲ್ಲಿಯೋ ಇಟ್ಟುಕೊಂಡೇ ಮಲಗುತ್ತಾರೆ

ರಾತ್ರಿ ಮಲಗುವಾಗಲೂ ಮೊಬೈಲ್ ಫೋನ್ ಪಕ್ಕದಲ್ಲಿಟ್ಟುಕೊಂಡು ಮಲಗಲು ಕೆಲವು ಕಾರಣಗಳಿವೆ ಮೊದಲನೇಯದಾಗಿ ತಡರಾತ್ರಿ ನಿದ್ದೆ ಬರುವವರಿಗೂ ಮೊಬೈಲ್ ಸ್ಕ್ರೀನ್ ನೋಡುತ್ತಾ ಮಲಗುವವರು, ಇನ್ನೊಂದು ಸಮಸ್ಯೆ ಎಂದರೆ ಇತ್ತೀಚಿನ ಯುವಕರು ಐಫೋನ್, ಸ್ಯಾಮಸಂಗ್‌ನಂತ ದುಬಾರಿ ಬೆಲೆ ತೆತ್ತು ಮೊಬೈಲ ಖರೀದಿಸಿರುವುದು. ಇದರಿಂದಾಗಿ ಮೊಬೈಲ್ ದೂರ ಎಲ್ಲಾದರೂ ಇಟ್ಟಾಗ ಕದ್ದಾರು ಎಂಬ ಚಿಂತೆ ಒಂದು ಕಡೆ, ಮೊಬೈಲ್ ಓಪನ್ ಮಾಡಿ ತಮ್ಮ ರಹಸ್ಯಗಳೆಲ್ಲಿ ಬಯಲಾಗಿಬಿಡುತ್ತವೋ ಎಂಬ ಭಯ. ಇನ್ನಷ್ಟು ಕೆಲವರಿದ್ದಾರೆ. ಅವರಿಗೆ ಪದೇಪದೆ ಮೊಬೈಲ್ ಕರೆಗಳು ಬರುತ್ತಲೇ ಇರುತ್ತವೆ. ದೂರದಲ್ಲಿಟ್ಟಾಗ ಪದೇಪದೆ ಎದ್ದು ಹೋಗಿ ರಿಸೀವ್ ಮಾಡುವುದೇ ದೊಡ್ಡ ಸಮಸ್ಯೆ ಇಂಥವರು ತಲೆದಿಂಬಿನ ಕೆಳಗೆ ಮೊಬೈಲ್ ಇಟ್ಟುಕೊಂಡು ಮಲಗುತ್ತಾರೆ, ಕರೆಗಳು ಬಂದಾಗ ಬೇಗ ರಿಸೀವ್ ಮಾಡಲು ಸುಲಭವಾಗುತ್ತದೆ ಎಂದು.

ಆದರೆ ಇಲ್ಲಿ ತಿಳಿದುಕೊಳ್ಳಬೇಕಾಗಿರುವ ವಿಷಯ ಬೇರೆಯೇ ಇದೆ. ನಿಮ್ಮ ಫೋನ್ ರಾತ್ರಿಯಿಡೀ ಹತ್ತಿರದಲ್ಲೇ ಇರುವುದರಿಂದ ನಿಮ್ಮ ವಿಶ್ರಾಂತಿಗೆ ಮೊದಲನೆ ಅಡ್ಡಿ. ಯಾವಾಗಲೂ ನೋಟಿಫಿಕೇಶನ್ ಅಲರ್ಟ್‌ಗಳು ಬರುವುದರಿಂದ ನಿದ್ದೆಗೂ ಕಿರಿಕಿರಿ. ತಡರಾತ್ರಿವರೆಗೆ ಸ್ಕ್ರೀನ್ ನೋಡುವುದರಿಂದ ದೃಷ್ಟಿ ಮಂದವಾಗಬಹುದು. ಇನ್ನೊಂದು ಅಪಾಯವೆಂದರೆ ಅನೇಕರು ರಾತ್ರಿ ಮೊಬೈಲ್ ಚಾರ್ಜ್‌ಗೆ ಹಾಕಿ ತಲೆದಿಂಬಿನ ಕೆಳಗೆ ಇಟ್ಟುಕೊಂಡು ಮಲಗುತ್ತಾರೆ. ಇದೆಷ್ಟು ಅಪಾಯಕಾರಿ ಎಂದರೆ ಎಷ್ಟೋ ಸಲ ಬ್ಯಾಟರಿ ಓವರ್ ಲೋಡ್ ಸ್ಫೋಟಗೊಂಡ ಪ್ರಕರಣಗಳಿವೆ. ಹೀಗಾಗಿ ಹಾಸಿಗೆಯಿಂದ ಮೊಬೈಲ್ ದೂರ ಇಟ್ಟು ಮಲಗುವುದು ಉತ್ತಮ ಅಬ್ಯಾಸ ಮತ್ತು ಸುರಕ್ಷಿತ.

ಮೊಬೈಲ್ ಫೋನ್‌ನಿಂದ ನಿದ್ದೆ ಕಡಿಮೆಯಾಗುತ್ತಿದೆ

ಹಿಂದೆಲ್ಲ ಹತ್ತು ಗಂಟೆ ಮೇಲೆ ಎದ್ದಿರುವುದು ತುಂಬಾ ಕಷ್ಟ ಇತ್ತು. ರಾತ್ರಿ ಒಂಭತ್ತಕ್ಕೆ ಜೋರು ನಿದ್ದೆ ಹತ್ತಕ್ಕೆಲ್ಲ ಮಲಗಿಬಿಡುತ್ತಿದ್ದರು. ತಡರಾತ್ರಿವರೆಗೆ ಎಚ್ಚರವಿದ್ದರಂತೂ ಮುಂಜಾನೆ ಕೆಲಸ ಮಾಡಲು ಆಗುತ್ತಿರಲಿಲ್ಲ. ಕಣ್ಣಿಗೆ ಅಷ್ಟು ನಿದ್ದೆ. ಆದರೆ ಈಗ ಎಲ್ಲರ ಕೈಗೆ ಮೊಬೈಲ್ ಫೋನ್‌ಗಳು ಬಂದ ನಂತರ ಬೇಗ ಮಲಗಿದ ದಿನಗಳೇ ಮರೆತುಹೋಗಿವೆ. ಯಾರಾದರೂ ಹಿಂದಿನ ದಿನಗಳಂತೆ ರಾತ್ರಿ ಒಂಭತ್ತಕ್ಕೆ ಮಲಗಿದರೋ ಮಧ್ಯೆ ರಾತ್ರಿ ಒಂದಕ್ಕೆ ಎಚ್ಚರವಾಗಿ ಅನಂತರ ಏನೇ ಮಾಡಿದ್ರೂ ನಿದ್ದೆ ಬರುವುದಿಲ್ಲ. ಒಟ್ಟಾರೆ ನಮ್ಮ ನೈಸರ್ಗಿಕ ಸಮುಯದ ಚಕ್ರವೇ ತಲೆಕೆಳಗಾಗಿದೆ. ಮುಂದೆಯೂ ಹೀಗೆ ಆಗದಿರಲು ಮಲಗುವ ಮುನ್ನ ಅಂದರೆ 30 ನಿಮಿಷಗಳ ಮೊದಲು ಮೊಬೈಲ್‌ ಬಳಸಲೇಬೇಡಿ.

ಮೂಬೈಲ್ ತಲೆದಿಂಬಿನ ಕೆಳಗೆ ಇಟ್ಟರೆ ಏನಾಗುತ್ತೆ?

ರಾತ್ರಿ ಮಲಗುವಾಗ ತಲೆದಿಂಬಿನ ಕೆಳಗೆ ಮೊಬೈಲ್ ಇಟ್ಟುಕೊಂಡು ಮಲಗಿದರೆ ಚಾರ್ಜಿಂಗ್ ಸಮಯದಲ್ಲಿ ಫೋನ್ ಬಿಸಿಯಾಗುತ್ತದೆ. ತಲೆದಿಂಬಿನ ಒತ್ತಡಕ್ಕೆ ಇನ್ನಷ್ಟು ಬಿಸಿಯಾಗುತ್ತದೆ. ಹೊದ್ದುಕೊಂಡಿರುವ ಕಂಬಳಿ ಅಥವಾ ರಗ್ಗು ಶಾಖ ಹೊರಹೋಗದಂತೆ ತಡೆದು ಫೋನ್ ಇನ್ನಷ್ಟು ಬಿಸಿಯಾಗುತ್ತ ಹೋಗುತ್ತದೆ. ಇದು ಬೆಂಕಿಯ ಅಪಾಯಕ್ಕೆ ಕಾರಣವಾಗಬಹುದು. ಹೀಗಾಗಿ ಚಾರ್ಜಿಂಗ್ ಮಾಡುವಾಗ ತಲೆದಿಂಬಿನ ಕೆಳಗೆ ಇಟ್ಟುಕೊಳ್ಳುವ ಬದಲು ಹೊರಗೆ ಗಟ್ಟಿಯಾದ ನೆಲ, ಟೇಬಲ್ ಮೇಲೆ ಇರಿಸಿ, ಹಾಸಿಗೆ ಬಟ್ಟೆಗಳಿಂದ ದೂರವಿರಿಸಿ

ರಾತ್ರಿ ಮಲಗುವ ಮುನ್ನ ಈ ಸರಳ ಅಭ್ಯಾಸ ಮಾಡಿ.

  • ಮಲಗುವ ಸುಮಾರು 30 ರಿಂದ 60 ನಿಮಿಷಗಳ ಮೊಬೈಲ್ ಫೋನ್ ಬಳಕೆ ಬೇಡ.
  • ಫೋನ್ ಅನ್ನು ನಿಮ್ಮ ದಿಂಬಿನ ಕೆಳಗೆ ಇಡುವ ಬದಲು ದೂರದ ಮೇಜಿನ ಮೇಲೆ ಇರಿಸಿ. ಆ ಸಮಯದಲ್ಲಿ ಫೋನ್ ಕಾಲ್, ಮೆಸೇಜ್ ಅಲರ್ಟ್ ಬರುತ್ತಿದ್ದರೆ ಡೊಂಟ್ ಡಿಸ್ಟರ್ಬ್ ಮೋಡ್ ಆನ್‌ ಮಾಡಿ.
  • ಮುಂಜಾನೆಯ ಅಲಾರಂಗೆ ಬಳಸುತ್ತಿದ್ದರೆ ಅದನ್ನು ದೂರದಲ್ಲಿ ಇರಿಸಿ.
  • ಮೊಬೈಲ್ ಚಾರ್ಜ್ ಮಾಡುವಾಗ ಗಟ್ಟಿಯಾದ ನೆಲ ಅಥವಾ ಟೇಬಲ್ ಮೇಲೆ ಇರಿಸಿ.
  • ಯಾವುದೇ ಕಾರಣಕ್ಕೂ ದಿಂಬು ಅಥವಾ ಕಂಬಳಿಯಿಂದ ಮುಚ್ಚಬೇಡಿ.
  • ಈ ಸಣ್ಣ ಅಭ್ಯಾಸಗಳಿಂದ ನೆಮ್ಮದಿಯ ನಿದ್ದೆ ಜೊತೆಗೆ ಫೋನ್ ನಿಂದ ನೀವು ಸುರಕ್ಷಿತ.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಮಹಿಳೆಯರೇ ಈ ನಾಲ್ಕು ಸಂದರ್ಭಗಳಲ್ಲಿ ನಿಮ್ಮ ಮೌನವೇ ಬಂಗಾರ!
ಇಡ್ಲಿ, ದೋಸೆ ಹಿಟ್ಟು ಬೇಗ ಹುಳಿಯಾಗಬಾರದೇ? ಹಾಗಿದ್ದರೆ ಹೀಗೆ ಮಾಡಿ