Kannada

ಇಡ್ಲಿ, ದೋಸೆ ಹಿಟ್ಟು ಬೇಗ ಹುಳಿಯಾಗದಿರಲು ಏನು ಮಾಡಬೇಕು?

Kannada

ನೀರು ಮತ್ತು ಪಿಷ್ಟ

ಇಡ್ಲಿ, ದೋಸೆ ಹಿಟ್ಟು ಬೇಗನೆ ಹುಳಿಯಾಗಲು ಮುಖ್ಯ ಕಾರಣ ಅದರಲ್ಲಿರುವ ಪಿಷ್ಟ ಮತ್ತು ನೀರು. ಇವು ಬ್ಯಾಕ್ಟೀರಿಯಾ ಬೆಳವಣಿಗೆಗೆ ಹೇಳಿ ಮಾಡಿಸಿದ ವಾತಾವರಣ ಸೃಷ್ಟಿಸುತ್ತವೆ.

Image credits: social media
Kannada

ಕಾರ್ಬನ್ ಡೈಆಕ್ಸೈಡ್

ಈ ಬ್ಯಾಕ್ಟೀರಿಯಾಗಳು ಹಿಟ್ಟಿನಲ್ಲಿರುವ ಸಕ್ಕರೆ ಅಂಶವನ್ನು ಒಡೆದು ಕಾರ್ಬನ್ ಡೈಆಕ್ಸೈಡ್ ಉತ್ಪಾದಿಸುತ್ತವೆ. ಇದೇ ಹಿಟ್ಟು ಬೇಗ ಹುಳಿಯಾಗಲು ಮುಖ್ಯ ಕಾರಣ.

Image credits: social media
Kannada

ಬಿಸಿ ವಾತಾವರಣ

ಬೆಚ್ಚಗಿನ ವಾತಾವರಣ ಬ್ಯಾಕ್ಟೀರಿಯಾ ಬೆಳವಣಿಗೆಗೆ ತುಂಬಾ ಪೂರಕ. ಹಾಗಾಗಿ ಹಿಟ್ಟನ್ನು ಹೊರಗಡೆ ಇಟ್ಟರೆ ಬೇಗನೆ ಹುಳಿಯಾಗುತ್ತದೆ.

Image credits: social media
Kannada

ಹೇಗೆ ಶೇಖರಿಸಿಡಬೇಕು?

ಹಿಟ್ಟನ್ನು ಫ್ರಿಡ್ಜ್‌‌ನಲ್ಲಿ ಇಡುವುದು ಅತ್ಯುತ್ತಮ. ಇಲ್ಲಿ ತಾಪಮಾನ ಕಡಿಮೆ ಇರುವುದರಿಂದ ಬ್ಯಾಕ್ಟೀರಿಯಾ ಬೆಳವಣಿಗೆಯೂ ಕಡಿಮೆ. ಇದರಿಂದ ಹೆಚ್ಚು ದಿನ ಹಿಟ್ಟು ಹುಳಿಯಾಗುವುದಿಲ್ಲ.

Image credits: social media
Kannada

ಪಾತ್ರೆಯ ಸ್ವಚ್ಛತೆ

ಹಿಟ್ಟು ಇಡುವ ಪಾತ್ರೆ ಶುಚಿಯಾಗಿರುವುದು ಬಹಳ ಮುಖ್ಯ. ಪಾತ್ರೆ ಕೊಳೆಯಾಗಿದ್ದರೆ ಹಿಟ್ಟು ಬೇಗನೆ ಹುಳಿಯಾಗುತ್ತದೆ.

Image credits: social media
Kannada

ಹಳೆಯ ಹಿಟ್ಟು

ಹಳೆಯ ಹಿಟ್ಟಿನ ಜೊತೆ ಹೊಸದಾಗಿ ರುಬ್ಬಿದ ಹಿಟ್ಟನ್ನು ಎಂದಿಗೂ ಬೆರೆಸಬಾರದು. ಹಾಗೆ ಮಾಡಿದರೆ ಸಂಪೂರ್ಣ ಹಿಟ್ಟು ಬೇಗನೆ ಹುಳಿಯಾಗುತ್ತದೆ.

Image credits: social media
Kannada

ಕಲಕಬೇಡಿ

ಹಿಟ್ಟನ್ನು ಪದೇಪದೇ ಕಲಕಿದರೆ ಅದರಲ್ಲಿ ಗಾಳಿ ಸೇರಿಕೊಂಡು ಬ್ಯಾಕ್ಟೀರಿಯಾ ಹೆಚ್ಚಾಗುತ್ತದೆ. ಹಿಟ್ಟು ರುಬ್ಬಿದ ಮೇಲೆ ಹೆಚ್ಚು ಮಿಕ್ಸ್ ಮಾಡದೆ ಹಾಗೆಯೇ ಇಡಿ.

Image credits: Pinterest

ಚಳಿಗಾಲದಲ್ಲಿ ಮೂಳೆಗಳು ಉಕ್ಕಿನಂತಾಗಲು ನೀವು ತಿನ್ನಬೇಕಾದ 8 ಆಹಾರಗಳಿವು!

ಬೆಳಗ್ಗೆ ಕಪ್ ಶುಂಠಿ ಚಹಾ ಕುಡಿದರೆ ಏನೆಲ್ಲಾ ಲಾಭ ಗೊತ್ತಾ? 9ರ ಅದ್ಭುತ ಪ್ರಯೋಜನ!

Easter Party Recipes: ಎಗ್ ಕಪ್‌ಕೇಕ್‌ನಿಂದ ಬನ್ನಿ ಸ್ಯಾಂಡ್‌ವಿಚ್‌ವರೆಗೆ; ಪಾರ್ಟಿಗೆ 5 ಯಮ್ಮಿ ತಿಂಡಿಗಳು!

Mangaluru Snacks: ಮಂಗಳೂರಿಗೆ ಹೋದ್ರೆ ಈ 10 ಸ್ನ್ಯಾಕ್ಸ್ ಮಿಸ್ ಮಾಡ್ಬೇಡಿ; ಗೋಳಿ ಬಜೆಯಿಂದ ಮಂಗಳೂರು ಬನ್ಸ್‌ವರೆಗೆ!