ಹಿರಿಯರೊಂದಿಗಿನ ಬಾಂಧವ್ಯ ವೃದ್ಧಿಗೂ ಮಸಾಜ್ ಬೆಸ್ಟ್

By Web DeskFirst Published Oct 9, 2018, 4:34 PM IST
Highlights

ಎಣ್ಣೆಯಿಂದಲೇ ಮಕ್ಕಳು ಬೆಳೀಬೇಕು ಎನ್ನುತ್ತಾರೆ ಹಿರಿಯರು. ಅದೇ ಕಾರಣಕ್ಕೆ ಮಗು ಹಾಗೂ ಬಾಣಂತಿ ಅಭ್ಯಂಜನಕ್ಕೆ ಅಷ್ಟು ಮಹತ್ವ ಕೊಡುವುದು. ಇದು ದೇಹಕ್ಕೇಕೆ ಬೇಕು?

ಮಗುವಿನ ತಲೆ ಮತ್ತು ಶರೀರಕ್ಕೆ ಮಸಾಜ್ ಮಾಡುವುದು ಹಿಂದಿನಿಂದಲೂ ನಡೆದುಕೊಂಡು ಬಂದ ಪದ್ಧತಿ. ಇದು ಮಗುವಿನ ಶಾರೀರಿಕ ಮತ್ತು ಮಾನಸಿಕ ವಿಕಾಸಕ್ಕೂ ಸಹಕರಿಸುತ್ತದೆ. ಇದರಿಂದ ಮತ್ತೇನು ಲಾಭ?

ಸಂಬಂಧ ವೃದ್ಧಿಸುತ್ತೆ
ಮಸಾಜ್ ಮಾಡುವುದರಿಂದ ಮಗು ಹಾಗೂ ಮಸಾಜ್ ಮಾಡುವವರ ಮಧ್ಯೆ ವಿಶೇಷ ಬಾಂಧವ್ಯ ಬೆಳೆಯುತ್ತದೆ. ಅಲ್ಲದೇ ಆ ಸ್ಪರ್ಶ ಸುಖ ಮಗುವನ್ನು ಮಾನಸಿಕವಾಗಿ ಗಟ್ಟಿಯಾಗುವಂತೆ ಮಾಡುತ್ತದೆ.

ಮಗುವಿನ ತೂಕ ಹೆಚ್ಚುತ್ತೆ
ಪ್ರಿಮೆಚೂರ್ ಮಕ್ಕಳು ಕಡಿಮೆ ತೂಕ ಇರುತ್ತವೆ. ಅವರ ತೂಕ ಹೆಚ್ಚಿಸಲು ನಿಯಮಿತವಾಗಿ ಮಸಾಜ್ ಮಾಡಬೇಕು. ಮೃದುವಾಗಿ ಮಸಾಜ್ ಮಾಡುವುದರಿಂದ ಮಕ್ಕಳ ತೂಕ ಹೆಚ್ಚುತ್ತದೆ. 

ಆರಾಮ ನೀಡುತ್ತದೆ
ದೇಹಕ್ಕೆ, ಮನಸ್ಸಿಗೆ ವಿಶ್ರಾಂತಿ ಸಿಗಲು ಮಸಾದ್ ನೆರವಾಗುತ್ತದೆ. ತಾಯಿ ಮಗುವಿಗೆ ಮಸಾಜ್ ಮಾಡಿದರೆ ಅದ್ರಿಂದ ಮಗುವಿನ ಸಂತೋಷ ಇಮ್ಮಡಿಗೊಳ್ಳುತ್ತದೆ. ಅದು ಮಕ್ಕಳ ಮುಖದ ನಗುವಿನಿಂದಲೇ ತಿಳಿಯುತ್ತದೆ.

ರಕ್ತ ಸಂಚಾರ ಸಕ್ರಿಯ
ಮಕ್ಕಳ ಎಲ್ಲ ಅಂಗಗಳಿಗೂ ಸೂಕ್ತ ರೀತಿಯಲ್ಲಿ ರಕ್ತ ಸಂಚಾರವಾಗಿ, ಕೈ, ಕಾಲುಗಳು ಬಲಗೊಳ್ಳುತ್ತವೆ. ಮುಖಕ್ಕೆ ಮಸಾಜ್ ಮಾಡುವುದರಿಂದ, ಅಲ್ಲಿಯೂ ರಕ್ತ ಸಂಚಾರ ಸುಗಮವಾಗಿ, ಮಗುವಿನ ಮುಖದಲ್ಲಿ ಕಾಂತಿ ಹೆಚ್ಚುವುದಲ್ಲದೇ, ತ್ವಚೆಯ ಆರೋಗ್ಯವೂ ಸುಧಾರಿಸುತ್ತದೆ. 

ಮನಸು-ಮಸ್ತಿಷ್ಕದ ವಿಕಾಸ 
ತಲೆಗೆ ಮಸಾಜ್ ಮಾಡುವುದರಿಂದ ಮೆದುಳಿನ ವಿಕಾಸವಾಗುತ್ತದೆ. ಮಕ್ಕಳು ಬೇಗ ವಸ್ತುಗಳನ್ನು ಗುರುತಿಸಬಲ್ಲರು. ಮಾತನಾಡಲು, ನೋಡಲು ಅರ್ಥ ಮಾಡಿಕೊಳ್ಳಲು ಅವರಿಗೆ ಸುಲಭವಾಗುತ್ತದೆ. ಆಕ್ಸಿಜನ್‌ಯುತ ಗಾಳಿಯಿಂದ ಸುಲಭ ರಕ್ತ ಸಂಚಾರವಾಗಿ, ಮೆದುಳನ್ನು ಚುರುಕುಗೊಳಿಸುತ್ತದೆ. 

ಸ್ಪರ್ಶ ಸುಖ
ಮಕ್ಕಳು ಸುಸ್ತಾದರೂ ತಲೆಗೆ, ಮೈಗೆ ಮಸಾಜ್ ಮಾಡಿ. ಇದರಿಂದ ಸ್ನೇಹದ ಸ್ಪರ್ಶದೊಂದಿದೆ, ಮಗು ರಿಲಾಕ್ಸ್ ಆಗುತ್ತದೆ. ಸುಸ್ತು ದೂರವಾಗುತ್ತದೆ. 

click me!