ಪ್ರೇಮಿಗಳಿಗೆ, ಅಪ್ಪನಿಗೆ, ಅಮ್ಮನಿಗೆ, ಅಣ್ಣನಿಗೆ, ಸಹೋದರಿಗೆ, ದಂಪತಿಗೆ ಅಂತೆಲ್ಲ ವರ್ಷದ ಒಂದೊಂದು ದಿನ ಮೀಸಲಿದೆ. ಆದರೆ ನಾನು ಏಕಾಂಗಿ ನನಗ್ಯಾರೂ ಇಲ್ಲ. ಆಚರಿಸುವುದಕ್ಕೆ ಯಾವ ದಿನವೂ ಇಲ್ಲ ಎಂದು ಬೇಸರಿಸುತ್ತಿದ್ದೀರಾ. ಚಿಂತೆ ಬಿಡಿ ಒಂಟಿಯಾಗಿರುವವರಿಗೂ ಒಂದು ದಿನ ಇದೆ ಕಾಣ್ರಿ. ಅದೂ ಇಂದೇ. ಹೌದು ಪ್ರೇಮಿಗಳ ದಿನ ನಿನ್ನೆಯಷ್ಟೇ ಮುಗಿಯಿತು. ಇಂದು ಏಕಾಂಗಿ ಅಥವಾ ಒಂಟಿಯಾಗಿರುವವರ ದಿನ. ಪ್ರತಿ ವರ್ಷದ ಫೆಬ್ರವರಿ 15 ರ ದಿನವನ್ನು ಸಿಂಗಲ್ಸ್ ಜಾಗೃತಿ ದಿನವಾಗಿ ಅಥವಾ ಸಿಂಗಲ್‌ಗಳ ಮೆಚ್ಚುಗೆಯ ದಿನವಾಗಿ ಆಚರಿಸಲಾಗುತ್ತಿದೆ.
ಇದು ಅಧಿಕೃತವಾಗಿ ಪಟ್ಟಿ ಮಾಡಲಾದ ರಜಾ ದಿನವಲ್ಲ. ಆದರೆ ಇದು ಒಂಟಿಯಾಗಿರುವ ಅಥವಾ ವಿವಾಹಿತ ಅಥವಾ ಪ್ರಣಯ ಸಂಬಂಧದಲ್ಲಿ ಇರದಂತಹ ಜನರಿಗೆ ಇರುವ ದಿನವಾಗಿದೆ. ಸಿಂಗಲ್ಸ್ ಜಾಗೃತಿ ದಿನವನ್ನು ಪ್ರೇಮಿಗಳ ದಿನದ ವಿರುದ್ಧವಾಗಿ ಆಚರಿಸಲಾಗುತ್ತಿದೆ. ಬೇರೆ ರೀತಿಯಲ್ಲಿ ಹೇಳುವುದಾದರೆ, ತಮ್ಮ ಪ್ರೇಮವನ್ನು ಯಾರಿಗೂ ಅರ್ಪಿಸದೇ ಇರುವರು ವ್ಯಾಲೆಂಟೈನ್ಸ್ ಡೇಗೆ ಬದಲಾಗಿ ಈ ಏಕಾಂಗಿ ದಿನವನ್ನು ಆಚರಿಸುತ್ತಾರೆ.
ಈ ದಿನವೂ ಯಾವುದೇ ಅಧಿಕೃತ ಇತಿಹಾಸವನ್ನು ಹೊಂದಿಲ್ಲದಿದ್ದರೂ, ಬ್ರಿಟನ್ ಎರಡು ಬೇರೆ ಬೇರೆ ದಿನಗಳನ್ನು ಸಿಂಗಲ್‌ಗಳಿಗೆ ಮೀಸಲಿಟ್ಟಿದೆ. ಏಕಾಂಗಿ ಅಥವಾ ಒಂಟಿಯಾಗಿರುವ ವ್ಯಕ್ತಿಗಳಿಗೆ ತಮ್ಮ ಸ್ಥಾನಮಾನವನ್ನು ಎತ್ತಿ ತೋರಿಸಲು ಈ ದಿನವನ್ನು ಮೀಸಲಿಟ್ಟಿದೆ ಇದು ಬ್ರಿಟನ್‌ನಲ್ಲಿ ರಾಷ್ಟ್ರೀಯ ಏಕಾಂಗಿ ದಿನಕ್ಕಿಂತ ಬೇರೆಯದೇ ದಿನ ಆಚರಿಸಲ್ಪಡುತ್ತದೆ. ಇದು ಹಲವು ದೇಶಗಳಲ್ಲಿ ಆಚರಣೆಯಲ್ಲಿದೆ.
2001 ರಲ್ಲಿ ಪ್ರೌಢಶಾಲೆಯಲ್ಲಿದ್ದಾಗ ಏಕಾಂಗಿಯಾಗಿದ್ದ ಡಸ್ಟಿನ್ ಬಾರ್ನ್ಸ್ (Dustin Barnes) ಅವರು ಈ ದಿನವನ್ನು ಏಕಾಂಗಿ ದಿನ ಎಂದು ಆಚರಿಸಲು ಆರಂಭಿಸಿದರು ಎಂದು ಹೇಳಲಾಗುತ್ತದೆ. ಅವರು ತಮ್ಮ ಸ್ನೇಹಿತರ ಗುಂಪಿಗೆ ತಮ್ಮ ಒಂಟಿತನವನ್ನು ಆನಂದಿಸಲು ಒಂದು ದಿನವನ್ನು ಆಚರಿಸಲು ಬಯಸಿದ್ದರಂತೆ. ಪ್ರೌಢಶಾಲಾ ವಿದ್ಯಾರ್ಥಿಗಳ ಗುಂಪು ಉದ್ದೇಶಪೂರ್ವಕವಾಗಿ ಪ್ರೇಮಿಗಳ ದಿನಕ್ಕೆ ಪ್ರತಿಭಟನೆಯಾಗಿ ಫೆಬ್ರವರಿ 15 ಅನ್ನು ಸಿಂಗಲ್ಸ್ ಡೇ ಆಗಿ ಆಯ್ಕೆ ಮಾಡಿದೆ. ಅಂದು ಚಾಕೋಲೇಟ್ ಹಾಗೂ ಇತರ ಪ್ರೀತಿಗೆ ಸಂಬಂಧಿಸಿದ ವಸ್ತುಗಳ ಮೇಲೆ ಇವರು ರಿಯಾಯಿತಿಗಳನ್ನು ಪಡೆಯಬಹುದು.
undefined
ಪ್ರೌಢಶಾಲೆಯಿಂದ ಆರಂಭವಾಗಿ ಪದವಿ ಪಡೆದ ನಂತರವೂ ಬಾರ್ನ್ಸ್ ಈ ದಿನವನ್ನು ಸಿಂಗಲ್ಸ್ ದಿನವಾಗಿ ಆಚರಿಸುವ ಸಂಪ್ರದಾಯವನ್ನು ಮುಂದುವರೆಸಿದರು. ಅವರು ಮಿಸ್ಸಿಸ್ಸಿಪ್ಪಿ ಸ್ಟೇಟ್ ಯೂನಿವರ್ಸಿಟಿಯಲ್ಲಿ(Mississippi State University) ಈ ಸಿಂಗಲ್ಸ್ ದಿನವನ್ನು ಆಚರಿಸಿದ್ದು, ಅಲ್ಲಿ ನಂತರ ಈ ರಜಾದಿನವು ಜನಪ್ರಿಯತೆಯನ್ನು ಗಳಿಸಿತು. ಕೆಲವು ವರದಿಗಳ ಪ್ರಕಾರ, ಈ ದಿನವನ್ನು 2005 ರಲ್ಲಿ ಕಾನೂನುಬದ್ಧವಾಗಿ ಹಕ್ಕುಸ್ವಾಮ್ಯ ಮಾಡಲಾಯಿತು ಎಂದು ತಿಳಿದು ಬಂದಿದೆ.
ಆದರೆ ಈ #SingleAwarenessDay ಸಾಮಾಜಿಕ ಮಾಧ್ಯಮದಲ್ಲಿ ಪ್ರೇಮಿಗಳ ದಿನದಷ್ಟು ಜನಪ್ರಿಯವಾಗಿಲ್ಲ. ಆದರೆ 2020 ರಲ್ಲಿ, ಅದರ ಹ್ಯಾಶ್‌ಟ್ಯಾಗ್ Instagram ನಲ್ಲಿ 55,000 ಪೋಸ್ಟ್‌ಗಳನ್ನು ಮತ್ತು Twitter ನಲ್ಲಿ 78,000 ಲೈಕ್‌ಗಳನ್ನು ಗಳಿಸಿದೆ.