ಪಿಜ್ಜಾ (Pizza) ಅಂದ್ರೆ ಸಾಕು ಬಾಯಲ್ಲಿ ನೀರೂರುತ್ತೆ. ಬರ್ತ್‌ಡೇ, ಪಾರ್ಟಿ (Party) ಹೀಗೆ ಏನಿದ್ರೂ ಸರಿ ಪಿಜ್ಜಾ ಅಂತೂ ಬೇಕೇ ಬೇಕು. ಆದ್ರೆ ಆರೋಗ್ಯ (Health)ಕ್ಕೆ ಹಾನಿ ಅನ್ನೋ ಕಾರಣಕ್ಕೆ ಪಿಜ್ಜಾವನ್ನು ತಿನ್ನದೆ ದೂರವಿಡುವವರು ಇದ್ದಾರೆ. ಹಾಗಿದ್ರೆ ಮನೆಯಲ್ಲೇ ಹೆಲ್ದೀ ಪಿಜ್ಜಾ ತಯಾರಿಸೋದು ಹೇಗೆ ?
ಪ್ರಪಂಚದ ಅತ್ಯಂತ ಜನಪ್ರಿಯ ಜಂಕ್ ಫುಡ್‌ಗಳಲ್ಲಿ ಒಂದಾದ ಪಿಜ್ಜಾ(Pizza) ಅನಾರೋಗ್ಯಕರ ಆಹಾರ ಎಂಬ ಖ್ಯಾತಿಯನ್ನು ಗಳಿಸಿದೆ. ನಿಮ್ಮ ಮೆಚ್ಚಿನ ರೆಸ್ಟೋರೆಂಟ್‌ನಿಂದ ನೀವು ಸಾಮಾನ್ಯವಾಗಿ ಆರ್ಡರ್ ಮಾಡುವ ಪಿಜ್ಜಾದಲ್ಲಿ ಸೋಡಿಯಂ, ಸ್ಯಾಚುರೇಟೆಡ್ ಕೊಬ್ಬು, ಸೇರಿಸಿದ ಸಕ್ಕರೆ ಮತ್ತು ಸಂರಕ್ಷಕಗಳು ಹೆಚ್ಚಾಗಿರುತ್ತದೆ. ಇಂಥಹಾ ಪದಾರ್ಥಗಳಿಂದ ತಯಾರಿಸಿದ ಪಿಜ್ಜಾವು ಹೃದಯರಕ್ತನಾಳದ ಕಾಯಿಲೆಗಳು, ಸ್ಥೂಲಕಾಯತೆ, ಮಧುಮೇಹ ಮತ್ತು ಕ್ಯಾನ್ಸರ್‌ನಂತಹ ಹಲವಾರು ದೀರ್ಘಕಾಲದ ಕಾಯಿಲೆಗಳಿಗೆ ಕಾರಣವಾಗುತ್ತದೆ.
ಹಾಗಂತ ಪಿಜ್ಜಾ ತಿನ್ನುವುದನ್ನು ಬಿಟ್ಟುಬಿಡಬೇಕಾಗಿಲ್ಲ. ಪಿಜ್ಜಾವನ್ನು ಮನೆಯಲ್ಲೇ ಆರೋಗ್ಯ (Health)ಕರವಾಗಿ ತಯಾರಿಸಬಹುದು.. ಸ್ನೇಹಿತರು ಮತ್ತು ಕುಟುಂಬದೊಂದಿಗೆ ನೀವು ಮನೆಯಲ್ಲೇ ತಯಾರಿಸಿ, ಆನಂದಿಸಬಹುದಾದ ಕೆಲವು ಆರೋಗ್ಯಕರ ಪಿಜ್ಜಾ ರೆಸಿಪಿ (Recipe)ಗಳು ಇಲ್ಲಿವೆ.
Food Tips: ಬಿರಿಯಾನಿ, ಬೇಯಿಸಿದ ಮೊಟ್ಟೆಯನ್ನು ಬಿಸಿ ಮಾಡಿ ತಿನ್ಬೋದಾ ?
ಓಟ್ಸ್ ಪಿಜ್ಜಾ
ಬೇಕಾದ ಸಾಮಗ್ರಿಗಳು
ಓಟ್ಸ್ ಹಿಟ್ಟು 1 ಕಪ್
ಯೀಸ್ಟ್ 1 ಟೀ ಸ್ಪೂನ್
ಸಕ್ಕರೆ 1 ಟೀ ಸ್ಪೂನ್.
ಹಿಟ್ಟನ್ನು ಬೆರೆಸಲು ಸ್ಪಲ್ಪ ನೀರು
ಪಿಜ್ಜಾ ಸಾಸ್ 2 ಟೀ ಸ್ಪೂನ್
ಮಶ್ರೂಮ್,ಕೋಳಿ ಮಾಂಸ, ಆಲಿವ್, ಕ್ಯಾಪ್ಸಿಕಂ
ಮಾಡುವ ವಿಧಾನ
ಸ್ಟ್ಯಾಂಡರ್ಡ್ ಪಿಜ್ಜಾದಂತೆ ಸಾಮಾನ್ಯ ಹಿಟ್ಟನ್ನು ತಯಾರಿಸಿ. ಆದರೆ ಸಂಸ್ಕರಿಸಿದ ಹಿಟ್ಟನ್ನು ಬಳಸುವ ಬದಲು ಹೊಸದಾಗಿ ಹುರಿದ ಓಟ್ಸ್ (Oats)ನಿಂದ ಹಿಟ್ಟನ್ನು ಮಾಡಿ. ಇದರ ಮೇಲೆ ಕಡಿಮೆ ಚೀಸ್ ಇರುವ ಆರೋಗ್ಯಕರ ಮೇಲೋಗರಗಳನ್ನು ಬಳಸಿ. ಗೋಲ್ಡನ್ ಬ್ರೌನ್ ರವರೆಗೆ ಬೇಯಿಸಿ.
ಹೂಕೋಸು ಪಿಜ್ಜಾ
ಬೇಕಾದ ಸಾಮಗ್ರಿಗಳು
ಹೂಕೋಸು ಹೂಗಳು
ಯಾವುದೇ ತರಕಾರಿ: 2 ಕಪ್ (ಸಣ್ಣಗೆ ಕಟ್ ಮಾಡಿಕೊಳ್ಳಿ)
ಚೀಸ್ ¼ ಕಪ್
ಪಿಜ್ಜಾ ಸಾಸ್ 2 ಟೀ ಸ್ಪೂನ್
ಕಾರ್ನ್, ಚೀನೀಕಾಯಿ, ಸೌತೆಕಾಯಿ, ಆಲಿವ್‌ಗಳು
ಮಾಡುವ ವಿಧಾನ
ತರಕಾರಿಗಳನ್ನು ತೊಳೆದುಕೊಂಡು ಸಣ್ಣದಾಗಿ ಕತ್ತರಿಸಿ. ಇದಕ್ಕೆ ಚೀಸ್ (Cheese) ಸೇರಿಸಿ ಮತ್ತು ಚೆನ್ನಾಗಿ ಮಿಶ್ರಣ ಮಾಡಿ. ಬೇಕಿಂಗ್ ಶೀಟ್‌ನಲ್ಲಿ ಪಿಜ್ಜಾ ಬೇಸ್ ಇರಿಸಿ, ಅದರ ಮೇಲೆ ಈ ಮಿಶ್ರಣವನ್ನಿಟ್ಟು. ಆರೋಗ್ಯಕರ ಮೇಲೋಗರಗಳನ್ನು ಸೇರಿಸಿ. ಗೋಲ್ಡನ್ ಬ್ರೌನ್ ಆಗುವವರೆಗೆ ಬೇಯಿಸಿ.
Pizza Robot Restaurant: ಜಸ್ಟ್ 45 ಸೆಕೆಂಡಿನಲ್ಲಿ ಪಿಜ್ಜಾ ತಯಾರಿಸುತ್ತೆ ರೋಬೋಟ್..!
ಮಿಲೆಟ್ಸ್ ಪಿಜ್ಜಾ
ಬೇಕಾದ ಸಾಮಗ್ರಿಗಳು
ರಾಗಿ ಹಿಟ್ಟು 1 ಕಪ್
ಯೀಸ್ಟ್ 1 ಟೀ ಸ್ಪೂನ್
ಸಕ್ಕರೆ 1 ಟೀ ಸ್ಪೂನ್
ಹಿಟ್ಟನ್ನು ಬೆರೆಸಲು ನೀರು
ಪಿಜ್ಜಾ ಸಾಸ್ 2 ಟೀಸ್ಪೂನ್.
ಕುಂಬಳಕಾಯಿ
ಮಾಡುವ ವಿಧಾನ
ಸಾಮಾನ್ಯ ಹಿಟ್ಟನ್ನು ತಯಾರಿಸಿ, ಆದರೆ ಸಂಸ್ಕರಿಸಿದ ಹಿಟ್ಟನ್ನು ಬಳಸುವ ಬದಲು ರಾಗಿ ಹಿಟ್ಟಿನಿಂದ ಮಾಡಿ. ಆರೋಗ್ಯಕರ ಮೇಲೋಗರಗಳನ್ನು ಬಳಸಿ, ಮೇಲೆ ಚೀಸ್ ಹಾಕಿಕೊಂಡು, ಗೋಲ್ಡನ್ ಬ್ರೌನ್ ಆಗುವವರೆಗೆ ಬೇಯಿಸಿ.
ಗೋಧಿ ಪಿಜ್ಜಾ
ಬೇಕಾಗುವ ಸಾಮಗ್ರಿಗಳು
ಗೋಧಿ ಹಿಟ್ಟು 1 ಕಪ್
ಯೀಸ್ಟ್ 1 ಟೀ ಸ್ಪೂನ್
ಸಕ್ಕರೆ 1 ಟೀ ಸ್ಪೂನ್
ಹಿಟ್ಟನ್ನು ಬೆರೆಸಲು ನೀರು
ಪಿಜ್ಜಾ ಸಾಸ್ 2 ಟೀ ಸ್ಪೂನ್.
ಪನೀರ್, ಚಿಕನ್, ಕ್ಯಾಪ್ಸಿಕಂ, ಕ್ಯಾರೆಟ್, ಮೂಲಂಗಿ
ಮಾಡುವ ವಿಧಾನ
ಪಿಜ್ಜಾದಂತೆ ಸಾಮಾನ್ಯ ಹಿಟ್ಟನ್ನು ತಯಾರಿಸಿ. ಆದರೆ ಸಂಸ್ಕರಿಸಿದ ಹಿಟ್ಟನ್ನು ಬಳಸುವ ಬದಲು, ಅದನ್ನು ಸಂಪೂರ್ಣ ಗೋಧಿ (Wheat) ಹಿಟ್ಟು ಬಳಸಿ ಮಾಡಿ. ಪನೀರ್, ಚಿಕನ್, ಕ್ಯಾಪ್ಸಿಕಂ, ಕ್ಯಾರೆಟ್, ಮೂಲಂಗಿ ಮೊದಲಾದವುಗಳನ್ನು ಸೇರಿಸಿ. ಮೇಲಿನಿಂದ ಚೀಸ್ ಹಾಕಿಕೊಳ್ಳಿ. ಗೋಲ್ಡನ್ ಬ್ರೌನ್ ಬರುವವರೆಗೆ ಬೇಯಿಸಿ.
ಪಿಜ್ಜಾವನ್ನು ಆರೋಗ್ಯಕರವಾಗಿ ತಯಾರಿಸುವುದು ಹೇಗೆ ?
ಪಿಜ್ಜಾವನ್ನು ಆರೋಗ್ಯಕರವಾಗಿಸಲು ಕೆಲವೊಂದು ವಿಧಾನಗಳನ್ನು ಅನುಸರಿಸಬಹುದು. ಆಹಾರದಲ್ಲಿ ಹೆಚ್ಚಿನ ಫೈಬರ್ ಅನ್ನು ಸೇರಿಸಲು ಓಟ್ಸ್ ಅಥವಾ ರಾಗಿ ಹಿಟ್ಟು ಬಳಸಿ. ಹೂಕೋಸು ಅಥವಾ ಕೆಲವು ಪಿಷ್ಟ ಮತ್ತು ಹೆಚ್ಚಿನ ಫೈಬರ್ ತರಕಾರಿ (Vegetable)ಗಳನ್ನು ಬೇಸ್ ಆಗಿ ಬಳಸಬಹುದು. ಇದು ನಿಮ್ಮ ಆಹಾರದಲ್ಲಿ ಹೆಚ್ಚುವರಿ ಫೈಬರ್ ಅನ್ನು ಸೇರಿಸಲು ಉತ್ತಮ ಮಾರ್ಗವಾಗಿದೆ, ಅದರಲ್ಲಿ ಗ್ಲುಟನ್ ಅನ್ನು ಸೇರಿಸಲಾಗುತ್ತದೆ. ಪಿಜ್ಜಾಕ್ಕೆ ವಿಭಿನ್ನ ಪರಿಮಳವನ್ನು ನೀಡಲು ಎಲೆಕೋಸು ಅಥವಾ ಲೆಟಿಸ್ ಎಲೆಗಳಂತಹ ವಸ್ತುಗಳನ್ನು ಬೇಸ್ ಆಗಿ ಬಳಸಬಹುದು. ಮೇಲೆ ಸೇರಿಸಲಾದ ಚೀಸ್ ಪ್ರಮಾಣವನ್ನು ಕಡಿಮೆ ಮಾಡುವುದರಿಂದ ನಿಮ್ಮ ಪಿಜ್ಜಾದಲ್ಲಿನ ಕೊಬ್ಬಿನ ಹೊರೆ ಕಡಿಮೆ ಮಾಡಬಹುದು. ಇದು ತೂಕ ಹೆಚ್ಚಳವನ್ನು ಕಡಿಮೆ ಮಾಡುತ್ತದೆ.