ಓದು, ಪರೀಕ್ಷೆಗಾಗಿ ಕಾಲೇಜಿಗೇ ಹೋಗಬೇಕಾ? ಎಲ್ಲಾ ನೋಟ್ಸ್‌ಗಳನ್ನು ಬರೆಯುವುದಿದ್ದರೆ ಕಾಲೇಜಿನಲ್ಲಿ ಜೆರಾಕ್ಸ್ ಸೆಂಟರ್ ಬೇಕಾ? ಬಂಕ್ ಹಾಕಿ ಸುತ್ತಾಡದೇ ಇದ್ದರೆ ಕಾಲೇಜಿನಲ್ಲಿ ಪಾರ್ಕ್ ಯಾಕೆ ಬೇಕು? ಮುಖಕ್ಕೆ ಪುಸ್ತಕ ಅಡ್ಡ ಹಿಡಿದು ನಿದ್ರಿಸದೇ ಇದ್ದರೆ ದೊಡ್ಡ ಲೈಬ್ರೆರಿ ಇದ್ದು ಏನು ಪ್ರಯೋಜನ? ಹಿಂದಿನ ರಾತ್ರಿಗಿಂತ ಮೊದಲು ಓದು ಆರಂಭಿಸಿದರೆ ಅದನ್ನು ಪರೀಕ್ಷೆ ಎನ್ನುತ್ತಾರಾ?
ಸಿನಾನ್ ಇಂದಬೆಟ್ಟು
ಹೀಗೆ ಕಾಲೇಜು ದಿನಗಳಲ್ಲಿ ನಮಗೆ ನಾವೇ ರೂಲ್ಸ್ ಮಾಡಿಕೊಂಡಿದ್ದ ನಮ್ಮ ನಾಲ್ಕು ಜನರ ತಂಡ ನೆಟ್ಟಗೆ ಓದುವುದು ಬಿಟ್ಟು ಉಳಿದೆಲ್ಲಾ ಕೆಲಸಗಳನ್ನು ನೆಟ್ಟಗೆ ಮಾಡುತ್ತಿದ್ದೆವು. ಹಾಗಾಗಿ ಪಠ್ಯ ಪ್ರಾಧ್ಯಾಪಕರಿಗೆ, ನೋಟ್ಸ್ ಜೆರಾಕ್ಸ್ ಸೆಂಟರ್‌ಗೆ ಬಿಟ್ಟು ಬಿಟ್ಟಿದ್ದೆವು. ಡಯಾಸ್ ನಮ್ಮಿಂದಲೇ ಕಳೆಗಟ್ಟುತ್ತಿದ್ದರಿಂದ, ಅಲ್ಲಿ ನಿಂತು ಮಾತನಾಡಿದ್ದೇ ಹೆಚ್ಚು!
undefined
ಸುದ್ದಿವಾಹಿನಿಯಲ್ಲಿ ಕಳೆದ ಕೆಲವು ದಿನಗಳು;ಬದುಕು ಕಲಿಸಿದ ಆ ರೋಚಕ ಘಟನೆ!
ಒಂದೇ ಬೆಂಚಿನಲ್ಲಿ ಕುಳಿತುಕೊಳ್ಳುತ್ತಿದ್ದ ಸುಮ್ಮನಿದ್ದೇವೆ ಅಂದರೆ, ಬೇರೆ ಏನೋ ಮಾಡುತ್ತಿದ್ದೇವೆ ಎಂದರ್ಥ. ಹಾಗಾಗಿ ಪ್ರತೀ ಬಾರಿ ಪ್ರಶ್ನಿಸಿ ಸುಸ್ತಾಗಿದ್ದ ಪ್ರಾಧ್ಯಾಪಕರು ಮೇಯಲು ಬಿಟ್ಟಕುರಿಯಂತೆ ನಮ್ಮನ್ನು ಬಿಟ್ಟು ಬಿಟ್ಟಿದ್ದರು. ನಾವು ಸುಮ್ಮನಿದ್ದರೆ ಸಾಕಿತ್ತು ಅವರಿಗೆ.
ಅವರ ತರಗತಿ ಮುಗಿಯುವಾಗ ಅಂದಿನ ದಿನ ಪತ್ರಿಕೆ ಹಳತಾಗಿ ಬಿಡುತ್ತಿತ್ತು. ಮುಂದಿನ ಕ್ಲಾಸ್ ಸೆಮಿನಾರ್‌ಗೆ ತಯಾರಿ ಮುಗಿದಿರುತ್ತಿತ್ತು. ಯಾವೆಲ್ಲಾ ಕ್ಲಾಸ್‌ಗೆ ಬಂಕ್ ಹಾಕಬೇಕೆನ್ನುವ ರೂಪುರೇಷೆ ಸಿದ್ಧವಾಗಿರುತ್ತಿತ್ತು. ಏನಾದರೂ ‘ಉಗ್ರ ಹೋರಾಟ’ ಇದ್ದರೆ ಅಲ್ಲಿ ನಮ್ಮ ‘ಸಾನಿಧ್ಯ’ ಹೇಗಿರಬೇಕು ಎನ್ನುವುದರ ಬಗ್ಗೆ ಚರ್ಚೆಯಾಗಿರುತ್ತಿತ್ತು.
ದಾಡಿ ಹುಡುಗರ ನಾಡಿಮಿಡಿತ;ಕಾರಿಡಾರ್ ಗಡ್ಡಧಾರಿಗಳಿಗೆ ಭಾರಿ ಡಿಮ್ಯಾಂಡು!
ದಿನಾ ಇದನ್ನೇ ರೂಢಿಸಿಕೊಂಡಿದ್ದ ನಮ್ಮ ಕೀಟಲೆಗಳ ಬಗ್ಗೆ ಪ್ರಾಧ್ಯಪಕರಿಗೆ ತಿಳಿಯದೇ ಏನಿರಲಿಲ್ಲ. ನಮಗಿಂತ ಹತ್ತಿಪ್ಪತ್ತು ವರ್ಷದ ಹಿಂದೆ ರಂಗೋಲಿ ಕೆಳಗೆ ತೂರಿದವರಿಗೆ ನಮ್ಮ ಕೀಟಲೆಗಳ ಬಗ್ಗೆ ತಿಳಿಯದೇ ಇರುತ್ತಾ? ಅಷ್ಟಕ್ಕೂ ಅವರು ವಿದ್ಯಾರ್ಥಿಯಾಗಿದ್ದಾಗ ಮಾಡಿದ್ದನ್ನೇ ನಾವು ಮಾಡುತ್ತಿದ್ದೇವೆ. ಅವರಿಗಿಂತ ಸ್ವಲ್ಪ ಹೆಚ್ಚು ಅಥವಾ ಅಡ್ವಾನ್ಸ್ ಆಗಿ ನಾವಿದ್ದೇವೆ ಅಷ್ಟೇ. ಹಾಗಾಗಿ ನಮ್ಮ ಜುಟ್ಟುಗಳನ್ನು ಹೇಗೆ, ಎಲ್ಲಿ ಹಿಡಿಯಬೇಕು? ಎಲ್ಲಿ ತದಕಬೇಕು ಎನ್ನುವುದು ಅವರಿಗೆ ಸರಿಯಾಗಿ ಗೊತ್ತಿತ್ತು.
ಹಾಗಾಗಿ ‘ನೋ ಡ್ಯೂಸ್’ ಹಾಗೂ ಹಾಲ್ ಟಿಕೆಟ್‌ಗೆ ಸಹಿ ಹಾಕಿಸುವಾಗ ನಮ್ಮಷ್ಟುನಿಷ್ಟಾವಂತ ವಿದ್ಯಾರ್ಥಿಗಳು ಕಾಲೇಜಲ್ಲೇ ಇರಲಿಲ್ಲ. ನಾವೇನೇ ಮಾಡಿದರೂ, ನಿಮ್ಮಂಥವರನ್ನು ಎಷ್ಟುಜನರನ್ನು ನೋಡಿಲ್ಲ ಅನ್ನೋದು ಅವರ ಮುಖಭಾವದಲ್ಲೇ ನಮಗೆ ವೇದ್ಯವಾಗುತ್ತಿತ್ತು.
ಪಾಠದ ಬದಲು ಸೀರೆಯ ಅಂದ ನೋಡಿದಾಗ; ತುಂಟತನ ಚೆಂದ ಹಿಡಿತದಲ್ಲಿದ್ದಾಗ!
ಸೆಮಿಸ್ಟರ್ ಪೂರ್ತಿ ಸಹಿಸಿದ್ದು ಒಂದೇ ಗುಕ್ಕಿನಲ್ಲಿ ಹಿಂದಿರುಗಿಸುತ್ತಿದ್ದರು. ಸೆಮಿಸ್ಟರ್ ಕೊನೆಯಲ್ಲಿ ಪ್ರಾಧ್ಯಾಪಕರ ಸಹಿಗಾಗಿ ಪಟ್ಟಕಷ್ಟಪದಗಳಲ್ಲಿ ವರ್ಣಿಸುವುದಾದರೂ ಹೇಗೆ? ಮುಂದಿನದ್ದು ಕಿರಿಕ್ ಪಾರ್ಟಿ ಸಿನಿಮಾ. ಅಂದು ಆ ಸಹಿಗೆ ಅಲೆದುದರಿಂದ ಇಂದು ಸರ್ಕಾರಿ ಕಚೇರಿಗಳಲ್ಲಿ ಅಧಿಕಾರಿಗಳ ಸಹಿಗೆ ಪಡುವ ಕಷ್ಟದೊಡ್ಡದೆನಿಸುವುದಿಲ್ಲ!