ನಾಲಿಗೆ ಬಣ್ಣವೇ ಹೇಳುತ್ತೆ, ಮನುಷ್ಯನ ಆರೋಗ್ಯ?

By Web Desk  |  First Published Oct 2, 2019, 3:13 PM IST

ಬಣ್ಣಗೆಟ್ಟ ನಾಲಿಗೆ, ಅದರಲ್ಲಿ ಗುಳ್ಳೆ, ನೋವು ಮುಂತಾದವನ್ನು ಗಮನಿಸಿಕೊಳ್ಳಬೇಕು. ಅಂಥದೇನಾದರೂ ಕಂಡುಬಂದರೆ ವೈದ್ಯರನ್ನು ಕಾಣಬೇಕು.


ವೈದ್ಯರು ಸಾಮಾನ್ಯ ಚೆಕಪ್‌ನಲ್ಲೂ ನಿಮ್ಮ ನಾಲಿಗೆ ನೋಡುವುದೇಕೆ ಎಂದು ಯೋಚಿಸಿದ್ದೀರಾ? ಆ ಮಾಡಿ ಎನ್ನುತ್ತಾ ನಾಲಿಗೆ ಹಾಗೂ ಕಿರುನಾಲಿಗೆ ನೋಡಿ ಅರ್ಧ ನಿಮಿಷದಲ್ಲಿ ಆರೋಗ್ಯ ಅಳೆಯುತ್ತಾರೆ ವೈದ್ಯರು. ಏಕೆಂದರೆ ನಾಲಿಗೆ ನಮ್ಮ ಆರೋಗ್ಯದ ಬಗ್ಗೆ ಸಾಕಷ್ಟನ್ನು ಹೇಳುತ್ತದೆ. 

ಆರೋಗ್ಯದ ವಿಷಯಕ್ಕೆ ಬಂದರೆ ನಾವು ನಾಲಿಗೆಯನ್ನು ನೆಗ್ಲೆಕ್ಟ್ ಮಾಡುವುದೇ ಹೆಚ್ಚು. ಬ್ರಶ್ ಮಾಡುವಾಗ ಹೊರತುಪಡಿಸಿದರೆ ಅದನ್ನು ನಾವು ನೋಡುವುದೂ ಇಲ್ಲ. ಆದರೆ, ನಮ್ಮ ಆರೋಗ್ಯದ ವಿಷಯದಲ್ಲಿ ನಾಲಿಗೆ ಕೂಡಾ ಪ್ರಮುಖವಾದ ಅಂಗ. ಅದಿಲ್ಲದೆ ನಾವು ತಿನ್ನಲಾಗಲ್ಲ, ಕುಡಿಯಲಾಗುವುದಿಲ್ಲ, ರುಚಿ ನೋಡಲು, ಜಗಿಯಲು, ಮಾತನಾಡಲು ಯಾವುದಕ್ಕೂ ಆಗುವುದಿಲ್ಲ. ಈ ಛೋಟುದ್ದ ವೀರ ಮಾತನಾಡಿ ಹೇಳೋದು ಸಾಕಷ್ಟು. ಆದರೆ, ಮಾತನಾಡದೆಯೇ ಆರೋಗ್ಯದ ಬಗ್ಗೆ ಏನೇನೆಲ್ಲ ಹೇಳ್ತಾನೆ ನೋಡೋಣ. 

Tap to resize

Latest Videos

ನಾಲಿಗೆ ಏಕೆ ಕೆಂಪು?
ನಮ್ಮ ನಾಲಿಗೆಗೆ ಚರ್ಮವಿಲ್ಲ. ಬದಲಿಗೆ ಅದು ಪಿಂಕ್ ಆದ ಒದ್ದೆ ಟಿಶ್ಯೂ ಮ್ಯುಕೋಸಾದಿಂದ ಕವರ್ ಆಗಿದೆ. ಅಲ್ಲದೆ ರಕ್ತವು ಇಲ್ಲಿಗೆ ಹೆಚ್ಚಾಗಿ ಹರಿದು ಇದನ್ನು ನಿಭಾಯಿಸುತ್ತದೆ. ಈ ಕೆಂಪು ರಕ್ತ ಹಾಗೂ ಪಿಂಕ್ ಮ್ಯುಕೋಸಾ ಸೇರಿ ನಾಲಿಗೆ ತನ್ನ ಬಣ್ಣ ಪಡೆದುಕೊಂಡಿದೆ. ಆರೋಗ್ಯಯುತ ನಾಲಿಗೆ ಯಾವಾಗಲೂ ಈ ಪಿಂಕ್-ಕೆಂಪು ಮಿಕ್ಸ್ ಬಣ್ಣವನ್ನೇ ಹೊಂದಿರುತ್ತದೆ. ಹಾಗಾಗಿ, ಬಣ್ಣ ಸ್ವಲ್ಪ ಬದಲಾದರೂ ಅದನ್ನು ಅನಾರೋಗ್ಯಕಾರಿ ಎಂದೇ ಪರಿಗಣಿಸಲಾಗುತ್ತದೆ. ಸಾಮಾನ್ಯವಾಗಿ ಇದು ಕಪ್ಪು, ನೀಲಿ, ಕೋರೈಸುವ ಕೆಂಪು, ನೇರಳೆ, ಬಿಳಿ ಹಾಗೂ ಹಳದಿ ಬಣ್ಣಕ್ಕೆ ತಿರುಗಬಹುದು. ಹಾಗಾದರೆ ಈ ಬಣ್ಣಗಳು ಯಾವ ಅನಾರೋಗ್ಯವನ್ನು ಸೂಚಿಸುತ್ತವೆ ನೋಡೋಣ. 

ಆರೋಗ್ಯವನ್ನು ನಾಲಿಗೆಯಿಂದ ಪರೀಕ್ಷಿಸಿಕೊಳ್ಳಿ

ಬಿಳಿ
ಬಿಳಿಯಾದ ನಾಲಿಗೆ ಬಹಳ ಸಾಮಾನ್ಯವಾಗಿ ಕಂಡುಬರುವಂಥದ್ದು. ಇದು ಸಾಮಾನ್ಯವಾಗಿ ಬಾಯಿಯನ್ನು ಸರಿಯಾಗಿ ಸ್ವಚ್ಛವಾಗಿಟ್ಟುಕೊಳ್ಳುತ್ತಿಲ್ಲ ಎಂದು ತೋರಿಸುತ್ತದೆ. ಅದಲ್ಲದೆಯೂ ಬಿಳಿ ನಾಲಿಗೆಯು,
- ಕ್ಯಾಂಕರ್ ಸೋರ್: ನಾಲಿಗೆ ಮಧ್ಯದಲ್ಲಿ ಬಿಳಿ ಅಥವಾ ಹಳದಿ ಬಣ್ಣ ಕಂಡುಬರುತ್ತಿದ್ದು ಅದು ನೋಯುತ್ತಿದ್ದರೆ ಕ್ಯಾಂಕರ್ ಸೋರ್ ಎನ್ನಲಾಗುತ್ತದೆ. ಇದು ನೋವೊಂದನ್ನು ಬಿಟ್ಟರೆ ಅಪಾಯಕಾರಿಯೇನಲ್ಲ. ಆದರೆ, ಪದೇ ಪದೆ ಬರುತ್ತಿದ್ದರೆ ಮಾತ್ರ ಏಕೆಂದು ಪರೀಕ್ಷೆ ಮಾಡಿಸಿಕೊಳ್ಳಬೇಕು. 
- ಲುಕೋಪ್ಲೇಕಿಯಾ: ತಂಬಾಕು ಅಗಿದು ಅಗಿದು ಕಾಣಿಸಿಕೊಳ್ಳುವ ಸಮಸ್ಯೆ ಇದು. ನಾಲಿಗೆಯಲ್ಲಿ ಕಿರಿಕಿರಿ ಕಾಣಿಸಿಕೊಳ್ಳುತ್ತದೆ. ನಾಲಿಗೆ ಹಾಗೂ ಕೆನ್ನೆಯ ಒಳಭಾಗ ಬಿಳಿ ಬಿಳಿಯಾಗುತ್ತದೆ.
- ಓರಲ್ ತ್ರಶ್(ಕ್ಯಾಂಡಿಡಿಯಾಸಿಸ್): ಕ್ಯಾಂಡಿಡಾ ಅಲ್ಬಿಕಾನ್ಸ್ ಎಂಬ ಯೀಸ್ಟ್ ನಾಲಿಗೆಯ ಮೇಲೆ ಬಿಳಿ ಪ್ಯಾಚ್ ಬರಲು ಕಾರಣವಾಗುತ್ತದೆ. ಸಾಮಾನ್ಯವಾಗಿ ರೋಗ ನಿರೋಧಕ ಶಕ್ತಿ ಕಡಿಮೆ ಇರುವ ಮಕ್ಕಳು ಹಾಗೂ ವೃದ್ಧರಲ್ಲಿ ಇದು ಜಾಸ್ತಿಯಾದರೂ ಯಾರಿಗೆ ಬೇಕಾದರೂ ಹೀಗಾಗಬಹುದು.

ಕಪ್ಪು
ಇದೇನು ಅನಾರೋಗ್ಯಕಾರಿ ಕಂಡಿಶನ್ ಅಲ್ಲ. ಆದರೆ ಕಪ್ಪು ನಾಲಿಗೆಯು ಆ್ಯಂಟಿಬಯೋಟಿಕ್ಸ್ ರೀತಿಯ ಒಟಿಸಿ ಮೆಡಿಕೇಶನ್ ತೆಗೆದುಕೊಳ್ಳುವುದರಿಂದ, ಮೌತ್‌ವಾಶ್ ಉತ್ಪನ್ನಗಳ ಬಳಕೆಯಿಂದ, ಬಾಯಿ ಸ್ವಚ್ಛತೆ ಕೊರತೆಯಿಂದ ಹಾಗೂ ತಂಬಾಕಿನ ಬಳಕೆಯಿಂದಲೂ ಆಗಬಹುದು. 

ನೀಲಿ
ನಾಲಿಗೆ ನೀಲಿಯಿದ್ದರೆ ಅದನ್ನು ವೈದ್ಯಕೀಯವಾಗಿ ಎಮರ್ಜೆನ್ಸಿ ಎಂದು ತಿಳಿಯಬೇಕು. ದೇಹದ ಇತರ ಭಾಗಗಳಲ್ಲಿ ತೋರುವಂತೆ ನೀಲಿ ನಾಲಿಗೆ ಕೂಡಾ ರಕ್ತ ಸಂಚಾರವಾಗದ್ದನ್ನು ಸೂಚಿಸುತ್ತದೆ. ಇದಲ್ಲದೆ ನೀಲಿ ನಾಲಿಗೆಯು ಆಕ್ಸಿಜನ್ ಸಪ್ಲೈ ಕಳೆದುಕೊಂಡದ್ದನ್ನು ಕೂಡಾ ಸೂಚಿಸುತ್ತಿರಬಹುದು. ಇದನ್ನು ಸೈಯನೋಸಿಸ್ ಎನ್ನಲಾಗುತ್ತದೆ. ಇದು ರಕ್ತ ಸಂಬಂಧಿ ಕಾಯಿಲೆಗಳು, ರಕ್ತನಾಳ ರೋಗಗಳು ಹಾಗೂ ಕಾರ್ಡಿಯಾಕ್ ಸಮಸ್ಯೆಯಿದ್ದಾಗ ಆಗಬಹುದು. 

ಅನಂತ್‌ ಕುಮಾರ್ ನಾಲಿಗೆ ಕಟ್ ಮಾಡಿದವರಿಗೆ ಬಹುಮಾನ

ಬ್ರೈಟ್ ರೆಡ್
ಬ್ರೈಟ್ ರೆಡ್ ನಾಲಿಗೆಗೆ ಗ್ಲಾಸಿಟಿಸ್- ನಾಲಿಗೆಯ ಉರಿ ಸಾಮಾನ್ಯ ಕಾರಣ. ಆದರೆ, ಇದು ಪೋಷಕಾಂಶಗಳ ಕೊರತೆಯನ್ನೂ ಸೂಚಿಸುತ್ತಿರಬಹುದು. ಫೋಲಿಕ್ ಆ್ಯಸಿಡ್ ಹಾಗೂ ವಿಟಮಿನ್ ಬಿ 12 ಕೊರತೆಯಾದಾಗ ಅದರಿಂದ ಈ ರೀತಿ ಕಣ್ಣು ಕುಕ್ಕುವ ಕೆಂಪು ಬಣ್ಣಕ್ಕೆ ನಾಲಿಗೆ ತಿರುಗಬಹುದು. 

ನೇರಳೆ
ಈ ಬಣ್ಣಕ್ಕೆ ನಾಲಿಗೆ ತಿರುಗುವುದು ಬಹಳ ಅಪರೂಪ. ಸಾಮಾನ್ಯವಾಗಿ ಬಿ12 ವಿಟಮಿನ್ ಕೊರತೆ ಕಾರಣವಿರಬಹುದು.  ಕೆಲವೊಮ್ಮೆ ನೀಲಿಗೆ ತಿರುಗುವ ಮುನ್ನ ಪರ್ಪಲ್ ಆಗಬಹುದು. ಹಾಗಾಗಿ, ಈ ಬಣ್ಣವನ್ನು ಕಡೆಗಣಿಸುವಂತಿಲ್ಲ. ಏಕೆಂದರೆ ಕೆಲ ಕಾಯಿಲೆಗಳು ಕೂಡಾ ನೇರಳೆ ಬಣ್ಣದ ನಾಲಿಗೆಗೆ ಕಾರಣವಾಗಬಹುದು. 

ಹಳದಿ
ನೇರಳೆಯಂತೆ ಹಳದಿ ಬಣ್ಣ ಕೂಡಾ ಅಪರೂಪವೇ. ಕಪ್ಪಿಗೆ ತಿರುಗುವ ಮುನ್ನ ಹಳದಿಯಾಗಬಹುದು. ಇದು ಜಾಂಡೀಸನನ್ನು ಕೂಡಾ ಸೂಚಿಸಬಹುದು. 
ಪ್ರತಿದಿನ ಬ್ರಶ್ ಮಾಡುವಾಗ ನಾಲಿಗೆ ಚೆಕ್ ಮಾಡುವುದು ಮರೆಯಬೇಡಿ. ನಾಲಿಗೆ ಸ್ವಚ್ಛಗೊಳಿಸಿಕೊಳ್ಳುವುದು ಕೂಡಾ. 

click me!