ಶ್ರೀಮಂತ ನಗರದಲ್ಲಿ ಮನೆ ಕೆಲಸದವರ ಪಾಡು, ಸೇತುವೆ ಕೆಳಗೆ ಕಾರ್ಡ್‌ಬೋರ್ಡ್ ಬಾಕ್ಸ್‌ನಲ್ಲಿ ಜೀವನ

Published : Apr 26, 2026, 05:35 PM IST
Inside Hong Kong

ಸಾರಾಂಶ

ಶ್ರೀಮಂತ ನಗರದಲ್ಲಿ ಮನೆ ಕೆಲಸದವರ ಪಾಡು, ಸೇತುವೆ ಕೆಳಗೆ ಕಾರ್ಡ್‌ಬೋರ್ಡ್ ಬಾಕ್ಸ್‌ನಲ್ಲಿ ಜೀವನ, ಕಠಿಣ ನಿಯಮ, ನಗರದ ದುಬಾರಿ ಖರ್ಚು ವೆಚ್ಚದಲ್ಲಿ ಮನೆ ಕೆಲಸ ಮಾಡುವವರ ಪಾಡನ್ನು ಇನ್‌ಫ್ಲುಯೆನ್ಸರ್ ಬಯಲು ಮಾಡಿದ್ದಾರೆ. 

ಹಾಂಕಾಂಗ್ (ಏ.26) ಶ್ರೀಮಂತ ನಗರಗಳಲ್ಲಿ ಜೀವನ ದುಬಾರಿ. ಪ್ರತಿಯೊಂದಕ್ಕೂ ಖರ್ಚು ಮಾಡಬೇಕು. ತಿಂಗಳ ಸಂಬಳವೆಲ್ಲಾ ಖರ್ಚು ವೆಚ್ಚಕ್ಕೆ ಸರಿದೂಗುತ್ತದೆ. ಹೀಗಾಗಿ ಖರ್ಚು ಕಡಿಮೆ ಮಾಡಿ ಉಳಿತಾಯ ಮಾಡಲು ಹಲವರು ಇನ್ನಿಲ್ಲದ ಶ್ರಮವಹಿಸುತ್ತಾರೆ. ಬಡತನ, ಸಾಲದ ಹೊರೆಗಳನ್ನು ನೀಗಿಸುಲ ವಿದೇಶಗಳಿಗೆ ಕೆಲಸಕ್ಕೆ ಹೋಗುವ ಬಹುತೇಕರ ಪಾಡು ಹೇಳತೀರದು. ಇದೀಗ ಶ್ರೀಮಂತ ನಗರದಲ್ಲಿ ಮನೆ ಕೆಲಸದವರ ಪಾಡು ಹೇಗಿದೆ ಅನ್ನೋದನ್ನು ಇನ್‌ಫ್ಲುಯೆನ್ಸರ್ ಬಯಲು ಮಾಡಿದ್ದಾರೆ.

ಕಾರ್ಡ್‌ಬೋರ್ಡ್ ಬಾಕ್ಸ್‌ನಲ್ಲಿ ಕಾರ್ಮಿಕರ ಜೀವನ

ಹಾಂಕಾಂಗ್ ವಿಶ್ವದ ಶ್ರೀಮಂತ ನಗರಗಳಲ್ಲಿ ಒಂದು. ಉತ್ತಮ ವೇತನ, ಲೈಫ್‌ಸ್ಟೈಲ್, ಅಭಿವೃದ್ಧಿ ಹೊಂದಿದ ನಗರ ವ್ಯವಸ್ಥೆ ನೋಡಿದರೆ ಹಾಂಕಾಂಗ್ ಎಲ್ಲರಿಗೂ ಇಷ್ಟವಾಗುತ್ತದೆ. ಶ್ರೀಮಂತ ನಗರದಲ್ಲಿ ಜೀವನ ಕೂಡ ಬಲು ದುಬಾರಿ. ಹಾಂಕಾಂಗ್‌ನಲ್ಲಿ ಹಲವು ದೇಶಗಳ ಜನರು ಮನೆಗೆಲಸಕ್ಕೆ ಆಗಮಿಸುತ್ತಾರೆ. ಮನೆ ಕೆಲೆಸ, ಮಕ್ಕಳ ಆರೈಕೆ ಸೇರಿದಂತೆ ಹಲವು ಕೆಲಸಗಳ ಮೂಲಕ ಬದುಕು ಕಟ್ಟಿಕೊಳ್ಳುತ್ತಾರೆ.ಇದೀಗ ಹಾಂಕಾಂಗ್‌ನಲ್ಲಿ ಹೀಗೆ ಮನೆ ಕೆಲಸ ಮಾಡುವವರು ತಮ್ಮ ರಜಾ ದಿನವನ್ನು ಸೇತುವೆ ಕೆಳಗೆ, ರಸ್ತೆ ಬದಿ, ಬಸ್ಟ್‌ಸ್ಟಾಂಡ್‌ಗಳಲ್ಲಿ ಕಳೆಯುತ್ತಾರೆ. ಹೀಗೆ ಕಾರ್ಡ್‌ಬೋರ್ಡ್ ಬಾಕ್ಸ್ ಒಳಗೆ ಮಲಗುತ್ತಿರುವ ಹಲವು ಕಾರ್ಮಿಕರ ಜೀವನ ಬಯಲಾಗಿದೆ.

ಭಾನುವಾರ ಲಕ್ಷಾಂತರ ಮಂದಿ ಬೀದಿಗೆ

ಭಾನುವಾರ ಬಂದರೆ ಸಾಕು ಲಕ್ಷಾಂತರ ಮನೆ ಕೆಲಸ ಮಾಡುವ ಕಾರ್ಮಿಕರು ಸೇತುವೆ, ಪಾರ್ಕ್ ಸೇರಿದಂತೆ ಸಾರ್ವಜನಿಕ ಪ್ರದೇಶಗಳಲ್ಲಿ ಜೀವನ ಸಾಗಿಸುತ್ತಾರೆ. ರಾತ್ರಿ ನಿದ್ದೆ ಇದೇ ಬಯಲಿನಲ್ಲಿ. ತಮಗೆ ಸುರಕ್ಷಿತ ಎಂದು ಎನಿಸಿದರೆ ಸಾಕು ಅಲ್ಲೇ ದಿನ ದೂಡುತ್ತಾರೆ. ಈ ಕುರಿತು ಇನ್‌ಫ್ಲುಯೆನ್ಸರ್ ವಿಡಿಯೋ ಮೂಲಕ ಬಹಿರಂಗಪಡಿಸಿದ್ದಾರೆ.

ಹಾಂಕಾಂಗ್‌ನಲ್ಲಿ ಲೀವ್ ಇನ್ ರೂಲ್ ಮತ್ತಷ್ಟು ಕಠಿಣಗೊಂಡಿದೆ. ಇಲ್ಲಿ ಮನೆಗೆಲೆಸಕ್ಕೆ ನೇಮಕ ಮಾಡಿಕೊಳ್ಳುವ ಮಾಲೀಕರು ಅವರಿಗೆ ವಸತಿ ನೀಡಬೇಕು. ಮನೆಯಲ್ಲಿ ಅಥವಾ ಬೇರೆ ಕಡೆ ವಸತಿ ನೀಡಬೇಕು. ಮನೆಗೆಲಸದಾಳುಗಳಿಗೆ ಒಂದು ದಿನ ವಾರದ ರಜೆ ನೀಡಬೇಕು. ಹೀಗಾಗಿ ಮಾಲೀಕರು ತಮ್ಮ ಮನೆಯಲ್ಲೇ ಕೆಲಸದವರಿಗೆ ಸಣ್ಣ ಜಾಗ ನೀಡುತ್ತಾರೆ. ಆದರೆ ಒಂದು ದಿನ ಕಡ್ಡಾಯ ರಜೆ ದಿನ ಅಂದರೆ ಭಾನುವಾರ ಇವರು ಮಾಲೀಕರ ಮನೆಯಿಂದ ಅನಿವಾರ್ಯವಾಗಿ ಹೊರಬರಬೇಕು. ಹೀಗೆ ಹೊರಗೆ ಬರುವ ಮನೆಕೆಲಸದವರಿಗೆ ಬೇರೆ ವಸತಿ ಅಥವಾ ಮಲಗಲು ಜಾಗವಿಲ್ಲ. ಹೀಗಾಗಿ ಸೇತುವೆ ಕೆಳಗೆ, ಪಾರ್ಕ್ ಸೇರಿದಂತೆ ಸಾರ್ವಜನಿಕ ಪ್ರದೇಶದಲ್ಲಿ ಮಲಗುತ್ತಾರೆ. ಇನ್ನು ಇದಕ್ಕಾಗಿ ಮನೆ ಬಾಡಿಗೆ ಪಡೆಯುವುದು ಸಾಧ್ಯವಿಲ್ಲ. ಕಾರಣ ಅತೀ ದುಬಾರಿ.

 

 

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಮಗಳು ನೈಸಾ ಹೊಸ ಫೋನ್ ಒಡೆದುಹಾಕಿದ್ದೆ, 3 ವರ್ಷ ಮಾತಾಡಿರಲಿಲ್ಲ: ಕಾಜೋಲ್ ಶಾಕಿಂಗ್ ಮಾತು
ಮುಖದ ಮೇಲಿನ ಕಪ್ಪು ಕಲೆ ಹೋಗಲಾಡಿಸಲು ಹಿತ್ತಲಲ್ಲಿರುವ ಈ ಒಂದು ಹಣ್ಣು ರಾಮಬಾಣ