ಆಕೆ ಬಿಕಿನಿ ಧರಿಸಿದರೆ ಜಗತ್ತೇ ಖುಷಿಯಾಗುವುದೇಕೆ?

By Suvarna NewsFirst Published Jan 15, 2020, 4:39 PM IST
Highlights

ಈಕೆ ಮೊದಲ ಬಾರಿ ಟೂಪೀಸ್ ಧರಿಸಿ ಬೀಚಿನಲ್ಲಿ ಫ್ರೆಂಡ್‌ಗಳ ಜೊತೆ ಆಡಿದ್ದು, ಅವಳ ಬಾಯ್‌ಫ್ರೆಂಡ್ ಜೊತೆಗಿನ ಅಫೇರ್, ಅವಳ ಮೊದಲ ಅಪ್ಪುಗೆ, ಮೊದಲ ಕಿಸ್, ಗಂಡಾಗಿದ್ದ ಅವಳು ಹೆಣ್ಣಾಗಲು ಮಾಡಿಕೊಂಡ ಮೊದಲ ಸರ್ಜರಿ, ಸರ್ಜರಿಗಳಿಂದ ಅವಳ ಮೈಮೇಲೆ ಆಗಿರುವ ಕಲೆಗಳು...ಇದೆಲ್ಲವನ್ನೂ ಇಡೀ ಅಮೆರಿಕಾ ಹತ್ತಿರದಿಂದ ನೋಡಿದೆ. ಯಾಕೆಂದರೆ ಅದೆಲ್ಲವೂ ರಿಯಾಲಿಟಿ ಶೋ ಆಗಿ ನೇರ ಪ್ರಸಾರ ಆಗುತ್ತಿವೆ.

ಅವಳ ಹೆಸರು ಜಾಝ್ ಜೆನ್ನಿಂಗ್ಸ್. ವಯಸ್ಸು ಹದಿನೆಂಟು ವರ್ಷ. ಮೊದಲ ಬಾರಿಗೆ ಆಕೆ ಬಿಕಿನಿ ಧರಿಸಿ ಓಡೋಡಿ ಹೋಗಿ ಸಮುದ್ರದಲೆಗಳ ಮಧ್ಯೆ ಆಡಿದಾಗ ಅವಳಿಗಾದ ಆನಂದ ಬಣ್ಣಿಸಲು ಸಾಧ್ಯವಿಲ್ಲ. ಮತ್ತು, ಆಕೆಯ ಸಂಭ್ರಮವನ್ನು ಇಡೀ ಅಮೆರಿಕಾ ನೋಡಿ ಕಣ್ತುಂಬಿಕೊಂಡಿತು!

ಆಕೆ ಇಷ್ಟೊಂದು ಸಂಭ್ರಮಿಸಲು ಕಾರಣ, ಈ ಮೊದಲು ಆಕೆ ಬಿಕಿನಿ ಧರಿಸಿದವಳಲ್ಲ. ಯಾಕೆಂದರೆ ಆಕೆ ಗಂಡಸರ ಶಾರ್ಟ್ಸ್, ಅಂಗಿಯಲ್ಲಿದ್ದಳು! ಅರ್ಥಾತ್, ಗಂಡಸಾಗಿದ್ದಳು!

ಇದು ಜಾಝ್ ಜೆನ್ನಿಂಗ್ಸ್ ಎಂಬ ಹುಡುಗ ಅಲಿಯಾಸ್ ಹುಡುಗಿಯ ಹೃದಯಂಗಮ ಓಪನ್ ಶೋ ಕತೆ.

ಹೀಗ್ ನಡೆಯುತ್ತೆ ಮಂಗಳಮುಖಿಯರ ಶವ ಸಂಸ್ಕಾರ

ಈಕೆ ಮೊದಲ ಬಾರಿ ಟೂಪೀಸ್ ಧರಿಸಿ ಬೀಚಿನಲ್ಲಿ ಫ್ರೆಂಡ್‌ಗಳ ಜೊತೆ ಆಡಿದ್ದು, ಅವಳ ಬಾಯ್‌ಫ್ರೆಂಡ್ ಜೊತೆಗಿನ ಅಫೇರ್, ಅವಳ ಮೊದಲ ಅಪ್ಪುಗೆ, ಮೊದಲ ಕಿಸ್, ಗಂಡಾಗಿದ್ದ ಅವಳು ಹೆಣ್ಣಾಗಲು ಮಾಡಿಕೊಂಡ ಮೊದಲ ಸರ್ಜರಿ, ಸರ್ಜರಿಗಳಿಂದ ಅವಳ ಮೈಮೇಲೆ ಆಗಿರುವ ಕಲೆಗಳು...ಇದೆಲ್ಲವನ್ನೂ ಇಡೀ ಅಮೆರಿಕಾ ಹತ್ತಿರದಿಂದ ನೋಡಿದೆ. ಯಾಕೆಂದರೆ ಅದೆಲ್ಲವೂ ರಿಯಾಲಿಟಿ ಶೋ ಆಗಿ ನೇರ ಪ್ರಸಾರ ಆಗುತ್ತಿವೆ.

ಅಮೆರಿಕದ ಸೌತ್ ಫ್ಲೋರಿಡಾದಲ್ಲಿ ಒಂದು ಯಹೂದಿ ಕುಟುಂಬದಲ್ಲಿ 2000ನೇ ಇಸವಿಯಲ್ಲಿ ಜನಿಸಿದ ಈಕೆ ಹುಟ್ಟುವಾಗ ಗಂಡು ಅಂತ ಘೋಷಿಸಲಾಗಿತ್ತು. ಆದರೆ ಆಕೆಗೆ ಆರು ವರ್ಷವಾಗುತ್ತಲೇ, ತಾನು ಗಂಡಲ್ಲ ಹೆಣ್ಣು ಅಂತ ಅವಳೇ ಘೋಷಿಸಿಕೊಂಡಳು. ಈಕೆಯ ಫ್ಯಾಮಿಲಿ ಈಕೆಗೆ ತುಂಬ ಮುಕ್ತ ಸಪೋರ್ಟ್ ನೀಡಿತು. ಇಡೀ ಫ್ಯಾಮಿಲಿ ಒಂದು ರಿಯಾಲಿಟಿ ಶೋದಲ್ಲಿ ಕಾಣಿಸಿಕೊಂಡು, ಜಾಝ್‌ನ ಲಿಂಗ ಪರಿವರ್ತನೆ ಬಗ್ಗೆ ಆಸಕ್ತಿ ವ್ಯಕ್ತಪಡಿಸಿತು. 

ಅಲ್ಲಿಂದೀಚೆಗೆ ಜಾಝ್ ಹಲವು ರಿಯಾಲಿಟಿ ಶೋಗಳಲ್ಲಿ ಕಾಣಿಸಿಕೊಂಡಿದ್ದಾಳೆ. ಐ ಆಮ್ ಜಾಝ್ ಆಕೆಯದೇ ಶೋ. ಟಿವಿಯಲ್ಲಿ ಹಾಗೂ ಯೂಟ್ಯೂಬ್‌ನಲ್ಲೂ ಪ್ರಸಾರವಾಗುತ್ತಿದೆ. ಆಕೆಯನ್ನು ಅಮೆರಿಕದ ಅತಿ ಕಿರಿಯ ವಯಸ್ಸಿನ, ಸಾರ್ವಜನಿಕವಾಗಿ ದಾಖಲೀಕರಣ ಮಾಡಿಕೊಂಡ ಟ್ರಾನ್ಸ್‌ಜೆಂಡರ್‌ ಹುಡುಗಿ ಎಂದೇ ಗುರುತಿಸಲಾಗುತ್ತಿದೆ. ಆಕೆಯೀಗ ಅವಳ ಹಾಗೆ ಆಗಬಯುಸತ್ತಿರುವ ಎಲ್ಲ ಹುಡುಗ ಹುಡುಗಿಯರಿಗೆ ಸ್ಫೂರ್ತಿ. ಆಕೆಗೆ ಯೂಟ್ಯೂಬ್‌ನಲ್ಲೂ ಇನ್‌ಸ್ಟಾಗ್ರಾಮ್‌ನಲ್ಲೂ ಲಕ್ಷಾಂತರ ಫಾಲೋವರ್‌ಗಳಿದ್ದಾರೆ.

ಈ ಜಾಝ್‌ ಇತ್ತೀಚೆಗೆ ಟ್ವಿಟರ್‌ನಲ್ಲಿ ಹಾಗೂ ಇನ್‌ಸ್ಟಾಗ್ರಾಮ್‌ನಲ್ಲಿ ತನ್ನ ಸ್ವಿಮ್‌ಸೂಟ್‌ ಫೋಟೊಗಳನ್ನು ಶೇರ್‌ ಮಾಡಿಕೊಂಡಳು. ಈ ಉಡುಗೆಯಲ್ಲಿ ಬಲು ಮುದ್ದಾಗಿ ಕಾಣುವ ಈಕೆ, ಸೂಕ್ಷ್ಮವಾಗಿ ನೋಡಿದರೆ ಅವಳ ತೊಡೆಯಲ್ಲಿ ಲಿಂಗ ಪರಿವರ್ತನೆಯ ಸರ್ಜರಿಯ ಕಲೆಗಳನ್ನೂ ಹೊತ್ತಿರುವುದನ್ನು ಕಾಣಬಹುದು. ಇದನ್ನೆಲ್ಲ ಆಕೆ ತನ್ನ ಯುದ್ಧರಂಗದ ಕಲೆಗಳು'" ಎಂದು ಕರೆದುಕೊಂಡಿದ್ದಾಳೆ. ಇದನ್ನು ಪ್ರದರ್ಶಿಸಲು ಆಕೆಗೆ ಯಾವ ಹಿಂಜರಿಕೆಯೂ ಇಲ್ಲ.

ಮಂಗಳಮುಖಿಯರ ಕೃಷಿ ಸಾಹಸವಿದು..

2013ರಲ್ಲಿ ಆಕೆ ಇನ್ನೊಂದು ಚಾಲೆಂಜ್‌ ಎದುರಿಸಿದಳು. ಅಮೆರಿಕದ ಸಾಕರ್‌ ಫೆಡರೇಶನ್‌, ಹುಡುಗಿಯರ ಸಾಕರ್‌ ಟೀಮ್‌ನಲ್ಲಿ ಆಕೆಯನ್ನು ಸೇರಿಸಿಕೊಳ್ಳಲು ನಿರಾಕರಿಸಿತು. ಆಕೆ ನ್ಯಾಯಾಂಗ, ಮೀಡಿಯಾ, ತನ್ನ ಜನಪ್ರಿಯತೆ ಎಲ್ಲವನ್ನೂ ಬಳಸಿಕೊಂಡು ಈ ನಿಯಮದ ವಿರುದ್ಧ ಹೋರಾಡಿದಳು. ತಾನು ಹುಡುಗಿ ಎಂದೇ ಸಾಧಿಸಿದಳು. ಕಡೆಗೂ ಜಯ ಗಳಿಸುವಲ್ಲಿ ಯಶಸ್ವಿಯಾದಳು. ಈಗ ಸಾಕರ್ ಒಕ್ಕೂಟ ಟ್ರಾನ್ಸ್‌ಜೆಂಡರ್‌ಗಳಿಗೂ ಅವಕಾಶ ಕಲ್ಪಿಸುವಲ್ಲಿ ಮುಂದಾಗಿದೆ. ೨೦೧೪ರ ಮೋಸ್ಟ್‌ ಎನ್‌ಫ್ಲುಯೆನ್ಸಿಯಲ್‌ ಟೀನ್‌ ಎಂದು ಪ್ರತಿಷ್ಠಿತ ಟೈಮ್‌ ಮ್ಯಾಗಜಿನ್‌ ಈಕೆಯನ್ನು ಹೆಸರಿಸಿದೆ.

2013ರಲ್ಲೇ ಈಕೆ ಬಾರ್ಬರಾ ವಾಲ್ಟರ್‌ ಎಂಬಾಕೆಯ ಟಿವಿ ಶೋದಲ್ಲಿ ಮಾತನಾಡುತ್ತ, ಹುಡುಗರ ಕಡೆಗೆ ತನಗೆ ರೊಮ್ಯಾಂಟಿಕ್‌ ಆಸಕ್ತಿ ಇರುವುದಾಗಿ ಹೇಳಿಕೊಂಡಿದ್ದಳು. ತನಗೆ ಮದುವೆಯಾಗುವ, ಮಕ್ಕಳನ್ನು ಹೆರುವ ಆಸಕ್ತಿ ಇದೆ ಎಂದೂ ಹೇಳಿಕೊಂಡಿದ್ದಳು, ಇತ್ತೀಚೆಗೆ, ಆಕೆಗೊಬ್ಬ ಬಾಯ್‌ಫ್ರೆಂಡ್‌ ಇದ್ದಾನ ಎಂದು ಕೂಡ ಗೊತ್ತಾಗಿತ್ತು. ಆಹ್ಮಿರ್‌ ಎಂಬ ಹೆಸರಿನ ಈ ಹುಡುಗನ ಜೊತೆಗಿನ ಆಕೆಯ ಗೆಳೆತನ, ಬೆಳೆದು ಫಲ ಕೊಡುವ ಮುನ್ನವೇ ಅವರಿಬ್ಬರೂ ಬೇರೆ ಬೇರೆಯಾಗಿದ್ದರು. ಅದಕ್ಕೆ ಕಾರಣ ಆಕೆ ಹೇಳಿಕೊಂಡದ್ದು ಹೀಗೆ- ನನಗಿನ್ನೂ ಜಗತ್ತನ್ನು ಬಹಳ ನೋಡುವುದಿದೆ. ನಾನು ಒಂದು ಸಂಬಂಧಕ್ಕೆ ಕಟ್ಟುಬಿದ್ದು ಅಲ್ಲೇ ಉಳಿಯೋಕೆ ಬಯಸುವುದಿಲ್ಲ. ಜಗತ್ತು ಸುತ್ತುತ್ತೇನೆ ನೋಡುತ್ತೇನೆ.

ನೀನೇ ಬೇಕೆಂದು ಹಿಂದೆ ಬಿದ್ದ ಮಂಗಳಮುಖಿ

click me!