BB7 ಡಬಲ್‌ ಎಲಿಮಿನೇಷನ್‌: ಇವ್ರಿಬ್ಬರು ಬೆಸ್ಟ್‌ ಫ್ರೆಂಡ್ಸ್‌ ಅಂತ ಪ್ರೂವ್‌ ಆಯ್ತಾ?

Suvarna News   | Asianet News
Published : Jan 13, 2020, 01:35 PM IST
BB7 ಡಬಲ್‌ ಎಲಿಮಿನೇಷನ್‌: ಇವ್ರಿಬ್ಬರು ಬೆಸ್ಟ್‌ ಫ್ರೆಂಡ್ಸ್‌ ಅಂತ ಪ್ರೂವ್‌ ಆಯ್ತಾ?

ಸಾರಾಂಶ

ಕನ್ನಡದ ಬಿಗ್‌‌ಬಾಸ್‌ ಮನೆಯಲ್ಲಿ 90 ದಿನಗಳನ್ನು ಪೂರೈಸಿದ ಬೆಸ್ಟ್‌ ಫ್ರೆಂಡ್ಸ್‌ 'ಅಗ್ನಿಸಾಕ್ಷಿ' ಪ್ರಿಯಾಂಕ ಮತ್ತು 'ಕಿನ್ನರಿ' ಭೂಮಿ. ಈ ಇಬ್ಬರು ನಿಜವಾಗಲೂ ಮನೆಯಿಂದ ಹೊರ ಬಂದ್ರಾ? ಸುದೀಪ್‌ ಯಾರಿಗೆ ಕೊಟ್ರು ಸರ್ಪ್ರೈಸ್‌.......

ಕಲರ್ಸ್‌ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಖ್ಯಾತ ರಿಯಾಲಿಟಿ ಶೋ ಬಿಗ್‌ ಬಾಸ್‌ ಸೀಸನ್‌-7, 90 ದಿನಗಳನ್ನು ಪೂರೈಸಿ ಇನ್ನು ಕೆಲವೇ ದಿನಗಳಲ್ಲಿ ಸೆಂಚುರಿ ಬಾರಿಸಲಿದೆ. ಎಂದಿನಂತೆ ಸೋಮವಾರ ನಾಮಿನೇಷನ್‌ ಪ್ರಕ್ರಿಯೆ ನಡೆಯಿತು. ಆದರೆ ಮನೆಯೊಳಗಿದ್ದ ಸ್ಪರ್ಧಿಗಳಿಗೆ ಇದು 'No Elimination week' ಎಂದು ಗೊತ್ತಿರಲಿಲ್ಲ. ಎಲ್ಲರೂ ತಾವು ಸೇಫ್ ಆಗಲು ಮತ್ತೊಬ್ಬರನ್ನು ನಾಮಿನೇಟ್ ಮಾಡುವ ಪ್ರಕ್ರಿಯೆಯನ್ನು ಮುಗಿಸಿಯೇ ಬಿಟ್ಟರು. 

ಅತಿ ಹೆಚ್ಚು ವೋಟ್‌ ಗಿಟ್ಟಿಸಿದ ಚಂದನ್‌ ಆಚಾರ್ ಗೇಮ್‌ ಪ್ಲ್ಯಾನ್‌ಗೆ ಮನಸೋತ ಜನ!

ಶನಿವಾರ ನಡೆಯಬೇಕಿದ್ದ ಎಲಿಮಿನೇಷನ್‌ ಡಿಫರೆಂಟ್‌ ಆಗಿರಲಿ ಎಂಬ ಉದ್ದೇಶದಿಂದ ಈ ಕಾರ್ಯ ಭಾನುವಾರವೇ ನಡೆಯಿತು. ಈ ವಾರ ಅತಿ ಹೆಚ್ಚು ವೋಟ್ ಪಡೆದುಕೊಂಡು, ದೀಪಿಕಾ ಮೊದಲು ಸೇಫ್‌ ಆದರೆ ಚಂದನ್‌ ಆಚಾರ್‌ ಸೇಫ್ ಆದ ಎರಡನೇ ಸ್ಪರ್ಧಿ. ಡಬಲ್‌ ಎಲಿಮಿನೇಷನ್‌ ಎಂದು ಪ್ರಿಯಾಂಕ ಹಾಗೂ ಭೂಮಿ ಶೆಟ್ಟಿ ಅವರನ್ನು ಹೊರ ಬರಲು ಸುದೀಪ್‌ ಹೇಳುತ್ತಾರೆ. ಬಿಗ್ ಬಾಸ್ ಮನೆಯೊಳಗೆ ವಿಟಿ ನೋಡಿದ ಸ್ಪರ್ಧಿಗಳು ಭಾವುಕರಾದರು. ಹೊರಡಲು ಸಿದ್ಧತೆ ಮಾಡಿಕೊಳ್ಳುವಾಗ 'ಇಬ್ಬರಿಗೆ 5 ನಿಮಿಷ ಸಮಯವಿದೆ. ಬೇಗ ಪ್ಯಾಕ್‌ ಮಾಡಿಕೊಂಡು ಅಲ್ಲೆ ಇರಿ, ಮುಂದಿನ ವಾರ ಭೇಟಿ ಆಗುತ್ತೇನೆ' ಎಂದ ಸುದೀಪ್‌ 90 ದಿನದ ಪ್ರಯುಕ್ತ ಬಿಗ್ ಸರ್ಪ್ರೈಸ್‌ ನೀಡಿದ್ದಾರೆ.

BiggBoss7: ಪ್ರಿಯಾಂಕಾಗೆ ಬೈ ಹೇಳಲು ಬಂದಿದ್ದ ಹ್ಯಾಂಡ್ಸಮ್ ಹೀರೋ ಯಾರು ನೋಡಿ!

ಈ ರೀತಿ ಎಲಿಮಿನೇಷನ್‌ ಸರ್ಪ್ರೈಸ್‌ನನ್ನು ಹರೀಶ್‌ ರಾಜ್‌ ಎದುರಿಸಿದ್ದರು. ಮನೆಯಿಂದ ಹೊರ ಬರಲು ಹೇಳಿ, ಕೆಲವು ನಿಮಿಷಗಳ ಕಾಲ ಸ್ಟೋರ್‌ ರೂಮಿನಿಂದ ಹರೀಶ್‌ರನ್ನು ಮತ್ತೆ ಮನೆಯೊಳಗೆ ಬರ ಮಾಡಿಕೊಡಲಾಗಿತ್ತು. 

ತಾವು ಮನೆಯಿಂದ ಹೊರ ಬರಬೇಕೆಂದು ಬಿಗ್ ಬಾಸ್ ಈ ಉಭಯ ಕಿರುತೆರೆ ನಟಿಯರಿಗೆ ಆದೇಶಿಸಿದಾಗ, ಇಬ್ಬರಿಗೂ ಆಕಾಶವೇ ಕಳಚಿ ಬಿದ್ದಂತಾಗಿತ್ತು. ಇಬ್ಬರೂ ಭಾವುಕರಾಗಿ, ಕಣ್ಣೀರಿಟ್ಟಿದ್ದರು. ಅಬ್ಬಾ, ಮುಂದಿನ ವಾರ ಸಿಕ್ತೀನಿ. ಅಲ್ಲೀ ತನಕ ಅಲ್ಲಿಯೇ ಇರಿ, ಎಂದು ಕಿಚ್ಚ ಆದೇಶಿಸಿದಾಗ, ವಾವ್ ಎನ್ನುವ ಫೀಲಿಂಗ್. ಇಬ್ಬರೂ ಫುಲ್ ಖುಷ್. ಆದರೆ. ನೋಡೋಣ ಬರುವ ದಿನಗಳಲ್ಲಿ ಯಾರು ಯಾರು ಮನೆಯಿಂದ ಹೊರ ಬರುತ್ತಾರೆಂದು?

ಚೆನ್ನಾಗಿ ಆಡಿಯೂ ದುನಿಯಾ ರಶ್ಮಿ ಬಿಗ್ ಬಾಸ್‌ನಿಂದ ಔಟ್ ಆಗಿದ್ಯಾಕೆ?

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

Karna Serial ನಿಧಿ ಅರೆಸ್ಟ್​: ಪೊಲೀಸರು ಬಂಧಿಸಿ ಜೈಲಿಗೆ ಹಾಕಿದ್ದೇಕೆ? ಅಷ್ಟಕ್ಕೂ ಆಗಿದ್ದೇನು?
ಅಬ್ಬಬ್ಬಾ! ಟ್ವಿಸ್ಟ್‌ ಅಂದ್ರೆ ಇದಪ್ಪಾ- ಎದ್ದು ಬಂದ ಸತ್ತ ಸಂಧ್ಯಾ: ಲಾಯರ್‌ ಭಾರ್ಗವಿನೇ ಜೈಲಿಗೆ ಹೋಗ್ತಾಳಾ?