ಆನ್'ಲೈನ್'ನಲ್ಲಿ ಸೆಕ್ಸ್ ವೆಬ್'ಸೈಟ್ ನೋಡುವವರೆ ಎಚ್ಚರ! ಕಾದಿದೆ ಗ್ರಹಚಾರ

Published : Feb 24, 2017, 01:35 PM ISTUpdated : Sep 22, 2018, 05:21 PM IST
ಆನ್'ಲೈನ್'ನಲ್ಲಿ ಸೆಕ್ಸ್ ವೆಬ್'ಸೈಟ್ ನೋಡುವವರೆ ಎಚ್ಚರ! ಕಾದಿದೆ ಗ್ರಹಚಾರ

ಸಾರಾಂಶ

ಆದರೆ ಸೆಕ್ಸ್ ವೆಬ್'ಸೈಟ್ ನೋಡುಗರಿಗೆ ಒಂದು ತೊಂದರೆ ಕಾದಿದೆ. ತಾವು ತದೇಕಚಿತ್ತದಿಂದ ಸಿಕ್ಸ್ ದೃಶ್ಯಗಳನ್ನು ನೋಡುತ್ತಿರುವುವಾಗ ---

ಸ್ಮಾರ್ಟ್ ಫೋನ್ ಜೊತೆ ಉಚಿತ ಹಾಗೂ ಕಡಿಮೆ ಹಣದಲ್ಲಿ ಇಂಟರ್'ನೆಟ್ ಸೌಲಭ್ಯ ಬಂದ ಮೇಲಂತೂ ಸಣ್ಣ ಹುಡುಗರಿಂದ ಹಿಡಿದು ವೃದ್ಧರವರೆಗೂ ಎಲ್ಲರೂ ವ್ಯಾಟ್ಸ'ಪ್, ಫೇಸ್'ಬುಕ್ ಯುಟ್ಯೂಬ್' ಮುಂತಾದ ಸೈಟ್'ಗಳಲ್ಲಿ ಫುಲ್ ಬ್ಯಸಿ. ಇದರಲ್ಲಿ ಸೆಕ್ಸ್ ವೆಬ್'ಸೈಟ್ ನೋಡುವವರ ಸಂಖ್ಯೆಯೇನು ಕಡಿಮೆಯೇನಿಲ್ಲ.

ಆದರೆ ಸೆಕ್ಸ್ ವೆಬ್'ಸೈಟ್ ನೋಡುಗರಿಗೆ ಒಂದು ತೊಂದರೆ ಕಾದಿದೆ. ತಾವು ತದೇಕಚಿತ್ತದಿಂದ ಸಿಕ್ಸ್ ದೃಶ್ಯಗಳನ್ನು ನೋಡುತ್ತಿರುವುವಾಗ ಅನಾಮಿಕ ಆ್ಯಪ್, ಸಾಫ್ಟ'ವೇರ್'ಗಳು ನಿಮ್ಮ ಮೊಬೈಲ್. ಕಂಪ್ಯೂಟರ್'ಗೆ ಡೌನ್'ಲೋಡ್ ಆಗುತ್ತಿರುವುತ್ತವೆ. ಇವುಗಳು ನಿಮ್ಮ ಗಮನಕ್ಕೆ ಬರುವುದಿಲ್ಲ.

ಈ ಆ್ಯಪ್ ಹಾಗೂ ಸಾಫ್ಟ್'ವೇರ್'ಗಳು ಹ್ಯಾಕರ್ಸ್'ಗಳ ತಂತ್ರವಾಗಿದ್ದು ಡೌನ್'ಲೋಡ್ ಆಗುವುದರೊಂದಿಗೆ ನಿಮ್ಮ ಖಾಸಗಿ ಮಾಹಿತಿಗಳನ್ನು ಕದಿಯುತ್ತವೆ. ಅವು ಬ್ಯಾಂಕ್'ನದ್ದಾಗಿರಬಹುದು ಇನ್ನಿತರ ಮಾಹಿತಿಗಳಾಗಿರಬಹುದು. ಬ್ಯಾಂಕ್'ನದ್ದಾಗಿದ್ದರೆ ನಿಮ್ಮ ಎಲ್ಲ ಗೌಪ್ಯ ವಿವರಗಳನ್ನು ಕದ್ದು ನಿಮ್ಮ ಅಕೌಂಟ್'ನಲ್ಲಿರುವ ಹಣವನ್ನು ಅನ್'ಲೈನ್ ಮೂಲಕ ನಿಮಗೆ ತಿಳಿಯದ ಹಾಗೇ ವರ್ಗಾವಣೆ ಮಾಡಿಕೊಳ್ಳಬಹುದು.

ದೇಶದ್ರೋಹಿ ಹಾಗೂ ಸಮಾಜ ದ್ರೋಹಿಗಳು ಈ ಕೃತ್ಯದಲ್ಲಿ ಭಾಗಿಯಾಗಿದ್ದರೆ ನಿಮ್ಮ ಖಾಸಗಿ ವಿಷಯವನ್ನು ಬೇರೆ ಚಟುವಟಿಕೆಗೆ ಬಳಸುವ ಸಾಧ್ಯತೆಯಿರುತ್ತದೆ. ಆ್ಯಂಟಿ ವೈರಸ್'ಗಳು ಇವುಗಳಿಂದ ರಕ್ಷಣೆ ನೀಡಿದರೂ ಕೆಲವೊಂದು ಸೈಟ್'ಗಳು ಆ್ಯಂಟಿ ವೈರಸ್'ಗೂ ಜಗ್ಗುವುದಿಲ್ಲ. ಈ ಕಾರಣದಿಂದ ಅಶ್ಲೀಲ ವೆಬ್'ಸೈಟ್ ನೋಡುಗರು ಈ ವಿಷಯದಲ್ಲಿ ಜಾಗೃತರಾಗಿರುವುದು ಒಳ್ಳೆಯದು.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

25 ವರ್ಷಗಳಿಂದ ಹೊರಗಡೆ ಊಟವನ್ನೇ ಮಾಡಿಲ್ಲ... ಸಲ್ಮಾನ್ ಮಾತು ಕೇಳಿ ಬೆಚ್ಚಿಬಿದ್ದ ಬಾಲಿವುಡ್!
ಹೆಂಡತಿಯನ್ನ ಪ್ರೀತಿಸುವ ಗಂಡಂದಿರೂ ಅನೈತಿಕ ಸಂಬಂಧ ಇಟ್ಟುಕೊಳ್ಳಲು ಕಾರಣಗಳು ಇವೇ ನೋಡಿ!