
ತಮಾಷೆಯಲ್ಲ..!
ಕಚೇರಿಯಲ್ಲಿ ಕೆಲಸದ ಸಂದರ್ಭಗಳಲ್ಲೂ ಕೆಲವರಿಗೆ ತಮ್ಮ ಸಂಗಾತಿಯೊಂದಿಗೆ ಕಳೆದ ರೊಮ್ಯಾಂಟಿಕ್ ಕ್ಷಣಗಳು ಆಗಾಗ ಕಾಡಬಹುದು. ಅಂಥವರಿಗೆ ಅರೆ ಕ್ಷಣದ ಬಿಡುವು ಸಿಕ್ಕಿದರೂ, ಸಂಗಾತಿಯನ್ನು ನೋಡುವ ಅವಕಾಶ ಸಿಕ್ಕಿದರೆ ಹೇಗೆ ಎಂಬ ಯೋಚನೆ ಬರುತ್ತಿರುತ್ತದೆ. ಅಂಥವರ ಭಾವನೆಗಳಿಗೆ ಬೆಲೆಗೊಟ್ಟು ಸ್ವೀಡನ್‌ನ ಕೌನ್ಸಿಲರ್ ಒಬ್ಬರು ಮಂಡಿಸಿರುವ ಪ್ರಸ್ತಾಪ ಕೇಳಿದರೆ ನಿಮಗೆ ಅಚ್ಚರಿಯಾಗದಿರದು. ಕೆಲಸದ ನಡುವೆ ತಮ್ಮ ಮನೆಗೆ ತೆರಳಿ ಸಂಗಾತಿಯೊಂದಿಗೆ ಸೆಕ್ಸ್ ನಡೆಸಲು ಒಂದು ಗಂಟೆಯ ವಿರಾಮ ನೀಡುವಂತೆ ಓವರ್'ಟೊರ್ನಿಯದ ಕೌನ್ಸಿಲರ್ ಪೆರ್ ಎರಿಕ್ ಮುಸ್ಕೊಸ್ ಎಂಬವರು ಸಲಹೆ ನೀಡಿದ್ದಾರೆ. ಬಾಂಧವ್ಯ ಸುಧಾರಣೆ ಮತ್ತು ಕಾರ್ಯಕ್ಷಮತೆ ಹೆಚ್ಚಿಸಲು ಇದರಿಂದ ಅನುಕೂಲ ಎಂಬುದವರ ಅಭಿಪ್ರಾಯ.
(epaper.kannadaprabha.in)
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.