ಭಾರತೀಯ ಸುದೀರ್ಘ ದಾಂಪತ್ಯದ ಗುಟ್ಟೇನು?

First Published Jun 29, 2018, 3:15 PM IST
Highlights

ಎರಡು ಮನಸುಗಳು ಒಂದಾಗಿ ಸೇರಿ ಸಾಗುವ ದೋಣಿಯೇ ದಾಂಪತ್ಯ. ಮದುವೆಯ ಕೆಲವು ದಿನಗಳ ಕಾಲ ಒಬ್ಬರನ್ನೊಬ್ಬರು ಭಾವನಾತ್ಮಕವಾಗಿ ಪರಿಚಯಿಸಿಕೊಳ್ಳುವ ಅನಿವಾರ್ಯತೆ ಇರುತ್ತದೆ. ಮಾನಸಿಕವಾಗಿ ಒಂದಾಗುವ ಎರಡು ಜೀವಗಳು ದೈಹಿಕವಾಗಿ ಒಂದಾದಾಗ ಜೀವನ ಪರಿಪೂರ್ಣ ಎನಿಸಿಕೊಳ್ಳುತ್ತದೆ. ಆಗ ಅದ್ಭುತ ದಾಂಪತ್ಯ ಈ ಜೋಡಿಯದ್ದಾಗುತ್ತದೆ. 

ದಾಂಪತ್ಯವೆಂದರೆ ಏಳು ಬೀಳುಗಳು ಸಹಜ. ಹೊಂದಾಣಿಕೆಯೂ ಅನಿವಾರ್ಯ. ಸಪ್ತಪದಿ ತುಳಿದ ಕೂಡಲೇ ಎಲ್ಲವೂ ಸರಿಯಾಗಿರುತ್ತದೆ ಎಂಬುವುದು ಸುಳ್ಳು. ಸರಸ ವಿರಸಗಳು ಸಹಜ. ಆದರೂ, ಪರ್ಫೆಕ್ಟ್ ಆಗಿ ಇರಲು ಸಹಜವಲ್ಲದ ದಾಂಪತ್ಯ ಜೀವನವನ್ನು ಪರ್ಫೆಕ್ಟ್ ಮಾಡಿಕೊಳ್ಳಲು ಕೆಲವು ವಿಷಯಗಳು ಮುಖ್ಯ ಪಾತ್ರ ವಹಿಸುತ್ತದೆ. ಇಂಥ ವಿಷಯಗಳನ್ನು ಫಾಲೋ ಮಾಡುವುದರಿಂದಲೇ ಭಾರತೀಯರು ಸುದೀರ್ಘ ದಾಂಪತ್ಯ ಜೀವನ ಹೊಂದಿರುತ್ತಾರೆ. ಹೊಂದಾಣಿಕೆ, ಸ್ವೀಕಾರ ಹಾಗೂ ನಂಬಿಕೆಯಿದ್ದಲ್ಲಿ ಭಾರತಿಯರಂತೆ ಸುದೀರ್ಘ ದಾಂಪತ್ಯ ಜೀವನ ನಡೆಸುತ್ತಾರೆ.  ಇದರ ಗುಟ್ಟು ಇಲ್ಲಿದೆ....

  • ಅತ್ತೆ - ಮಾವಂದಿರನ್ನು ಅರ್ಥ ಮಾಡಿಕೊಂಡು,  ಗೌರವಿಸುವುದು.
  • ಸಂಸಾರದಲ್ಲಿ ಮಗುವಿನ ಆಗಮನದೊಂದಿಗೆ ಜೀವನ ಪೂರ್ಣಗೊಳ್ಳುವುದು.
  • ಆಹಾರ ಪದ್ಧತಿ ಹಾಗೂ ಇತರೆ ಆಚಾರ ವಿಚಾರಗಳನ್ನು ಕಲಿತುಕೊಳ್ಳುವುದು. ಬದಲಾವನೆಗಳನ್ನು ರೂಡಿಸಿಕೊಳ್ಳುವುದು .
  • ಎಲ್ಲವೂ ನಮ್ಮ ಮೂಗಿನ ನೇರದಲ್ಲಿಯೇ ನಡೆಯಬೇಕೆಂಬ ಹಠ ಬಿಟ್ಟು, ಸಮಾನರೆಂಬ ಭಾವ ಮೂಢಿಸಿಕೊಳ್ಳುವುದು.
  • ಅಧ್ಯಾತ್ಮಿಕ ನಂಬಿಕೆಗಳನ್ನು ಗೌರವಿಸಿ, ಸಹಕರಿಸುವುದು.
  • ಜವಾಬ್ದಾರಿಗಳನ್ನು ಇಬ್ಬರೂ ಸಮಾನವಾಗಿ ಹಂಚಿಕೂಳ್ಳಬೇಕು.
  • ಅಹಂಕಾರ ಇಬ್ಬರಿಂದಲೂ ದೂರ ದೂರವಾಗಿರಿ.
click me!