
ವಯಸ್ಸು 20, ನನಗೆ ಕನಸಿನಲ್ಲಿ ಆಗಾಗ ವೀರ್ಯ ಸ್ಖಲನವಾಗುತ್ತಿರುತ್ತದೆ. ಒಮ್ಮೆ ಎಚ್ಚರವಿದ್ದಾಗ ವೀರ್ಯ ಬರುವಂತಾಗಿ ತಡೆಯಲು ಪ್ರಯತ್ನಿಸಿದೆ, ಆನಂತರ ತುಂಬಾ ನೋವು, ಉರಿ, ಆಯಿತು. ವೀರ್ಯಸ್ಖಲನವಾದರೆ ಏನೂ ತೊಂದರೆ ಇಲ್ಲವೇ?
- ಹೆಸರು, ಊರು ಬೇಡ
ಈ ವಯಸ್ಸಿನಲ್ಲಿ ಲೈಂಗಿಕ ಬಯಕೆಗಳು ಹೆಚ್ಚಾಗಿರುತ್ತವೆ. ಹಾಗಾಗಿ ಆಗಾಗ ಹೀಗೆ ಸ್ವಪ್ನ ಸ್ಖಲನವಾಗುತ್ತದೆ. ಲೈಂಗಿಕ ಬಯಕೆಯಾದಾಗ, ಹಸ್ತಮೈಥುನ ಮಾಡಿದಾಗ ವೀರ್ಯ ಸ್ಖಲನವಾಗುತ್ತದೆ. ಎರಡರಿಂದಲೂ ಏನೂ ತೊಂದರೆಯಿಲ್ಲ. ಇದು ಪ್ರಕೃತಿ ಸಹಜ. ಬಲವಂತವಾಗಿ ವೀರ್ಯಸ್ಖಲನವನ್ನು ತಡೆಯಬೇಡಿ. ಹಾಗೆ ಮಾಡಿದರೆ ವೀರ್ಯವು ಹಿಂದಕ್ಕೆ ಹೋಗಿ ಸೋಂಕಾಗುವ ಮೂಲಕ ನಿಮಗೆ ಆ ಭಾಗದಲ್ಲಿ ಉರಿ, ನೋವು ಆಗುತ್ತದೆ.
ಜತೆಗೆ ಅದು ಪುನಃ ಮೂತ್ರದೊಂದಿಗೆ ಹೊರಬರುತ್ತದೆ. ಅತಿಯಾಗಿ ವೀರ್ಯ ಸ್ಖಲನವಾಗುತ್ತಿದ್ದರೆ, ಅಥವಾ ಹಸ್ತಮೈಥುನ ಮಾಡಬೇಕೆನಿಸುತ್ತಿದ್ದರೆ, ಸಾಕಷ್ಟು ಇತರೆ ಹವ್ಯಾಸಗಳನ್ನು ಬೆಳೆಸಿಕೊಂಡು ಕಾರ್ಯಪ್ರವೃತ್ತರಾಗಿ, ಆಗ ಅವು ತನ್ನಿಂದತಾನೇ ಕಡಿಮೆಯಾಗುತ್ತವೆ.
- ಡಾ ಬಿ ಆರ್ ಸುಹಾಸ್, ಲೈಂಗಿಕತಜ್ಞ
ಚೊಚ್ಚಲ ಮಗುವಾದ ನಂತರ ಮಹಿಳೆಯರು ಸೆಕ್ಸ್ ನಲ್ಲಿ ಆಸಕ್ತಿ ಕಳೆದುಕೊಳ್ಳುತ್ತಾರೆಯೇ ?
ಸೆಕ್ಸ್ ಮಾಡುವ ಸಂದರ್ಭಗಳಲ್ಲಿ ಪುರುಷರಿಗೆ ಕಾಡುವ ನಿಜವಾದ ಚಿಂತೆಗಳಿವು
ಈ ಆಹಾರಗಳು ವಯಾಗ್ರಗಿಂತ ಹೆಚ್ಚು ಚುರುಕಾಗಿ ಕೆಲಸ ಮಾಡುತ್ತವೆ!
ಸೆಕ್ಸ್ ಬಗ್ಗೆ ತಮ್ಮ ಪತಿಯಂದಿರ ಸಿಕ್ರೇಟ್ ಬಿಚ್ಚಿಟ್ಟ ಮಹಿಳೆಯರು
ವರ್ಜಿನ್ ಹಾಗೂ ಕನ್ಯೆಯಲ್ಲ ಎಂಬ ಪುರುಷ - ಮಹಿಳೆಯರಿಗಿರುವ ಸಂದೇಹಕ್ಕೆ ಇಲ್ಲಿದೆ ಉತ್ತರ
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.