
ತೆಳ್ಳಗೆ ಬೆಳ್ಳಗೆ ಬಳುಕುವ ಬಳ್ಳಿಯಂತಿರುವ ಅದಿತಿ ರಾವ್ ಹ್ಯಾದರಿ ಇತ್ತೀಚೆಗೆ ಮಣಿರತ್ನಂರ ‘ಕಾಟ್ರು ವೆಲಿಯಿಡೈ' ಸಿನಿಮಾದಲ್ಲಿ ನಟಿಸಿ ಎಲ್ಲರ ಮೆಚ್ಚುಗೆಯನ್ನು ಬ್ಯಾಗಿಗಿಳಿಸಿಕೊಂಡರು. ಅನಂತರ ಮಣಿರತ್ನಂ ಬತ್‌ರ್‍ಡೇ ದಿನ ಅವರಿಗೆ ಮೊಣಕಾಲೂರಿ ಗುಲಾಬಿ ನೀಡುವ ಫೋಟೋ ಹಾಕಿ ವಿಶ್ ಮಾಡಿದ್ದು ಕೂಡ ಜನಕ್ಕೆ ಸಿಕ್ಕಾಪಟ್ಟೆಇಷ್ಟವಾಯಿತು. ಹೀಗೆಲ್ಲಾ ಆಗಿ ಇವರ ಅಭಿಮಾನಿಗಳ ಸಂಖ್ಯೆ ಹೆಚ್ಚುತ್ತಲೇ ಇದೆ. ಮೊದಲೇ ಇದ್ದ ಅಭಿಮಾನಿಗಳಿಗೂ ಈಗ ಹುಟ್ಟಿಕೊಂಡಿರೋ ಅಭಿಮಾನಿಗಳಿಗೂ ಒಂದು ಪ್ರಶ್ನೆ ಕಾಡುತ್ತಲೇ ಇದೆ. ಈ ಅದಿತಿ ರಾವ್ ಹ್ಯಾದರಿ ಅಷ್ಟೊಂದು ಬಿಳಿಯಾಗಿರೋದು ಹೇಗೆ? ಈ ಕುತೂಹಲದಿಂದಲೇ ಅಭಿಮಾನಿಗಳು ತೆಳ್ಳಗೆ ಬೆಳ್ಳಗೆ ಇದ್ದೀರಿ, ಹೊಟ್ಟೆಗೇನು ತಿಂತೀರಿ ಅಂತ ಹಾಡಿದ್ದಾರೆ ಅನ್ನಿಸುತ್ತದೆ. ಹಾಗಾಗಿ ಅದಿತಿ ತನ್ನ ಸೌಂದರ್ಯದ ಗುಟ್ಟನ್ನು ಬಿಚ್ಚಿಟ್ಟಿದ್ದಾರೆ. ಆ ಗುಟ್ಟುಗಳು ಇಂತಿವೆ.
1 ಸೌಂದರ್ಯ ರಕ್ಷಣೆಗೆ ಏನೇನು ಮಾಡುತ್ತಿದ್ದರೋ ಅದನ್ನೂ ತಾನು ಮಾಡುತ್ತಿದ್ದೇನೆ ಎನ್ನುವ ಅದಿತಿ, ದಿನಾ ದನದ ಹಾಲಲ್ಲಿ ಮುಖ ತೊಳೆಯುತ್ತಾರಂತೆ. ದಿನಕ್ಕೆ ಮೂರು ನಾಲ್ಕು ಬಾರಿ ದನದ ಹಾಲಲ್ಲಿ ಮುಖ ತೊಳೆಯುತ್ತೇನೆ ಎನ್ನುತ್ತಾರೆ. ಅದರಿಂದಲೇ ಅವರ ಮುಖ ಹಾಲಿನಂತೆ ಬೆಳ್ಳಗಾಗಿರಬಹುದೇ ಅಂತ ನೀವು ಕೇಳಬಾರದು.
2 ತನ್ನ ಡಯಟ್‌ನಲ್ಲಿ ತುಪ್ಪ ಇರುವಂತೆ ನೋಡಿಕೊಳ್ಳುತ್ತಾರೆ. ತುಪ್ಪ ತಿನ್ನದೆ ಅವರ ದಿನ ಮುಗಿಯುವುದೇ ಇಲ್ಲ.
3 ಕಡಲೆ ಹಿಟ್ಟು, ಎಣ್ಣೆ, ಹಾಲು ಮತ್ತು ಅರಿಶಿಣವನ್ನು ಮಿಶ್ರಣ ಮಾಡಿ ಚರ್ಮಕ್ಕೆ ಹಚ್ಚಿಕೊಳ್ಳುತ್ತಾರೆ. ಇವನ್ನೆಲ್ಲಾ ಚಿಕ್ಕಂದಿನಿಂದಲೇ ಮಾಡಿಕೊಂಡು ಬರುತ್ತಿದ್ದೇನೆ ಎನ್ನುತ್ತಾರೆ.
ವರದಿ: ಕನ್ನಡಪ್ರಭ
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.